For Quick Alerts
ALLOW NOTIFICATIONS  
For Daily Alerts

ಈ ರೀತಿಯೆಲ್ಲಾ ಆಗುತ್ತಿದ್ದರೆ ನಿಮ್ಮ ತ್ವಚೆ ತುಂಬಾ ಸೆನ್ಸಿಟಿವ್ ಜಾಗ್ರತೆ!

|

ಸೌಂದರ್ಯ ಪ್ರಜ್ಞೆ ಎಲ್ಲರಲ್ಲೂ ಇರುವುದು ಸಹಜ. ಇರುವ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಕೆಲವರು ಮಾತ್ರ ಇಂಥಾ ಗೋಜಿಗೆ ಹೋಗುವಂತಿಲ್ಲ ಹಾಗಿರುತ್ತದೆ. ಇದಕ್ಕೆ ಕಾರಣ ಅವರ ಚರ್ಮದ ಸೂಕ್ಷ್ಮತೆ.

ಹೌದು, ಈ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರೂ ಯಾವುದೇ ಕ್ರೀಂ ಬಳಸಲು ಸಹ ಯೋಚಿಸುತ್ತಾರೆ, ಮನೆಮದ್ದನ್ನು ಪ್ರಯತ್ನಿಸಲು ಸಹ ಹಿಂದುಮುಂದು ನೋಡುತ್ತಾರೆ. ಇವರ ಅತಿ ಸೂಕ್ಷ್ಮ ಚರ್ಮವು ಎಲ್ಲದಕ್ಕೂ ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತದೆ. ಹೆಚ್ಚಿನ ಜನರು ಸೂಕ್ಷ್ಮ ಚರ್ಮವು ಕಿರಿಕಿರಿಯುಂಟು ಮಾಡುವ ಚರ್ಮ ಎಂದು ಸಹ ಭಾವಿಸುತ್ತಾರೆ.

ಆದರೆ ನಿಮ್ಮದು ಎಂಥಾ ಚರ್ಮ, ನಿಮ್ಮದು ಸಹ ಸೂಕ್ಷ್ಮ ತ್ವಚೆ ಎಂದು ಹೇಳುವ ಮುನ್ನ ಇದನ್ನೊಮ್ಮೆ ತಿಳಿಯಿರಿ. ಈ ಕೆಳಗಿನ ಲಕ್ಷಣಗಳು ನಿಮ್ಮ ತ್ವಚೆಯಲ್ಲೂ ಕಂಡು ಬಂದರೆ ನಿಮ್ಮದು ಸಹ ಸೂಕ್ಷ್ಮ ತ್ವಚೆ ಎಂದರ್ಥ.

ಸೂಕ್ಷ್ಮ ಚರ್ಮದ ಲಕ್ಷಣಗಳಾವುವು ಮುಂದೆ ನೋಡೋಣ:

1. ಚರ್ಮವು ಪ್ರತಿಕ್ರಿಯಾತ್ಮಕವಾಗಿದೆ

1. ಚರ್ಮವು ಪ್ರತಿಕ್ರಿಯಾತ್ಮಕವಾಗಿದೆ

ನಿಮ್ಮ ತ್ವಚೆ ತುಂಬಾ ಸೂಕ್ಷ್ಮ ಅಥವಾ ಸೆನ್ಸಿಟಿವ್ ಆಗಿದ್ದರೆ ಕೆಲವೊಂದು ಸುಗಂಧ ದ್ರವ್ಯಗಳು, ಮನೆ ಕ್ಲೀನಿಂಗ್‌ಗೆ ಬಲಸುವ ವಸ್ತುಗಳು, ಸಾಬೂನು, ಪಾತ್ರೆ, ಬಟ್ಟೆ ತೊಳೆಯುವ ಸೋಪು ಇವುಗಳೆಲ್ಲಾ ತಾಗಿದರೆ ತ್ವಚೆ ಡ್ರೈಯಾಗುವುದು, ತುರಿಕೆ ಮುಂತಾದ ಸಮಸ್ಯೆ ಕಂಡು ಬರುವುದು

