For Quick Alerts
ALLOW NOTIFICATIONS  
For Daily Alerts

ಸ್ಪೇನ್‌ನ ರಾಜಕುಮಾರಿಯ ಬ್ಯೂಟಿ ಸೀಕ್ರೆಟ್‌ ತಿಳಿದರೆ ನೀವು ಅಚ್ಚರಿಗೊಳ್ಳುವಿರಿ

|

ಮಹಿಳೆ ಹಾಗೂ ಮೇಕಪ್ ಇವೆರಡಕ್ಕೂ ಅವಿನಾಭಾವ ಸಂಬಂಧ! ಮಹಿಳೆಯರಿಗೆ ವಿವಿಧ ವಿನ್ಯಾಸದ ಉಡುಗೆಗಳು, ಆಭರಣ, ಮೇಕಪ್ ಹಾಗೂ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾದ ವಿಷಯ. ಜೊತೆಗೆ ಸಾಕಷ್ಟು ಮಹಿಳೆಯರು ತಮ್ಮ ಭಾಗಶಃ ಸಮಯವನ್ನು ಇದಕ್ಕಾಗಿಯೇ ಮೀಸಲಿಡುತ್ತಾರೆ.

ಇಂಥ ಮಹಿಳೆಯರಿಗಾಗಿ ಒಂದು ಸುಂದರವಾದ ರಾಜಕುಮಾರಿ ಕಥೆಯೊಂದನ್ನು ಹೇಳಲು ಮುಂದಾಗಿದ್ದೇವೆ. ಆ ರಾಜಕುಮಾರಿಯ ಸೌಂದರ್ಯದ ಗುಟ್ಟು ನೀವು ಅರಿತರೆ ನಿಮ್ಮಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡದೇ ಇರಲಾರದು!

ಸ್ಪೈನ್ ನ ಸುಂದರ ರಾಜಕುಮಾರಿ ಲೆಟಿಜಿಯಾ, ಹಾಲಿವುಡ್ ನ ಯಾವ ಸುಂದರಿಗಿಂತಲೂ ಕಡಿಮೆ ಸುಂದರಿಯಲ್ಲ. ಬದಲಾಗಿ ಹಲವು ನಟಿಗಳನ್ನು ಹಿಂದಿಕ್ಕಬಲ್ಲಳು. ಹಲವು ಇತರ ರಾಜಕುಮಾರಿಯರಿಗಿಂತ (ಸಾಮಾನ್ಯವಾಗಿ ರಾಜ ಮನೆತನದ ಬಟ್ಟೆಗಳು ಮತ್ತು ಕಿರೀಟಗಳನ್ನು ಧರಿಸುತ್ತಾರೆ) ಭಿನ್ನವಾಗಿ, ಆಧುನಿಕ ಉಡುಗೆಗಳಲ್ಲಿ ಹೆಚ್ಚು ಕಾಣ ಸಿಗುತ್ತಾರೆ.

ಈ ರಾಜಕುಮಾರಿಯವರ ಪರಿಣಾಮಕಾರಿಯಾದ ಹತ್ತು ಮೇಕಪ್, ಸೌಂದರ್ಯವರ್ಧಕ ಮತ್ತು ಫಿಟ್ನೆಸ್ ರಹಸ್ಯಗಳನ್ನು ಯಾವುದು ಗೊತ್ತೇ?

ಸೌಂದರ್ಯ ವರ್ಧಕ ರಹಸ್ಯಗಳು :

ರಾಜಕುಮಾರಿಯ ಸೌಂದರ್ಯವರ್ಧಕ ಪುಸ್ತಕದ ಒಂದು ಹಾಳೆಯನ್ನು ನಾವು ಪಾಲಿಸಿದರೂ ಸಾಕು ನಾವಿರುವುದಕ್ಕಿಂತಲೂ ಇನ್ನಷ್ಟು ಚೆನ್ನಾಗಿ ಕಾಣಬಹುದು! ರಾಜಮನೆತನದ ಜನರನ್ನು ಆಸಕ್ತಿಯಿಂದ ಗಮನಿಸುವ, ಅವರ ಸೌಂದರ್ಯದ ಬಗ್ಗೆ ಕುತೂಹಲವಿರುವ ನಿಮಗೆಲ್ಲರಿಗೂ ರಾಜಕುಮಾರಿಯ ಸೌಂದರ್ಯದ ಗುಟ್ಟನ್ನು ಹೊತ್ತು ತಂದಿದ್ದೇವೆ. ಆಸಕ್ತಿದಾಯಕ ಆ ರಹಸ್ಯಗಳನ್ನು ತಿಳಿಯಲು ಮುಂದೆ ಓದಿ.

