Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಆರೋಗ್ಯಕರ ಸಲಾಡ್ ಡಯಟ್ ಹೇಗಿರಬೇಕು?

ಸಲಾಡ್ ಡಯಟ್ ನಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ, ಅಲ್ಲದೆ ಬೊಜ್ಜು ಕೂಡ ಕರಗುತ್ತೆ. ಆರೋಗ್ಯಕರವಾದ ಸಲಾಡ್ ಡಯೆಟ್ ಹೇಗಿರಬೇಕೆಂದು ತಿಳಿಯಲು ಮುಂದೆ ಓದಿ.
1. ಬೆಳಗ್ಗೆ: ತಿಂಡಿಗೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತರಕಾರಿಗಳನ್ನು ಕತ್ತರಿಸಲು ಸಮಯವಿಲ್ಲದಿದ್ದರೆ ಹಣ್ಣು ಮತ್ತು ನಟ್ಸ್ ನಿಂದ ಸಲಾಡ್ ತಯಾರಿಸಿ ಸೇವಿಸಬೇಕು. ಕಡಿಮೆ ಕೊಬ್ಬಿನ ಚೀಸ್ ಕೂಡ ಅದರ ಜೊತೆ ಸೇವಿಸಬೇಕು. ಅಲ್ಲದಿದ್ದರೆ ವೆಜಿಟೇಬಲ್ ಸ್ಯಾಂಡ್ ವಿಚ್ ಸೇವಿಸಬಹುದು.
2. ಮಧ್ಯಾಹ್ನ: ಬೇಯಿಸಿದ ತರಕಾರಿ ಸಲಾಡ್ ಅಥವಾ ಕತ್ತರಿಸಿದ ತಾಜಾ ತರಕಾರಿಗಳಿಂದ ಸಲಾಡ್ ತಯಾರಿಸಬೇಕು. ಮಧ್ಯಾಹ್ನ ಸೇವಿಸುವ ಸಲಾಡ್ ಗೆ ಸ್ವಲ್ಪ ಖಾರ ಸೇರಿಸಿದರೆ ಒಳ್ಳೆಯದು. ಕ್ಯಾರೇಟ್, ಬ್ರೊಕೋಲಿ, ಸೌತೆಕಾಯಿ, ಟೊಮೆಟೊ, ಎಲೆಕೂಸು ಈ ರೀತಿಯ ತರಕಾರಿ ಸೇವನೆ ಒಳ್ಳೆಯದು. ಅದರ ಜೊತೆ ಒಂದು ಬೇಯಿಸಿದ ಮೊಟ್ಟೆ, ಸ್ಟ್ರಾಬರಿ, ದ್ರಾಕ್ಷಿ, ಕಲ್ಲಂಗಡಿ ಹಣ್ಣು, ನಟ್ಸ್ ಹೀಗೆ ಇವುಗಳನ್ನು ಸೇವಿಸಬೇಕು.
3.ಸಾಯಂಕಾಲ: ಸಾಯಂಕಾಲದಲ್ಲಿ ತಾಜಾ ಹಣ್ಣಿನ ಜ್ಯೂಸ್ ಅಥವಾ ತರಕಾರಿ ಸೂಪ್ ಸೇವಿಸಬಹುದು. ಜೊತೆಗ ನಟ್ಸ್ , ಹಣ್ಣುಗಳನ್ನು ಕೂಡ ಸೇವಿಸಿದರೆ ಒಳ್ಳೆಯದು.
4. ರಾತ್ರಿ: ರಾತ್ರಿಯಲ್ಲಿ ಹಸಿ ತರಕಾರಿ ಬದಲು ಬೇಯಿಸದ ತರಕಾರಿ ಸಲಾಡ್ ಸೇವಿಸಿದರೆ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ. ನಂತರ ಹಾಲು ಅಥವಾ ತರಕಾರಿ ಸೂಪ್ ಸೇವಿಸಬೇಕು. ರಾತ್ರಿ ಊಟದಲ್ಲಿ ಕೆಂಪಕ್ಕಿ ಅನ್ನ ಜೊತೆ ಒಂದು ಬೇಯಿಸಿದ ಮೊಟ್ಟೆಯನ್ನು ಕೂಡ ಸೇವಿಸಬಹುದು. ರಾತ್ರಿ ಊಟವನ್ನು ಮಲುಗುವ 3-4 ಗಂಟೆ ಮೊದಲು ಸೇವಿಸಬೇಕು.
ದಿನಕ್ಕೆ 8-10 ಲೋಟ ನೀರು ಕುಡಿಯಬೇಕು. ಸಲಾಡ್ ಡಯಟ್ ಅಂದರೆ ಸಲಾಡ್ ಮಾತ್ರ ಸೇವಿಸಬೇಕೆಂದು ಇಲ್ಲ, ಆಹಾರಕ್ರಮದಲ್ಲಿ ಕೂಡ ಈ ಸಲಾಡ್ ಸೇರಿಸಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications