For Quick Alerts
ALLOW NOTIFICATIONS  
For Daily Alerts

ತ್ವಚೆಯ ಸೌಂದರ್ಯಕ್ಕಾಗಿ ಐಸ್ ಕ್ಯೂಬ್ ಬಳಸುವಾಗ ಈ ವಿಚಾರಗಳು ನೆನಪಿರಲಿ

|

ಐಸ್ ಕ್ಯೂಬ್.. ಸುಲಭವಾಗಿ ಲಭ್ಯವಿರುವ ಈ ವಸ್ತುವು ತ್ವಚೆಗೆ ಸಂಬಂಧಿಸಿದಂತೆ ಉತ್ತಮ ಪ್ರಯೋಜನಗಳನ್ನು ಹೊಂದಿದೆ. ಮೇಕಪ್ ಮಾಡುವ ಮೊದಲು ಐಸ್ ನಿಂದ ಮಸಾಜ್ ಮಾಡುವುದರಿಂದ ಮೇಕಪ್ ದೀರ್ಘಕಾಲ ಉಳಿಯುತ್ತದೆ. ಹಾಗೆಯೇ, ಐಸ್ ಕ್ಯೂಬ್ ಗಳನ್ನು ಮುಖಕ್ಕೆ ಉಜ್ಜುವುದರಿಂದ ತ್ವಚೆಗೆ ಹೊಳಪು ಬರುತ್ತದೆ.

ಯಾವುದೇ ರಾಸಾಯನಿಕ ಬಳಸದೇ ಮೊಡವೆ ವಿರುದ್ಧ ಹೋರಾಡಲು ಸಹಾಯ ಮಾಡುವುದರಿಂದ ಹಿಡಿದು, ಉಬ್ಬಿದ ಕಣ್ಣುಗಳನ್ನು ಸರಿಪಡಿಸುವವರೆಗೂ ನಾನಾ ಪ್ರಯೋಜನವಿರುವ ಐಸ್ ಕ್ಯೂಬ್ ನ್ನು ಮುಖಕ್ಕೆ ಬಳಸುವಾಗ ಸಣ್ಣ ತಪ್ಪುಗಳನ್ನು ಮಾಡಿದರೂ, ಅದು ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಹಾಗಾದರೆ ಆ ತಪ್ಪುಗಳಾವುವು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನ ಓದಿ.

ಮುಖಕ್ಕೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ವಿವರಿಸಲಾಗಿದೆ:

ಮುಖ ಸ್ವಚ್ಛವಾಗಿರಲಿ:

ಮುಖ ಸ್ವಚ್ಛವಾಗಿರಲಿ:

ಮುಖಕ್ಕೆ ಐಸ್ ಕ್ಯೂಬ್ ಗಳಿಂದ ಹಲವು ಪ್ರಯೋಜನಗಳಿದ್ದರೂ, ಅದನ್ನು ಬಳಸಬೇಕಾದ ರೀತಿಯಲ್ಲಿ ಬಳಸಿದರಷ್ಟೇ ಆ ಲಾಭ ಸಿಗುವುದು. ಯಸ್ ಕ್ಯೂಬ್ ಹಚ್ಚುವ ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಐಸ್ ಕ್ಯೂಬ್ ನ್ನು ಯಾವತ್ತಿಗೂ ಕೊಳೆಯಿರುವ ಮುಖದ ಮೇಲೆ ಉಜ್ಜಬೇಡಿ. ಇದು ತ್ವಚೆಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಅದಕ್ಕಾಗಿ ಉಜ್ಜುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ಮುಖ ತೊಳೆದಾಗ ಮುಖದಲ್ಲಿರುವ ಕೊಳೆ ಮತ್ತು ಎಣ್ಣೆ ಹೋಗುತ್ತದೆ. ಆಮೇಲೆ ಐಸ್ ತುಂಡುಗಳನ್ನು ಬಳಸುವುದುರಿಂದ ನಿರೀಕ್ಷಿತ ಫಲಿತಾಂಶ ದೊರೆಯುವುದು.

ಕ್ಯೂಬ್ ನ್ನು ನೇರವಾಗಿ ಉಜ್ಜಬೇಡಿ:

ಕ್ಯೂಬ್ ನ್ನು ನೇರವಾಗಿ ಉಜ್ಜಬೇಡಿ:

ನಿಮ್ಮ ತ್ವಚೆಯ ಮೇಲೆ ನೇರವಾಗಿ ಐಸ್ ಕ್ಯೂಬ್ ಗಳನ್ನು ಉಜ್ಜುವುದರಿಂದ ಕೆಲವೊಮ್ಮೆ ಹಾನಿಯಾಗಬಹುದು. ಹೀಗೆ ಮಾಡುವುದರಿಂದ ನಿಮಗೆ ಕಿರಿಕಿರಿ ಅಥವಾ ತುರಿಕೆ ಉಂಟಾಗಬಹುದು. ಆದ್ದರಿಂದ ಮುಖಕ್ಕೆ ಐಸ್ ಹಚ್ಚುವ ಮೊದಲು, ಐಸ್ ಕ್ಯೂಬ್ ಗಳನ್ನು ಹತ್ತಿಯ ಬಟ್ಟೆಯಿಂದ ಸುತ್ತಿಕೊಳ್ಳಿ. ನಂತರ ಆ ಬಟ್ಟೆಯ ಸಹಾಯದಿಂದ ಮುಖವನ್ನು ಮಸಾಜ್ ಮಾಡಿ. ಇದರಿಂದ ಯಾವುದೇ ಕಿರಿಕಿರಿ ಉಂಟಾಗುವುದಿಲ್ಲ.