1. ಚಿನ್ನದ ಬಣ್ಣದ ಕೂದಲು:

1. ಚಿನ್ನದ ಬಣ್ಣದ ಕೂದಲು:

Image Courtesy

ಈ ಆಕರ್ಷಕ ಮತ್ತು ಪ್ರಲೋಭಕ ಹುಡುಗಿ ನಿಜವಾಗಿಯೂ ರಾಜಮನೆತನದ ಕುವರಿಯೇ ಎಂದು ಆಶ್ಚರ್ಯ ಆಗುತ್ತಿದೆಯೇ? ಬೇರೆ ರಾಜಕುಮಾರಿಯಂತಲ್ಲ ಈ ರಾಜಕುಮಾರಿ. ಈಕೆ ಈ ಶತಮಾನದ ಮಾಡರ್ನ್ ಹೆಣ್ಣು. ತನ್ನ ನೀಳವಾದ ಕೂದಲಿನಿಂದ ಜಗತ್ತಿನ ಎಷ್ಟೋ ಜನರ ನಿದ್ದೆ ಕದ್ದಿರುವುದು ಸುಳ್ಳಲ್ಲ. ಈಕೆ ಸಾಮಾನ್ಯವಾಗಿ ನೇರವಾದ ಕಟ್ಟದ ಕೂದಲಿನೊಂದಿಗೆ ಕಾಣಸಿಗುತ್ತಾಳೆ. ಸಂಜೆಯ ಸಮಾರಂಭಗಳಲ್ಲಿ ಕಂಡಾಗ ಸುರುಳಿಯಾದ ಗುಂಗುರು ಕೂದಲಿನಲ್ಲಿ ಮಿಂಚುತ್ತಾಳೆ. ಬದುಕಿನಲ್ಲಿ ವೈವಿಧ್ಯತೆ ಇದ್ದರಷ್ಟೇ ಬದುಕು ಬಂಗಾರವಾಗುತ್ತದೆ ಎಂಬಂತೆ ಈಕೆ ಬದುಕುತ್ತಿದ್ದಾಳೆ.

2. ಕಪ್ಪು ಬಿಳುಪು:

2. ಕಪ್ಪು ಬಿಳುಪು:

Image Courtesy

ಈ ರಾಜಕುಮಾರಿ (ಈಗ 41 ವರ್ಷ ವಯಸ್ಸು ಮತ್ತು ಎರಡು ಮಕ್ಕಳ ತಾಯಿ) ಯಾವಾಗಲೂ ರಂಗುರಂಗಿನ ಉಡುಗೆಯಲ್ಲಿ ಆಕರ್ಷಕವಾಗಿ ಕಂಡರೂ ಕಪ್ಪು ಮತ್ತು ಬಿಳುಪು ಈಕೆಯನ್ನು ಮತ್ತಷ್ಟು ಆಕರ್ಷಕವನ್ನಾಗಿಸುತ್ತದೆ. ಅವರ ಬಟ್ಟೆಯ ಸಂಗ್ರಹದತ್ತ ಒಮ್ಮೆ ಕಣ್ಣು ಹಾಯಿಸಿದರೆ ಕಪ್ಪು ಬಿಳುಪು ಬಣ್ಣಗಳ ಬಗ್ಗೆ ಈಕೆಗೆ ಇರುವ ಆಸಕ್ತಿಯನ್ನು ಸ್ಪಷ್ಟವಾಗಿ ಕಾಣಿಸುತ್ತದೆ. ತನ್ನ ಬದುಕನ್ನು ಬಿಳಿ ಬಣ್ಣದಿಂದ ತುಂಬಿದರೆ ತನ್ನ ಕಪ್ಪು ಬಣ್ಣದಿಂದ ಜಗತ್ತನ್ನು ಮತ್ತು ನೋಡುಗರನ್ನು ಮಂತ್ರ ಮುಗ್ಧರನಾಗಿಸುತ್ತಾಳೆ. ತನ್ನ ಮದುವೆಯ ದಿನದಂದೂ ಈಕೆ ಫ್ಯಾಷನ್ ರಾಣಿಯಂತೆ ಕಂಗೊಳಿಸುತ್ತಿದ್ದಳು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಮ್ಯಾನುಯಲ್ ಪಟ್ಗಾರ್ಝ್ ರಾಜಕುಮಾರಿ ತೊಡುವ ಸಾಕಷ್ಟು ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದಾರೆ ಇದರಲ್ಲಿ ಅವರ ಮದುವೆಯ ಬಟ್ಟೆಯೂ ಒಂದು!

