For Quick Alerts
ALLOW NOTIFICATIONS  
For Daily Alerts

ನಿಮ್ಮ ತ್ವಚೆಗೆ ಯಾವ ಮಾಯಿಶ್ಚರೈಸರ್ ಒಳ್ಳೆಯದೆಂದು ಗೊತ್ತಿದೆಯೇ?

|

ತ್ವಚೆಯಲ್ಲಿ ಉತ್ತಮ ಗುಣಮಟ್ಟದ ಮಾಯಿಸ್ಚರೈಸ್ ಅಂಶಗಳು ಇದ್ದರೆ ಚರ್ಮದ ಆರೋಗ್ಯವು ಅತ್ಯುತ್ತಮವಾಗಿರುತ್ತದೆ. ಚರ್ಮದಲ್ಲಿ ಶುಷ್ಕತೆ ಹಾಗೂ ಮಾಯಿಸ್ಚರೈಸ್ ಗುಣವು ಕಡಿಮೆ ಇದೆ ಎಂದಾಗ ಬಹುಬೇಗ ವಯಸ್ಸಾದ ಕಳೆ ಹಾಗೂ ಸುಕ್ಕುಗಟ್ಟುವ ಸಮಸ್ಯೆಯು ಹೆಚ್ಚುವುದು. ಅಲ್ಲದೆ ಚರ್ಮದಲ್ಲಿ ಬಿರುಕು, ಉರಿಯೂತ, ಕಳೆಗುಂದಿರುವ ಹಾಗೆ ತೋರುವುದು ಹೀಗೆ ಅನೇಕ ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ತೇವಾಂಶವನ್ನು ಹಿಡಿದಿಡಲು ಮಾಯ್ಚರೈಸ್ ಕ್ರೀಮ್ ಗಳ ಮೊರೆ ಹೋಗುವುದು ಸಹಜ.

Which Type of Moisturiser is Best For Your Skin

ನಾವು ಬಳಸುವ ಸೌಂದರ್ಯ ವರ್ಧಕ ಉತ್ಪನ್ನಗಳು ಅಥವಾ ಕ್ರೀಮ್ ಗಳು ನಮ್ಮ ಚರ್ಮದ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಅವುಗಳಲ್ಲಿ ಬಳಸಲಾಗುವ ರಾಸಾಯನಿಕ ಉತ್ಪನ್ನಗಳು ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಆ ಕಾರಣಗಳಿಂದಾಗಿಯೂ ತ್ವಚೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುವುದು. ಅಲ್ಲದೆ ಚರ್ಮದಲ್ಲಿ ಆಕರ್ಷಣೆಯ ಮಟ್ಟವೂ ಕಡಿಮೆಯಾಗುತ್ತದೆ. ಹಾಗಾಗಿ ಬಹುತೇಕ ಜನರು ವಿವಿಧ ಬಗೆಯ ಫೇಸ್ ಪ್ಯಾಕ್, ಮಾಯಿಸ್ಚರೈಸ್ ಹಾಗೂ ಸೌಂದರ್ಯ ವರ್ಧಕ ಚಿಕಿತ್ಸೆಯನ್ನು ಸಹ ಪಡೆದುಕೊಳ್ಳುವುದುಂಟು.

ಮಾಯಿಸ್ಚರೈಸ್ ಎಂದರೇನು?

ಮಾಯಿಸ್ಚರೈಸ್ ಎಂದರೇನು?

