Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಜಿಮ್ ಗೆ ಹೋಗುವವರಿಗೆಂದೇ ಇಲ್ಲಿದೆ ಸ್ಪೆಷಲ್ ಡಯಟ್

ಜಿಮ್ ಗೆ ಹೋಗುವವರ ಡಯಟ್ ಹೀಗಿರಲಿ:
1. ಜಿಮ್ ಗೆ ಹೋಗುವ ಮುನ್ನ ಆರೋಗ್ಯಕರ ಮತ್ತು ಪ್ರೊಟೀನ್ ಹೆಚ್ಚಿರುವ ಆಹಾರ ಸೇವಿಸಿದರೆ ವ್ಯಾಯಾಮ ಮಾಡಲು ಅಗತ್ಯ ಶಕ್ತಿ ನೀಡುತ್ತದೆ. ಆದರೆ ಹೊಟ್ಟೆ ತುಂಬ ತಿನ್ನಬಾರದು. ವ್ಯಾಯಾಮ ಮಾಡುವಷ್ಟು ಶಕ್ತಿಗೆ ಅನುಗುಣವಾಗಿ ತಿಂದರೆ ಸಾಕು.
2. ಗ್ಲೂಕೋಸ್ ಹೆಚ್ಚಿರುವ ಆಹಾರಗಳು ದೇಹಕ್ಕೆ ಶಕ್ತಿ ನೀಡಿ ವ್ಯಾಯಾಮ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಬಾಳೆ ಹಣ್ಣು, ಪಪ್ಪಾಯ, ಅನಾನಸ್ ಮುಂತಾದ ಗ್ಲೂಕೋಸ್ ಇರುವ ಹಣ್ಣುಗಳನ್ನು ಜಿಮ್ ಗೆ ಹೋಗುವ ಮುನ್ನ ಸೇವಿಸಿ.
3. ಬಾದಾಮಿ, ಆಪ್ರಿಕಾಟ್, ಪಿಯರ್ಸ್ ಮತ್ತು ಗೋಡಂಬಿ ಇಂತಹ ಡ್ರೈ ಫ್ರೂಟ್ ಗಳ ಸೇವನೆಯಿದ್ದರೆ ಹೆಚ್ಚು ಶಕ್ತಿ ನೀಡುತ್ತದೆ. ಇದರಲ್ಲಿ ಮಿನರಲ್, ಪ್ರೊಟೀನ್, ಕಾರ್ಬೊಹೈಡ್ರೇಡ್ ಮತ್ತು ವಿಟಮಿನ್ ಹೇರಳವಾಗಿರುವುದರಿಂದ ನಿಮ್ಮನ್ನು ಫಿಟ್ ಮತ್ತು ಆರೋಗ್ಯವಾಗಿರಿಸುತ್ತದೆ.
4. ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರ ಜಿಮ್ ಗೆ ಹೋಗುವವರಿಗೆ ಹೆಚ್ಚು ಸೂಕ್ತ. ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸದೆಯೇ ಗ್ಲೂಕೋಸ್ ನೀಡಿ ಹೆಚ್ಚಿನ ಶಕ್ತಿ ನೀಡುತ್ತದೆ.
5. ಬ್ರೆಡ್, ಧಾನ್ಯಗಳು, ಜೋಳ, ಗೋಧಿ, ಓಟ್ಸ್, ಪಾಸ್ತಾ ಮುಂತಾದುವು ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರ ಪದಾರ್ಥಗಳು.
6. ಖರ್ಜೂರ, ಕಪ್ಪು ದ್ರಾಕ್ಷಿ, ದ್ರಾಕ್ಷಿ, ಕಿತ್ತಳೆ ಮತ್ತು ಕಲ್ಲಂಗಡಿ ಹಣ್ಣಿನಲ್ಲೂ ಕಾರ್ಬೊಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಜಿಮ್ ಗೆ ಹೋಗುವ ಮುನ್ನ ಸೇವಿಸಬಹುದು.
7. ಜಿಮ್ ಗೆ ಹೋಗುವ ಮುನ್ನ 6-7 ಬಾದಾಮಿಯನ್ನು ತಿಂದರೆ ವ್ಯಾಯಾಮ ಮಾಡಲು ಶಕ್ತಿ ನೀಡಿ ಹಸಿವನ್ನು ನಿಯಂತ್ರಿಸುತ್ತದೆ.
8. ಜಿಮ್ ಗೆ ಹೋಗುವ ಮುನ್ನ ಅಥವಾ ನಂತರ ಕಡಿಮೆ ಕೊಬ್ಬಿನಂಶ ಹೊಂದಿರುವ ಹಾಲು ಅಥವಾ ಮೊಸರನ್ನು ಸೇವಿಸಬಹುದು.
ಈ ವಿಧಾನಗಳನ್ನು ಅನುಸರಿಸುವುದರಿಂದ ತೂಕ ನಿಯಂತ್ರಣದೊಂದಿಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶವೂ ದೊರೆಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
