For Quick Alerts
ALLOW NOTIFICATIONS  
For Daily Alerts

ಹಸಿರು ಎಲೆ ತರಕಾರಿಗಳ ವೈಶಿಷ್ಟ್ಯವೇನು ಗೊತ್ತೇ?

|

ತರಕಾರಿ ಎನ್ನುವ ಪದವು ವೆಜಿಟಸ್ ನಿಂದ ಹುಟ್ಟಿಕೊಂಡಿದೆ. ತರಕಾರಿ ಅಡುಗೆಗೆ ಬಳಸುವ ತಾಜಾ ಮತ್ತು ಹಸಿ ಆಹಾರ. ಪ್ರತಿಯೊಂದು ತರಕಾರಿಯಲ್ಲಿ ಉನ್ನತ ಮಟ್ಟದ ಆರೋಗ್ಯ ಲಾಭಗಳಿವೆ.

ತಾಜಾ ಮತ್ತು ಹಸಿ ತರಕಾರಿಗಳಾದ ಕ್ಯಾರೆಟ್, ಟೊಮೆಟೊ ಇತ್ಯಾದಿ ಆರೋಗ್ಯಕರ ದೇಹದಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ. ತರಕಾರಿಯು ವಿಟಮಿನ್, ಪೌಷ್ಠಿಕಾಂಶ, ನಾರಿನಾಂಶ ಮತ್ತು ಪೊಟಾಶಿಯಂಗೆ ಮೂಲವಾಗಿದೆ.

ಆರೋಗ್ಯಕರ ಆಹಾರಕ್ರಮಕ್ಕೆ ನೀವು ತರಕಾರಿ ಆಹಾರಗಳನ್ನು ಸೇವಿಸಿದರೆ ಹೃದಯ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ದೂರವಿಡಬಹುದು. ತರಕಾರಿ ವಿವಿಧ ವಿಧಗಳಲ್ಲಿರುತ್ತದೆ. ಇದರಲ್ಲಿ ಬೀಜದ ತರಕಾರಿ, ಬೇರಿನ ತರಕಾರಿ, ಎಲೆ ತರಕಾರಿ ಮತ್ತು ಹೂವಿನ ತರಕಾರಿಗಳು. ಇದರಲ್ಲಿ ಹಲವಾರು ರೀತಿಯ ಲಾಭಗಳಿವೆ.

Health benefits of eating vegetables

ಬೇರಿನ ತರಕಾರಿಗಳು:
ಬೇರಿನ ತರಕಾರಿಗಳು ಮಣ್ಣಿನಿಂದ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳುತ್ತದೆ. ಇದರಲ್ಲಿರುವ ಕೆಲವೊಂದು ವಿಧಗಳೆಂದರೆ ಕ್ಯಾರೆಟ್, ಮೂಲಂಗಿ, ಗೆಣಸು, ಬೀಟ್ ರೂಟ್, ಬೆಳ್ಳುಳ್ಳಿ ಮತ್ತು ಟರ್ನಿಪ್. ಇದು ಕಡಿಮೆ ಕ್ಯಾಲರಿ ಹೊಂದಿರುವ ಆಹಾರಗಳಾರೂ ವಿಟಮಿನ್ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ.
* ಈ ತರಕಾರಿಗಳಲ್ಲಿರುವ ವಿಟಮಿನ್ ಗಾಯ ಗುಣವಾಗಲು ನೆರವಾಗುತ್ತದೆ.
* ಕ್ಯಾರೆಟ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

ಹಸಿರು ಎಲೆ ತರಕಾರಿಗಳು:
ಹರಿಸು ಎಲೆ ತರಕಾರಿಗಳು ದೇಹದಲ್ಲಿ ಆ್ಯಂಟಿ ಆಕ್ಸಿಂಡೆಟ್ ಆಗಿ ಕೆಲಸ ಮಾಡುತ್ತದೆ. ಈ ತರಕಾರಿಗಳಲ್ಲಿ ಉನ್ನತ ಮಟ್ಟದ ನಾರಿನಾಂಶ ಮತ್ತು ಕ್ಯಾರೊಟಿನಾಯ್ಡ್ ಇದೆ.
* ಹಸಿರು ಎಲೆ ತರಕಾರಿಗಳನ್ನು 32ರಿಂದ 38 ಫ್ಯಾರನ್ ಡಿಗ್ರಿ ತಾಪಮಾನದಲ್ಲಿ ಸಂರಕ್ಷಿಸಬೇಕು.
* ಅಡುಗೆಗೆ ಮೊದಲು ಹಸಿರು ಎಲೆ ತರಕಾರಿಗಳನ್ನು ನೀರಿನಲ್ಲಿ ತೊಳೆದು ಬಳಸಬೇಕು.
* ಹಸಿರೆಳೆ ತರಕಾರಿಗಳು ಶ್ವಾಸಕೋಶ, ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಬೆಳೆಯದಂತೆ ತಡೆಯುತ್ತದೆ.