ಮಾಯಿಸ್ಚರೈಸ್ ಎಂಬ ಪದವು ಚರ್ಮವನ್ನು ತೇವಗೊಳಿಸುವ ಉದ್ದೇಶದಿಂದ ತಯಾರಿಸಲಾಗುವ ಒಂದು ಸೌಂದರ್ಯ ವರ್ಧಕ ಉತ್ಪನ್ನ. ಇವುಗಳಲ್ಲಿ ವಿವಿಧತೆಯನ್ನು ತೋರಿಸುವುದರ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚಿಸುವರು. ಮಾಯಿಸ್ಚರೈಸರ್ ಕ್ರೀಮ್ ‍ಗಳನ್ನು ಅನ್ವಯಿಸುವುದರಿಂದ ಚರ್ಮದಲ್ಲಿ ನೀರಿನಂಶ ಹಾಗೂ ಮೃದುತ್ವವನ್ನು ಹಿಡಿದಿಡಬಹುದು. ಅಲ್ಲದೆ ಚರ್ಮದ ರಚನೆಯಲ್ಲಿ ಮತ್ತು ನೋಟವನ್ನು ಸುಂದರವಾಗಿಡಲು ಸಹಾಯ ಮಾಡುವುದು. ಮಾಯಿಸ್ಚರೈಸ್ ಗುಣವು ಕಡಿಮೆ ಇರುವ ಚರ್ಮವು ಶುಷ್ಕತೆ, ಬಿರುಕು, ಉರಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಕೂಡಿರುತ್ತದೆ. ವಿವಿಧ ರೂಪದಲ್ಲಿ ಲಭ್ಯವಿರುವ ಮಾಯ್ಚುರೈಸರ್ ಗಳು ಚರ್ಮಕ್ಕೆ ಸ್ಥಿರತೆ ಮತ್ತು ಪೋಷಣೆಯನ್ನು ನೀಡುವುದು.

* ಮಾಯಿಸ್ಚರೈಸ್ ಗಳಲ್ಲಿ ವಿವಿಧ ಬಗೆಗಳು

ಮಾಯಿಸ್ಚರೈಸ್ ಗಳು ಎಂದರೆ ಸಾಮಾನ್ಯವಾಗಿ ಚರ್ಮದಲ್ಲಿ ತೇವಾಂಶವನ್ನು ಹಿಡಿದಿಡಲು ಬಳಸುವ ಒಂದು ಉತ್ಪನ್ನ. ಇದರಲ್ಲಿ ಮೂರು ಬಗೆಯ ವಿಭಿನ್ನತೆಗಳನ್ನು ಕಾಣಬಹುದು. ಅವುಗಳು ಯಾವವು? ಬಳಕೆ ಹೇಗೆ? ಯಾವ ಪರಿಣಾಮ ಬೀರುವುದು ಎನ್ನುವ ಬಗ್ಗೆ ತಿಳಿಯೋಣ ಬನ್ನಿ.

1. ಎಮೋಲಿಯಂಟ್ಸ್

1. ಎಮೋಲಿಯಂಟ್ಸ್

ಎಮೋಲಿಯಂಟ್ಸ್ ಎಂದು ಕರೆಯಲಾಗುವ ಮಾಯಿಸ್ಚರೈಸ್ ಉತ್ಪನ್ನವು ಚರ್ಮದಲ್ಲಿ ತೇವಾಂಶವನ್ನು ಹಿಡಿದಿಡಲು ಬಳಸಲಾಗುವುದು. ಇದು ಲಿಪಿಡ್ ಮತ್ತು ಎಣ್ಣೆಯ ಗುಣಗಳಿಂದ ಕೂಡಿರುತ್ತವೆ. ಚರ್ಮದಲ್ಲಿ ಒರಟು ವಿನ್ಯಾಸ ಹಾಗೂ ಶುಷ್ಕತೆಯನ್ನು ತಡೆಯಲು ಇದನ್ನು ಬಳಸಲಾಗುವುದು. ಇದು ಚರ್ಮವನ್ನು ತೇವಾಂಶದಿಂದ ಹಾಗೂ ಮೃದತ್ವದಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಒಣ ಚರ್ಮವು ಚರ್ಮದ ಆರೋಗ್ಯವನ್ನು ಹಾಳುಮಾಡುವುದಲ್ಲದೆ ವಿವಿಧ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ಎಮೋಲಿಯಂಟ್ಸ್ ತ್ವಚೆಯಲ್ಲಿ ಸುಲಭವಾಗಿ ಬೆರೆತು ತೇವಾಂಶವನ್ನು ಕಾಪಾಡುವಲ್ಲಿ ಸಹಾಯ ಮಾಡುವುದು. ಚರ್ಮವು ನಯವಾಗಿರುವಂತೆ ಮಾಡುವುದು.

