For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ನೆರಿಗೆ, ಮೊಡವೆ ತಡೆಗಟ್ಟಲು ಕೊಲೆಜಿನ್ ಸಪ್ಲಿಮೆಂಟ್ಸ್ ಹೇಗೆ ಬಳಸಬೇಕು?

|

ಇತ್ತೀಚಿನ ದಿನಗಳಲ್ಲಿ ಕೊಲೆಜಿನ್ ಜನಪ್ರಿಯತೆ ಹೆಚ್ಚಾಗುತ್ತಿದೆ, ಏಕೆಂದರೆ ಈ ಕೊಲೆಜಿನ್ ಅಂಶ ನಮ್ಮ ತ್ವಚೆ ಹಾಗೂ ಕೂದಲಿನ ಆರೋಗ್ಯ ಕಾಪಾಡುವಲ್ಲಿ ತುಂಬಾ ಪ್ರಾಮುಖ್ಯತೆವಹಿಸುವುದು. ಕೊಲೆಜಿನ್‌ ಅನ್ನು ನಮ್ಮ ದೇಹ ಉತ್ಪಾದಿಸುತ್ತದೆ, ಇದರ ಉತ್ಪತ್ತಿ ಕಡಿಮೆಯಾದವರಲ್ಲಿ ಕೊಲೆಜಿನ್‌ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುವಂತೆ ಎಕ್ಸ್‌ಪರ್ಟ್ ಸೂಚಿಸುತ್ತಾರೆ.

ನಮ್ಮ ದೇಹದಲ್ಲಿ ಕೊಲೆಜಿನ್‌ ಪಾತ್ರವೇನು? ಕೊಲೆಜಿನ್ ಸಪ್ಲಿಮೆಂಟ್ಸ್ ಯಾರು ಯಾವಾಗ ತೆಗೆದುಕೊಳ್ಳಬಹುದು? ಎಂಬೆಲ್ಲಾ ಮಾಹಿತಿ ತಿಳಿಯೋಣ...

Collagen supplements

ಕೊಲೆಜಿನ್‌ ಎಂದರೇನು? ಏಕೆ ಅವಶ್ಯಕ?
ಇದೊಂದು ಅತ್ಯವಶ್ಯಕವಾದ ಪ್ರೊಟೀನ್ ಆಗಿದ್ದು ಇದು ನಮ್ಮ ದೇಹದ ಅನೇಕ ಅಂಗಾಂಗಗಳು ಜೊತೆಯಾಗಿ ಇದ್ದು, ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ನಮ್ಮ ತ್ವಚೆ, ನಮ್ಮ ಕೂದಲು, ಮೂಳೆ, ನರಗಳು ಇವುಗಳ ಆರೋಗ್ಯಕ್ಕೆ ಕೊಲೆಜಿನ್ ಅವಶ್ಯಕ.

ಯಾರು ಕೊಲೆಜಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು?
ಮೊಡವೆ ಹಾಗೂ ತ್ವಚೆ ಅಲರ್ಜಿ ಸಮಸ್ಯೆ ಇರುವವರು ಕೊಲೆಜಿನ್ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳಬಹುದು.. ಇನ್ನು ಕೂದಲಿನ ಆರೋಗ್ಯಕ್ಕಾಗಿ ಕೂಡ ಕೊಲೆಜಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು.

ಯಾವ ರೀತಿಯ ಕೊಲೆಜಿನ್ ಸಪ್ಲಿಮೆಂಟ್ಸ್ ಒಳ್ಳೆಯದು?
ಕೊಲೆಜಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದಾದರೆ ಲಿಕ್ವಿಡ್‌ (ದ್ರವ ರೂಪದ) ಕೊಲೆಜಿನ್‌ ತೆಗೆದುಕೊಳ್ಳಬಹುದು. ಈ ದ್ರವ ರೂಪದ ಕೊಲೆಜಿನ್ ಸಪ್ಲಿಮೆಂಟ್ಸ್ ಕೂದಲು, ಉಗುರು, ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಈ ಕೊಲೆಜಿನ್‌ ಅಂಶವನ್ನು ಮೀನಿನಿಂದ ಸಂಗ್ರಹಿಸಲಾಗುವುದು.