ಹೂವಿನ ತರಕಾರಿಗಳು:
ಹೂವಿನ ತರಕಾರಿಗಳನ್ನು ಉನ್ನತ ಮಟ್ಟದ ನಾರಿನಾಂಶಗಳಿದ್ದು, ಕಡಿಮೆ ಕ್ಯಾಲರಿ ಮತ್ತು ವಿಟಮಿನ್ ನಿಂದ ಸಮೃದ್ಧವಾಗಿದೆ. ಹೂವಿನ ತರಕಾರಿಗಳಲ್ಲಿ ಹೂಕೋಸು, ಶತಾವರಿ ಮತ್ತು ಕೋಸುಗಡ್ಡೆ ಪ್ರಮುಖವಾದದ್ದು. ಪ್ರತಿಯೊಂದು ತನ್ನದೇ ಆದ ಆರೋಗ್ಯ ಲಾಭಗಳನ್ನು ಹೊಂದಿದೆ.
* ಜೀವಕೋಶದ ಬೆಳವಣಿಗೆಗೆ, ನವೀಕರಣ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅಂಗಾಂಶಗಳ ಬೆಳವಣಿಗೆಗೆ ವಿಟಮಿನ್ ತುಂಬಾ ಮುಖ್ಯ.
* ನಾರಿನಾಂಶವು ಜಠರಗರುಳಿನ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.
* ಆಹಾರದ ಘಟಕವೇ ಕ್ಯಾಲರಿ. ಇದು ನಾವು ಸೇವಿಸುವ ಆಹಾರದ ಪ್ರಮಾಣವನ್ನು ಪ್ರತಿನಿಧಿಸುತ್ತದೆ. ಪುರುಷರು ಸಾಮಾನ್ಯವಾಗಿ ದಿನದಲ್ಲಿ ಸುಮಾರು 2200-2800 ಕ್ಯಾಲರಿ ಸೇವಿಸುತ್ತಾರೆ. ಮಹಿಳೆಯರು 1600-2000 ಕ್ಯಾಲರಿ ಸೇವಿಸುತ್ತಾರೆ. ಆದರೆ ಕೆಲವೊಂದು ಮಧ್ಯಮ ಚಟುವಟಿಕೆಗಳಿಂದ ಈ ಸರಾಸರಿ ಪ್ರಮಾಣ ಹೆಚ್ಚಾಗಬಹುದು.

ಬೀಜದ ತರಕಾರಿಗಳು:
ಬೀಜ ತರಕಾರಿಗಳಲ್ಲಿ ಬೆಣ್ಣೆ ಬೀನ್ಸ್, ಹ್ಯಾರಿಕೊಟ್ ಬೀನ್ಸ್ ಮತ್ತು ಮಸೂರ ಅವರೆಗಳಾದ ಕಪ್ಪು ಮಸೂರ ಅವರೆ, ಹಸಿರು ಮಸೂರ ಅವರೆ, ಕೆಂಪು ಮಸೂರ ಅವರೆ, ರೆಡ್ ಕಿಡ್ನಿ ಬೀನ್ಸ್, ಪಿಜನ್ ಬೀನ್ಸ್ ಮತ್ತು ಬೆಂಗಾಲ್ ಗ್ರಾಮ್ ಇತ್ಯಾದಿ.
* ಈ ಬೀಜದ ತರಕಾರಿಗಳಲ್ಲಿ ನಾರಿನಾಂಶ, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿದೆ.
* ಇದರಲ್ಲಿ ಉನ್ನತ ಮಟ್ಟದ ಕ್ಯಾಲರಿಗಳಿವೆ.
* ಈ ಬೀಜ ತರಕಾರಿಗಳಲ್ಲಿ ಕಾಬ್ರೋಹೈಡ್ರೆಟ್ಸ್ ಸಂಕೀರ್ಣವಾಗಿದೆ ಮತ್ತು ಸುಲಭವಾಗಿ ಹೀರಿಕೊಳ್ಳಬಹುದು.

Read more about: health ಆರೋಗ್ಯ
Story first published: Friday, June 13, 2014, 16:26 [IST]
X
Desktop Bottom Promotion