2. ಹೆಮೆಕ್ಟೆಂಟ್ಸ್

2. ಹೆಮೆಕ್ಟೆಂಟ್ಸ್

ಈ ಮಾಯಿಸ್ಚರೈಸ್ ಚರ್ಮದ ಹೊರ ಪದರದಲ್ಲಿ ನೀರನ್ನು ಆಕರ್ಷಿಸುವ ಮತ್ತು ಹೀರಿಕೊಳ್ಳುವಂತಹ ಕಾರ್ಯಕ್ಕೆ ಉತ್ತೇಜನ ನೀಡುತ್ತದೆ. ಇದು ಚರ್ಮದ ಒಳಭಾಗದಿಂದ ಹಾಗೂ ಹೊರಗಿನ ಪ್ರದೇಶಗಳಿಂದ ನೀರನ್ನು ಆಕರ್ಷಿಸುತ್ತದೆ. ಗ್ಲಿಸರಾಲ್, ಗ್ಲೈಕಾಲ್, ಎಎಚ್ಎ, ಯೂರಿಯಾ ಮತ್ತು ಹೈಲುರಾನಿಕ್ ಆಮ್ಲವು ಹಮೆಕ್ಟಾಂಟ್ ಗಳನ್ನು ಒಳಗೊಂಡಿರುವ ಪ್ರಮುಖ ಉತ್ಪನ್ನಗಳು. ಶುಷ್ಕ ಚರ್ಮಗಳಿಗೆ ಇವು ವಿಶೇಷ ಆರೈಕೆ ನೀಡುವುದರ ಮೂಲಕ ಪೋಷಿಸುತ್ತವೆ.

3. ಆಕ್ಲೂಸಿವ್ಸ್

3. ಆಕ್ಲೂಸಿವ್ಸ್

ಆಕ್ಲೂಸಿವ್ಸ್ ಎಣ್ಣೆ ಮತ್ತು ಮೇಣ ಆಧಾರಿತ ಮಾಯಿಸ್ಚರೈಸ್ ಆಗಿದೆ. ಇದು ಚರ್ಮದ ಮೇಲೆ ರಕ್ಷಣಾತ್ಮಕ ಪದರಗಳನ್ನು ಸೃಷ್ಟಿಸುತ್ತದೆ. ಅಲ್ಲದೆ ಚರ್ಮದಲ್ಲಿ ಉಂಟಾಗುವ ನೀರಿನ ನಷ್ಟವನ್ನು ತಡೆಯುತ್ತದೆ. ಪೆಟ್ರೋಲಾಟಮ್, ಜೇನು ಮೇಣ, ಖನಿಜ ತೈಲ, ಸತು ಆಕ್ಸೈಡ್ ಮತ್ತು ಸಿಲಿಕೋನ್ ಗಳು ಆಕ್ಲೂಸಿವ್ಸ್ ಅನ್ನು ಒಳಗೊಂಡಿರುವ ಪ್ರಮುಖ ಉತ್ಪನ್ನ ದೊಡ್ಡ ರಂಧ್ರಗಳನ್ನು ಹೊಂದಿರುವ ಚರ್ಮದ ವಿನ್ಯಾಸದವರಿಗೆ ಅದ್ಭುತ ಪೋಷಣೆ ನೀಡುವುದು.

ಮಾಯಿಸ್ಚರೈಸ್ ನ ಪ್ರಯೋಜನಗಳು

ಮಾಯಿಸ್ಚರೈಸ್ ನ ಪ್ರಯೋಜನಗಳು

ಆರೋಗ್ಯಕರ ಚರ್ಮವನ್ನು ಪಡೆಯಲು ಮಾಯಿಸ್ಚರೈಸ್ ಆರೈಕೆ ಅತ್ಯಗತ್ಯ. ನಿತ್ಯವೂ ಮಾಯ್ಚರೈಸ್ ಅನ್ವಯಿಸುವುದರಿಂದ ತ್ವಚೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು. ಅಲ್ಲದೆ ಚರ್ಮಕ್ಕೆ ಉಂಟಾಗುವ ಅನೇಕ ಸಮಸ್ಯೆಗಳನ್ನು ಸಹ ತಡೆಗೋಡೆಯಂತೆ ನಿಂತು ರಕ್ಷಣೆ ನೀಡುವುದು.

1. ಚರ್ಮದಲ್ಲಿ ನೀರಿನ ಧಾರಣವನ್ನು ಹೀರಿಕೊಂಡು ಚರ್ಮದ ಒಳ ಮತ್ತು ಹೊರ ಪದರದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುವುದು. ಇದರಿಂದ ಚರ್ಮವು ಸದಾ ತೇವಾಂಶದಿಂದ ಕಂಗೊಳಿಸುತ್ತದೆ.

2. ಮಾಯಿಸ್ಚರೈಸ್ ಬಳಸುವುದರಿಂದ ಉರಿಯೂತವನ್ನು ನಿಭಾಯಿಸುತ್ತದೆ. ಉರಿಯೂತದಿಂದ ಉಂಟಾಗುವ ಕಿರಿಕಿರಿ ಹಾಗೂ ನೋವನ್ನು ಕಡಿಮೆ ಮಾಡುವುದು.

3. ಅತಿಯಾದ ಒಣ ಚರ್ಮದಲ್ಲಿ ನಿರ್ಜೀವಕೋಶಗಳು, ತುರಿಕೆ ಮತ್ತು ಕಿರಿಕಿರಿ ಸಾಮಾನ್ಯವಾಗಿರುತ್ತವೆ. ಅಂತಹ ತ್ವಚೆಗಳಿಗೆ ಮಾಯಿಸ್ಚರೈಸ್ ಅನ್ವಯಿಸುವುದರಿಂದ ಚರ್ಮದ ಉರಿಯನ್ನು ಶಮನಗೊಳಿಸಿ, ತುರಿಕೆಯನ್ನು ಕಡಿಮೆ ಮಾಡುವುದು.

4. ನೀರಿನಂಶ ಕಡಿಮೆ ಆದಾಗ ತ್ವಚೆಯಲ್ಲಿ ಗುಳ್ಳೆಗಳು, ಮೊಡವೆ ಹಾಗೂ ಬಿರುಕುಗಳಂತಹ ಸಮಸ್ಯೆಯನ್ನು ಕಾಣಬಹುದು. ಅಂತಹ ಗಾಯಗಳಿಗೆ ಹಾಗೂ ನೋವಿಗೆ ಮಾಯ್ಚುರೈಸ್ ಕ್ರೀಮ್‍ ಗಳು ಅದ್ಭುತ ಆರೈಕೆ ನೀಡಿ, ಚರ್ಮವನ್ನು ಪೋಷಿಸುವುದು.

5. ಸೂರ್ಯನ ಯುವಿ ಕಿರಣಗಳಿಂದ ಚರ್ಮವು ಬಹುಬೇಗ ಬಣ್ಣವನ್ನು ಕಳೆದುಕೊಂಡು ಮಂಕಾಗುವುದು. ಅಂತಹ ಸಮಸ್ಯೆಗಳಿಗೆ ಮಾಯಿಸ್ಚರೈಸ್ ಉತ್ತಮ ಚಿಕಿತ್ಸೆ ನೀಡುವುದು. ನಿತ್ಯವೂ ಮಾಯಿಸ್ಚರೈಸ್ ಕ್ರೀಮ್ ಅನ್ವಯಿಸುವುದರ ಮೂಲಕ ಸೂರ್ಯನ ಕಿರಣದಿಂದ ಚರ್ಮದ ಮೇಲೆ ಉಂಟಾಗುವ ಸಮಸ್ಯೆಯನ್ನು ತಡೆಯಬಹುದು.

6. ಮಾಯಿಸ್ಚರೈಸ್ ಗಳಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿರುತ್ತವೆ. ಅವು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸುತ್ತದೆ. ಚರ್ಮಕ್ಕೆ ಮೇದಯವಾದ, ನಯವಾದ ಹಾಗೂ ಆರೋಗ್ಯಕರವಾದ ಆಕರ್ಷಣೆಯನ್ನು ನೀಡುವುದು. ಇದು ನಿಮಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿಯ ಭಾವನೆಯನ್ನು ನೀಡುತ್ತದೆ.