2. ಕೆಂಪು ದದ್ದುಗಳು

2. ಕೆಂಪು ದದ್ದುಗಳು

ಸೂಕ್ಷ್ಮ ಚರ್ಮ ಹೊಂದಿರುವ ಹೆಚ್ಚಿನ ಜನರು ತ್ವಚೆಯ ಮೇಲೆ ಕೆಂಪು ದದ್ದುಗಳು, ಮೊಡವೆಗಳಂಥ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ, ಯಾವುದೇ ಮನೆಮದ್ದಿನ ಪ್ರಯೋಗದ ನಂತರ ಅಥವಾ ಸಣ್ಣ ಚಿಕಿತ್ಸೆಯೊಂದಿಗೆ ಕೆಂಪು ಬಣ್ಣವು ಹೋಗುತ್ತದೆ. ಆದರೆ ಕೆಲವು ಬಾರಿ ಇಂಥಾ ಚಿಕಿತ್ಸೆಗಳಿಗೆ ಇದು ನಕಾರಾತ್ಮಕವಾಗಿ ಸಹ ಸ್ಪಂದಿಬಹುದು.

3. ಚರ್ಮ ಶುಷ್ಕವಾಗಿರುತ್ತದೆ

3. ಚರ್ಮ ಶುಷ್ಕವಾಗಿರುತ್ತದೆ

ಒಣ ತ್ವಚೆ ಮತ್ತು ಸೂಕ್ಷ್ಮ ತ್ವಚೆ ಎರಡೂ ಒಂದೇ ನಾಣ್ಯ ಎರಡು ಮುಖವಿದ್ದಂತೆ. ಇದು ಮೊಡವೆಗಳು ಮತ್ತು ಬಿರುಕು ಬಿಟ್ಟ ಚರ್ಮಕ್ಕೆ ಕಾರಣವಾಗಬಹುದು. ಶೀತ, ಶುಷ್ಕ ವಾತಾವರಣದಲ್ಲಿ ಮತ್ತು ಗಾಳಿಗೆ ಒಡ್ಡಿಕೊಂಡಾಗ ಒಣ ಚರ್ಮದೊಂದಿಗೆ ನೀವು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೌಮ್ಯವಾದ ಮಾಯಿಶ್ಚರೈಸರ್ ಅನ್ನು ಬಳಸುವುದರಿಂದ ಚರ್ಮವನ್ನು ರಕ್ಷಿಸಬಹುದು.

4. ನಿಮಗೆ ಆಗಾಗ್ಗೆ ದದ್ದುಗಳು ಉಂಟಾಗಬಹುದು

4. ನಿಮಗೆ ಆಗಾಗ್ಗೆ ದದ್ದುಗಳು ಉಂಟಾಗಬಹುದು

ನಿಮ್ಮ ತ್ವಚೆಯು ಯಾವುದೇ ಪ್ರಚೋದನೆಗೆ ಒಡ್ಡಿಕೊಂಡಾಗ ಕೆಂಪು, ಶುಷ್ಕ, ಫ್ಲಾಕಿ ಅಥವಾ ದದ್ದುಗಳು ಉಂಟಾಗಬಹುದು. ಮುಖದ ಕ್ರೀಮ್‌ಗಳ ಅಡ್ಡಪರಿಣಾಮಗಳು ಸಹ ಬೇಗನೆ ರಾಶಸ್‌ ಅನ್ನು ಅಭಿವೃದ್ಧಿಪಡಿಸಬಹುದು. ನಿಮಗೆ ಏನಾದರೂ ಅಲರ್ಜಿಯಾಗಿದ್ದರೆ, ಅದು ಸೂಕ್ಷ್ಮ ಚರ್ಮಕ್ಕಿಂತ ಹೆಚ್ಚು ಗಂಭೀರವಾಗಲೂಬಹುದು.

