Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಹೊಟ್ಟೆಯ ಬೊಜ್ಜು ಕರಗಿಸಲು ಪರಿಣಾಮಕಾರಿ ಟಿಪ್ಸ್
ಇಂದು ಹತ್ತರಲ್ಲಿ ಎಂಟು ಜನರು ಕೇಳುವ ಸಾಮಾನ್ಯ ಪ್ರಶ್ನೆ - ಈ ಹೊಟ್ಟೆಯನ್ನು ಹೇಗಪ್ಪಾ ಕರಗಿಸುವುದು?. ಸೊಂಟದ ಸುತ್ತ ತುಂಬಿಕೊಂಡಿರುವ ಕೊಬ್ಬು ಸೋಮಾರಿತನದ ಅಪ್ಪಟ ಸಂಕೇತವಾಗಿದೆ. ಈ ಕೊಬ್ಬು ಹೊಟ್ಟೆಯನ್ನು ಮುಂದೂಡುವ ಮೂಲಕ ಶರೀರದ ಆಕಾರವನ್ನು ಕೆಡಿಸುವುದು ಮಾತ್ರವಲ್ಲ, ದೇಹದ ಹಲವು ಮುಖ್ಯ ಅಂಗಗಳ ಮೇಲೆ ಒತ್ತಡವನ್ನು ಹೇರಿ ಅವುಗಳನ್ನು ತೊಂದರೆಯಲ್ಲಿ ಸಿಲುಕಿಸುತ್ತವೆ. ಪರಿಣಾಮವಾಗಿ ಮಧುಮೇಹ, ಹೃದಯ ಸಂಬಂಧಿ ತೊಂದರೆ, ಪಾರ್ಶ್ವವಾಯು, ದೇಹದ ಕೆಳಭಾಗ ಅತೀವವಾಗಿ ಅಗಲವಾಗುವುದು (metabolic syndrome) ಮೊದಲಾದ ತೊಂದರೆಗಳು ಎದುರಾಗುತ್ತವೆ. ಬೊಜ್ಜು ಕರಗಿಸಲು ಟಿಪ್ಸ್-ಕಡಿಮೆ ವೆಚ್ಚ ಅಧಿಕ ಲಾಭ!
ಈ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದನ್ನು ನಿವಾರಿಸುವ ಮುನ್ನ ಇದು ಹೇಗೆ ಬಂತು ಎಂಬುದನ್ನು ಅರಿತುಕೊಳ್ಳುವುದು ಅಗತ್ಯ. ನಮ್ಮ ದೇಹ ಹೆಚ್ಚಿನ ಕೊಬ್ಬನ್ನು ಸೊಂಟದಲ್ಲಿ ಮೊದಲಾಗಿ ಸಂಗ್ರಹಿಸಲು ಪ್ರಾರಂಭಿಸಿ ದೇಹದ ಇತರ ಭಾಗಗಳಲ್ಲಿ ಕಡೆಯದಾಗಿ ಸಂಗ್ರಹಿಸುತ್ತದೆ. ನಮ್ಮ ಚಟುವಟಿಕೆಗಳಿಗೆ ಅಗತ್ಯವಿರುವ ಕೊಬ್ಬನ್ನು ಕಡೆಯದಾಗಿ ಸಂಗ್ರಹಿಸಿದ್ದ ಭಾಗದಿಂದಲೇ ಪಡೆಯುತ್ತದೆಯೇ ವಿನಃ ಹೊಟ್ಟೆಯ ಭಾಗದಿಂದ ಬಳಸುವುದಿಲ್ಲ. ದೇವರೇ, ಈ ದೇಹದ ಕೊಬ್ಬನ್ನು ಹೇಗಪ್ಪಾ ಕರಗಿಸುವುದು?
ಈ ನಡುವೆ ಆಹಾರದ ಮೂಲಕ ಲಭ್ಯವಾದ ಕೊಬ್ಬನ್ನು ಕೂಡಲೇ ಸಂಗ್ರಹವಾಗಿದ್ದ ಜಾಗದಲ್ಲಿ ತುಂಬಿಸಿಬಿಡುತ್ತದೆ. ಪರಿಣಾಮವಾಗಿ ಹೊಟ್ಟೆ ಬೆಳೆಯುತ್ತಲೇ ಹೋಗುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬು ಕರಗಬೇಕೆಂದರೆ ದೇಹದ ಇತರ ಭಾಗದ ಕೊಬ್ಬು ಮೊದಲು ಕರಗಬೇಕು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ದೃಢಮನಸ್ಸು, ಸತತ ವ್ಯಾಯಮ, ಸತತ ದೈಹಿಕ ಚಟುವಟಿಕೆ, ಆಹಾರದಲ್ಲಿ ನಿಯಂತ್ರಣ, ನೀರಿನ ಸೇವನೆಯಲ್ಲಿ ಹೆಚ್ಚಳ ಎಲ್ಲವೂ ಬೇಕು. ಏನೇ ಕಸರತ್ತು ಮಾಡಿದರೂ, ಬೊಜ್ಜು ಕರಗದಿರಲು ಕಾರಣಗಳೇನು?