ಪ್ರತಿದಿನ ಮಸಾಜ್ ಬೇಡ:

ಪ್ರತಿದಿನ ಮಸಾಜ್ ಬೇಡ:

ಅತೀ ಆದರೆ, ಅಮೃತವೂ ವಿಷವಂತೆ, ಅದರಂತೆ, ಐಸ್ ಕ್ಯೂಬ್ ಉತ್ತಮವೆಂದು ಪ್ರತಿದಿನ ಮಸಾಜ್ ಮಾಡುತ್ತಿದ್ದರೆ, ನಿಮ್ಮ ಮುಖಕ್ಕೆ ಹಾನಿಯಾಗಬಹುದು, ಜೊತೆಗೆ ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಐಸ್ ಕ್ಯೂಬ್ ಗಳ ಅತಿಯಾದ ಕೋಲ್ಡ್ ನಿಮ್ಮ ತ್ವಚೆಗೆ ತೊಂದರೆ ನೀಡಬಹುದು. ಆದ್ದರಿಂದ, ಈ ಐಸ್ ಮಸಾಜ್ ನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಸಾಕು. ಐಸ್ ಕ್ಯೂಬ್ ಮಸಾಜ್ ಪ್ರತಿದಿನ ಮಾಡುವುದರಿಂದ ಮುಖಕ್ಕೆ ಕಿರಿಕಿರಿ ಆಗಬಹುದು. ಅಷ್ಟೇ ಅಲ್ಲ, 15 ನಿಮಿಷಗಳಿಗಿಂತ ಹೆಚ್ಚು ಕಾಲ ಮಸಾಜ್ ಮಾಡಬೇಡಿ.

ಕಠಿಣತೆ ಬೇಡ:

ಕಠಿಣತೆ ಬೇಡ:

ಐಸ್ ಕ್ಯೂಬ್ ನಿಂದ ಮಸಾಜ್ ಮಾಡುವಾಗ ತುಂಬಾ ಕಠಿಣವಾಗಿ ಉಜ್ಜಬೇಡಿ, ನಿಮ್ಮ ಮುಖವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ನಿಧಾನವಾಗಿ ಕ್ಯೂಬ್ ನಿಂದ ಉಜ್ಜುತ್ತಾ ಇರಿ. ಇನ್ನೊಂದು ವಿಚಾರವೆಂದರೆ, ಐಸ್ ಕ್ಯೂಬ್ ಇಟ್ಟ ಹಚ್ಚಿದ ಜಾಗವನ್ನು ಹೆಚ್ಚು ಉಜ್ಜಬೇಡಿ. ನಿಧಾನವಾಗಿ ಮಸಾಜ್ ಮಾಡುತ್ತಿರಿ, ಆಗ ನೀವು ಒತ್ತಡದಿಂದ ನಿರಾಳತೆಯನ್ನು ಅನುಭವಿಸುತ್ತೀರಿ.

ನೀರಿನ ಜೊತೆ ವಿವಿಧ ಪದಾರ್ಥ ಸೇರಿಸಿ:

ನೀರಿನ ಜೊತೆ ವಿವಿಧ ಪದಾರ್ಥ ಸೇರಿಸಿ:

ಕೇವಲ ನೀರಿನಿಂದ ಮಾಡಿದ ಐಸ್ ಕ್ಯೂಬ್ ಬಳಸುವುದಕ್ಕಿಂತ, ಅದರ ಜೊತೆಗೆ ನಿಮ್ಮ ತ್ವಚೆಗೆ ಸರಿಹೊಂದುವಂತಹ ಪದಾರ್ಥಗಳನ್ನು ಸೇರಿಸಿ, ಐಸ್ ತಯಾರಿಸಿ. ಇದರಿಂದ ನಿಮ್ಮ ಮುಖಕ್ಕೆ ಡಬಲ್ ಆರೈಕೆ ದೊರೆಯುವುದು. ಉದಾಹರಣೆಗೆ, ಕಾಂತಿ ಪಡೆಯಲು, ನೀರಿನ ಜೊತೆ ಅರಶಿನ ಬೆರೆಸಿ ಕ್ಯೂಬ್ ತಯಾರಿಸಿ.. ಹೀಗೆ ಅಲೋವೆರಾ ಜೆಲ್, ಸೌತೆಕಾಯಿ ಕ್ಯೂಬ್, ಕಾಫೀ ಕ್ಯೂಬ್ ಸೇರಿದಂತೆ ವಿವಿಧ ಬಗೆಯ ಪದಾರ್ಥಗಳನ್ನು ನಿಮ್ಮ ಅವಶ್ಯಕತೆಗನುಗುಣವಾಗಿ ಆಯ್ಕೆ ಮಾಡಿಕೊಂಡು, ಬಳಸಿದರೆ ಉತ್ತಮ.

English summary

Ice for Face: Keep These Things in Mind while using Ice on Face in Kannada

Here we talking about ice for face: keep these things in mind while using ice on face in kannada, read on
Story first published: Wednesday, August 25, 2021, 12:09 [IST]
X
Desktop Bottom Promotion