For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಈ ಟ್ರೆಂಡಿಂಗ್ ಹೇರ್‌ಸ್ಟೈಲ್‌ಗಳನ್ನೂ ಟ್ರೈ ಮಾಡಿ

|

ಹೇರ್‌ಸ್ಟೈಲ್ ಫ್ಯಾಷನ್‌ ತಿಂಗಳಿನಿಂದ-ತಿಂಗಳಿಗೆ ಬದಲಾಗುತ್ತಾ ಇರುತ್ತದೆ. ಕೆಲವೊಂದು ಹೇರ್‌ಸ್ಟೈಲ್ ನೋಡಲು ತುಂಬಾ ಚೆಂದ ಕಂಡರೆ, ಆ ಹೇರ್‌ ಸ್ಟೈಲ್‌ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಕೆಲವರು ಆಕರ್ಷಕವಾಗಿ ಕಾಣಬೇಕು ಎಂದು ಬಯಸುವುದಕ್ಕಿಂತ ವಿಭಿನ್ನವಾಗಿ ಕಾಣಬೇಕೆಂದು ಬಯಸುತ್ತಾರೆ. ಸೋಷಿಯಲ್‌ ಮೀಡಿಯಾ ಫಾಲೋ ಮಾಡುವವರು ಹಲವು ಬಗೆಯ ಹೇರ್‌ಸ್ಟೈಲ್ ಗಮನಿಸಿರಬಹುದು. ಕೆಲವರ ಹೇರ್‌ಸ್ಟೈಲ್(ಕೂದಲ ವಿನ್ಯಾಸ) ನೋಡಿ ಎಷ್ಟೊಂದು ಚೆನ್ನಾಗಿದೆ ಎಂದು ಅನಿಸಿದರೆ ಮತ್ತೆ ಕೆಲವರ ಹೇರ್‌ಸ್ಟೈಲ್ ನೋಡಿ ಹೀಗೂ ಹೇರ್‌ಸ್ಟೈಲ್‌ ಮಾಡಬಹುದಾ ಎಂದು ಅನಿಸದಿರಲ್ಲ ನೋಡಿ.

ಇಲ್ಲಿ ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆಯುತ್ತಿರುವ ಹೇರ್‌ಸ್ಟೈಲ್‌ ಬಗ್ಗೆ ಹೇಳಲಾಗಿದೆ. ಈ ಹೇರ್‌ ಸ್ಟೈಲ್‌ಗಳು ನೋಡಕ್ಕೆ ಆಕರ್ಷಕವಾಗಿ ಕಾಣುವುದರಿಂದ ಹೆಚ್ಚಿನ ಜನರು ಈ ಸ್ಟೈಲ್ ಅನುಕರಣೆ ಮಾಡುತ್ತಿದ್ದು ಇದೀಗ ಟ್ರೆಂಡ್‌ ಆಗಿದೆ. ಇಲ್ಲಿರುವ ಹೇರ್‌ಸ್ಟೈಲ್‌ಗಳ ಮತ್ತೊಂದು ವಿಶೇಷತೆ ಏನೆಂದರೆ ನಿಮ್ಮ ಮುಖ ಅಗಲವಾಗಿರಲಿ, ಉದ್ದವಾಗಿರಲಿ, ಎಲ್ಲಾ ಬಗೆಯ ಮುಖ ಶೇಪ್‌ಗೆ ಹೋಲುವಂತಿದೆ.

ಚಳಿಗಾಲದಲ್ಲಿ ಕೋಟ್‌, ಸೆಟ್ವರ್ ಅಥವಾ ನಮ್ಮ ಔಟ್‌ಫಿಟ್‌ ಸ್ವಲ್ಪ ಭಿನ್ನವಾಗಿರುತ್ತದೆ, ಈ ಹೇರ್‌ ಸ್ಟೈಲ್‌ ಚಳಿಗಾಲದ ಔಟ್‌ಫಿಟ್‌ ಸೂಟ್‌ ಆಗುವಂತಿದೆ. ಹೊಸ ಬಗೆಯ ಹೇರ್‌ ಸ್ಟೈಲ್‌ ಮಾಡಬೇಕೆಂದು ನೀವು ಆಲೋಚಿಸುತ್ತಿದ್ದರೆ ಈ ಹೇರ್ ಸ್ಟೈಲ್‌ಗಳಲ್ಲಿ ನಿಮಗೆ ಇಷ್ಟವಾದ ಹೇರ್‌ ಸ್ಟೈಲ್‌ ಮಾಡಬಹುದು ನೋಡಿ.

ಕುದುರೆ ಜುಟ್ಟು ಹಾಗೂ ಹೇರ್ ಬ್ಯಾಂಡ್‌

ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು.