ನಮ್ಮಂತಹ ಸಾಮಾನ್ಯರಂತೆ ರಾಜಕುಮಾರಿಯೂ ಬ್ರಾಂಡ್ ಗಳ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ. ಇವರ ಮದುವೆಯ ಬಟ್ಟೆ ಎಲ್ಲರ ಕಣ್ಣು ಕುಕ್ಕುವಂತೆ ಇದ್ದು ಇದು ಕೌಚರ್ ಬ್ರಾಂಡ್ ನ ಉನ್ನತ ಮಟ್ಟದ ಬಟ್ಟೆಯಾಗಿತ್ತು. ಇದು ರೇಷ್ಮೆಯಿಂದ ಮಾಡಿದ ಬಟ್ಟೆಯಾಗಿದ್ದು ಉದ್ದದ ಕೊರಳಪಟ್ಟಿ (ಕಾಲರ್) ಇದ್ದು ಇದನ್ನು ಕಸೂತಿ ಕಲೆ ಎದ್ದು ಕಾಣುತ್ತದೆ. ರಾಜಕುಮಾರಿ ಸಾಮಾನ್ಯವಾಗಿ ಮೊಣಕಾಲು ಉದ್ದದ ಕಪ್ಪು ಅಥವಾ ಬಿಳಿ ಬಣ್ಣದ ಬಾಡಿಕಾನ್ ಉಡುಪಿನಲ್ಲಿ ಕಂಗೊಳಿಸುತ್ತಾರೆ. ಇತ್ತೀಚೆಗೆ ಮಾಡ್ರಿಡ್ ನ ಅರಮನೆಯಲ್ಲಿ ನಡೆದ ಸಮಾರಂಭ ಒಂದರಲ್ಲಿ ಈಕೆ ಕಪ್ಪು ಬಣ್ಣದ ಲೇಸ್ ಗೌನ್ ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದರು.

