For Quick Alerts
ALLOW NOTIFICATIONS  
For Daily Alerts

ಥ್ರೆಡ್ಡಿಂಗ್ ಮಾಡಿದ ನಂತರ ನೀವು ವಹಿಸಲೇಬೇಕಾದ ಎಚ್ಚರಿಕೆಗಳು!

|

ಮುಖದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ವಿಶೇಷಣವೇ ಹುಬ್ಬು. ಇದು ಮೂಲತಃ ಕಣ್ಣಿನ ರಕ್ಷಣೆಗೆ ಇರುವುದಾದರೂ, ಇದನ್ನು ತ್ವಚೆಯ ಹಾಗೂ ಹುಬ್ಬಿನ ಆಕಾರಕ್ಕೆ ಅನುಗುಣವಾಗಿ ಉತ್ತಮ ಆಕಾರ ನೀಡಿ ಅಂದಗೊಳಿಸುವುದು ಥ್ರೆಡ್ಡಿಂಗ್‌. ಕೆಲವರಿಗೆ ಹುಟ್ಟಿನಿಂದಲೇ ತೀಡಿದಂಥ ಹುಬ್ಬು ಇದ್ದರೆ, ಇನ್ನು ಬಹುತೇಕರಿಗೆ ಥ್ರೆಡ್ಡಿಂಗ್‌ ಅತ್ಯಗತ್ಯ ಎನ್ನುವಷ್ಟರ ಮಟ್ಟಿಗೆ ಗಾಢವಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಶೇಕಡಾ 10ರಲ್ಲಿ 8ರಷ್ಟು ಮಹಿಳೆಯರು/ಯುವತಿಯರು ಸೌಂದರ್ಯ ಹೆಚ್ಚಿಕೊಳ್ಳಲು ಥ್ರೆಡ್ಡಿಂಗ್‌ ಮೊರೆಹೋಗುತ್ತಾರೆ. ಥ್ರೆಡ್ಡಿಂಗ್‌ ಮಾಡಿಸಿದ ನಂತರ ತ್ವಚೆಯು ಕೆಂಪಾಗುವುದು, ತುರಿಕೆ, ಕಿರಿಕಿರಿ ಎನಿಸುವಂಥ ಸಂದರ್ಭಗಳನ್ನು ಬಹುತೇಕರು ಎದುರಿಸಿರುತ್ತಾರೆ. ಆದರೆ, ಪಾರ್ಲರ್‌ನಿಂದ ಹಿಂತಿರುಗಿದ ನಂತರ ನಾವು ನಮಗೇ ತಿಳಿಯದೆ ಮಾಡುವ ಕೆಲವು ಸಿಲ್ಲಿ ತಪ್ಪುಗಳು ಇದರ ಹಿಂದಿರುವ ಮುಖ್ಯ ಕಾರಣವಾಗಿರುತ್ತದೆ. ನಿಮ್ಮ ಸುಂದರವಾದ ಹುಬ್ಬುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು, ಯಾವುದೇ ಕಿರಿಕಿರಿ ಆಗದಂತೆ ತಡೆಯಲು ನೀವು ಮಾಡಲೇಬೇಕಾದ ಪ್ರಮುಖ 5 ಅಭ್ಯಾಸಗಳು ಇಲ್ಲಿವೆ!