ಇವುಗಳಲ್ಲಿ ಆಹಾರದಲ್ಲಿ ನಿಯಂತ್ರಣಕ್ಕೇ ಪ್ರಮುಖ ಪಾತ್ರ. ಏಕೆಂದರೆ ಬಾಯಿಚಪಲ ತಾಳಲಾರದೇ ನಾವು ಸೇವಿಸುವ ಲಘು ಪಾನೀಯ, ಕೇಕ್ ಮೊದಲಾದ ಅತಿ ಸಕ್ಕರೆ ಇರುವ ಆಹಾರಗಳು, ಮೈದಾ ಆಧಾರಿತ ಸಿದ್ಧ ಆಹಾರಗಳು ಕೊಬ್ಬನ್ನು ಕರಗಿಸುವುದಿರಲಿ, ಇದುವರೆಗೆ ಕರಗಿದ್ದ ಕೊಬ್ಬನ್ನೂ ಮರುತುಂಬಲು ನೆರವಾಗುತ್ತವೆ. ಬದಲಿಗೆ ನಾರು ಹೆಚ್ಚಿರುವ ಹಸಿರು ಆಹಾರಗಳು, ಸಕ್ಕರೆ ಇಲ್ಲದಿರುವ ಅಥವಾ ಕಡಿಮೆ ಇರುವ ಆಹಾರಗಳನ್ನು ಸೇವಿಸುವ ಮೂಲಕ ಕೊಬ್ಬನ್ನು ಕರಗಿಸಲು ಸಾಧ್ಯ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಸೋಡಾ, ಲಘುಪಾನೀಯಗಳಿಗೆ ಬ್ರೇಕ್ ಹಾಕಿ
ಹೊಟ್ಟೆಯ ಕೊಬ್ಬಿಗೆ ಈ ಪಾನೀಯಗಳು ಮುಖ್ಯ ಕಾರಣ. ಏಕೆಂದರೆ ಸೋಡಾ ಮತ್ತು ಲಘುಪಾನೀಯಗಳು ಮೂಲತಃ ಕಹಿಯಾಗಿದ್ದು ಈ ಕಹಿಯನ್ನು ಮರೆಸಲು ಸಾಮಾನ್ಯಕ್ಕಿಂತಲೂ ಏಳುಪಟ್ಟು ಹೆಚ್ಚು ಸಕ್ಕರೆ ಸೇರಿಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ನೂರು ಮಿಲಿ ಲೀ ನಲ್ಲಿ ಹತ್ತೂವರೆ ಗ್ರಾಂ. ಒಂದು ಸಾಮಾನ್ಯ ಬಾಟಲಿಯಲ್ಲಿ ಮುನ್ನೂರು ಮಿಲಿಗ್ರಾಂ ಇದ್ದರೆ ಮೂವತ್ತೊಂದು ಗ್ರಾಂ ಸಕ್ಕರೆ ದೇಹ ಸೇರಿದಂತಾಯಿತು. ಇದು ನಮಗೆ ದಿನಕ್ಕೆ ಅಗತ್ಯವಿರುವ ಮೂವತ್ತೇಳುವರೆ ಗ್ರಾಂ (ಮಹಿಳೆಯರಿಗಾದರೆ ಇಪ್ಪತ್ತೈದು ಗ್ರಾಂ, ಮಕ್ಕಳಿಗೆ ಇನ್ನೂ ಕಡಿಮೆ). ಸಕ್ಕರೆ ಕೇವಲ ಒಂದು ಬಾರಿ ಕುಡಿಯುವ ಲಘುಪಾನೀಯದಿಂದ ಲಭ್ಯವಾದಂತಾಯಿತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೋಡಾ, ಲಘುಪಾನೀಯಗಳಿಗೆ ಬ್ರೇಕ್ ಹಾಕಿ
ಹಾಗಿದ್ದಾಗ ದಿನದಲ್ಲಿ ಕುಡಿಯುವ ಟೀ, ಕಾಫಿ, ಜ್ಯೂಸ್, ಸಿಹಿತಿಂಡಿಗಳು ಮೊದಲಾದವುಗಳ ಮೂಲಕ ಸೇರುವ ಸಕ್ಕರೆ ಎಲ್ಲಿ ಹೋಗುತ್ತದೆ? ಹೊಟ್ಟೆಯ ಕೊಬ್ಬಿಗೆ ಉತ್ತರ ಸಿಕ್ಕಿತೇ? ನಾವು ಡಯೆಟ್ ಕೋಕ್ ಕುಡಿಯುವುದು, ನಮಗೇನೂ ಆಗುವುದಿಲ್ಲ ಎಂಬ ಉಢಾಫೆಯ ಉತ್ತರ ಬೇಡ. ಇದರಲ್ಲಿಯೂ ಆಸ್ಪರ್ಟೇಂ ಎಂಬ ಕೃತಕ ಸಿಹಿ ಇದೆ, ಇದು ಕ್ಯಾಲೋರಿಗಳನ್ನು ನೀಡದಿದ್ದರೂ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಅಪಾರವಾಗಿ ಹೆಚ್ಚಿಸುತ್ತದೆ, ಇದು ಪರೋಕ್ಷವಾಗಿ ಕೊಬ್ಬನ್ನು ಹೆಚ್ಚಿಸುತ್ತದೆ.