3. ವೈವಿಧ್ಯಮಯ ಶೂಗಳು

3. ವೈವಿಧ್ಯಮಯ ಶೂಗಳು

Image Courtesy

ಸ್ಪೇನ್ ನ ರಾಜಕುಮಾರಿ, ಆಧುನಿಕ ಕಾಲದ ರಾಜಮನೆತನಗಳಲ್ಲಿ ಅತ್ಯಂತ ಸೊಗಸಾದ ವ್ಯಕ್ತಿಯೆಂದು ಗುರುತಿಸಲ್ಪಟ್ಟಿದ್ದಾರೆ. ಅವರ ಹೀಲ್ಸ್ (ಪಂಪ್ಸ್, ಬಲೇರಿಯನ್ಸ್ ಮತ್ತು ಸ್ಟಿಲೆಟ್ಟೋಸ್) ಬಗೆಗಿನ ಪ್ರೀತಿ ಜಗತ್ತಿಗೆ ಗೊತ್ತಿರದ ವಿಷಯವೇನಲ್ಲ. ಈ ವಿಷಯದಲ್ಲಿ ಅವರದ್ದು ಸರಳ ಸೂತ್ರ. ಅಲಂಕಾರಿಕ (ಸಿಕ್ವೀನ್) ಉಡುಗೆಗಳ (ಬಾಡಿಕಾನ್ ಮತ್ತು ಗೌನ್ ಗಳು) ಜೊತೆಗೆ ಸರಳವಾದ ಹೀಲ್ಸ್ ತೊಟ್ಟರೆ, ಸರಳವಾದ ಉಡುಗೆಯ ಜೊತೆಗೆ ಅಲಂಕಾರಿಕ ಪಾದರಕ್ಷೆಗಳನ್ನು ತೊಡುತ್ತಾರೆ. ತನ್ನದೇ ಆದ ಶೈಲಿಯಲ್ಲಿ ಉಡುಗೆಗಳನ್ನು ತೊಡುವುದು ಮತ್ತು ಆಕರ್ಷಕವಾಗಿ ಕಾಣುವುದು ಸ್ಪೈನ್ ನ ಇತರ ಮಹಿಳೆಯರಲ್ಲಿ ಅಸೂಹೆ ಮೂಡಿಸಿದ್ದಂತೂ ಸುಳ್ಳಲ್ಲ.

4. ಹೊಸ ವಿನ್ಯಾಸದ ಬಟ್ಟೆಗಳು:

4. ಹೊಸ ವಿನ್ಯಾಸದ ಬಟ್ಟೆಗಳು:

Image Courtesy

ರಾಜಕುಮಾರಿಯ ಈ ಯಶಸ್ಸಿನ ಹಿಂದಿನ ದೊಡ್ಡ ರಹಸ್ಯವೆಂದರೆ ಅವರಲ್ಲಿ ಅಪಾಯವನ್ನು ಎದುರಿಸಲು ಇರುವ ಧೈರ್ಯ. ಇದರಿಂದಾಗಿ ಯಾವುದೇ ಹೊಸ ವಿನ್ಯಾಸದ ಉಡುಗೆಯನ್ನು ತೊಡಲು ಈಕೆ ಹಿಂಜರಿಯುವುದಿಲ್ಲ. 2011ರಲ್ಲಿ ನಡೆದ ಒಂದು ದೊಡ್ಡ ಮನೆತನದ ಮದುವೆಯಲ್ಲಿ ಉದ್ದನೆಯ ಗೌನ್ (ಅವರ ನೆಚ್ಚಿನ ವಿನ್ಯಾಸಕರಾದ ಫೆಲಿಪೆ ವರೆಲಾ ವಿನ್ಯಾಸಗೊಳಿಸಿದ ಉಡುಗೆ) ತೊಟ್ಟು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದರು. ಇವರು ತಮ್ಮ ಹೊಸ ವಿನ್ಯಾಸದ ಬಟ್ಟೆಗಳು ಮತ್ತು ಚತುರವಾದ ಆಯ್ಕೆಗಳೊಂದಿಗೆ ಜನರು ಮತ್ತು ಮಾಧ್ಯಮಗಳನ್ನು ಯಾವಾಗಲೂ ಕ್ರಿಯಾಶೀಲವಾಗಿರಿಸುತ್ತಾಳೆ.

5. ಮೇಕಪ್ ರಹಸ್ಯಗಳು:

5. ಮೇಕಪ್ ರಹಸ್ಯಗಳು:

