For Quick Alerts
ALLOW NOTIFICATIONS  
For Daily Alerts

ಬಯಲಲ್ಲಿ ವ್ಯಾಯಾಮ ಮಾಡಿದರೆ ಹೆಚ್ಚು ಉಪಯೋಗ

|
Outdoor Exercise Benefit more
ವ್ಯಾಯಾಮ ಮಾಡುವುದಷ್ಟೇ ಮುಖ್ಯವಲ್ಲ, ಎಲ್ಲಿ ವ್ಯಾಯಾಮ ಮಾಡುತ್ತೀರ ಎನ್ನುವುದೂ ಕೆಲವೊಮ್ಮೆ ಮುಖ್ಯವಾಗುತ್ತದೆ. ಸಂಶೋಧಕರ ಪ್ರಕಾರ ಮನೆಯಲ್ಲಲ್ಲದೆ, ಹೊರಗೆ ವ್ಯಾಯಾಮ ಮಾಡುವುದರಿಂದ ವ್ಯಾಯಾಮದ ಸಂಪೂರ್ಣ ಉಪಯೋಗವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

ಬ್ರಿಟನ್ ನ ಪೆನಿನ್ಸುಲಾ ಕಾಲೇಜ್ ಆಫ್ ಮೆಡಿಸಿನ್ ಅಂಡ್ ಡೆಂಡಿಸ್ಟ್ರಿ ಮತ್ತು ಯುರೋಪಿಯನ್ ಸೆಂಟರ್ ಫಾರ್ ಎನ್ವಿರಾನ್ ಮೆಂಟ್ ಅಂಡ್ ಹ್ಯೂಮನ್ ಹೆಲ್ತ್ ನ ಸಂಶೋಧಕರು ನಡೆಸಿದ ಅಧ್ಯಯನದಿಂದ, ಪಾರ್ಕ್ ಅಥವಾ ಮನೆಯ ಹೊರಗೆ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚು ಒಳಿತಾಗುತ್ತದೆ ಎಂದು ತಿಳಿದುಬಂದಿದೆ.

ಮನೆಯಿಂದ ಹೊರಗೆ ಮತ್ತು ಒಳಗೆ ವ್ಯಾಯಾಮ ಮಾಡುವುದರ ಪರಿಣಾಮದ ಕುರಿತು 833 ಜನರ ಮೇಲೆ ನಡೆಸಿದ ಸಂಶೋಧನೆಯಿಂದ ಈ ಫಲಿತಾಂಶವನ್ನು ಕಂಡುಕೊಂಡಿದ್ದಾರೆ.

ಹೊರಗೆ ವ್ಯಾಯಾಮ ಮಾಡುವುದರಿಂದ ಹೆಚ್ಚು ಉಲ್ಲಾಸ, ಚೈತನ್ಯ, ಶಕ್ತಿ, ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಅಷ್ಟೇ ಅಲ್ಲ, ಮುಕ್ತ ಪರಿಸರದಲ್ಲಿ ವ್ಯಾಯಾಮ ಮಾಡುವುದರಿಂದ ಒತ್ತಡ, ಗೊಂದಲ, ಕೋಪವನ್ನು ಬೇಗನೆ ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ.

ಪರಿಸರದೊಂದಿಗೆ ವ್ಯಕ್ತಿ ಹೆಚ್ಚು ಬೆರೆತಷ್ಟು ಆತನ ಆರೋಗ್ಯವೂ ಹೆಚ್ಚುತ್ತದೆ ಎಂದು ಅಧ್ಯಯನದ ಹಿರಿಯ ಲೇಖಕ ಮೈಕಲ್ ಡೆಪ್ಲೆಡ್ಜ್ ಅವರು ತಿಳಿಸಿದ್ದಾರೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಜನರು ಹೊರಗೆ ವ್ಯಾಯಾಮ ಮಾಡಿದರೆ ಅತಿ ಉಲ್ಲಾಸ ಮತ್ತು ತೃಪ್ತಿಕರವಾಗಿರುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

English summary

Outdoor Exercise Benefit more | Exercise and Health | ಹೊರಗೆ ವ್ಯಾಯಾಮ ಮಾಡಿದರೆ ಹೆಚ್ಚು ಉಪಯೋಗ

Exercising outdoor instead of indoor can give you more benefit. outdoor activity is associated with feeling of revitalisation, positive energy and you can easily come out from anger, a new study suggests.
Story first published: Sunday, November 20, 2011, 13:13 [IST]
X
Desktop Bottom Promotion