For Quick Alerts
ALLOW NOTIFICATIONS  
For Daily Alerts

ಈ ಕಾರ್ಬ್ಸ್ ಆಹಾರಗಳು ಮಧುಮೇಹಿಗಳಿಗೆ ಒಳ್ಳೆಯದು

|

ಮಧುಮೇಹ ಬಂದವರಿಗೆ ಆಹಾರಕ್ರಮದ ಕಡೆ ಎಷ್ಟೊಂದು ನಿಗಾವಹಿಸಬೇಕು ಎಂಬುವುದು ತಿಳಿದಿರತ್ತದೆ. ಸ್ವಲ್ಪ ಆಹಾರದಲ್ಲಿ ಹೆಚ್ಚು ಕಮ್ಮಿಯಾದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಿ ತಲೆಸುತ್ತು, ವಾಂತಿ ಮುಂತಾದ ಸಮಸ್ಯೆ ಕಂಡು ಬರುವುದು.

ಆದ್ದರಿಂದ ಮಧುಮೇಹಿಗಳು ಆಹಾರದ ಕಡೆ ತುಂಬಾನೇ ಗಮನ ಹರಿಸುತ್ತಾರೆ. ಅದರಲ್ಲೂ ಇಷ್ಟದ ಆಹಾರಗಳನ್ನು ತಿನ್ನ ಬಯಸುವುದಾದರೆ ಭಯಪಟ್ಟುಕೊಂಡೇ ತಿನ್ನುತ್ತಾರೆ. ಅದರಲ್ಲೂ ಕಾರ್ಬೋಹೈಡ್ರೇಟ್ಸ್ ಆಹಾರವನ್ನು ಸೇವಿಸಲೇಬಾರದು ಅಂತಾರೆ, ಆದರೆ ಒಂದು ಮಾತು ನೆನಪುಟ್ಟುಕೊಳ್ಳಿ, ಎಲ್ಲಾ ಬಗೆಯ ಕಾರ್ಬೋಹೈಡ್ರೇಟ್ಸ್ ನಿಮಗೆ ಹಾನಿಕಾರಕವಲ್ಲ.

ನಾವಿಲ್ಲ ಮಧುಮೇಹಿಗಳು ತಿನ್ನಬಹುದಾದ ಕಾರ್ಬೋಹೈಡ್ರೇಟ್ಸ್ ಇರುವ ಆಹಾರಗಳ ಬಗ್ಗೆ ಹೇಳಿದ್ದೇವೆ. ಈ ಆಹಾರಗಳಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಇದು ತಿನ್ನುವುದರಿಂದ ಸಕ್ಕರೆಯಂಶ ಹೆಚ್ಚುವುದಿಲ್ಲ:

1. ಬೀನ್ಸ್

1. ಬೀನ್ಸ್

ಕಿಡ್ನಿ ಬೀನ್ಸ್ ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಹಾಗೂ ನಾರಿನಂಶ ಅಧಿಕವಿದೆ. ಆದ್ದರಿಂದ ಇದು ಮಧುಮೇಹಿಗಳಿಗೂ ಅತ್ಯುತ್ತಮವಾದ ಆಹಾರವಾಗಿದೆ. ಇದು ತೂಕ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ನೀವು ಅತ್ಯಧಿಕ ಮೈ ತೂಕ ಹೊಂದಿದ್ದರೆ ಮೈ ತೂಕ ಕಡಿಮೆ ಮಾಡುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುವುದು.

2. ಕೆಲವೊಂದು ಹಣ್ಣುಗಳು

2. ಕೆಲವೊಂದು ಹಣ್ಣುಗಳು

ನೀವು ಮಧುಮೇಹ ಬಂದ ಮೇಲೆ ಯಾವುದೇ ಹಣ್ಣುಗಳನ್ನು ತಿನ್ನದಿದ್ದರೆ ಆ ತಪ್ಪು ಮಾಡದಿರಿ. ಕೆಲವೊಂದು ಹಣ್ಣುಗಳನ್ನು ತಿನ್ನಬಹುದು. ತಾಜಾ ಹಣ್ಣುಗಳನ್ನು ಅಲ್ಪ ಪ್ರಮಾಣದಲ್ಲಿ ತಿನ್ನಬಹುದು. ಕಿತ್ತಳೆ, ಸ್ಟ್ರಾಬೆರ್ರಿ, ಸೇಬು ತಿನ್ನಬಬಹುದು.

