For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಟಿಪ್ಸ್

|

ಮೊಡವೆ ಸಾಮಾನ್ಯವಾಗಿ ಹದಿ ಹರೆಯದ ಪ್ರಾಯದಲ್ಲಿ, ಯೌವನದಲ್ಲಿ ಹೆಚ್ಚಾಗಿ ಕಾಡುತ್ತದೆ. ಮೊಡವೆ ಸಾಮಾನ್ಯವಾಗಿ ಎಲ್ಲರಿಗೂ ಆ ಪ್ರಾಯದಲ್ಲಿ ಬಂದಿರುತ್ತೆ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಮೊಡವೆ ಉಂಟಾಗುವುದು. ಒಂದೆರಡು ಮೊಡವೆ ಬಂದು ಹೋಗುತ್ತಿದ್ದರೆ ಏನೂ ಅನಿಸುವುದಿಲ್ಲ ಆದರೆ ಅದು ಸಮಸ್ಯೆಯಾಗುವುದು ತುಂಬಾ ಬಂದಾಗ ಮಾತ್ರ. ಕೆಲವರಲ್ಲಿ ಮುಖ ತುಂಬಾ ಮೊಡವೆ ಬಂದು ಅದರಿಂದ ಕಲೆಗಳು, ರಂಧ್ರಗಳು ಉಂಟಾಗುವುದು, ಆಗ ಮೊಡವೆ ಎಂಬುವುದು ತುಂಬಾನೇ ಹಿಂಸೆ ಅನಿಸುವುದು.

ಮೊಡವೆ ಸಾಮಾನ್ಯವಾಗಿ ಎಣ್ಣೆ ತ್ವಚೆ ಇರುವವರಲ್ಲಿ ಹೆಚ್ಚಾಗಿ ಕಂಡು ಬರುವುದು, ಪ್ರಾರಂಭದಲ್ಲಿ ಬ್ಲ್ಯಾಕ್‌ಹೆಡ್ಸ್‌ ಸಮಸ್ಯೆ ಬರುತ್ತದೆ, ಅದನ್ನುನಿರ್ಲಕ್ಷ್ಯ ಮಾಡಿದಾಗ ಸಮಸ್ಯೆ ಹೆಚ್ಚಾಗುವುದು. ಬ್ಯ್ಯಾಕ್‌ ಹೆಡ್ಸ್ ಉಂಟಾದಾಗ ತ್ವಚೆಯಲ್ಲಿ ಕಿರಿಕಿರಿಯಾಗುವುದು, ಉರಿಯೂತ ಉಂಟಾಗುವುದು, ಆಗ ತ್ವಚೆಯಲ್ಲಿ ಮೊಡವೆ ಬರಲಾರಂಭಿಸುತ್ತದೆ. ಬ್ಲ್ಯಾಕ್‌ ಹೆಡ್ಸ್, ವೈಟ್‌ ಹೆಡ್ಸ್, ಸಿಸ್ಟ್ (ಗುಳ್ಳೆಗಳು), ಮೊಡವೆ ಹುಣ್ಣಾಗುವುದು ಈ ರೀತಿಯಾದಾಗ ಮುಖದ ಅಂದ ಹಾಳಾಗುವುದು, ಕಲೆಗಳು ಮಾಯವಾದರೂ ರಂಧ್ರಗಳು ಉಳಿಯುವಂತಾಗುವುದು.

ಬ್ಲ್ಯಾಕ್‌ ಹೆಡ್ಸ್‌ ನಿರ್ಲಕ್ಷ್ಯ ಮಾಡಬೇಡಿ

ಬ್ಲ್ಯಾಕ್‌ ಹೆಡ್ಸ್‌ ನಿರ್ಲಕ್ಷ್ಯ ಮಾಡಬೇಡಿ

ಬ್ಲ್ಯಾಕ್‌ ಹೆಡ್ಸ್ ಬರಲಾರಂಭಿಸಿದಾಗ ಬ್ಯೂಟಿ ಪಾರ್ಲರ್‌ಗೆ ಹೋಗಿ ಬ್ಲ್ಯಾಕ್‌ ಹೆಡ್ಸ್‌ ತೆಗೆಯಿರಿ. ನಿಮ್ಮದು ಎಣ್ಣೆ ತ್ವಚೆಯಾಗಿದ್ದರೆ ಕ್ಲೀನ್‌ ಅಪ್‌ ಮಾಡಿಸಿ.

