For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಈ ಬಗೆಯ ಕ್ರೀಮ್‌ ಬಳಸಿದರೆ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯ

|

ಗರ್ಭಾವಸ್ಥೆಯಲ್ಲಿ ಮೇಕಪ್‌ ಮಾಡಲೇಬಾರದಾ? ಗರ್ಭಿಣಿಯಾದ ಮೇಲೆ ಇತರ ಸಮಯದಲ್ಲಿ ತ್ವಚೆ ಆರೈಕೆ ಮಾಡಿದಂತೆ ಮಾಡಬಹುದಾ? ಈ ಬಗೆಯ ಪ್ರಶ್ನೆಗಳನ್ನು ಹಲವಾರು ಜನ ಕೇಳುತ್ತಿರುತ್ತಾರೆ. ಗರ್ಭಿಣಿಯಾದ ಮೇಕಪ್‌ ಮಾಡಲೇಬಾರದು ಅಂದೇನು ಇಲ್ಲ, ಆದರೆ ನಾವು ಬಳಸುವ ಮೇಕಪ್‌ನಲ್ಲಿ ಕೆಲವೊಂದು ಅಂಶಗಳಿರಬಹುದು ಉದಾಹರಣೆಗೆ ರೆಡಿನೋಲ್. ಇಂಥ ಕೆಲವು ಕೆಮಿಕಲ್‌ ಹೊಟ್ಟೆಯಲ್ಲಿರುವಾಗ ಅಪಾಯಕಾರಿ.

ಇನ್ನು ಫೇಶಿಯಲ್‌ ಮಾಡುವಾಗಲೂ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು. ಕೆಲವೊಂದು ಕೆಮಿಕಲ್, ಬ್ಲೀಚ್‌ ಮಾಡಿಸಬಾರದು, ತುಂಬಾ ಪ್ರೆಸ್‌ ಮಾಡಿ ಮಸಾಜ್ ಮಾಡಬಾರದು ಹೀಗೆ ಕೆಲವು ಮುನ್ನೆಚ್ಚರಿಕೆವಹಿಸಬೇಕು.

pregnant skin care tips

ಗರ್ಭಿಣಿಯರು ಈ ಬಗೆಯ ಅಂಶವಿರುವ ಕ್ರೀಮ್‌ ಅಥವಾ ಇತರ ಸೌಂದರ್ಯವರ್ಧಕಗಳನ್ನು ಬಳಸಬಾರದು ನೋಡಿ:

ಮೊಡವೆ ನಿಯಂತ್ರಿಸುವ ರೆಟಿನೋಲ್‌: ಗರ್ಭಾವಸ್ಥೆಯಲ್ಲಿ ಕೆಲವರಿಗೆ ಹಾರ್ಮೋನ್‌ಗಳ ಬದಲಾವಣೆಯಿಂದ ಮೊಡವೆ ಬರಬಹುದು. ಹಾಗಂತ ಇತರ ಸಮಯದಲ್ಲಿ ಬಳಸಿದಂತೆ ಮೊಡವೆ ಕ್ರೀಮ್‌ ಬಳಸಬೇಡಿ, ಏಕೆಂದರೆ ಅವುಗಳಲ್ಲಿ ರೆಟಿನೋಲ್‌ ಇರುತ್ತದೆ. ನೀವು ಯಾವುದೇ ಕ್ರೀಮ್‌ ಬಳಸುವುದಾದರೂ ಅದರ ಮೇಲೆ ರೆಟಿನಾಲ್‌ ಅಂತ ಬರೆದಿದ್ದರೆ ಬಳಸಬೇಡಿ. ಈ ಕ್ರೀಮ್‌ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಹೈಡ್ರೋಕ್ವಿನೋನೆ (Hydroquinone): ಇದನ್ನು ಸ್ಕಿನ್‌ ಪಿಗ್ಮಂಟೇಷನ್‌ ಕಡಿಮೆ ಮಾಡಲು ಬಳಸಲಾಗುವುದು, ಆದರೆ ಇದರ ತಡೆಗಟ್ಟುವುದು ಒಳ್ಳೆಯದು.'

