For Quick Alerts
ALLOW NOTIFICATIONS  
For Daily Alerts

ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಕೊಳ್ಳುವುದು ಹೇಗೆ?

By Dr Arpandev Bhattacharyya
|
Insulin Injection rules
ಇಂಜೆಕ್ಷನ್ ತೆಗೆದುಕೊಳ್ಳಲು ಸರಿ ಸಮಯ ಯಾವುದು?

ಊಟಕ್ಕಿಂತ 30 ನಿಮಿಷಕ್ಕೂ ಮೊದಲು ಸಾಮಾನ್ಯವಾಗಿ ಇನ್ಸುಲಿನ್ ತೆಗೆದುಕೊಳ್ಳಲು ಸೂಕ್ತ ಸಯಮ. ಇದರಿಂದ ಊಟದ ನಂತರ ಸಿಗುವ ಇನ್ಸುಲಿನ್ ಪ್ರಮಾಣದ ಲೆಕ್ಕಾಚಾರ ಮಾಡಲು ಅನುಕೂಲಕರ. ಅಕಸ್ಮಾತ್, ಊಟ ಮಾಡಿದ್ದರೆ ತಕ್ಷಣವೇ ಇನ್ಸುಲಿನ್ ತೆಗೆದುಕೊಳ್ಳುವುದು ಒಳ್ಳೆಯದು. ಆದರೆ, ಇಂಜೆಕ್ಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದು. ಈಗ Aspart, Lispro ಎಂಬ ಹೊಸ ಬಗೆ ತುಸು ದುಬಾರಿ ಇನ್ಸುಲಿನ್ ಇಂಜೆಕ್ಷನ್ ಗಳು ಲಭ್ಯವಿದ್ದು, ಇಂಜೆಕ್ಷನ್ ಚುಚ್ಚಿಕೊಂಡ ಕೆಲ ಕ್ಷಣದಲ್ಲೇ ಊಟ ಮಾಡಬಹುದಾಗಿದೆ. ಸಾಮಾನ್ಯ ಇನ್ಸುಲಿನ್ ಇಂಜೆಕ್ಷನ್ ಗಿಂತ ಇದು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ.

ಇಂಜೆಕ್ಷನ್ ಅನ್ನು ಯಾವ ಭಾಗದಲ್ಲಿ ತೆಗೆದುಕೊಳ್ಳಬೇಕು?

ತೋಳಿನ ಭಾಗ, ತೊಡೆ ಅಥವಾ ಹೊಟ್ಟೆಗೆ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಕೊಳ್ಳಬಹುದು. ಹೊಟ್ಟೆ ಭಾಗದಲ್ಲಿ ಇನ್ಸುಲಿನ್ ತೆಗೆದುಕೊಳ್ಳುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇಂಜೆಕ್ಷನ್ ಚುಚ್ಚಿಕೊಳ್ಳಲು ಹೆಚ್ಚು ವಿಸ್ತೃತ ಜಾಗವಿರುತ್ತದೆ ಹಾಗೂ ನೋವು ಕೂಡಾ ಕಮ್ಮಿ. ಇನ್ಸುಲಿನ್ ಇಂಜೆಕ್ಷನ್ ಸಿರಂಜ್ ನಲ್ಲಿ ಬಳಸಲ್ಪಡುವ ನೀಡಲ್ ಸಣ್ಣದಾಗಿದ್ದು, ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ರಕ್ತಧಮನಿಗಳಿಗೆ ಇಂಜೆಕ್ಷನ್ ಚುಚ್ಚಿ ಹಾನಿಯಾಗುವ ಸಂಭವದ ಬಗ್ಗೆ ಅನುಮಾನಪಡುವುದು ಬೇಡ.

ಡಾಕ್ಟರ್ ಅಥವಾ ನರ್ಸ್ ಸಹಾಯ ಪಡೆಯಬಹುದೇ?

ಇದರ ಅಗತ್ಯವಿಲ್ಲ. ಇಂಜೆಕ್ಷನ್ ನೀವೇ ತೆಗೆದುಕೊಳ್ಳಬೇಕು.ಆದರೆ, ಇಂಜೆಕ್ಷನ್ ತೆಗೆದುಕೊಳ್ಳುವ ವಿಧಾನದ ಬಗ್ಗೆ ವೈದ್ಯರಿಂದ ಪಾಠ ಹೇಳಿಸಿಕೊಳ್ಳಬಹುದು. ಡಾಕ್ಟರ್ ಅಥವಾ ನರ್ಸ್ ರಿಂದ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕಿಂತ ಸ್ವತಃ ನೀವೇ ಚುಚ್ಚಿಕೊಳ್ಳುವುದು ಉತ್ತಮ ಹಾಗೂ ಕಡಿಮೆ ನೋವಿನ ಅನುಭವ ನೀಡುತ್ತದೆ.

English summary

‎Diabetes | Insulin Dosage| When Insulin Needed | Balanced Diet | Health | Diabetes Mellitus | Lifestyle | ಮಧುಮೇಹಿಗಳಿಗೆ ಇನ್ಸುಲಿನ್ ಇಂಜೆಕ್ಷನ್ ಬಳಕೆ

Insulin injections should be taken 30 minutes before meal. The best place to take the injection is the outer side of arms, thighs and tummy.
X
Desktop Bottom Promotion