1. ತಕ್ಷಣ ಮೇಕಪ್ ಮಾಡಬೇಡಿ

1. ತಕ್ಷಣ ಮೇಕಪ್ ಮಾಡಬೇಡಿ

ನಮ್ಮ ನಿತ್ಯದ ಬದುಕಿನಲ್ಲಿ ನಾವು ತುಂಬಾ ಬ್ಯುಸಿ ಆಗಿರುತ್ತೇವೆ, ಈ ಕಾರಣದಿಂದಲೇ ಪಾರ್ಟಿ ಅಥವಾ ಫಂಕ್ಷನ್ ಇದ್ದಾಗಲೆಲ್ಲಾ ನಾವು ಪಾರ್ಟಿಗೆ ಹೋಗುವ ಕೆಲವೇ ಗಂಟೆಗಳ ಮೊದಲು ಪಾರ್ಲರ್‌ಗಳಿಗೆ ಹೋಗುತ್ತೇವೆ. ಆದರೆ ಇದು ನಿಜವಾಗಿಯೂ ತುಂಬಾ ಕೆಟ್ಟ ಅಭ್ಯಾಸ ಮತ್ತು ನಾವು ಅದನ್ನು ಕೂಡಲೇ ಬದಲಾಯಿಸಿಕೊಳ್ಳಬೇಕಾಗಿದೆ. ಏಕೆಂದರೆ, ಕಾರ್ಯಗಳಿಗೆ ಹೋಗುವ ವೇಳೆ ನಾವು ಯಾವಾಗಲೂ ಸಾಕಷ್ಟು ಮೇಕಪ್ ಅನ್ನು ಹಚ್ಚಿಕೊಳ್ಳುತ್ತೇವೆ. ಥ್ರೆಡ್ಡಿಂಗ್ ಮಾಡಿದ ನಂತರ ಮೇಕಪ್‌ ಅನ್ವಯಿಸಿದಾಗ ನಮ್ಮ ಚರ್ಮದ ಮೇಲೆ ಮೇಕಪ್‌ ಅಪಾಯಕಾರಿ ಪರಿಣಾಮ ಬೀರುತ್ತದೆ. ನಮ್ಮ ಚರ್ಮವು ಸೂಕ್ಷ್ಮವಾಗಿರುವ ಕಾರಣ ಇದು ಮೇಕಪ್‌ ಅನ್ನು ಕಿರಿಕಿರಿಯನ್ನುಂಟು ಮಾಡುತ್ತದೆ. ಆದ್ದರಿಂದ ಕನಿಷ್ಠ ಥ್ರೆಡ್ಡಿಂಗ್‌ಗೆ ಹೋದ ನಂತರ 3-4 ಗಂಟೆಗಳ ನಂತರ ಯಾವಾಗಲೂ ಮೇಕಪ್ ಅನ್ವಯಿಸಿ.

2. ಸುವಾಸಿತ ಉತ್ಪನ್ನ ಬಳಸಬೇಡಿ

2. ಸುವಾಸಿತ ಉತ್ಪನ್ನ ಬಳಸಬೇಡಿ

ಥ್ರೆಡ್ಡಿಂಗ್ ನಂತರ ಹುಬ್ಬುಗಳ ಸುತ್ತಲಿನ ಚರ್ಮವು ಒಣಗುತ್ತದೆ, ಇದನ್ನು ತಪ್ಪಿಸಲು ಮಾಯಿಶ್ಚರೈಸರ್ ಹಚ್ಚುತ್ತೇವೆ. ಇದು ಆ ಕ್ಷಣಕ್ಕೆ ಶುಷ್ಕತೆಯಿಂದ ಪರಿಹಾರವನ್ನು ನೀಡಬಹುದು, ಆದರೆ ನಂತರ ತುರಿಕೆ ಮತ್ತು ಕೆಂಪು ಬಣ್ಣಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಥ್ರೆಡ್ಡಿಂಗ್ ನಂತರ ಕನಿಷ್ಠ ಒಂದು ದಿನದವರೆಗೆ ಈ ಭಾಗದಲ್ಲಿ ಯಾವುದೇ ರೀತಿಯ ಸುಗಂಧಭರಿತ ಉತ್ಪನ್ನಗಳನ್ನು ಅನ್ವಯಿಸುವುದನ್ನು ತಪ್ಪಿಸಿ. ಹಾಗೂ ನೀವು ಶುಷ್ಕತೆಯನ್ನು ಕಾಪಾಡಲು ಬಯಸುವುದಾದರೆ ಅಲೋವೆರಾ ಜೆಲ್ ಅನ್ನು ಬಳಸಬಹುದು.

3. ಬಿಸಿನೀರು ಅಥವಾ ಹಬೆಯನ್ನು ತಪ್ಪಿಸಿ

3. ಬಿಸಿನೀರು ಅಥವಾ ಹಬೆಯನ್ನು ತಪ್ಪಿಸಿ

ಥ್ರೆಡ್ಡಿಂಗ್‌ಗೆ ಹೋಗುವ ಮೊದಲು ನೀವು ಬಿಸಿ ನೀರಿನ ಸ್ನಾನವನ್ನು ಮಾಡಿದರೆ ಯಾವುದೇ ಸಮಸ್ಯೆ ಇಲ್ಲ, ಅಲ್ಲದೇ ಸ್ನಾನದ ನಂತರ ತ್ವಚೆ ಶುಷ್ಕವಾಗುವುದರಿಂದ ಕೂದಲು ಮೃದುವಾಗಿ ಥ್ರೆಡ್ ಮಾಡಲು ಸುಲಭವಾಗಿಸುತ್ತದೆ. ಆದರೆ ಥ್ರೆಡ್ಡಿಂಗ್ ಮಾಡಿದ ನಂತರ ಕನಿಷ್ಠ ಎರಡು ಗಂಟೆಗಳ ಕಾಲ ಯಾವುದೇ ಕಾರಣಕ್ಕೂ ತ್ವಚೆಗೆ ನೀರನ್ನು ಸೋಕಿಸಬೇಡಿ. ತಣ್ಣನೆಯ ನೀರಿನಿಂದ ಯಾವುದೇ ಸಮಸ್ಯೆ ಇಲ್ಲ ಅಥವಾ ಸ್ಟೀಮ್‌ (ಹಬೆ) ತೆಗೆದುಕೊಳ್ಳಬಹುದು ಎಂದು ಅಪ್ಪಿತಪ್ಪಿಯೂ ಯೋಚಿಸಬೇಡಿ. ಥ್ರೆಡ್ ಮಾಡಿದ ನಂತರ ಚರ್ಮ ಸಾಕಷ್ಟು ಸೂಕ್ಷ್ಮವಾಗುತ್ತದೆ, ಈ ವೇಳೆ ಬಿಸಿ ನೀರು, ಹಬೆ ತ್ವಚೆಯಲ್ಲಿ ಮೊಡವೆಗಳು ಮೂಡಲು ಹಾಗೂ ತ್ವಚೆ ಕೆಂಪಾಗಲು ಕಾರಣವಾಗಬಹುದು.

