For Quick Alerts
ALLOW NOTIFICATIONS  
For Daily Alerts

ಬಾಲಿವುಡ್‌ನ ಹಾಟ್ ಮಾಮ್ ಮಲೈಕಾ ಕಡಲ ತೀರದಲ್ಲಿ ಸುತ್ತಾಟ!

By Jaya subramanya
|

ಬಾಲಿವುಡ್‌ನ ಎಲ್ಲಾ ಬೆಡಗಿಯರು ಈಗೀಗ ಹೊರದೇಶಗಳಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಶೂಟಿಂಗ್‌ನಿಂದ ಕೊಂಚ ದಿನಗಳ ನಿರಾಳತೆಯನ್ನು ಪಡೆದುಕೊಂಡು ಹೆಚ್ಚಿನ ದಿನಗಳನ್ನು ಹೊರದೇಶಗಳಲ್ಲಿ ಕಳೆಯುವುದು ಈಗೀಗ ಸಾಮಾನ್ಯವಾಗಿದೆ. ಅಲ್ಲಿ ಹೊಸ ಹೊಸ ಫ್ಯಾಷನ್ ಅನ್ನು ಅನುಸರಿಸಿಕೊಂಡು, ಆಹಾರವನ್ನು ಸೇವಿಸಿಕೊಂಡು, ಆರಾಮವಾಗಿ ತಮ್ಮ ರಜಾದಿನಗಳನ್ನು ಕಳೆಯುತ್ತಿದ್ದಾರೆ.

ಈಗ ಇಂದಿನ ಲೇಖನದಲ್ಲಿ ಮಲೈಕಾ ಅರೋರಾ ತಮ್ಮ ವಿಶ್ರಾಂತಿಯನ್ನು ಸ್ಪೇನ್‌ನಲ್ಲಿ ಕಳೆಯುತ್ತಿದ್ದಾರೆ. ಈಗೀಗ ತಮ್ಮ ಸಪೂರ ಸೆಕ್ಸಿ ಮೈ ಕಟ್ಟಿನಿಂದ ಬಾಲಿವುಡ್‌ನಲ್ಲಿ ಮನೆಮಾತಾಗಿರುವ ಹಾಟ್ ಮಾಮ್ ಮಲೈಕಾ ಸ್ಪೇನ್‌ನ ಕಡಲ ತೀರದಲ್ಲಿ ವಿಹರಿಸುತ್ತಾ ಇನ್ನಷ್ಟು ಹಾಟ್ ನೋಟವನ್ನು ನಮಗೆ ಉಣಬಡಿಸಿದ್ದಾರೆ.

ಮಲೈಕಾ ಧರಿಸಿರುವ ಉಡುಪು ಬೇಸಿಗೆಗೆ ತಕ್ಕಂತಿದ್ದು ಆಕೆಯನ್ನು ಇನ್ನಷ್ಟು ಹಾಟ್ ಆಗಿ ತೋರಿಸಿದೆ. ಇಳಿಬಿಟ್ಟಿರುವ ಕಿವಿಯಾಭರಣ, ಕಡಲ ತೀರದಲ್ಲಿ ಓಡಾಡಲು ಹೆಚ್ಚು ಆರಾಮದಾಯಕ ಎಂದೆನಿಸಿರುವ ಸ್ಲಿಪ್ಪರ್, ಹೀಗೆ ಸರಳವಾಗಿ ತಮ್ಮ ಬೀಚ್‌ ತೀರದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ನಿಮಗೂ ಮಲೈಕಾರ ಈ ಬೇಸಿಗೆಯುಡುಗೆ ಇಷ್ಟವಾಯಿತು ಎಂದಾದಲ್ಲಿ ನಿಮ್ಮ ಹೊರದೇಶದ ಸುತ್ತಾಟದಲ್ಲಿ ಇಂತಹದ್ದೇ ಟ್ರೆಂಡಿಯಾಗಿರುವಂತಹದ್ದನ್ನು ನೀವೂ ಪ್ರಯತ್ನಿಸಬಹುದು.....

English summary

Malaika Arora Slaying It In Spain; A Look That Catches Your Eyes

Malaika Arora is holidaying in Spain and her latest look in a beach cape is awesome to not have your eyes on it. The white beach cape from Bungalow 8 has blue prints on it, making Malaika look hotter than usual and this can certainly become someone's upcoming summer wardrobe goal.
Story first published: Wednesday, July 12, 2017, 23:50 [IST]
X