ತಲೆ ಬುಡ ಸ್ವಚ್ಛವಾಗಿರಲಿ

ತಲೆ ಬುಡ ಸ್ವಚ್ಛವಾಗಿರಲಿ

ತಲೆಯಲ್ಲಿ ಹೊಟ್ಟು ಇದ್ದರೆ ಮೊಡವೆ ಸಮಸ್ಯೆ ಹೆಚ್ಚಾಗುವುದು, ಆದ್ದರಿಂದ ತಲೆಯಲ್ಲಿ ಹೊಟ್ಟು ಉಂಟಾಗದಂತೆ ನೋಡಿಕೊಳ್ಳಿ, ಅಲ್ಲದೆ ಕೂದಲು ಮುಖದ ಬೀಳದಂತೆ ನೋಡಿಕೊಳ್ಳಿ, ಮಲಗುವಾಗ ಕೂದಲನ್ನು ಹಿಂದೆಕ್ಕೆ ಹಾಕಿ ಮಲಗಿ. ಇನ್ನು ಮೊಡವೆ ಸಮಸ್ಯೆ ಇರುವವರು ದಿಂಬಿನ ಸ್ವಚ್ಛತೆ ಕಡೆ ತುಂಬಾ ಗಮನ ಹರಿಸಬೇಕು. ದಿಂಬಿನಲ್ಲಿ ಜಿಡ್ಡಿನಂಶವಿದ್ದರೆ ಮೊಡವೆ ಸಮಸ್ಯೆ ಹೆಚ್ಚಾಗುವುದು. ತುಂಬಾ ಮೊಡವೆ ಇದ್ದರೆ ದಿಂಬಿನ ಮೇಲೆಒಂದು ಟವಲ್‌ ಹಾಕಿ ಮಲಗಿ, ಪ್ರತಿದಿನ ಟವಲ್ ತೊಳೆಯಿರಿ. ದಿಂಬು, ಟವೆಲ್ ತೊಳೆಯುವಾ ನೀರಿಗೆ 2 ಚಮಚ ಆ್ಯಂಟಿಸೆಪ್ಟಿಕ್ ಸಲ್ಯೂಷನ್ ಹಾಕಿ ತೊಳೆಯಿರಿ.

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಡಿ

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಡಿ

ಎಣ್ಣೆಯಲ್ಲಿ ಕರಿ ಪದಾರ್ಥಗಳು, ಸಂಸ್ಕರಿಸಿದ ಆಹಾರ, ತಂಪು ಪಾನೀಯಗಳು, ಸಿಹಿ ಪದಾರ್ಥಗಳು, ಚಾಕೋಲೆಟ್ ಇವೆಲ್ಲಾ ಮೊಡವೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುವುದು. ಅದರ ಬದಲಿಗೆ ನಿಮ್ಮ ಆಹಾರದಲ್ಲಿ ನಾರಿನಂಶ ಅಧಿಕವಿರಲಿ, ತಾಜಾ ಹಣ್ಣುಗಳು, ಸಲಾಡ್, ಧಾನ್ಯಗಳು, ಮೊಸರು, ನಿಂಬೆರಸ ದಿನದಲ್ಲಿ 8 ಲೋಟ ನೀರು ಇವೆಲ್ಲಾ ಮೊಡವೆಯನ್ನು ಕಡಿಮೆ ಮಾಡುವುದು.

ಈ ರೀತಿ ತ್ವಚೆ ಆರೈಕೆ ಮಾಡಿ, ಇದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು

ಈ ರೀತಿ ತ್ವಚೆ ಆರೈಕೆ ಮಾಡಿ, ಇದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು

1. ಮುಖವನ್ನು ಸರಿಯಾಗಿ ಕ್ಲೆನ್ಸ್ ಮಾಡದಿದ್ದರೆ ಮೊಡವೆ ಹೆಚ್ಚುವುದು, ಮಖ ತೊಳೆಯುವಾಗ ತುಂಬಾ ಸೋಪು ಹಚ್ಚಬೇಡಿ. ನಿಮ್ಮ ಮುಖದ pH ಬ್ಯಾಲೆನ್ಸ್ ಮಾಡುವ ಸೋಪು ಬಳಸಿ, ತುಂಬಾ ರಾಸಾಯನಿಕವಿರುವ ಸೋಪು ಬಳಸಬೇಡಿ. ಫೇಸ್‌ವಾಶ್‌ ಬಳಸಿ, ತುಂಬಾ ಮಾಯಿಶ್ಚರೈಸರ್ ಆಗಿರುವ ಕ್ರೀಮ್, ಕ್ಲೆನ್ಸಿಂಗ್ ಕ್ರಿಮ್ ಬಳಸಬೇಡಿ, ಏಕೆಂದರೆ ಇವುಗಳನ್ನು ಬಳಸುವುದರಿಂದ ಮೊಡವೆ ಮತ್ತಷ್ಟು ಹೆಚ್ಚಾಗುವುದು.

2. ಆ್ಯಂಟಿ ಆ್ಯಕ್ನೆ ಕ್ರೀಮ್ ಮತ್ತು ಲೋಷನ್ ಬಳಸಿ. ಲವಂಗ ಎಣ್ಣೆ, ನೀಲಗಿರಿ ಎಣ್ಣೆ, ರೋಸ್‌ ವಾಟರ್, ತುಳಸಿ, ಕಹಿಬೇವು, ಪುದೀನಾ ಇವುಗಳು ಇರುವಂಥ ಲೋಷನ್ ಬಳಸಿ.

