For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸ್ಕಿನ್‌ ಡ್ರೈಯಾಗದಿರಲು ಸ್ನಾನ ಮಾಡುವಾಗ ಹೀಗೆ ಮಾಡಿ

|

ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಾಡುವ ಸಮಸ್ಯೆಯೆಂದರೆ ತ್ವಚೆ ಒಣಗುವುದು ಅಥವಾ ಸ್ಕಿನ್ ಡ್ರೈ. ಈ ಸಮಸ್ಯೆ ಇಲ್ಲದವರು ತುಂಬಾನೇ ಕಡಿಮೆ, ಯಾರು ಚಳಿಗಾಲದಲ್ಲಿ ತ್ವಚೆ ಆರೈಕೆ ಕಡೆಗೆ ಗಮನ ಕೊಡುತ್ತಾರೋ ಅವರು ಮೃದುವಾದ ಹೊಳಪಿನ ತ್ವಚೆ ಸೌಂದರ್ಯ ಪಡೆಯಬಹುದು.

ಇದೀಗ ಚಳಿಗಾಲ ಶುರುವಾಗಿದೆ ಚಳಿಯ ತೀವ್ರತೆ ಶರುವಾಗುವ ಮುನ್ನವೇ ತ್ವಚೆ ಆರೈಕೆ ಕಡೆ ಗಮನ ಹರಿಸಿದರೆ ಸ್ಕಿನ್ ಡ್ರೈಯಾಗುವುದು, ಇದರಿಂದಾಗಿ ತುರಿಕೆ, ತ್ವಚೆ ಬಿಗಿದುಕೊಂಡ ಅನುಭವ ಮುಂತಾದ ತೊಂದರೆಗಳು ಉಂಟಾಗುವುದು. ಕೈಗಳು, ಕಾಲು ಒಡೆಯಲಾರಂಭಿಸಿದರೆ ನೋಡಲು ಚೆನ್ನಾಗಿರಲ್ಲ, ಅಲ್ಲದೆ ತ್ವಚೆ ತುಂಬಾ ಬಿರುಕಾದರೆ ನೋವು ಕೂಡ ಉಂಟಾಗುವುದು.

ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟಲು ನೀವು ಸ್ನಾನ ಮಾಡುವಾಗ ಈ ಕ್ರಮಗಳನ್ನು ಅನುಸರಿಸುವುದರಿಂದ ಚಳಿಗಾಲದ ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟಬಹುದು ನೋಡಿ:

1. ಎಣ್ಣೆ ಹಚ್ಚಿ ಸ್ನಾನ ಮಾಡಿ

1. ಎಣ್ಣೆ ಹಚ್ಚಿ ಸ್ನಾನ ಮಾಡಿ

ಚಳಿಗಾಲದಲ್ಲಿ ಮಕ್ಕಳಿಗೆ ಹಾಗೂ ನಿಮ್ಮ ಮೈಗೆ ಎಣ್ಣೆ ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಮೈಗೆ ಹಚ್ಚಲು ಸಾಸಿವೆಯೆಣ್ಣೆ, ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಏನು ಬೇಕಾದರೂ ಹಚ್ಚಬಹುದು.

2. ಸ್ಕ್ರಬ್ಬರ್ ಅಥವಾ ಮೈ ತಿಕ್ಕುವ ಚೇರಿ

2. ಸ್ಕ್ರಬ್ಬರ್ ಅಥವಾ ಮೈ ತಿಕ್ಕುವ ಚೇರಿ

ಮೈಯನ್ನು ಚೇರಿಯಿಂದ ತಿಕ್ಕಿ ಉಜ್ಜಬೇಕು, ಅದರಲ್ಲೂ ಪ್ಲಾಸ್ಟಿಕ್ ಚೇರಿಗಿಂತ ಒಣಗಿದ ಸೋರೆಕಾಯಿ ಚೇರಿ ಬಳಸಬಹುದು. ಇದರಿಂದ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿದಂತಾಗುವುದು.

ಹಳೆಯ ಪದ್ಧತಿ ಬೆಸ್ಟ್

ಕಡಲೆ ಹಿಟ್ಟಿಗೆ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ ಅದನ್ನು ಸೋಪು ಬದಲಿಗೆ ಬಳಸಿ. ಸ್ನಾನ ಮಾಡುವಾಗ ಇದನ್ನು ಮೈಗೆ ಹಚ್ಚಿ 5 ನಿಮಿಷ ಬಿಟ್ಟು ತೊಳೆಯಿರಿ.

3. ಮೊಣಕೈ, ಮೊಣಕಾಲು, ಕಂಕುಳ ಕಪ್ಪಗಿದ್ದರೆ

3. ಮೊಣಕೈ, ಮೊಣಕಾಲು, ಕಂಕುಳ ಕಪ್ಪಗಿದ್ದರೆ

ಕುತ್ತಿಗೆ, ಕಂಕುಳ, ಮೊಣಕೈ ಕಪ್ಪಗಿದ್ದರೆ ಸ್ನಾನಕ್ಕೆ ಮುಂಚೆ ನಿಂಬೆ ಹಣ್ಣಿನ ಹೋಳಿನಿಂದ ತಿಕ್ಕಿ ನಂತರ ಸ್ನಾನ ಮಾಡಿ, ಹೀಗೆ ಮಾಡುವುದರಿಂದ ಬೆಳ್ಳಗಾಗುವುದು.

ಸ್ನಾನದ ನೀರಿಗೆ ವಿನೆಗರ್ ಬಳಸಿದರೆ ಒಳ್ಳೆಯದು

ಸ್ನಾನ ಮಾಡಿದ ಮೇಲೆ ಕೊನೆಯಲ್ಲಿ ಬಕೆಟ್‌ ನೀರಿಗೆ ಸ್ವಲ್ಪ ವಿನೆಗರ್‌ ಹಾಕಿ ಅದನ್ನು ಮೈಗೆ ಸುರಿದರೆ ತ್ವಚೆ ಮೃದುವಾಗಿರುತ್ತೆ.

4. ಡ್ರೈ ತ್ವಚೆಯವರು ಸೋಪು ಬಳಸಲೇಬೇಡಿ

4. ಡ್ರೈ ತ್ವಚೆಯವರು ಸೋಪು ಬಳಸಲೇಬೇಡಿ

ಡ್ರೈ ತ್ವಚೆಯವರು ಸೋಪು ಬಳುವ ಬದಲಿಗೆ ಬಾಡಿ ವಾಶ್‌ ಅಥವಾ ಗ್ಲಿಸರಿನ್ ಇರುವ ಸೋಪು ಬಳಸುವುದು ಒಳ್ಳೆಯದು. ಸ್ನಾನವಾದ ಬಳಿಕ ದೇಹಕ್ಕೆ ಮಾಯಿಶ್ಚರೈಸರ್ ಹಚ್ಚಿ. ಸ್ನಾನವಾದ ಬಳಿಕ ಬಾದಾಮಿ ಎಣ್ಣೆ ಹಚ್ಚಿದರೆ ಮೈ ಘಮ್‌ ಎಂದಿರುತ್ತೆ.

English summary

Winter Skin Care Tips in Kannada :Things to do before And After Shower To Avoid Dry Skin And itching

Tips To Avoid dry skin in winter: If you do these things before and after shower can avoid dryakin and itching, read on...
Story first published: Friday, October 28, 2022, 13:07 [IST]
X
Desktop Bottom Promotion