For Quick Alerts
ALLOW NOTIFICATIONS  
For Daily Alerts

ಮಳೆಗಾಲಕ್ಕೆ ಸೂಕ್ತವಾದ 5 ಫೇಶಿಯಲ್‌ಗಳಿವು

|

ಮಳೆಗಾಲದಲ್ಲಿ ನಿಮ್ಮ ತ್ವಚೆಗೆ ಸ್ವಲ್ಪ ಅಧಿಕ ಆರೈಕೆ ಬೇಕಾಗುತ್ತದೆ. ಬಿಸಿಲು ಸರಿಯಾಗಿ ಇರುವುದಿಲ್ಲ, ತ್ವಚೆ ಕೂಡ ಒಣಗುವುದು ಇವೆಲ್ಲಾ ತ್ವಚೆಯನ್ನು ಕಳೆಗುಂದುವಂತೆ ಮಾಡುವುದು.

Facial For Rainy Season

ಮಳೆಗಾಲದಲ್ಲಿ ತ್ವಚೆ ಆರೈಕೆಗೆ ಫೇಶಿಯಲ್‌ ತುಂಬಾ ಒಳ್ಳೆಯದು. ಆದರೆ ಬೇಸಿಗೆಯಲ್ಲಿ ಬಳಸುವ ಫೇಶಿಯಲ್ ಮಳೆಗಾಲಕ್ಕೆ ಸೂಕ್ತವಲ್ಲ. ಕೆಲವೊಂದು ಹಣ್ಣಿನ ಫೇಶಿಯಲ್ ಎಲ್ಲಾ ಕಾಲಕ್ಕೂ ಸೂಕ್ತ. ಇಲ್ಲಿ ನಾವು ಮಳೆಗಾಲದಲ್ಲಿ ನಿಮ್ಮ ತ್ವಚೆಗೆ ಸೂಕ್ತವಾದ ಫೇಶಿಯಲ್ ನೀಡಿದ್ದೇವೆ ನೋಡಿ:

 1. ಮುಲ್ತಾನಿಮಿಟಿ

1. ಮುಲ್ತಾನಿಮಿಟಿ

ಮಳೆಗಾಲದಲ್ಲಿ ಎಣ್ಣೆ ತ್ವಚೆಯವರಿಗೆ ಎಣ್ಣೆ ಜಿಡ್ಡಿನ ಸಮಸ್ಯೆ ಅಧಿಕ. ಈ ಸಮಸ್ಯೆ ಹೋಗಲಾಡಿಸಿ ಮುಖ ಫ್ರೆಶ್‌ ಆಗಿ ಹೊಳೆಯಲು ಮುಲ್ತಾನಿ ಮಿಟಿ ಒಳ್ಳೆಯದು. ಇದು ಸೆಬಮ್ ಉತ್ಪತ್ತಿ ನಿಯಂತ್ರಣ ಮಾಡಿ ಮುಖದಲ್ಲಿ pH ಪ್ರಮಾಣವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಮುಲ್ತಾನಿಮಿಟಿ ಫೇಶಿಯಲ್‌ಗೆ ಬೇಕಾಗುವ ಸಾಮಗ್ರಿ

1 ಚಮಚ ಮುಲ್ತಾನಿಮಿಟಿ

1 ಚಮಚ ರೋಸ್ ವಾಟರ್

ಬಳಕೆಯ ವಿಧಾನ:

  • ಒಂದು ಬೌಲ್‌ನಲ್ಲಿ ಮುಲ್ತಾನಿಮಿಟಿ, ರೋಸ್ ವಾಟರ್ ಮಿಶ್ರ ಮಾಡಿ.
  • ಅದನ್ನು ಹಚ್ಚುವ ಮುನ್ನ ಮುಖ ಸ್ವಚ್ಛ ಮಾಡಿ.
  • 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
  • ಈ ರೀತಿ ವಾರದಲ್ಲಿ ಒಂದು ಬಾರಿ ಮಾಡಿದರೆ ಸಾಕು.

    2. ಕಡಲೆಹಿಟ್ಟು, ರೋಸ್‌ ವಾಟರ್, ನಿಂಬೆರಸ

    2. ಕಡಲೆಹಿಟ್ಟು, ರೋಸ್‌ ವಾಟರ್, ನಿಂಬೆರಸ

    ಇದನ್ನು ಒಣ ತ್ವಚೆ ಇರುವವರು ಬಳಸಬೇಡಿ, ಏಕೆಂದರೆ ಕಡಲೆ ಹಿಟ್ಟು ತ್ವಚೆಯನ್ನು ಮತ್ತಷ್ಟು ಡ್ರೈಯಾಗಿಸಬಹುದು. ಎಣ್ಣೆ ತ್ವಚೆಯವರಿಗೆ ಹಾಗೂ ಸಾಮಾನ್ಯ ತ್ವಚೆಯವರಿಗೆ ಈ ಫೇಶಿಯಲ್ ತುಂಬಾ ಒಳ್ಳೆಯದು. ಇದು ಸೆಬಮ್ ತುಂಬಾ ಉತ್ಪತ್ತಿಯಾಗುವುದನ್ನು ತಡೆಗಟ್ಟುತ್ತದೆ.

    ನಿಮಗೆ ಬೇಕಾದ ಸಾಮಗ್ರಿ

    1ಚಮಚ ಕಡಲೆಹಿಟ್ಟು

    1 ಚಮಚ ರೋಸ್ ವಾಟರ್

    4 ಹನಿ ನಿಂಬೆ ರಸ

    ಬಳಸುವ ವಿಧಾನ

    • ಈ ಮೂರು ಸಾಮಗ್ರಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
    • ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಮುಖದ ಹೊಳಪು ಹೆಚ್ಚುವುದು.