View this post on Instagram

🖤 wearing @kkwbeauty x Winnie gloss in Aura over Classic Icon Lip Liner KKWBEUATY.COM

A post shared by Kim Kardashian West (@kimkardashian) on Oct 3, 2019 at 1:21pm PDT

ಮರುಕಳಿಸಿದ 60ರ ಫ್ಯಾಷನ್

ನೀವು 60 ದಶಕದಲ್ಲಿ ನಟಿಯರು ಮಾಡುತ್ತಿದ್ದ ಹೇರ್‌ಸ್ಟೈಲ್‌ ಗಮನಿಸಿರಬಹುದು, ಇದೀಗ ಅದೇ ರೀತಿಯ ಹೇರ್‌ಸ್ಟೈಲ್‌ ಟ್ರೆಂಡ್ ಮತ್ತೆ ಚಾಲ್ತಿಗೆ ಬಂದಿದೆ. ಸ್ವಲ್ಪ ಬೋಲ್ಡ್‌ ಲುಕ್‌ನಿಂದಕಾಣ ಬಯಸುವವರಿಗೆ ಈ ಹೇರ್‌ ಸ್ಟೈಲ್‌ ಹೇಳಿ ಮಾಡಿಸಿದಂತಿದೆ. ಈ ಹೇರ್‌ ಸ್ಟೈಲ್‌ ಡೆನಿಮ್‌ ಡ್ರೆಸ್ಸಿಂಗ್‌ಗೆ ಆಕರ್ಷಕವಾಗಿ ಕಾಣುವುದು. ಈ ಹೇರ್‌ ಸ್ಟೈಲ್ ಕೂದಲು ಸ್ಟ್ರೈಟ್‌ ಇರಬೇಕು. ಕೂದಲನ್ನು ಮೇಲಕ್ಕೆ ಎತ್ತಿ, ಅರ್ಧ ಕೂದಲನ್ನು ಬಿಟ್ಟು ನೆತ್ತಿಯ ಮೇಲ್ಭಾಗಕ್ಕೆ ಜುಟ್ಟು ಹಾಕುವುದು. ಹದಿ ಹರೆಯದ ಹೆಣ್ಮಕ್ಕಳಿಗೆ ಹೇಳಿ ಮಾಡಿಸಿದ ಹೇರ್‌ ಸ್ಟೈಲ್ ಇದಾಗಿದೆ.

View this post on Instagram

Shiny and chocolatey rich by @h.b_beauty . #YourSpaceSalons #YourAfter

A post shared by @ yourspace_salons on Sep 26, 2019 at 2:46pm PDT

ಶೈನಿ ಕೂದಲು

ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು.

ಸ್ಟೈಲಿಷ್‌ ಹೇರ್ ಕ್ಲಿಪ್ ಬಳಸುವುದು

ನೀವು ಅಲಂಕಾರ ಪ್ರಿಯರಾಗದ್ದರೆ ಈಗೀನ ಟ್ರೆಂಡ್‌ ನಿಮ್ಮ ಅಲಂಕಾರಕ್ಕೆ ಪೂರಕವಾಗಿದೆ. ಪ್ಲೇನ್‌ ಹೇರ್‌ ಕ್ಲಿಪ್‌ ಬದಲಿಗೆ ಕಲರ್ ಫುಲ್, ಫಂಕಿ ಹೇರ್‌ ಕ್ಲಿಪ್‌ಗಳದ್ದೇ ಕಾರುಬಾರು. ಈ ಹೇರ್‌ ಕ್ಲಿಪ್‌ಗಳು ಗಿಡ್ಡ ಕೂದಲಿನಿಂದ ಹಿಡಿದು, ಉದ್ದ ಕೂದಲಿನವರೆಗೆ ಆಕರ್ಷಕವಾಗಿ ಕಾಣುತ್ತದೆ. ತುಂಬಾ ಕಲರ್‌ಫುಲ್‌ ಬ್ಯಾಂಡ್‌ಗಳು ಟ್ರೆಂಡ್‌ನಲ್ಲಿ ಇಲ್ಲ ಎಂದು ಹಾಗೇ ಇಟ್ಟಿದ್ದರೆ ಅದನ್ನು ತೆಗೆದು ಬಳಸುವ ಸಮಯ ಬಂದಿದೆ ನೋಡಿ.

View this post on Instagram

The transformation from summer to fall = bronde. . 📸 : @styling_by_sou . #YourSpaceSalons #YourAfter

A post shared by @ yourspace_salons on Sep 23, 2019 at 5:04pm PDT

ಹೇರ್ ಕಲರ್‌

ಹೇರ್‌ ಕಲರ್ ಟ್ರೆಂಡ್‌ ಮತ್ತೆ ಮರುಕಳಿಸಿದೆ. ಹೇರ್‌ ಕಲರ್‌ ಮಾಡಿಸುವಾಗ ತಮ್ಮ ತ್ವಚೆ ಬಣ್ಣಕ್ಕೆ ಹೊಂದುವಂಥ ಹೇರ್ ಕಲರ್ ಹಾಕಿಸುವುದು ಒಳ್ಳೆಯದು. ಭಾರತೀಯರ ಮೈ ಬಣ್ಣಕ್ಕೆ ಕೆಂಪು, ಹಳದಿ ಈ ರೀತಿಯ ಬಣ್ಣಗಳು ಆಕರ್ಷಕವಾಗಿ ಕಾಣುವುದಿಲ್ಲ, ಈ ರೀತಿಯ ಬಣ್ಣ ಹಾಕಿಸಿದರೆ ವಿಚಿತ್ರವಾಗಿ ಕಾಣುವುದು, ತೆಳು ಕೆಂಚು ಬಣ್ಣ, ಕಂದು ಬಣ್ಣ ಕೂದಲಿಗೆ ಆಕರ್ಷಕವಾಗಿ ಕಾಣುತ್ತದೆ.