ಪೌಡರ್ ಅಥವಾ ಪಿಲ್ಸ್‌ಗಿಂತ ದ್ರವರೂಪದ ಕೊಲೆಜಿನ್ ಒಳ್ಳೆಯದು ಏಕೆ?
ದ್ರವರೂಪದ ಕೊಲೆಜಿನ್ ಅನ್ನು ನಮ್ಮ ದೇಹವು ಬೇಗನೆ ಹೀರಿಕೊಳ್ಳುತ್ತದೆ. ಆದ್ದರಿಂದ ಹೆಚ್ಚಿನ ಪ್ರಯೋಜನ ನಮ್ಮ ದೇಹಕ್ಕೆ ಉಂಟಾಗುತ್ತದೆ. ಇನ್ನು ಮೀನಿನಿಂದ ಸಂಗ್ರಹಿಸಿದ ಕೊಲೆಜಿನ್ ಸಪ್ಲಿಮೆಂಟ್ಸ್ ಹೆಚ್ಚಾಗಿ ಬಳಸಲಾಗುವುದು. ಮಾತ್ರೆ ಅಥವಾ ಪೌಡರ್ ಆದ್ರೆ ಕೆಲವರಿಗೆ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು.

ಕೊಲೆಜಿನ್ ತ್ವಚೆಗೆ ಒಳ್ಳೆಯದೇ?
ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ದೇಹ ಕೊಲೆಜಿನ್ ಉತ್ಪತ್ತಿ ಕಡಿಮೆ ಮಾಡುತ್ತದೆ. ಇದರಿಂದ ಮುಖದಲ್ಲಿ ನೆರಿಗೆಗಳು ಬೀಳುವುದು, ತ್ವಚೆ ಡ್ರೈಯಾಗುವುದು. ಕೊಲೆಜಿನ್ ಸಪ್ಲಿಮೆಂಟ್ಸ್ ಯೌವನ ಕಳೆ ಕಾಪಾಡುವಲ್ಲಿ ಸಹಕಾರಿ.

ಕೊಲೆಜಿನ್ ಸಪ್ಲಿಮೆಂಟ್ಸ್ ಎಷ್ಟು ತೆಗೆದುಕೊಳ್ಳಬೇಕು?
ಒಂದು ಅಧ್ಯಯನ ಪ್ರಕಾರ ದಿನದಲ್ಲಿ 3-10ಗ್ರಾಂ ಕೊಲೆಜಿನ್ ಅನ್ನು 69 ದಿನಗಳವರೆಗೆ ತೆಗೆದುಕೊಂಡರೆ ತ್ವಚೆಯಲ್ಲಿ ವ್ಯತ್ಯಾಸ ಗೋಚರಿಸುವುದು. ಮೊಡವೆ ಸಮಸ್ಯೆ ಇರುವವರು ಕೊಲೆಜಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದರಿಂದ ಮೊಡವೆ ಕಡಿಮೆಯಾಗುವುದು.

ಕೊಲೆಜಿನ್ ಯಾವ ಆಹಾರಗಳಲ್ಲಿವೆ?
ಚಿಕನ್ ಸ್ಕಿನ್, ಪೋರ್ಕ್, ಮೀನು, ಕೆಂಪು ಮಾಂಸಾಹಾರ, ಬ್ರೊಕೋಲಿ, ಸಿಟ್ರಸ್ ಹಣ್ಣುಗಳು, ದುಂಡು ಮೆಣಸು ಇವುಗಳಲ್ಲಿ ದೊರೆಯುತ್ತದೆ.