3. ಮೊಸರು

3. ಮೊಸರು

ಮೊಸರು ಅಥವಾ ಯೋಗರ್ಟ್ ಸೇವನೆ ಕೂಡ ತುಂಬಾನೇ ಒಳ್ಳೆಯದು. ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಇದರಲ್ಲಿ ಕ್ಯಾಲ್ಸಿಯಂ ಅಧಿಕವಿದ್ದು, ಕಾರ್ಬ್ಸ್, ಪ್ರೊಟೀನ್ ಇರುವುದರಿಂದ ಮಧುಮೇಹಿಗಳಲ್ಲಿ ದಿನದಲ್ಲಿ ಒಂದು ಕಪ್ ಮೊಸರು ಸೇವಿಸಿ.

4. ಬೀಜಗಳು, ನಟ್ಸ್

4. ಬೀಜಗಳು, ನಟ್ಸ್

ಕುಂಬಳಕಾಯೊ ಬೀಜ, ನಟ್ಸ್ ಇವುಗಳನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಶೇ.27ರಷ್ಟು ತಗ್ಗಿಸಬಹುದೆಂದು ಸಂಶೋಧನೆಗಳು ಹೇಳಿವೆ. ಇದು ಗ್ಲೆಸೆಮಿಕ್ ಅನನ್ಉ ನಿಯಂತ್ರಣ ಮಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಉರಿಯೂತ ಕಡಿನೆ ಮಾಡುತ್ತದೆ, ರಕ್ತನಾಳಗಳು ಕಾರ್ಯ ಸರಿಯಾಗಿ ನಿರ್ವಹಿಸುವಂತೆ ಮಾಡುತ್ತದೆ.

5. ನವಣೆ ಹಾಗೂ ಸಿರಿಧಾನ್ಯಗಳು

5. ನವಣೆ ಹಾಗೂ ಸಿರಿಧಾನ್ಯಗಳು

ನವಣೆ ಹಾಗೂ ಸಿರಿಧಾನ್ಯಗಳಲ್ಲಿ ಪ್ರೊಟೀನ್, ನಾರಿನಂಶ, ವಿಟಮಿನ್ಸ್ ಹಾಗೂ ಖನಿಜಾಂಶಗಳು ಇದ್ದು, ಇವುಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡಬಹುದು. ಬೆಳಗ್ಗೆ ತಿಂಡಿಗೆ ನವಣೆಯಿಂದ ಮಾಡಿದ ಪದಾರ್ಥಗಳನ್ನು ಸೇವಿಸಿದರೆ ತುಂಬಾನೇ ಒಳ್ಳೆಯದು.

6. ಬೆರ್ರಿ ಹಣ್ಣುಗಳು

6. ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳನ್ನು ಓಟ್ಸ್ ಜೊತೆ ಸೇವಿಸಿ. ಇದರಲ್ಲಿ ಸಕ್ಕರೆಯಂಶ, ಕಾರ್ಬ್ಸ್ ಮಾತ್ರವಲ್ಲದೆ ನಾರಿನಂಶ ಕೂಡ ಅಧಿಕವಿರುವುದರಿಂದ ಇದನ್ನು ತಿನ್ನಬಹುದಾಗಿದೆ. ಒಂದು ಕಪ್ ಬೆರ್ರಿ ಹಣ್ಣು ತಿನ್ನುವುದರಿಂದ ರಕ್ತ ಶುದ್ಧೀಕರಿಸುತ್ತದೆ, ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಚಲಿಸುವುದು ಎಂದು ಅಮೆರಿಕನ್ ಜರ್ನಲ್ ಆಫ್‌ ಕ್ಲಿನಿಕಲ್ ನ್ಯೂಟ್ರಿಷಿಯನ್ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

English summary

These Carbs Food Will Help Diabetics Keep Their Blood Sugar

These carbs food will help diabetics keep their blood sugar, read on.
Story first published: Friday, November 6, 2020, 11:05 [IST]
X
Desktop Bottom Promotion