5. ಮೊಡವೆಗಳು

5. ಮೊಡವೆಗಳು

ನೀವು ಸೂಕ್ಷ್ಮ ತ್ವಚೆಯನ್ನು ಹೊಂದಿದ್ದರೆ ಬಿಸಿಲಿಗೆ, ಯಾವುದೇ ಕ್ರೀಂ ಗಳಿಗೆ ಅಥವಾ ನೀವು ಯಾವುದೇ ಕ್ರೀಂ ಅನ್ನು ಬಳಸದೇ ಇದ್ದರೂ ಸಹ ತ್ವಚೆಯ ಮೇಲೆ ಕೆಂಪಾದ ಊತ, ಕೀವುಗಟ್ಟಿದ ಮೊಡವೆಗಳು ತ್ವಚೆಯ ಮೇಲೆ ಅಭಿವೃದ್ಧಿಯಾಗಬಹುದು. ಮತ್ತೊಂದು ವಿಶೇಷ ಎಂದರೆ ಇದಕ್ಕೆ ನೀವು ಯಾವುದೇ ಚಿಕಿತ್ಸೆ, ಮನೆಮದ್ದು ನೀಡಿದರೂ ಇದು ಇನ್ನೂ ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗುವುದೇ ಇಲ್ಲ

6. ನಿಮಗೆ ಸುಲಭವಾಗಿ ಸನ್ಬರ್ನ್ ಆಗುತ್ತದೆ

6. ನಿಮಗೆ ಸುಲಭವಾಗಿ ಸನ್ಬರ್ನ್ ಆಗುತ್ತದೆ

ನಿಮ್ಮ ಸೂಕ್ಷ್ಮ ಚರ್ಮವು ಸೂರ್ಯನ ಹಾನಿಕಾರಕ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತದೆ. ನಿಮ್ಮ ಚರ್ಮವು ಈಗಾಗಲೇ ಕಿರಿಕಿರಿಗೊಂಡಿದ್ದರೆ ಅಥವಾ ತ್ವಚೆಯ ಸಿಪ್ಪೆ ಸುಲಿಯುತ್ತಿದ್ದರೆ, ನೀವು ಇನ್ನೂ ಹೆಚ್ಚಿನ ಅಪಾಯದಲ್ಲಿದ್ದೀರಿ. ವಿಶೇಷವಾಗಿ ನಿಮ್ಮ ಮುಖದ ಮೇಲೆ ಯಾವಾಗಲೂ ಸನ್‌ಸ್ಕ್ರೀನ್ ಅನ್ನು ಧರಿಸಲೇಬೇಕು. ಸನ್‌ಸ್ಕ್ರೀನ್‌ಗಳಲ್ಲಿನ ಕೆಲವು ಪದಾರ್ಥಗಳು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು, ಸತು ಆಕ್ಸೈಡ್ ಅಥವಾ ಟೈಟಾನಿಯಂ ಡೈಆಕ್ಸೈಡ್ ಪದಾರ್ಥಗಳನ್ನು ಹೊಂದಿರುವ ಪದಾರ್ಥಗಳನ್ನು ನೋಡಿ. ನೀವು ವಿಶಾಲ-ಸ್ಪೆಕ್ಟ್ರಮ್ ಮತ್ತು SPF 30 ಅಥವಾ ಹೆಚ್ಚಿನದನ್ನು ಹೊಂದಿರುವ ಸನ್‌ಸ್ಕ್ರೀನ್ ಅನ್ನು ಸಹ ಆಯ್ಕೆ ಮಾಡಲು ಮರೆಯದಿರಿ.

English summary

Signs of sensitive skin In Kannada

Here we are discussing about Signs of sensitive skin In Kannada. Read more.
X
Desktop Bottom Promotion