For Quick Alerts
ALLOW NOTIFICATIONS  
For Daily Alerts

ಅಧ್ಯಾಯನದ ವರದಿ: ಪುರುಷರ ಫಲವತ್ತತೆ ಮೇಲೆ ಮಧುಮೇಹ ಪರಿಣಾಮ ಬೀರುತ್ತದೆಯಂತೆ!

|

ಮಧುಮೇಹ ಎನ್ನುವುದು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಪುರುಷರು ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುವುದು. ಇದರೊಂದಿಗೆ ಮಧುಮೇಹಿಗಳಲ್ಲಿ ಹೃದಯದ ಕಾಯಿಲೆ, ಪಾರ್ಶ್ವವಾಯು, ಕಿಡ್ನಿಗೆ ಹಾನಿ, ದೃಷ್ಟಿ ಸಮಸ್ಯೆ, ಪಾದ ಮತ್ತು ಕಾಲಿನಲ್ಲಿ ಅಂಗವಿಕಲತೆ ಉಂಟಗುವುದು. ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಷನ್(ಸಿಡಿಸಿ) ಪ್ರಕಾರ ಟೈಪ್ 2 ಮಧುಮೇಹವು ವಯಸ್ಕರಲ್ಲಿ ಶೇ.90ರಿಂದ 95ರಷ್ಟು ಕಾಣಿಸಿಕೊಳ್ಳುವುದು ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯು ವರದಿ ಮಾಡಿರುವ ಪ್ರಕಾರ ವಿಶ್ವದಲ್ಲಿ ಶೇ. 90ರಷ್ಟು ಜನರಲ್ಲಿ ಟೈಪ್ 2 ಮಧುಮೇಹವು ಕಾಣಿಸಿಕೊಂಡಿದೆ. 2013ರಲ್ಲಿ ಮಹಿಳೆಯರಿಗಿಂತ 14 ಮಿಲಿಯನ್ ಪುರುಷರಲ್ಲಿ ಮಧುಮೇಹವು ಕಾಣಿಸಿಕೊಂಡಿದೆ.

Diabetes

ಮಧುಮೇಹವು ಪುರುಷರ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವುದೇ?

ಹ್ಯೂಮನ್ ರೀಪ್ರಾಡಕ್ಟಿವ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ ಮಧುಮೇಹವು ಪುರುಷರ ಫಲವತ್ತತೆ ಮೇಲೆ ತುಂಬಾ ಹಾನಿಕಾರಕ ಪರಿಣಾಮ ಬೀರುವುದು. ಮಧುಮೇಹದ ಸಮಸ್ಯೆ ಇರುವಂತಹ ಪುರುಷರಲ್ಲಿ ವೀರ್ಯದ ಡಿಎನ್ ಎ ಹಾನಿ ಆಗುವಂತಹ ಅಪಾಯವು ಅಧಿಕವಾಗಿ ಇರುತ್ತದೆ. ಸ್ಖಲನದ ವೇಳೆ ವೀರ್ಯವು ಬರದೆ ಇರುವುದು ಮತ್ತು ಟೆಸ್ಟೋಸ್ಟೆರಾನ್ ಮಟ್ಟದಲ್ಲಿ ಕುಸಿತವು ಇದಕ್ಕೆ ಪ್ರಮುಖ ಕಾರಣವಾಗಿರಬಹುದು.

ಮಧುಮೇಹವು ಪುರುಷರ ಸಂತಾನೋತ್ಪತ್ತಿ ಯಾವ ರೀತಿ ಪರಿಣಾಮ ಬೀರುವುದು?

ಮಧುಮೇಹವು ರಕ್ತನಾಳ, ನರಗಳು ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುವುದು. ಇದರಿಂದಾಗಿ ಪುರುಷರಲ್ಲಿ ಕೆಲವೊಂದು ಲೈಂಗಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಲ್ಲಿ ಮುಖ್ಯವಾಗಿ ಕಾಮಾಸಕ್ತಿ ಕುಂದುವುದು, ನಿಮಿರು ದೌರ್ಬಲ್ಯ, ಸ್ಖಲನದ ಸಮಸ್ಯೆ ಮತ್ತು ಮುಂದೊಗಲಿನಲ್ಲಿ ಉರಿಯೂತ ಕಾಣಿಸುವುದು. ಮಧುಮೇಹವು ಪುರುಷರಲ್ಲಿ ಈ ಕೆಳಗಿನ ಲೈಂಗಿಕ ಸಮಸ್ಯೆಯನ್ನು ಉಂಟು ಮಾಡಬಹುದು.

