Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಡಯಟ್ : ದಿನಕ್ಕೆ ಆರು ಬಾರಿ ತಿಂದರೆ ಆರೋಗ್ಯಕರ !

3 ಬಾರಿ ತಿಂದು ಬಲೂನ್ ರೀತಿ ಊದುತ್ತಿರುವಾಗ 6 ಬಾರಿ ತಿಂದರೆ ತೆಳ್ಳಗಾಗುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.
ಈ ರೀತಿ 6 ಬಾರಿ ತಿನ್ನುವುದನ್ನು ಡಯಟ್ ಪರಿಣಿತರು "3 hour diet," ಎಂದು ಕರೆಯುತ್ತಾರೆ, ಈ ಡಯಟ್ ನಲ್ಲಿ ಪ್ರತಿ ಮೂರು ಗಂಟೆಗೆ ಒಮ್ಮೆ ಊಟ ಮಾಡಬೇಕು. ಆದರೆ ಆಹಾರದ ಪ್ರಮಾಣ ಕಡಿಮೆಯಿದ್ದು ಈ ಆಹಾರದಲ್ಲಿ ಹಣ್ಣು ಅದರಲ್ಲೂ ನೀರಿನಂಶವಿರುವ ಹಣ್ಣುಗಳ ಸೇವನೆ ಒಳ್ಳೆಯದು. ಈ ರೀತಿ ತಿಂದರೆ ದೇಹದಲ್ಲಿ ಜೀರ್ಣಕ್ರಿಯೆ ಸಾಮರ್ಥ್ಯ ಹೆಚ್ಚುವುದು, ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ, ಹಸಿವನ್ನು ನಿಯಂತ್ರಣದಲ್ಲಿಡುತ್ತದೆ, ಇದರಿಂದ ದೇಹದ ತೂಕ ಕಡಿಮೆಯಾಗುವುದು. ಈ ರೀತಿ ಡಯಟ್ ಒಂದು ತಿಂಗಳವರೆಗೆ ಮಾಡುತ್ತಾ ಬನ್ನಿ, ಅದರ ಪ್ರಯೋಜನವನ್ನು ನೀವೇ ಕಾಣಬಹುದು.
ಈ ಡಯಟ್ ನಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಯಾವುದೇ ಕಾರಣಕ್ಕೂ ಹೊಟ್ಟೆ ತುಂಬಾ ತಿನ್ನಬಾರದು, 3 ಹೊತ್ತು ತಿನ್ನುವ ಆಹಾರವನ್ನು ಭಾಗ ಮಾಡಿ 6 ಹೊತ್ತು ತಿನ್ನಿ.
ಈ ಡಯಟ್ ಮಾಡುಬೇಕೆಂದು ತೀರ್ಮಾನಿಸಿದರೆ ಈ ರೀತಿ ಮಾಡಿ : ಬೆಳಗ್ಗೆ ಒಂದು ಹೊತ್ತಿನ ಊಟಕ್ಕೆ ಒಂದು ಮೊಟ್ಟೆಯ ಬಿಳಿ ಮತ್ತು ಜ್ಯೂಸ್ ಮಾತ್ರ 3 ಗಂಟೆಯ ಬಳಿಕ ಎರಡನೇ ಬಾರಿ ಊಟ ಮಾಡುವಾಗ ಯಾವುದಾದರೂ ಒಂದು ಹಣ್ಣು (ಸೇಬು ಅಥವಾ ಸ್ವಲ್ಪ ದ್ರಾಕ್ಷಿ) , ಮದ್ಯಾಹ್ನ ಮೊಸರನ್ನ, ಮತ್ತೆ ನಟ್ಸ್, ಮತ್ತೆ ಸಾಯಾಂಕಾಲ ತಿಂಡಿಗೆ ಎಣ್ಣೆ ಅಂಶವಲ್ಲದ ಆಹಾರ, ರಾತ್ರಿ ಲಘು ಆಹಾರ ಹೀಗೆ ಒಂದು ತಿಂಗಳು ಮಾಡುತ್ತಾ ಬಂದರೆ ದೇಹವು ಆರೋಗ್ಯವಾಗಿರುತ್ತದೆ, ಡಯಟ್ ಹೆಸರಿನಲ್ಲಿ ಹಸಿವಿನಿಂದ ಇರಬೇಕಾದ ಅವಶ್ಯಕತೆಯೂ ಇಲ್ಲ.
ಆದರೆ ಈ ಡಯಟ್ ಪಾಲಿಸುವವರು ಮಿತಿ ಮೀರಿ ತಿನ್ನದಂತೆ ತುಂಬಾ ಎಚ್ಚರಿಕೆ ವಹಿಸಬೇಕು. ಹಸಿವು ಆದಾಗ ಸ್ವಲ್ಪ ತಿನ್ನಬೇಕೆ ಹೊರತು ಹೊಟ್ಟೆ ತುಂಬುವಷ್ಟು ತಿಂದರೆ ಫಲಿತಾಂಶ ನಿಮ್ಮ ಬಯಕೆಗೆ ವಿರುದ್ಧವಾಗಿ ದೊರೆಯಬಹುದು.
ಈ ಡಯಟ್ ಸಣ್ಣಗಾಗಲು ಮಾತ್ರವಲ್ಲ, ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಕೂಡ ಈ ಡಯಟ್ ಕ್ರಮ ಅನುಸರಿಸಲಾಗುವುದು. ದೇಹದಲ್ಲಿ ಸಕ್ಕರೆ ಅಂಶದಲ್ಲಿ ವ್ಯತ್ಯಾಸ ಉಂಟಾದರೆ ಈ ಸ್ಥಿತಿಯನ್ನು ವೈದ್ಯಕೀಯ ವಿಜ್ಞಾನದಲ್ಲಿ "hypoglycemia,"ಎಂದು ಕರೆಯಲಾಗುವುದು. ಈ ಸಮಸ್ಯೆಯನ್ನು ಹೋಗಲಾಡಿಸಿ ಸಕ್ಕರೆ ಅಂಶ ನಿಯಂತ್ರಕ್ಕೆ ತರಲು ವೈದ್ಯರು ದಿನದಲ್ಲಿ ಸ್ವಲ್ಪ-ಸ್ವಲ್ಪ ಆಹಾರವನ್ನು 6-7 ಬಾರಿ ತಿನ್ನಲು ಹೇಳುತ್ತಾರೆ. ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಂದ ಮೇಲೆ ಮಾಮೂಲಿ ರೀತಿ ಊಟ ಮಾಡಲು ಹೇಳುತ್ತಾರೆ. ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ಈ ಡಯಟ್ ಕ್ರಮ ಅನುಸರಿಸಿದರೆ ಉತ್ತಮ ಪ್ರಯೋಜನ ಕಾಣಬಹುದು.
ಈ ಡಯಟ್ ಒಂದು ತಿಂಗಳವರೆಗೆ ಮಾಡಿ, ನಂತರ ನಿಮ್ಮ ಅನಿಸಿಕೆ ನಮಗೆ ಬರೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications