Latest Updates
-
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ!
ಆ್ಯಂಟಿ ಏಜಿಂಗ್ ಕ್ರೀಮ್, ಸೆರಮ್ ಕುರಿತು ನೀವು ತಿಳಿಯಲೇಬೇಕಾದ ಸಂಗತಿಗಳಿವು
ತ್ವಚೆ ಆರೈಕೆ ವಿಷಯಕ್ಕೆ ಬಂದಾಗ anti-aging ಕ್ರೀಮ್ ಅಂದ್ರೆ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಿ, ಯೌವನ ಚೆಲುವು ಮಾಸದಂತೆ ನೋಡಿಕೊಳ್ಳುವ ಕ್ರೀಮ್ 30 ವರ್ಷ ದಾಟಿದವರ ಮೇಕಪ್ ಕಿಟ್‌ನಲ್ಲಿ ಇದ್ದೇ ಇರುತ್ತದೆ.
ಆ್ಯಂಟಿ ಏಜಿಂಗ್ ಕ್ರೀಮ್ ಬಳಸುವುದರಿಂದ ವಯಸ್ಸನ್ನು ಮರೆ ಮಾಚಬಹುದೆಂದು ಈ ಕ್ರೀಮ್ ಬಳಸುತ್ತೇವೆ, ಈ ಕುರಿತು ಅನೇಕ ಜಾಹೀರಾತುಗಳನ್ನು ನೋಡುತ್ತೇವೆ. ಆದರೆ ಈ ಕ್ರೀಮ್ ನಿಜವಾಗಲೂ ಅಷ್ಟೊಂದು ಪರಿಣಾಮಕಾರಿಯೇ?
ಆ್ಯಂಟಿ ಏಜಿಂಗ್ ಕ್ರೀಮ್ ಬಗ್ಗೆ ನೀವು ಅರಿಯಲೇ ಬೇಕಾದ ಕೆಲವೊಂದು ಸಂಗತಿಗಳು ಇಲ್ಲಿವೆ ನೋಡಿ:

ಒಂದೆರಡು ದಿನದಲ್ಲಿ ತ್ವಚೆಯಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ
ಇಂದು ಹಚ್ಚಿ, ನಾಳೆ ನಿಮ್ಮ ಮುಖದಲ್ಲಿ ಫಲಿತಾಂಶ ಬಯಸಿದರೆ ಅದು ಪಡೆಯಲು ಸಾಧ್ಯವಿಲ್ಲ. ಒಂದು ವಾರದಲ್ಲಿ ಅಥವಾ ಎರಡು ವಾರದಲ್ಲಿ ನಿಮ್ಮ ಮುಖದಲ್ಲಿ ವ್ಯತ್ಯಾಸ ಕಾಣಬಹುದು ಎಂದು ಜಾಹೀರಾತು ನೋಡಿ ನೀವು ಅದನ್ನು ನಿರೀಕ್ಷಿಸಿದರೆ ಕೆಲವೇ ದಿನಗಳಲ್ಲಿ ನಿಮಗೆ ನೀವು ಬಯಸಿದ ಫಲಿತಾಂಶ ಕಾಣಲು ಸಾಧ್ಯವಿಲ್ಲ. ನೀವು ಕ್ರೀಮ್ ಅಥವಾ ಸೆರಮ್ ಅನ್ನು ನಿರಂತರವಾಗಿ ಬಳಸಬೇಕು, ಇದರ ಫಲಿತಾಂಶ ಕಾಣಲು ತಿಂಗಳುಗಳೇ ಬೇಕಾಗಬಹುದು.

ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತೆ
ತ್ವಚೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಮಾಯಿಶ್ಚರೈಸರ್ ಕಾಪಾಡುವುದು. ಆದರೆ ಇದೇ ಎಲ್ಲವೂ ಅಲ್ಲ. ಆ್ಯಂಟಿ ಏಜಿಂಗ್ ಕ್ರೀಮ್‌ನಲ್ಲಿರುವ ಹೈಲೂರೋನಿಕ್ ಆಮ್ಲ ತ್ವಚೆ ಮಾಯಿಶ್ಚರೈಸರ್ ಆಗಿರುವಂತೆ ಮಾಡುತ್ತದೆ. ಆದರೆ ಈ ಕ್ರೀಮ್ ತ್ವಚೆಯನ್ನು ಮಾಯಿಶ್ಚರೈಸರ್ ಆಗಿರುವಂತೆ ಮಾಡಿದರೂ ಹೈಲೂರೋನಿಕ್ ಆಮ್ಲ ಎಂಬ ರಾಸಾಯನಿಕ ಬಳಕೆ ಅತಿಯಾದರೂ ತ್ವಚೆಗೆ ಒಳ್ಳೆಯದಲ್ಲ.

ಅದರಲ್ಲಿ ಬಳಸುವ ಸಾಮಗ್ರಿ
ನೀವು ಬಳಸುವ ಆ್ಯಂಟಿ ಏಜಿಂಗ್ ಕ್ರೀಮ್‌ನಲ್ಲಿ ಬಳಸಿರುವ ಸಾಮಗ್ರಿ ನೋಡಿ..ಅದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ರೆಟಿನೋಲ್ ಅಂಶ ಎಷ್ಟಿದೆ ಎಂದು ನೋಡಿದರೆ, ಅದರ ಪ್ರಮಾಣ ಕಡಿಮೆಯಿದ್ದರೆ ಆ ಕ್ರೀಮ್‌ಗೆ ದುಬಾರಿ ಬೆಲೆ ತೆತ್ತು ಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ.

ಆ್ಯಂಟಿಆಕ್ಸಿಡೆಂಟ್ ತುಂಬಾ ಮುಖ್ಯ
ತ್ವಚೆಯಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುವಲ್ಲಿ ಆ್ಯಂಟಿಆಕ್ಸಿಡೆಂಟ್ ತುಂಬಾನೇ ಪರಿಣಾಮಕಾರಿ. ಇದು ತ್ವಚೆಯನ್ನು ಮಾಲಿನ್ಯದಿಂದ ಕಾಪಾಡುತ್ತೆ, ಸೂರ್ಯ ಕಿರಣದಿಂಂದ ತ್ವಚೆಯನ್ನು ರಕ್ಷಣೆ ಮಾಡುತ್ತೆ. ಈ ರೀತಿಯ ಆ್ಯಂಟಿಆಕ್ಸಿಡೆಂಟ್ ಗ್ರೀನ್ ಟೀ, ವಿಟಮಿನ್ ಸಿ, ವಿಟಮಿನ್ ಎ, ವೈನ್ ಇವುಗಳನ್ನು ಇರುತ್ತದೆ. ನಿಮ್ಮ ತ್ವಚೆ ಆರೈಕೆಗೆ ಈ ವಸ್ತುಗಳನ್ನು ಬಳಸಿ.

ನೆರಿಗೆ ತಡೆಗಟ್ಟುವ ರೆಟಿನೋಲ್
ನೈಸರ್ಗಿಕವಾದ ವಿಟಮಿನ್ ಎ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ರೆಟಿನೋಲ್ ನೈಸರ್ಗಿಕವಾದ ವಿಟಮಿನ್ ಎ ಆಗಿದೆ. ಇದು ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ. ವಿಟಮಿನ್ ಎ ನಿಮ್ಮ ತ್ವಚೆ ಆರೋಗ್ಯಕರವಾಗಿ ಕಾಪಾಡುತ್ತೆ.

ಹಣವೇ ಎಲ್ಲವೂ ಅಲ್ಲ
ನೀವು ದುಬಾರಿ ಬೆಲೆಯ ಕ್ರೀಮ್ ಬಳಸಿದರೆ ಮಾತ್ರ ಸೌಂದರ್ಯ ರಕ್ಷಣೆ ಮಾಡಲು ಸಾಧ್ಯ ಅಂತ ಅಂದುಕೊಂಡಿದ್ದರೆ ಅದು ತಪ್ಪು. ನೀವು ನೈಸರ್ಗಿಕವಾದ ವಸ್ತುಗಳನ್ನು ಬಳಸಿಯೂ ನಿಮ್ಮ ತ್ವಚೆಯ ಆರೋಗ್ಯ ಕಾಪಾಡಬಹುದು. ಉದಾಹರಣೆಗೆ ಫ್ರೂಟ್ ಫೇಶಿಯಲ್ ಮಾಸ್ಕ್, ಗ್ರೀನ್ ಮುಂತಾದವು. ಅಲ್ಲದೆ ಇದರ ಜೊತೆಗೆ ಆರೋಗ್ಯಕರ ಆಹಾರ ಸೇವನೆಯೂ ಮುಖ್ಯ.



Click it and Unblock the Notifications
