For Quick Alerts
ALLOW NOTIFICATIONS  
For Daily Alerts

ಈ ಹಣ್ಣುಗಳನ್ನು ಸೇವಿಸಿದರೆ ತ್ವಚೆ ಹೊಳಪಾಗುತ್ತದೆ

|

ತ್ವಚೆ ತುಂಬಾ ಕಾಂತಿಯುತ ಹಾಗೂ ಆರೋಗ್ಯಕಾರಿ ಆಗಿರಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುವುದು. ಅದರಲ್ಲೂ ಮಹಿಳೆಯರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವರು. ಯಾವಾಗಲೂ ತಮ್ಮ ತ್ವಚೆ ಆಗಿಬೇಕು, ಹೀಗಿರಬೇಕು ಎಂದು ಆಲೋಚಿಸುತ್ತಲೇ ಇರುವರು. ಇದಕ್ಕಾಗಿ ಅವರು ಹಲವಾರು ರೀತಿಯ ಉತ್ಪನ್ನಗಳನ್ನು ಕೂಡ ಬಳಕೆ ಮಾಡುವರು. ಆದರೆ ಇಂತಹ ಕೆಲವೊಂದು ಉತ್ಪನ್ನಗಳು ಕೂಡ ಅಡ್ಡಪರಿಣಾಮ ಬೀರಬಹುದು.

Fruits Must Eat To Get Glowing Skin

ಕೇವಲ ಉತ್ಪನ್ನಗಳನ್ನು ಬಳಕೆ ಮಾಡುವ ಬದಲು ನೀವು ಕೆಲವೊಂದು ಆಹಾರದಿಂದಲೂ ಕಾಂತಿಯುತ ತ್ವಚೆ ಪಡೆಯಬಹುದು. ಇದಕ್ಕಾಗಿ ನೀವು ಆಹಾರ ಕ್ರಮದಲ್ಲಿ ಕೆಲವೊಂದು ಹಣ್ಣು ಹಾಗೂ ತರಕಾರಿಗಳನ್ನು ಬಳಕೆ ಮಾಡಬೇಕು. ಇದನ್ನು ಸೇವಿಸಿ ಮತ್ತು ಸೌಂದರ್ಯವರ್ಧಕವಾಗಿ ಬಳಸಿ. ಅದರಲ್ಲೂ ತ್ವಚೆಗೆ ಕಾಂತಿ ಹಾಗೂ ಆರೋಗ್ಯ ನೀಡುವಂತಹ ಕೆಲವು ಹಣ್ಣುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ತಿಳಿಯಲು ತಯಾರಾಗಿ.

ಸೇಬು

ಸೇಬು

ಸೇಬಿನಲ್ಲಿ ಹಲವಾರು ರೀತಿಯ ಆರೋಗ್ಯಕಾರಿ ಅಂಶಗಳು ಇವೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ದಿನಕ್ಕೊಂದು ಸೇಬು ತಿಂದರೆ ಅದರು ನಮ್ಮನ್ನು ಆರೋಗ್ಯವಾಗಿಡುವುದು. ಅದೇ ದಿನಕ್ಕೊಂದು ಸೇಬು ತಿಂದರೆ ನೆರಿಗೆಯಿಂದಲೂ ದೂರವಿಡುವುದು. ಸೇಬಿನಲ್ಲಿರುವ ವಿಟಮಿನ್ ಸಿ ಅಂಶವು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಸಿ ಪ್ರಬಲ ಆಂಟಿಆಕ್ಸಿಡೆಂಟ್ ಆಗಿದ್ದು, ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು ಮತ್ತು ಚರ್ಮದಲ್ಲಿ ನೆರಿಗೆ ಮೂಡದಂತೆ ಕಾಪಾಡುವುದು. ವಿಟಮಿನ್ ಎ ಕೂಡ ಇದರಲ್ಲಿದ್ದು, ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಬಿಗಿಯಾಗಿಸುವುದು.