ಕೊಲೆಜಿನ್ ಇತರ ಪ್ರಯೋಜನಗಳು
ಕೂದಲು ಹಾಗೂ ಉಗುರಿನ ಆರೋಗ್ಯಕ್ಕೆ ಒಳ್ಳೆಯದು: ನಿಮ್ಮ ಉಗುರುಗಳಲ್ಲಿ ಬಿರುಕು ಅಥವಾ ಬೇಗನೆ ಮುರಿದು ಹೋಗುತ್ತಿದ್ದರೆ ಕೊಲೆಜಿನ್ ಸಪ್ಲಿಮೆಂಟ್ಸ್‌ ತೆಗೆದುಕೊಂಡರೆ ಉಗುರುಗಳು ಬೇಗನೆ ಮುರಿಯುವುದಿಲ್ಲ ಅಲ್ಲದೆ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿ.

ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು: ಇದರ ಬಗ್ಗೆ ವೈಜ್ಞಾನಿಕವಾಗಿ ಪುರಾವೆಗಳು ದೊರೆಯಲ್ಲ, ಆದರೆ ಈ ಕೊಲೆಜಿನ್‌ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವವರು ಹೊಟ್ಟೆಯ ಆರೋಗ್ಯ ಉತ್ತಮವಾಗಿರುವುದಾಗಿ ಹೇಳುತ್ತಾರೆ.
ಮಾನಸಿಕ ಆರೋಗ್ಯ: ಕೊಲೆಜಿನ್ ಸಪ್ಲಿಮೆಂಟ್ಸ್ ಮಾನಸಿಕ ಒತ್ತಡ ಕಡಿಮೆ ಮಾಡುವುದು ಇದರಿಂದ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
ಸಮತೂಕ: ಕೊಲೆಜಿನ್ ನಿಮ್ಮ ಚಯಪಚಯ ಕ್ರಿಯೆ ಉತ್ತಮ ಪಡಿಸುವುದರಿಂದ ಸಮತೂಕ ಹೊಂದಲು ಸಹಕಾರಿ.

ಇದರಿಂದ ಸಂಧಿ ನೋವು ಕಡಿಮೆಯಾಗುವುದು
ಯಾರಿಗೆ ಸಂಧಿವಾತ ಇದೆಯೋ ಅವರು ಕೊಲೆಜಿನ್ ಸಪ್ಲಿಮೆಂಟ್ಸ್ ತೆಗೆದುಕೊಂಡಾಗ ಸಂಧಿನೋವು ತುಂಬಾ ಕಡಿಮೆಯಾಗಿರುವುದಾಗಿ ಅಧ್ಯಯನಗಳು ಹೇಳಿವೆ.

ಮೂಳೆ ಸವೆತ ತಡೆಗಟ್ಟುತ್ತದೆ: ಕೊಲೆಜಿನ್‌ ಮೂಳೆಗಳಿಗೆ ಶಕ್ತಿಯನ್ನು ತುಂಬುವುದು.
* ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು
* ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು

ಕೊಲೆಜಿನ್ ಮಾತ್ರೆಯಿಂದ ಅಡ್ಡಪರಿಣಾಮವಿದೆಯೇ?
* ಕೆಲವರಿಗೆ ಮೀನು, ಮೊಟ್ಟೆ, ಸಮುದ್ರಾಹಾರಗಳು ಆಗುವುದಿಲ್ಲ, ಅಂಥವರು ಸೇವಿಸಬೇಡಿ.

* ಕೆಲವರಲ್ಲಿ ಹೊಟ್ಟೆ ಉಬ್ಬುವ ಸಮಸ್ಯೆ ಕಂಡು ಬರುತ್ತದೆ, ಆದರೆ ಇದು ಮೊದ ಮೊದಲು ಕಂಡು ಬರಬಹುದು ಅಷ್ಟೇ.
* ಕೆಲವರಲ್ಲಿ ಎದೆಯುರಿ ಕಂಡು ಬರುವುದು.

ಸೂಚನೆ: ನೀವು ಈ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವ ಮುನ್ನ ಚರ್ಮ ರೋಗ ತಜ್ಞರ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಿ.

English summary

How To Use Collagen supplements For Healthy Skin And Hair

How to use Collagen supplements: What are the benefits for skin and hair and it's side affects, read on...
Story first published: Monday, December 5, 2022, 20:45 [IST]
X
Desktop Bottom Promotion