ಹಸಿವಿದ್ದಾಗ ಮಾತ್ರ ತಿನ್ನಿ
ಸಾಮಾನ್ಯವಾಗಿ ಊಟವಾದ ಮೂರು ಗಂಟೆಗಳ ಬಳಿಕ ಹಸಿವು ಕಾಡತೊಡಗುತ್ತದೆ. ಆಗ ಏನಾದರೂ ತಿನ್ನುವ ಮೂಲಕ ನಾವು ಸಂತುಷ್ಟರಾಗುತ್ತೇವೆ. ತಿನ್ನದೇ ಇದ್ದರೆ-ಛೇ ಏನೂ ತಿಂದೇ ಇಲ್ಲವಲ್ಲ ಎಂದು ದುಃಖಿತರಾಗುತ್ತೇವೆ. ಈ ಅಭ್ಯಾಸದಿಂದ ಹೊರಬರುವುದು ಉತ್ತಮ. ನಿಸರ್ಗದ ನಿಯಮದಂತೆ ದಿನಕ್ಕೆ ಮೂರು ಹೊತ್ತಿನ ಊಟ ನಿಯಮಿತ ಸಮಯಕ್ಕೆ ನಿಗದಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ಕೊಬ್ಬು ಕರಗಲು ಸಾಧ್ಯವಾಗುತ್ತದೆ.

ಅಕ್ರೋಟು ತಿನ್ನಿ
ಪ್ರತಿದಿನ ಒಂದೆರಡು ಅಕ್ರೋಟು ತಿನ್ನುವುದು ತೂಕ ಇಳಿಸಲು ನೆರವಾಗುತ್ತದೆ. ಇದರಲ್ಲಿರುವ ಎಲಾರ್ಜಿಕ್ ಆಮ್ಲ (ellagic acid) ಎಂಬ ಪೋಷಕಾಂಶ ದೇಹದಲ್ಲಿ ಎದುರಾಗಬಹುದಾಗಿದ್ದ ಉರಿಯೂತವನ್ನು ತಡೆಯುತ್ತದೆ. ಈ ತೊಂದರೆ ಉಂಟಾದರೆ ರಕ್ತದಲ್ಲಿ ಇನ್ಸುಲಿನ್ ವಿರೋಧಿ ಗುಣ ಉಂಟಾಗಿ ಮಧುಮೇಹ ಆವರಿಸುತ್ತದೆ. ಇನ್ಸುಲಿನ್ ಬಳಕೆಯಾಗುವ ಮೂಲಕ ಸಕ್ಕರೆಯೂ ಬಳಕೆಯಾಗಿ ಕೊಬ್ಬು ಕರಗಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕ್ರೋಟು ತಿನ್ನಿ
ಜೊತೆಗೇ ಇದರಲ್ಲಿರುವ ಒಮೆಗಾ 3 ಕೊಬ್ಬಿನ ತೈಲ, ನಾರು ಮತ್ತು ಪ್ರೋಟೀನ್ ಹಸಿವಾಗುವುದನ್ನು ತಡೆದು ಇನ್ನಷ್ಟು ಆಹಾರ ಸೇವಿಸುವುದರಿಂದ ತಡೆಯುತ್ತದೆ. ಪರೋಕ್ಷವಾಗಿ ಕೊಬ್ಬು ಬಳಸಲ್ಪಡುವ ಮೂಲಕ ಕರಗುತ್ತದೆ.