ಕಿವಿ ಹಣ್ಣು

ಕಿವಿ ಹಣ್ಣು

ಲಿಂಬೆ ಮತ್ತು ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇದೆ ಎಂದು ನೀವು ಭಾವಿಸಿದ್ದರೆ, ಸ್ವಲ್ಪ ತಾಳಿ. ಯಾಕೆಂದರೆ ನೂರು ಗ್ರಾಂ ಕಿವಿ ಹಣ್ಣಿನಲ್ಲಿ ಶೇ.154ರಷ್ಟು ವಿಟಮಿನ್ ಸಿ ಇದೆ. ವಿಟಮಿನ್ ಇ ಜತೆಗೆ ವಿಟಮಿನ್ ಸಿ ಸೇವನೆ ಮಾಡಿದರೆ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಕಿವಿ ಹಣ್ಣಿನಲ್ಲಿ ವಿಟಮಿನ್ ಇ ಕೂಡ ಇದೆ. ಈ ಎರಡು ವಿಟಮಿನ್ ಗಳು ತ್ವಚೆಯ ಆರೋಗ್ಯ ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದನ್ನು ಹಾಗೆ ಚರ್ಮದ ಮೇಲೆ ಹಚ್ಚಿಕೊಂಡರೆ ಅದರಿಂದ ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಆಗುವುದು ಮತ್ತು ಮೊಡವೆಗಳು ಮೂಡದಂತೆ ಕಾಪಾಡುವುದು.

ಅವಕಾಡೊ

ಅವಕಾಡೊ

ಅವಕಾಡೋ ಹಣ್ಣಿನ ಜ್ಯೂಸ್ ಅಥವಾ ಸ್ಮೂಥಿ ಮಾಡಿಕೊಂಡು ಕುಡಿದರೆ ಅದು ತುಂಬಾ ರುಚಿಕರವಾಗಿರುವುದು. ಇದೇ ವೇಳೆ ಅವಕಾಡೊ ಹಣ್ಣಿನಲ್ಲಿ ಇರುವಂತಹ ಕೊಬ್ಬಿನಾಂಶವು ಚರ್ಮಕ್ಕೆ ತುಂಬಾ ಒಳ್ಳೆಯದು. ಅವಕಾಡೊದಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ-6, ಮೆಗ್ನಿಶಿಯಂ, ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಆಂಟಿಆಕ್ಸಿಡೆಂಟ್ ಗಳು ಇವೆ. ಇದನ್ನು ಮೈಗೆ ಹಚ್ಚಿಕೊಂಡರೆ ಅದರಿಂದ ಚರ್ಮವು ಮೊಶ್ಚಿರೈಸ್ ಆಗುವುದು ಮತ್ತು ಪೋಷಣೆ ಕೂಡ ಸಿಗುವುದು. ಚರ್ಮವು ನಯವಾಗಿರಲು ವಾರಕ್ಕೆ ಒಂದು ಸಲ ಅವಕಾಡೊ ಮಾಸ್ಕ್ ಹಚ್ಚಿಕೊಳ್ಳಿ. ಇದರಿಂದ ಚರ್ಮವು ಕಾಂತಿಯುತವಾಗುವುದು.

ಪಪ್ಪಾಯಿ

ಪಪ್ಪಾಯಿ

ಚರ್ಮದ ಆರೈಕೆಗೆ ಪಪ್ಪಾಯಿ ಅತ್ಯುತ್ತಮ ಹಣ್ಣಾಗಿದೆ. ಇದನ್ನು ಇಂದಿನ ದಿನಗಳಲ್ಲಿ ಹೆಚ್ಚಿನ ಸೌಂದರ್ಯ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಪಪ್ಪಾಯಿಯಲ್ಲಿ ಪಪೈನ್ ಎನ್ನುವ ಅಂಶವಿದ್ದು, ಇದು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಮುಖದಲ್ಲಿ ಅನಗತ್ಯ ಕೂದಲು ಬೆಳೆಯದಂತೆ ತಡೆಯುವುದು. ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯುವುದು. ಕಾಲಜನ್ ಉತ್ಪತ್ತಿಯನ್ನು ಸುಧಾರಣೆ ಮಾಡುವ ಪಪ್ಪಾಯಿಯು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದರ ಜತೆಗೆ ಚರ್ಮದಲ್ಲಿನ ಸತ್ತ ಕೋಶ ಕಿತ್ತು ಹಾಕುವುದು ಮತ್ತು ಚರ್ಮವನ್ನು ಹೈಡ್ರೇಟ್ ಮಾಡುವುದು. ಇದರಲ್ಲಿ ಇರುವಂತಹ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಕಪ್ಪು ಕಲೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ದಾಳಿಂಬೆ

ದಾಳಿಂಬೆ

ದಾಳಿಂಬೆ ತುಂಬಾ ರುಚಿಕರ ಹಾಗೂ ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಹಣ್ಣಾಗಿದ್ದು, ಇದು ಸೌಂಧರ್ಯ ವೃದ್ಧಿಸಲು ಸಹಕಾರಿ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ಚರ್ಮಕ್ಕೆ ವಾತಾವರಣ ಮತ್ತು ಫ್ರೀ ರ್ಯಾಡಿಕಲ್ ನಿಂದ ಆಗಿರುವ ಹಾನಿ ತಡೆಯುವುದು. ದಾಳಿಂಬೆಯು ಅಂಗಾಂಶಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಚರ್ಮಕ್ಕೆ ವಯಸ್ಸಾಗದಂತೆ ತಡೆಯುವುದು. ದಾಳಿಂಬೆ ಬೀಜಗಳನ್ನು ರುಬ್ಬಿಕೊಂಡು ಫೇಸ್ ಮಾಸ್ಕ್ ತಯಾರಿಸಬಹುದು ಅಥವಾ ಇದರ ಸಿಪ್ಪೆ ಒಣಗಿಸಿ ಹುಡಿ ಮಾಡಿಕೊಂಡು ಮಾಸ್ಕ್ ತಯಾರಿಸಿಕೊಳ್ಳಿ.

