For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತಾ? ಹೈಡ್ರೇಟರ್, ಮಾಯಿಶ್ಚರೈಸರ್ ಒಂದೇ ರೀತಿ ತ್ವಚೆ ಆರೈಕೆ ಮಾಡಲ್ಲ!

|

ಚಳಿಗಾಲದಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯೆಂದರೆ ತ್ವಚೆ ಒಣಗುವುದು. ಇದನ್ನು ತಡೆಗಟ್ಟಬೇಕೆಂದರೆ ತ್ವಚೆ ಹೈಡ್ರೇಟ್‌ ಆಗಿರಬೇಕು, ಮಾಯಿಶ್ಚರೈಸರ್‌ನಿಂದ ಕೂಡಿರಬೇಕು. ತ್ವಚೆಯನ್ನು ಹೈಡ್ರೇಟ್‌ ಆಗಿ ಇಟ್ಟುಕೊಳ್ಳುವುದು ಅಥವಾ ಮಾಯಿಶ್ಚರೈಸರ್‌ ಮಾಡುವುದು ಎರಡೂ ಒಂದೆನಾ?

Skin Care tips

ತ್ವಚೆ ಆರೈಕೆಯಲ್ಲಿ ಹೈಡ್ರೇಟ್‌ ಒಳ್ಳೆಯದಾ? ಮಾಯಿಶ್ಚರೈಸರ್ ಒಳ್ಳೆಯದಾ? ಈ ಎಲ್ಲಾ ಮಾಹಿತಿ ತಿಳಿದರೆ ಚಳಿಗಾಲದಲ್ಲಿ ತ್ವಚೆ ಆರೈಕೆ ಮತ್ತಷ್ಟು ಸುಲಭವಾಗುವುದು ನೋಡಿ:

 ಹೈಡ್ರೇಟರ್ vs ಮಾಯಿಶ್ಚರೈಸರ್‌ ನಡುವಿನ ವ್ಯತ್ಯಾಸವೇನು?

ಹೈಡ್ರೇಟರ್ vs ಮಾಯಿಶ್ಚರೈಸರ್‌ ನಡುವಿನ ವ್ಯತ್ಯಾಸವೇನು?

ನೀವು ಶಾಪ್‌ಗೆ ಹೋಗಿ ಕೇಳಿದರೆ ಈ ಎರಡೂ ಒಂದೇ, ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದು ಹೇಳಬಹುದು, ಆದರೆ ಇದರ ವ್ಯತ್ಯಾಸ ತಿಳಿದುಕೊಂಡರೆ ನಿಮ್ಮ ತ್ವಚೆಗೆ ಯಾವುದು ಸೂಕ್ತ, ಯಾವಾಗ ಯಾವುದು ಬೆಸ್ಟ್‌ ಎಂಬುವುದು ತಿಳಿದು ಬಳಸಬಹುದು.

ಮಾಯಿಶ್ಚರೈಸರ್ ತೈಲ ಉತ್ಪತ್ತಿಯ ಉತ್ಪಾದನಾವಾಗಿದೆ. ಪೆಟ್ರೋಲಿಯಂ ಅಥವಾ ಖನಿಜಾಂಶದ ಎಣ್ಣೆ, ಪ್ಲ್ಯಾಂಟ್‌ ಆಯಿಲ್‌ (ಸಸ್ಯೋತ್ಪತ್ತಿ ಎಣ್ಣೆ) ಇವಗಳಿಂದ ತಯಾರಿಸಲಾಗುವುದು. ಇವುಗಳನ್ನು ಬಳಸುವುದರಿಂದ ತ್ವಚೆಯ ಮೇಲ್ಮೆ ನುಣಪಾಗಿ ಇರುತ್ತದೆ, ತ್ವಚೆ ಡ್ರೈಯಾಗುವುದು ಕಡಿಮೆಯಾಗುವುದು. ಮಾಯಿಶ್ಚರೈಸರ್‌ ನೀರನ್ನು ಹೀರಿಕೊಳ್ಳುವುದಿಲ್ಲ.

ಅದೇ ಹೈಡ್ರೇಟರ್‌ ಅಂದ್ರೆ ಗ್ಲಿಸರಿನ್ ಅಥವಾ ಹೈಯಲುರೋನಿಕ್ ಆಮ್ಲ. ತ್ವಚೆ ನೀರಿನಂಶ ಹೀರಿಕೊಂಡು ತ್ವಚೆಯಲ್ಲಿ ನೀರಿನಂಶ ಇರುವಂತೆ ಮಾಡುತ್ತದೆ.