      3. ಜೋಜೋಬೊ ಎಣ್ಣೆ

      3. ಜೋಜೋಬೊ ಎಣ್ಣೆ

      ಇದು ಒಣ ತ್ವಚೆಯವರಿಗೆ ಅತ್ಯುತ್ತಮವಾದ ಫೇಶಿಯಲ್ ಆಗಿದೆ. ಇದು ಸೆಬಮ್ ಉತ್ಪತ್ತಿ ನಿಯಂತ್ರಿಸುವುದರ ಜೊತೆಗೆ ಮುಖ ಶುಷ್ಕವಾಗುವುದನ್ನು ತಡೆಗಟ್ಟುತ್ತದೆ. ಅಲ್ಲದೆ ಇತರ ತ್ವಚೆ ಸಮಸ್ಯೆ ಕೂಡ ತಡೆಗಟ್ಟುತ್ತದೆ.

      ಬೇಕಾಗುವ ಸಾಮಗ್ರಿ

      ಜೋಜೋಬೊ ಎಣ್ಣೆ

      ಹತ್ತಿ ಉಂಡೆ

      ಬಳಸುವ ವಿಧಾನ

      • ಹತ್ತಿಯ ಚಿಕ್ಕ ಉಂಡೆಯನ್ನು ಎಣ್ಣೆಯಲ್ಲಿ ಅದ್ದಿ ಅದರಿಂದ ಮುಖವನ್ನು ಒರೆಸಿ 2-3 ಗಂಟೆ ಬಿಡಿ. ನಂತರ ತೊಳೆಯಿರಿ.
      • ಇದರ ಉತ್ತಮವಾದ ಫಲಿತಾಂಶಕ್ಕೆ ಈ ವಿಧಾನ ದಿನಾ ಮಾಡಿ ಮುಖದಲ್ಲಿ ವ್ಯತ್ಯಾಸ ತಿಳಿಯುವುದು.
      • 4. ಓಟ್‌ಮೀಲ್ಸ್, ಜೇನು ಹಾಗೂ ಮೊಟ್ಟೆಯ ಬಿಳಿ

        4. ಓಟ್‌ಮೀಲ್ಸ್, ಜೇನು ಹಾಗೂ ಮೊಟ್ಟೆಯ ಬಿಳಿ

        ಈ ಫೇಶಿಯಲ್ ಎಲ್ಲಾ ಬಗೆಯ ತ್ವಚೆಗೆ ಒಳ್ಳೆಯದು. ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ, ನಿರ್ಜೀವ ತ್ವಚೆ ತೆಗೆಯುತ್ತದೆ, ಮೊಡವೆಯನ್ನೂ ನಿಯಂತ್ರಿಸುತ್ತದೆ. ಮಳೆಗಾಲಕ್ಕೆ ಸೂಕ್ತವಾದ ಫೇಶಿಯಲ್ ಇದಾಗಿದೆ.

        ಬೇಕಾಗುವ ಸಾಮಗ್ರಿ

        1 ಚಮಚ ಪುಡಿ ಮಾಡಿದ ಓಟ್ಸ್

        ಒಂದು ಮೊಟ್ಟೆಯ ಬಿಳಿ

        1 ಚಮಚ ಜೇನು

        1 ಚಮಚ ಮೊಸರು

        ಬಳಸುವ ವಿಧಾನ

        • ಒಂದು ಬೌಲ್‌ಗೆ ಈ ಎಲ್ಲಾ ಸಾಮಗ್ರಿ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖ ತೊಳೆಯಿರಿ.
        • ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು ಮುಖ ತುಂಬಾ ಚೆನ್ನಾಗಿರುತ್ತದೆ.

          5. ಕಹಿಬೇವು, ನಿಂಬೆರಸ, ರೋಸ್‌ವಾಟರ್ ಫೇಶಿಯಲ್

          5. ಕಹಿಬೇವು, ನಿಂಬೆರಸ, ರೋಸ್‌ವಾಟರ್ ಫೇಶಿಯಲ್

          ಎಣ್ಣೆ ತ್ವಚೆಯವರಿಗೆ ಹೇಳಿ ಮಾಡಿಸಿದ ಫೇಶಿಯಲ್ ಇದಾಗಿದೆ. ಅಲ್ಲದೆ ಇದು ಮೊಡವೆ ನಿಯಂತ್ರಣಕ್ಕೂ ಒಳ್ಳೆಯದು, ಮುಖದಲ್ಲಿರುವ ಕಲೆಗಳು ಕೂಡ ಇಲ್ಲವಾಗುವುದು.

          ಬೇಕಾಗುವ ಸಾಮಗ್ರಿ

          2 ಚಮಚ ಕಹಿಬೇವಿನ ಪುಡಿ

          2 ಚಮಚ ರೋಸ್ ವಾಟರ್

          1 ಚಮಚ ನಿಂಬೆರಸ

          ಮಾಡುವ ವಿಧಾನ

          • ಎಲ್ಲವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
          • ಈ ರೀತಿ ವಾರದಲ್ಲಿ 2 ಬಾರಿ ಮಾಡಿ ಮುಖದ ಹೊಳಪು ಹೆಚ್ಚುವುದು.

English summary

Facials for Different Skin Types During Monsoon

If you are all too familiar with the struggles skin in the monsoon season, and dreading it, we have five amazing face packs that will keep your oily skin beautiful and problem-free this monsoon season. Take a look.
X
Desktop Bottom Promotion