View this post on Instagram

Organized chaos ⚔️🗡🗡⚔️ #thosebrowstho

A post shared by Kathleen (@kathleen_hair) on Nov 11, 2017 at 11:41am PST

ಹೇರ್‌ಪಿನ್ ಲುಕ್‌

ಈ ಹೇರ್‌ಪಿನ್‌ ಲುಕ್‌ಗೆ ದೊಡ್ಡ-ದೊಡ್ಡ ಹೇರ್‌ಪಿನ್ ಬದಲಿಗೆ ಚಿಕ್ಕ ಹೇರ್‌ಪಿನ್‌ ಬಳಸಿ ಹೇರ್‌ಸ್ಟೈಲ್‌ ಮಾಡಿದರೆ ಕೂದಲಿಗೆ ನೋವಾಗುವುದಿಲ್ಲ ಹಾಗೂ ತುಂಬಾ ಆಕರ್ಷಕವಾಗಿ ಕಾಣುವುದು. ಫ್ರೀ ಹೇರ್‌ ಬಿಟ್ಟು ಮುಂದೆ ಹೇರ್‌ ಪಿನ್‌ನಿಂದ ಬ್ಯಾಂಡ್‌ ರೀತಿಯಲ್ಲಿ ಸ್ಟೈಲ್ ಮಾಡಿ. ನಿಮ್ಮ ನ್ಯೂ ಲುಕ್ ಎಲ್ಲರಿಗೆ ಇಷ್ಟವಾಗುವುದು ನೋಡಿ. ಈ ಹೇರ್‌ಪಿನ್‌ ಲುಕ್ ಹದಿಹರೆಯದ ಕಾಲೇಜು ಹೆಣ್ಮಕ್ಕಳಿಗೆ ತುಂಬಾ ಆಕರ್ಷಕವಾಗಿ ಕಾಣುವುದು.

ಫ್ರೀ ಕರ್ಲಿಹೇರ್‌ ಲುಕ್‌

ಗುಂಗುರು ಕೂದಲು ಇಷ್ಟಪಡುವುದಾದರೆ ಈ ಕರ್ಲಿಹೇರ್‌ ಲುಕ್(ಗುಂಗುರು ಕೂದಲಿನ) ಟ್ರೈ ಮಾಡಬಹುದು. ಈ ಹೇರ್‌ ಸ್ಟೈಲ್‌ ನಿಮಗೆ ಡಿಫರೆಂಟ್ ಲುಕ್ ನೀಡುತ್ತದೆ ಎನ್ನುವುದರಲ್ಲಿ ನೋ ಡೌಟ್. ಬಾಬ್‌ ಹೇರ್‌ ಇರುವ ಗುಂಗುರು ಕೂದಲಿನವರು ಈ ಹೇರ್‌ ಸ್ಟೈಲ್ ಟ್ರೈ ಮಾಡಬಹುದು

ಮಕ್ಕಳಿಗೆ ಹೇರ್‌ಲುಕ್‌

ಇನ್ನು ಮಕ್ಕಳಿಗಾದರೆ ಭಿನ್ನ ಹೇರ್‌ ಸ್ಟೈಲ್ ಮಾಡಿದಷ್ಟು ಮುದ್ದು-ಮುದ್ದಾಗಿ ಕಾಣುತ್ತಾರೆ. ನಿಮ್ಮ ಮಗಳ ಕೂದಲು ಉದ್ದವಿದ್ದರೆ ಈ ಹೇರ್‌ ಸ್ಟೈಲ್ ಸ್ಟ್ರೈ ಮಾಡಿ. ತುಂಬಾ ಸರಳವಾಗಿದ್ದು ಎರಡು ಜುಟ್ಟುಗೆ ಎರಡು ಬಣ್ಣದ ಬ್ಯಾಂಡ್‌ ಹಾಕಲಾಗಿದೆ. ಎಲ್ಲಾ ಬಗೆಯ ಡ್ರೆಸ್ಸಿಂಗ್‌ಗೆ ಸೂಟ್‌ ಆಗುವ ಹೇರ್‌ ಸ್ಟೈಲ್ ಇದು.

English summary

Trendy Hairstyles To Try in Winter

If you are fashion lover, want to change hairstyle for this autumn season, here attractive hair style design which are trending in Instagram, have a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X