 ಚರ್ಮಗಳಿಗೆ ಅನುಗುಣವಾಗಿ ಮಾಯಿಸ್ಚರೈಸ್ ಗಳ ಆಯ್ಕೆ

ಚರ್ಮಗಳಿಗೆ ಅನುಗುಣವಾಗಿ ಮಾಯಿಸ್ಚರೈಸ್ ಗಳ ಆಯ್ಕೆ

1. ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ಮಾಯಿಸ್ಚರೈಸರ್ ಗಳ ಅಗತ್ಯವಿಲ್ಲ ಎಂದು ತಪ್ಪು ಕಲ್ಪನೆಗೆ ಒಳಗಾಗಿರುತ್ತಾರೆ. ವಾಸ್ತವವಾಗಿ ಎಣ್ಣೆಯುಕ್ತ ಚರ್ಮದವರಿಗೂ ಮಾಯಿಸ್ಚರೈಸ್ ಅತೀ ಮುಖ್ಯವಾಗಿರುತ್ತದೆ. ಹೈರುಲಾನಿಕ್ ಆಮ್ಲ, ಗ್ಲೈಕಾಲ್ ನಿಯಾಸಿನಮೈಡ್ ರೆಟಿನಾಯ್ಡ್ ಸ್ಯಾಲಿಸಿಲಿಕ್ ಆಮ್ಲ, ಸತು, ಪಿಪಿಎ ಲ್ಯಕ್ಟಿಕ್ ಆಮ್ಲ ಇರುವ ಮಾಯಿಸ್ಚರೈಸರ್ ಕ್ರೀಮನ್ನು ಅಥವಾ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

2. ಒಣ ಚರ್ಮದವರು ಮಾಯಿಸ್ಚರೈಸ್ ಬಳಸುವುದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಚರ್ಮದ ಒರಟು ವಿನ್ಯಾಸ, ತುರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವು ಪ್ರಮುಖವಾಗಿ ಗ್ಲಿಸರಿನ್, ಹೈಲುರಾನಿಕ್ ಆಮ್ಲ, ಸೋಡಿಯಂ ಹೈಲುರೋನೆಟ್, ವಿಟಮಿನ್ ಇ, ಪ್ಯಾಂಥೆನಾಲ್ ಅಂತಹ ಉತ್ಪನ್ನಗಳು ಇರುವ ಮಾಯಿಸ್ಚರೈಸರ್ ಅನ್ನು ಆಯ್ಕೆ ಮಾಡುವುದು ಸೂಕ್ತ.

3. ಸೂಕ್ಷ್ಮ ಚರ್ಮದವರು ಯಾವುದೇ ಉತ್ಪನ್ನಗಳನ್ನು ಬಳಸುವಾಗ ಸಾಕಷ್ಟು ಎಚ್ಚರಿಕೆ ಹಾಗೂ ಪರಿಶೀಲನೆಯನ್ನು ನಡೆಸಬೇಕಾಗುವುದು. ಹಾಗಾಗಿ ಅವರಿಗೆ ಮಾಯಿಸ್ಚರೈಸ್ ಗಳ ಆಯ್ಕೆ ಮಾಡುವುದು ಸ್ವಲ್ಪ ಕಷ್ಟದ ಕೆಲಸ ಎನ್ನಬಹುದು. ಸೂಕ್ಷ್ಮ ಚರ್ಮದವರು ಬಳಸುವ ಮಾಯಿಸ್ಚರೈಸರ್ ಗಳಲ್ಲಿ ಪ್ರಮುಖವಾಗಿ ಟೈಟಾನಿಯಂ, ಡೈಆಕ್ಸೈಡ್, ಶಿಯಾ ಬೆಣ್ಣೆ, ವಿಟಮಿನ್-ಇ, ಹೈಲುರಾನಿಕ್ ಆಮ್ಲ, ಕ್ಯಾಮೊಮೈಲ್ ಸಾರ, ಜೊಜೊಬಾ ಸಾರಗಳು ಇರಬೇಕು. ಅವು ತ್ವಚೆಯ ಆರೈಕೆಯಲ್ಲಿ ಉತ್ತಮ ಸಹಕಾರ ನೀಡುತ್ತವೆ.

English summary

Which Type of Moisturiser is Best For Your Skin

Moisturisers are by far the most used and recommended skincare product and rightly so. Dry skin is not ideal and can lead to various skin disorders and so we apply moisturisers to keep our skin moist and supple. But surprisingly, not many people know much about the functioning of the skincare product that is meant to improve skin health and appearance. Let's dive into everything that is moisturisers.
X
Desktop Bottom Promotion