ಅತಿ ಹೆಚ್ಚಿನ ವ್ಯಾಯಮ ಬೇಡ
ನಮ್ಮ ಜನರ ಮನದಲ್ಲಿ ಒಂದು ವಿಷಯ ಗಟ್ಟಿಯಾಗಿ ಬೇರೂರಿ ಬಿಟ್ಟಿದೆ. ಅಂದರೆ ಹೊಟ್ಟೆ ಬಂದರೆ ಬೆಳಿಗ್ಗೆದ್ದು ಓಡಿ ಎಂಬುದು. ಇದು ನಿಜವಾದರೂ ಹೆಚ್ಚಿನವರು ಆರಂಭಶೂರರು. ಪ್ರಾರಂಭದ ಕೆಲದಿನಗಳಲ್ಲಿ ಓಡಿ ನಂತರದ ದಿನಗಳಲ್ಲಿ ಹೊದ್ದು ಮಲಗುತ್ತಾರೆ. ಆದರೆ ಕೆಲವರು ಮಾತ್ರ ಇದನ್ನು ಅತಿರೇಕಕ್ಕೆ ತೆಗೆದುಕೊಂಡು ಭಾರೀ ಪ್ರಮಾಣದಲ್ಲಿ ವ್ಯಾಯಾಮ ಮಾಡತೊಡಗುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿ ಹೆಚ್ಚಿನ ವ್ಯಾಯಮ ಬೇಡ
ಇವೆರಡೂ ತಪ್ಪು ವ್ಯಾಯಮವನ್ನು ನಿಮ್ಮ ಸಾಮರ್ಥಕ್ಕೆ ತಕ್ಕಷ್ಟೇ, ನಿಯಮಿತವಾಗಿ ಒಂದೂ ದಿನ ಬಿಡದೇ (ರಜಾದಿನಗಳನ್ನೂ ಸೇರಿಸಿ) ಅನುಸರಿಸಬೇಕು. ಒಂದೆರಡು ದಿನಗಳಲ್ಲ, ಸೂಕ್ತ ಪರಿಣಾಮ ಕಂಡುಬರಲು ಹೆಚ್ಚು ಕಡಿಮೆ ಒಂದು ವರ್ಷವೇ ಬೇಕಾದೀತು

ಬೀನ್ಸ್ ತಿನ್ನಿ
ಅಪಾನವಾಯುವಿಗೆ ಆಹ್ವಾನ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೀನ್ಸ್ ತೂಕವಿಳಿಸಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಅನಿವಾರ್ಯವಾಗಿ ಕೊಬ್ಬನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೇ ಬೀನ್ಸ್ ಕರಗಲು ಹೆಚ್ಚು ಹೊತ್ತು ಬೇಕಾಗುವುದರಿಂದ ಪದೇ ಪದೇ ತಿನ್ನುವುದರಿಂದ ತಪ್ಪಿಸಿಕೊಂಡು ಪರೋಕ್ಷವಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ
ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪೋಷಕಾಂಶಗಳಿದ್ದು ತೂಕ ಇಳಿಸಲೂ ನೆರವಾಗುತ್ತದೆ. ಕಾಫಿ ನಿಮ್ಮನ್ನು ಕೊಂಚ ಹೊತ್ತು ಎಚ್ಚರಿರಲು ಸಹಕರಿಸಿದರೂ ಉಳಿದಂತೆ ಕೊಬ್ಬನ್ನು ಹೆಚ್ಚಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಾಮಾನ್ಯ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ
ಬದಲಿಗೆ ಹಸಿರು ಚಹಾ ಸೇವಿಸುವ ಮೂಲಕ ನಿದ್ದೆಯನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿಯೂ ಸಕ್ಕರೆ ಅಲ್ಪಪ್ರಮಾಣದಲ್ಲಿ ಅಥವಾ ಇಲ್ಲದೇ ಇದ್ದರೂ ಉತ್ತಮ.

ಕಾಳುಮೆಣಸಿನ ಪುಡಿ ಬಳಸಿ
ಕಾಳುಮೆಣಸಿಗೆ ಖಾರದ ರುಚಿ ನೀಡುವ ಪೈಪರಿನ್ (piperine) ಎಂಬ ಪೋಷಕಾಂಶ ಆರೋಗ್ಯಕ್ಕೆ ಹಲವು ವಿಧದಲ್ಲಿ ಉಪಯೋಗಕಾರಿಯಾಗಿದೆ. ಉರಿಯೂತವನ್ನು ನಿವಾರಿಸುವ ಈ ಪೋಷಕಾಂಶವನ್ನು ಕರಗಿಸಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುತ್ತದೆ. ಇದು ಕೊಬ್ಬಿನ ಪ್ರಮಾಣವನ್ನು ಕಡಿಮೆಗೊಳಿಸಿ ಸೊಂಟದ ಸುತ್ತಳತೆಯನ್ನು ಕಡಿಮೆಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ. ತಮ್ಮಲ್ಲಿರುವ ತೂಕ ಇಳಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.



Click it and Unblock the Notifications