Most Read: ಮಧುಮೇಹ ಇರುವ ಪುರುಷರಿಗೆ ಕಾದಿದೆ ಗಂಡಾಂತರ! ಅದೇನು ಗೊತ್ತೇ?

ನಿಮಿರು ದೌರ್ಬಲ್ಯ

ಮಧ್ಯ ವಯಸ್ಸಿನ ಪುರುಷರು ಮತ್ತು ವಯಸ್ಸಾದ ಪುರುಷರಲ್ಲಿ ನಿಮಿರು ದೌರ್ಬಲ್ಯವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಷನ್ ನ ಪ್ರಕಾರ ಮಧುಮೇಹ ಇರುವಂತಹ ಜನರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆಯು ಮೂರು ಪಟ್ಟು ಹೆಚ್ಚಾಗಿ ಇರುತ್ತದೆ. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಳ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗುವುದು ನಿಮಿರು ದೌರ್ಬಲ್ಯಕ್ಕೆ ಪ್ರಮುಖ ಕಾರಣಗಳಾಗಿವೆ.

ವೀರ್ಯದ ಗುಣಮಟ್ಟದಲ್ಲಿ ಕುಸಿತ

ಇಂಟರ್ನ್ಯಾಶನಲ್ ಜರ್ನಲ್ ಆಫ್ ಫರ್ಟಿಲಿಟಿಯಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ, ಮಧುಮೇಹವು ವೀರ್ಯದ ಗುಣಮಟ್ಟವನ್ನು ಕುಗ್ಗಿಸುವುದು, ವೀರ್ಯದ ಗಣತಿ ಮತ್ತು ವೀರ್ಯದ ಚಲನೆಯನ್ನು ಕೂಡ ಕಡಿಮೆ ಮಾಡುವುದು.

ಸ್ಖಲನ ಕುಂಠಿತ

ಮಧುಮೇಹದಿಂದಾಗಿ ಶಿಶ್ನದಲ್ಲಿನ ನರಗಳಿಗೆ ಹಾನಿ ಆಗಬಹುದು. ಇದರ ಪರಿಣಾಮವಾಗಿ ನರಗಳಲ್ಲಿನ ಸೂಕ್ಷ್ಮತೆಯು ಕಡಿಮೆ ಆಗಿ ಸ್ಖಲನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು.

ಸ್ಖಲನ ಹಿಮ್ಮುಖವಾಗುವುದು

ಸ್ಖಲನದ ಅಂತ್ಯದಲ್ಲಿ ಮೂತ್ರನಾಳಗಳ ಸ್ನಾಯುಗಳ ಮೇಲೆ ಯಾವುದೇ ನಿಯಂತ್ರಣ ಸಾಧಿಸಲು ನರಗಳಿಗೆ ಸಾಧ್ಯವಾಗದೆ ಇರುವ ಪರಿಣಾಮವಾಗಿ ಹಿಮ್ಮುಖ ಸ್ಖಲನವು ಉಂಟಾಗುವುದು. ಇದರ ಪರಿಣಾಮವಾಗಿ ಪರಾಕಾಷ್ಠೆ ವೇಳೆ ಶಿಶ್ನದಿಂದ ಬರುವ ಬದಲು ವೀರ್ಯವು ಮೂತ್ರನಾಳಗಳಲ್ಲಿ ಪ್ರವೇಶ ಮಾಡುವುದು. ಹಿಮ್ಮುಖ ಸ್ಖಲನವು ಮಧುಮೇಹ ಹೊಂದಿರುವ ಪುರುಷರಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ನರಗಳಿಗೆ ಆಗುವ ಹಾನಿ. ಇದು ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಸಮಸ್ಯೆಗಳು.

English summary

Study:Diabetes Affects Male Fertility

Diabetes is a common condition that affects both men and women and puts them at a greater risk for heart disease, stroke, kidney damage, vision loss, amputation of toe, leg or foot. According to the Centers for Disease Control and Prevention (CDC), type 2 diabetes estimates for about 90 to 95% of all diagnosed cases of diabetes in adults. The World Health Organization (WHO) reports that 90% of people around the world have type 2 diabetes. In 2013, there were 14 million more men affected with diabetes than women
X
Desktop Bottom Promotion