ಆಕ್ಸಿ ಬೆಂಝೋನೆ(Oxybenzone) ಈ ಅಂಶವಿರುವ ಕ್ರೀಮ್‌ಗಳನ್ನೂ ಬಳಸಬೇಡಿ. ಅದರ ಬದಲಿಗೆ ಜಿಂಕ್‌, titanium dioxide ಇರುವ ಕ್ರೀಮ್ ಬಳಸಿ.

ಸುಗಂಧ ತೈಲಗಳು: ಕೆಲವೊಂದು ಸುಗಂಧ ತೈಲಗಳಿಂದ ತೊಂದರೆಯಿಲ್ಲ, ಆದರೆ ಕೆಲವೊಮ್ಮೆ ಅಲರ್ಜಿ ಉಂಟಾಗಬಹುದು. ಏಕೆಂದರೆ ಈ ಸಮಯದಲ್ಲಿ ತ್ವಚೆ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಆದರೆ ಸುವಾಸನೆ ಬೀರುವ ತೈಲಗಳು, ಸುಗಂಧ ದ್ರವ್ಯಗಳು ಇವುಗಳನ್ನು ಬಳಸಬೇಡಿ.

ನಿಮ್ಮದು ತುಂಬಾ ಡ್ರೈ ತ್ವಚೆಯಾಗಿದ್ದರೆ
ನಿಮ್ಮದು ತುಂಬಾ ಡ್ರೈ ತ್ವಚೆಯಾಗಿದ್ದರೆ ನೀವು ಪ್ಲ್ಯಾಂಟ್‌ ಆಯಿಲ್, hyaluronicacid ಬಟರ್‌ ಇರುವ ಮಾಯಿಶ್ಚರೈಸರ್ ಬಳಸಿ.

ಮೊಡವೆ ಇದ್ದರೆ
ಮೊಡವೆ ಇದ್ದರೆ ವಿಟಮಿನ್‌ ಸಿ ಸೆರಮ್‌ ಬಳಸಬಹುದು. ಇಲ್ಲದಿದ್ದರೆ ಕಾಟನ್‌ ಅನ್ನು ನಿಂಬೆರಸಕ್ಕೆ ಅದ್ದಿ ಮೊಡವೆ ಜಾಗಕ್ಕೆ ಇಡಬಹುದು.

ಮೆಲಸ್ಮಾ ಸಮಸ್ಯೆಯಿದ್ದರೆ (ತ್ವಚೆ ಕಪ್ಪು-ಕಪ್ಪಾಗುವುದು)
ಗರ್ಭಿಣಿಯಾಗಿದ್ದಾಗ ತ್ವಚೆ ತುಂಬಾ ಕಪ್ಪಗಾಗುವುದು ಸಹಜ. ಆದರೆ ಕೆಲವರಿಗೆ ಇದು ತುಂಬಾನೇ ಅಸಹ್ಯ ಕಾಣಿಸುವುದರಿಂದ ಇದರ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಅಷ್ಟೇನೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಗರ್ಭಿಣಿಯಾಗಿದ್ದಾಗ ತ್ವಚೆ ಹೈಪರ್ ಆಕ್ಟಿವ್‌ ಆಗುವುದರಿಂದ ಸ್ಕಿನ್‌ ಪಿಗ್ಮೆಂಟೇಷನ್‌ ಉಂಟಾಗುವುದು. ಇದರಿಂದ ತುಟಿ, ಕುತ್ತಿಗೆ, ಮೊಣಕೈ ಈ ಭಾಗಗಳು ಕಪ್ಪು-ಕಪ್ಪಾಗುವುದು.
ಈ ರೀತಿ ಕಂಡು ಬಂದಾಗ ಟೊಮೆಟೊ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ, ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಇನ್ನು ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್ ಬಳಸಿ.

English summary

Skincare Mistakes To Avoid While Pregnant in kannada

Pregnant skin care tips: Pregnant women should not do these skin care mistakes, read on
Story first published: Monday, November 28, 2022, 18:18 [IST]
X
Desktop Bottom Promotion