Image Courtesy

ಇವರು ಚತುರ, ಮಾದಕ, ಸೊಗಸಾದ ಮತ್ತು ಅರಸೊತ್ತಿಗೆಯ ಆಧುನಿಕ ಮಹಿಳೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಈಗಾಗಲೇ ಆಕರ್ಷಕವಾಗಿರುವ ತ್ವಚೆಯನ್ನು ಮತ್ತಷ್ಟು ಹೊಳೆಯುವಂತೆ ಮಾಡುವುದು ಹೇಗೆ ಎನ್ನುವುದನ್ನು ಈಕೆ ಚೆನ್ನಾಗಿ ಅರಿತಿದ್ದಾರೆ. ಈಕೆಯ ವಯಸ್ಸು 41 ಎಂದು ಹೇಳಿದಾಗ ನಿಮಗೆ ಆಶ್ಚರ್ಯವಾಗುವುದರ ಜೊತೆಗೆ 20 ವರ್ಷಗಳ ನಂತರ ಇವರ ವಯಸ್ಸು ವೃದ್ಧಿಸಲೇ ಇಲ್ಲವೇ ಎಂಬ ಸಂಶಯವೂ ಬಂದರೆ ಅಚ್ಚರಿಯೇನಿಲ್ಲ. ಅವರ ತ್ವಚೆ ನೈಸರ್ಗಿಕವಾಗಿ ಸುಂದರವಾಗಿದ್ದು ಅವರು ಅದನ್ನು ಮೇಕಪ್ ನಿಂದ ಮತ್ತಷ್ಟು ಅದ್ಭುತವಾಗಿಸಬಲ್ಲರು.

ರಾಜಕುಮಾರಿಯು ನಿಯಮಿತವಾಗಿ ಸ್ಪಾ ಗೆ ಹೋಗುತ್ತಾರೆ. ನಿಯಮಿತವಾಗಿ ಫೇಶಿಯಲ್, ಟೊನಿಂಗ್ ಮತ್ತು ಒತ್ತಡ ನಿವಾರಕ ವ್ಯಾಯಾಮಗಳು ಅವರ ದೇಹವನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಅವರು ಸಾರ್ವಜನಿಕವಾಗಿ ಕಂಡಲ್ಲೆಲ್ಲಾ ಎಲ್ಲರನ್ನೂ ತನ್ನ ನೋಟ, ಶೈಲಿ ಮತ್ತು ಅವರು ಬಳಸುವ ಸುಗಂಧದಿಂದಾಗಿ ಸೆಳೆಯಬಲ್ಲರು.

ರಾಜಕುಮಾರಿಯ ಮೇಕಪ್ ನ ಕೆಲವು ರಹಸ್ಯಗಳು ಇಲ್ಲಿವೆ:

ಅವರು ಸಾಮಾನ್ಯವಾಗಿ ತನ್ನ ಹಸಿರು ಬಣ್ಣದ ಕಣ್ಣುಗಳ ಕಾಂತಿಯನ್ನು ಹೆಚ್ಚಿಸಲು ಹಸಿರು ಬಣ್ಣದ (ಕೆಲವೊಮ್ಮೆ ಕಂದು ಬಣ್ಣ) ಐ ಲೈನರ್ ನ್ನು ಬಳಸುತ್ತಾರೆ. ರಾಜಕುಮಾರಿ ಯಾವತ್ತೂ ಅತೀ ಎನ್ನಿಸುವಷ್ಟು ಮೇಕಪ್ ಮಾಡುವುದಿಲ್ಲ ಜೊತೆಗೆ ಮೇಕ್ ಅಪ್ ಮಾಡದೆಯೂ ಎಲ್ಲೂ ಕಾಣೀಸಿಕೊಳ್ಳುವುದಿಲ್ಲ!

ಅವರ ಕೆನ್ನೆಗಳಲ್ಲಿ ಯಾವಾಗಲೂ ಹವಳ ಗುಲಾಬಿ (ಅಥವಾ ಪೀಚ್) ಬಣ್ಣದ ಛಾಯೆಯನ್ನು ಕಾಣಬಹುದು. ಇದು ಸಹಜವಾಗಿ ಮತ್ತು ಕ್ರಮವಾಗಿ ಹಚ್ಚಿರುತ್ತಾರೆ.

ಗುಲಾಬಿ ಬಣ್ಣದ ಲಿಪ್ ಸ್ಟಿಕ್ (ಕೆಲವೊಮ್ಮೆ ಕೆನ್ನೀಲಿ ಬಣ್ಣ) ರಾಜಕುಮಾರಿಯ ತುಟಿಗಳ ಅಂದವನ್ನು ಹೆಚ್ಚಿಸುತ್ತವೆ. ಔಪಚಾರಿಕ ಸಭೆಗಳಲ್ಲಿ ರಾಜಕುಮಾರಿಗೆ ಲಿಪ್ ಸ್ಟಿಕ್ ಇನ್ನೂ ಸೊಗಸಾಗಿ ಕಾಣುವಂತೆ ಹಚ್ಚುತ್ತಾರೆ.