3. ಮುಖವನ್ನು ರಾತ್ರಿಯಲ್ಲಿ ಕ್ಲೆನ್ಸ್ ಮಾಡುವುದು ಮುಖ್ಯವಾಗಿದೆ. ಮುಖದ ಮೇಕಪ್ ಎಲ್ಲಾ ತೆಗೆದು, ಮುಖವನ್ನು ತೊಳೆದು ಹಾಗೇ ಬಿಡಿ. ಯಾವುದೇ ಕ್ರೀಮ್‌ ಅತವಾ ಫೌಂಡೇಷನ್‌ ಹಚ್ಚಬೇಡಿ, ನೀವು ಸ್ಕಿನ್ ಟ್ರೀಟ್ಮೆಂಟ್‌ ತೆಗೆದುಕೊಂಡಿದ್ದರೆ ವೈದ್ಯರು ಸೂಚಿಸಿದ ಕ್ರೀಮ್ ಬಳಸಬಹುದು.

ಮೊಡವೆ ಹೋಗಲಾಡಿಸಲು ಮನೆಮದ್ದುಗಳು

ಮೊಡವೆ ಹೋಗಲಾಡಿಸಲು ಮನೆಮದ್ದುಗಳು

1. ಕಹಿಬೇವು

ಒಂದು ಲೀಟರ್‌ ನೀರಿಗೆ ಒಂದು ಮುಷ್ಠಿಯಷ್ಟು ಕಹಿಬೇವಿನ ಎಲೆ ತಹಾಕಿ ತುಂಬಾ ಕಡಿಮೆ ಉರಿಯಲ್ಲಿ ಒಂದು ಗಂಟೆ ಕುದಿಸಿ, ನಂತರ ಅದನ್ನು ಹಾಗೇ ಒಂದು ರಾತ್ರಿ ಬಿಡಿ, ಮಾರನೇಯ ದಿನ ಬೆಳಗ್ಗೆ ಆ ಎಲೆಯನ್ನು ತೆಗೆದು ಪೇಸ್ಟ್‌ ಮಾಡಿ, ಅದನ್ನು ಮೊಡವೆ ಮೇಲೆ ಹಚ್ಚಿ, ನಂತರ ಆ ನೀರನ್ನು ಮುಖವನ್ಉ ತೊಳೆಯಲು ಬಳಸಿ.

2. ಗ್ರೀನ್ ಟೀ

2. ಗ್ರೀನ್ ಟೀ

ಒಂದು ಕಪ್ ಬಿಸಿ ನೀರಿಗೆ ಗ್ರೀನ್ ಟೀ ಮುಳುಗಿಸಿಡಿ, ನಂತರ ನೀರು ತಣ್ಣಗಾದ ಮೇಲೆ ಆ ನೀರನ್ನು ಮುಖಕ್ಕೆ ಹಚ್ಚಿ.

3. ಚಂದನ ಹಚ್ಚಿ

3. ಚಂದನ ಹಚ್ಚಿ

ಮೊಡವೆಗೆ ಚಂದನ ಅಥವಾ ರಕ್ತ ಚಂದನವನ್ನು ಅರಿದು ಹಚ್ಚಿ. ಗಂಧ ತೇಯುವಾಗ ಸ್ವಲ್ಪ ಚಕ್ಕೆ ಕೂಡ ಹಾಕಿ ಅರ್ಧ ಚಮಚ ಮೆಂತೆ ಪುಡಿ ಹಾಕಿ, ಸ್ವಲ್ಪ ನಿಂಬೆ ರಸ, ಜೇನು ಸೇರಿಸಿ ಮೊಡವೆ ಮೇಲೆ ರಾತ್ರಿ ಹಚ್ಚಿ ಬೆಳಗ್ಗೆ ತೊಳೆಯಿರಿ, ಮೊಡವೆ ಒಣಗಿರುತ್ತದೆ.

4. ಟೀ ಟ್ರೀ ಎಣ್ಣೆ ಮತ್ತು ರೋಸ್‌ ವಾಟರ್‌

4. ಟೀ ಟ್ರೀ ಎಣ್ಣೆ ಮತ್ತು ರೋಸ್‌ ವಾಟರ್‌

ಟೀ ಟ್ರೀ ಎಣ್ಣೆ ಮತ್ತು ರೋಸ್‌ ವಾಟರ್‌ ಮಿಕ್ಸ್ ಮಾಡಿ ಮೊಡವೆ ಮೇಲೆ ಹಚ್ಚಿ. ಹೀಗೆ ಮಾಡಿದರೆ ಮೊಡವೆ ಕಡಿಮೆಯಾಗುವುದು.

English summary

Remedies To Deal Acne Prone Skin in Kannada

Remedies to deal acne prone skin in Kannada, read on....
Story first published: Wednesday, January 19, 2022, 9:34 [IST]
X
Desktop Bottom Promotion