ಅನಾನಸು

ಅನಾನಸು

ಚರ್ಮಕ್ಕೆ ಕಾಂತಿ ನೀಡಲು ಅನಾನಸು ಹಣ್ಣನ್ನು ನೀಡು ತಿನ್ನಬಹುದು. ವಿಟಮಿನ್ ಸಿ ಇರುವಂತಹ ಇದು ಚರ್ಮಕ್ಕೆ ಆಗಿರುವ ಹಾನಿ ತಪ್ಪಿಸುವುದು. ವಿಟಮಿನ್ ಸಿ ಮೊಡವೆ ಮೂಡದಂತೆ ತಡೆಯುವುದು ಮತ್ತು ಅದರ ವಿರುದ್ಧ ಹೋರಾಡುವುದು. ಅನಾನಸು ತಿಂದರೆ ಅಥವಾ ಅದರ ಜ್ಯೂಸ್ ಕುಡಿದರೆ ಅದು ದೇಹಕ್ಕೆ ವಿಟಮಿನ್ ಸಿ ನೀಡುವುಉದ. ವಿಟಮಿನ್ ಎ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದರಲ್ಲಿದೆ.

ಸ್ಟ್ರಾಬೆರಿ

ಸ್ಟ್ರಾಬೆರಿ

ಸ್ಟ್ರಾಬೆರಿ ಬಳಸಿಕೊಂಡು ನೀವು ನಿಸ್ತೇಜ ಚರ್ಮದರಿಂದ ಮುಕ್ತಿ ಪಡೆಯಬಹುದು. ನೋಡಲು ತುಂಬಾ ಸುಂದರ ಹಾಗೂ ರುಚಿಕರವಾಗಿರುವಂತಹ ಸ್ಟ್ರಾಬೆರಿ ಹಣ್ಣನ್ನು ನೀವು ಎಣ್ಣೆಯಿಂದ ಕರಿದ ತಿಂಡಿ ಬದಲಿಗೆ ಸೇವಿಸಿ. ಇದನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಸ್ಟ್ರಾಬೆರಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ ಮತ್ತು ಇದು ಚರ್ಮಕ್ಕೆ ಅತೀ ಅಗತ್ಯವಾಗಿರುವುದು. ವಿಟಮಿನ್ ಎ ಮತ್ತು ಚರ್ಮದ ರಕ್ಷಣೆ ಮಾಡುವಂತಹ ಹಲವಾರು ರೀತಿಯ ಆಂಟಿಆಕ್ಸಿಡೆಂಟ್ ಗಳು ಇದರಲ್ಲಿದೆ.

ಕಿತ್ತಳೆ

ಕಿತ್ತಳೆ

ಒಂದು ಲೋಟ ತಾಜಾ ಕಿತ್ತಳೆ ಜ್ಯೂಸ್ ಕುಡಿದರೆ ಅದರಿಂದ ಚರ್ಮಕ್ಕೆ ಕಾಂತಿ ಸಿಗುವುದು. ಕಿತ್ತಳೆಯಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ದೇಹಕ್ಕೆ ಸಿಗುವುದು. ಇದರ ಸಿಪ್ಪೆಯಲ್ಲಿ ಕೂಡ ವಿಟಮಿನ್ ಸಿ ಇದೆ ಮತ್ತು ಇದನ್ನು ನೀವು ಸೌಂದರ್ಯವರ್ಧಕವಾಗಿ ಬಳಕೆ ಮಾಡಬಹುದು. ಕಿತ್ತಳೆ ಸಿಪ್ಪೆ ಒಣಗಿಸಿ ಅದನ್ನು ಫೇಸ್ ಮಾಸ್ಕ್ ರೂಪದಲ್ಲಿ ಬಳಸಿರಿ.

English summary

Fruits Must Eat To Get Glowing Skin

Here we are discussing about Fruits Must Eat To Get Glowing Skin. Fruits are filled with antioxidants that boost the health of our skin and fight free radicals to keep it young. Read more.
X
Desktop Bottom Promotion