6. ಫಿಟ್ನೆಸ್ ರಹಸ್ಯಗಳು:

6. ಫಿಟ್ನೆಸ್ ರಹಸ್ಯಗಳು:

Image Courtesy

ಎರಡು ಮಕ್ಕಳ ತಾಯಿ ತನ್ನ ದೇಹವನ್ನು ಇನ್ನೂ ಆಕರ್ಷಕವಾಗಿ ಇಡಬಲ್ಲಳು ಎಂದು ನಂಬುತ್ತೀರಾ? ಸ್ಪೇನ್ ನ ಈ ರಾಜಕುಮಾರಿಯನ್ನು ನೋಡಿದ ಬಳಿಕ ಈ ಮಾತನ್ನು ಒಪ್ಪಲೇ ಬೇಕು. ಅವರ ದೇಹ ಯಾವುದೇ ಬಗೆಯ ಉಡುಪಿಗೂ ಒಗ್ಗುವಂತಿದೆ. ಅವರ ವಿವಿಧ ಬಗೆಯ ಆಟಗಳಲ್ಲಿನ ಆಸಕ್ತಿ ಅವರ ದೇಹ ವಿನ್ಯಾಸವನ್ನು ಇಷ್ಟು ಚೆನ್ನಾಗಿರಿಸಲು ಸಾಧ್ಯವಾಗಿದೆ ಎನ್ನಬಹುದು.

ಅವರು ಸಾಮಾನ್ಯವಾಗಿ ಟೆನ್ನಿಸ್, ಸ್ಕೀಯಿಂಗ್ ಮತ್ತು ದೋಣಿ ಹಾಯಿಕೆ ಆಟಗಳಲ್ಲಿ ತೊಡಗಿರಿಸಿಕೊಂಡಿರುವುದನ್ನು ನಾವು ಕಾಣಬಹುದು, ಈ ರಾಜಕುಮಾರಿ ತೋರಿಕೆಯ ಜೀವನವನ್ನು ಬಾಳದೇ ಬದುಕಿನ ಬಗ್ಗೆ ಸಾಹಸಮಯ ದೃಷ್ಟಿಕೋನವನ್ನು ಇಟ್ಟುಕೊಂಡಿರುವುದು ಕೂಡ ಅಷ್ಟೇ ರೋಚಕ ವಿಷಯ!

ನಿಜವಾದ ಅರ್ಥದಲ್ಲಿ ರಾಜಕುಮಾರಿ, ಜಗತ್ತಿನ ಓರ್ವ ಮಾದರಿ ಮಹಿಳೆ ಅಥವಾ ಸ್ಟೈಲ್ ಐಕಾನ್ ಆಗಿ ಕಂಗೊಳಿಸುತ್ತಾರೆ. ಆದರೆ ಅವರ ಮೇಕಪ್, ವಸ್ತ್ರಗಳು ಮತ್ತು ಕೇಶ ವಿನ್ಯಾಸವಷ್ಟೇ ಅವರನ್ನು ಈ ಸ್ಥಾನಕ್ಕೆ ತಂದಿಲ್ಲ. ಅವರೊಬ್ಬ ಚುರುಕಾದ ಸ್ವತಂತ್ರ ಮಹಿಳೆ ಎನ್ನುವ ಸತ್ಯ ಇವರ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತಿರುವುದು ಸುಳ್ಳಲ್ಲ.

ಈ ಲೇಖನ ನಿಮಗೆ ಇಷ್ಟವಾಯಿತೇ ? ನಿಮ್ಮ ಪ್ರತಿಕ್ರಿಯೆಯನ್ನು ಕೆಳಗಿನ ಕಮೆಂಟ್ ವಿಭಾಗದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

English summary

Spain Princess Letizia Beauty Secret And Style Statement

Here are Spain Princess Letizia beauty secret and style statement,Read on.
X