4. ಪದೇ ಪದೇ ಚರ್ಮವನ್ನು ಸ್ಪರ್ಶಿಸಬೇಡಿ

4. ಪದೇ ಪದೇ ಚರ್ಮವನ್ನು ಸ್ಪರ್ಶಿಸಬೇಡಿ

ಥ್ರೆಡ್ ಮಾಡಿದ ನಂತರ ಹುಬ್ಬಿನ ಆಕಾರವನ್ನು ಪರೀಕ್ಷಿಸಲು ಅಥವಾ ತುರಿಕೆ ಉಂಟಾದಾಗ ಪದೇ ಪದೇ ಹುಬ್ಬುಗಳನ್ನು ಸ್ಪರ್ಶಿಸುವ ತಪ್ಪನ್ನು ಸಹ ನೀವು ಮಾಡುತ್ತೀರಬಹುದು. ಆದರೆ ಇದೆಲ್ಲಾ ಸೋಂಕು ಹೆಚ್ಚಲು ಕಾರಣವಾಗಬಹುದು. ಆದ್ದರಿಂದ ಇಂಥಾ ಕೆಟ್ಟ ಅಭ್ಯಾಸಗಳನ್ನು ನಾವು ಕೂಡಲೇ ನಿಲ್ಲಿಸಬೇಕಾಗಿದೆ. ಆದಾಗ್ಯೂ ನಿಮಗೆ ತುರಿಕೆ ಎನಿಸಿದರೆ ಅಲೋವೆರಾ ಜೆಲ್ ಅಥವಾ ರೋಸ್ ವಾಟರ್ ಅನ್ನು ಹತ್ತಿಯಿಂದ ಹಚ್ಚಿ.

5. ಸೂರ್ಯನ ಕಿರಣಗಳಿಂದ ದೂರವಿರಿ

5. ಸೂರ್ಯನ ಕಿರಣಗಳಿಂದ ದೂರವಿರಿ

ಸೂರ್ಯನ ಕಿರಣಗಳು ಸಾಮಾನ್ಯ ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎಂದಾದರೆ ಇನ್ನು, ಆಗಷ್ಟೇ ಥ್ರೆಡ್ಡಿಂಗ್ ಮಾಡಿ ಸೂರ್ಯನ ಕಿರಣ ಬಿದ್ದರೆ ಪರಿಣಾಮ ಇನ್ನೂ ಗಂಭೀರವಾಗಬಹುದು. ಥ್ರೆಡ್ಡಿಂಗ್‌ ಮಾಡಿದ ತಕ್ಷಣ ಹೊರಬಂದರೆ ಸೂರ್ಯನ ಯುವಿ ಕಿರಣಗಳು ತ್ವಚೆಯನ್ನು ಕೆಂಪಾಗಿಸಬಹುದು ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತವೆ. ಕನಿಷ್ಠ ಥ್ರೆಡ್ಡಿಂಗ್ ನಂತರ 3-4 ಗಂಟೆಗಳು ಸೂರ್ಯನ ಕಿರಣಗಳಿಂದ ದೂರವಿರಿ.

English summary

Mistakes You Should Avoid After Threading

Here we are discussing about mistakes you must avoid after threading. Eyebrows add personality to your whole look Thick, well-shaped eyebrows are back as they can enhance your look. After threading, there are times when your skin faces redness, itching and irritation. The main reason behind this is the silly mistakes that we do unknowingly after coming back from a parlour. Here are 5 habits that you should avoid doing for maintaining the health of your beautiful brows. Here we are discussing about mistakes you must avoid after threading. Eyebrows add personality to your whole look Thick, well-shaped eyebrows are back as they can enhance your look. After threading, there are times when your skin faces redness, itching and irritation. The main reason behind this is the silly mistakes that we do unknowingly after coming back from a parlour. Here are 5 habits that you should avoid doing for maintaining the health of your beautiful brows.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X