ಹೈಡ್ರೇಟರ್ ಅಥವಾ ಮಾಯಿಶ್ಚರೈಸರ್‌ ಇದರಲ್ಲಿ ಯಾವುದು ಬೆಸ್ಟ್?

ಹೈಡ್ರೇಟರ್ ಅಥವಾ ಮಾಯಿಶ್ಚರೈಸರ್‌ ಇದರಲ್ಲಿ ಯಾವುದು ಬೆಸ್ಟ್?

ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಮಾರ್ಕೆಟ್‌ನಲ್ಲಿ ದೊರೆಯುವ ಅನೇಕ ಸೌಂದರ್ಯವರ್ಧಕಗಳಲ್ಲಿ ಈ ಎರಡನ್ನೂ ಬಳಸಲಾಗಿರುತ್ತದೆ. ಇದರಿಂದ ತ್ವಚೆ ಮಾಯಿಶ್ಚರೈಸರ್‌ನಿಂದ ಕೂಡಿರುತ್ತದೆ ಅದೇ ಸಮಯದಲ್ಲಿ ಹೈಡ್ರೇಟ್‌ ಆಗಿರುತ್ತದೆ.

ನಿಮ್ಮ ತ್ವಚೆಗೆ ಹೈಡ್ರೇಟ್‌ ತುಂಬಾ ಅವಶ್ಯಕತೆ ಇದೆ ಎಂದನಿಸಿದರೆ ಗ್ಲಿಸರಿನ್ ಬಳಸಿ.

 ನಿಮ್ಮ ತ್ವಚೆ ತುಂಬಾ ಡ್ರೈಯಾಗಿದ್ದರೆ

ನಿಮ್ಮ ತ್ವಚೆ ತುಂಬಾ ಡ್ರೈಯಾಗಿದ್ದರೆ

ಸಾಮಾನ್ಯವಾಗಿಯೇ ನಿಮ್ಮದು ಡ್ರೈ ತ್ವಚೆ ಎಂದಾದರೆ ಚಳಿಗಾಲದಲ್ಲಿ ತ್ವಚೆ ಮತ್ತಷ್ಟು ಡ್ರೈಯಾಗುವುದು. ಈ ಸಂದರ್ಭದಲ್ಲಿ ನೀವು ಮಾಯಿಶ್ಚರೈಸರ್‌ ಮಂದವಾಗಿ ಹಚ್ಚಬೇಕಾಗುತ್ತದೆ. ಡ್ರೈತ್ವಚೆಗಾಗಿಯೇ ಇರುವ ಮಾಯಿಶ್ಚರೈಸರ್‌ ಬಳಸಬಹುದು.

ತ್ವಚೆ ತುಂಬಾ ಡ್ರೈಯಾಗಿದ್ದರೆ ಪ್ರಟ್ರೋಲಿಯಂ ಜೆಲ್ಲಿ, ಶಿಯಾ ಬಟರ್, ಸೋಯಾಬೀನ್ ಆಯಿಲ್ , ಜೊಜೊಬಾ ಆಯಿಲ್, ನಟ್‌ ಆಯಿಲ್, ತೆಂಗಿನೆಣ್ಣೆ ವರ್ಕ್ ಆಗುತ್ತೆ.

ಮಾಯಿಶ್ಚರೈಸರ್‌ ಬಳಸಿಯೂ ಡ್ರೈಯಾಗಿದ್ದರೆ ಹೈಡ್ರೇಟಿಂಗ್ ಸೆರಮ್ ಬಳಸಿ

ಮಾಯಿಶ್ಚರೈಸರ್‌ ಬಳಸಿಯೂ ಡ್ರೈಯಾಗಿದ್ದರೆ ಹೈಡ್ರೇಟಿಂಗ್ ಸೆರಮ್ ಬಳಸಿ

ಕೆಲವರ ತ್ವಚೆ ತುಂಬಾನೇ ಡ್ರೈಯಾಗಿರುತ್ತೆ, ಮಾಯಿಶ್ಚರೈಸರ್‌ ಬಳಸಿದರೂ ಏನೂ ಪ್ರಯೋಜನವಾಗಿರುವುದಿಲ್ಲ ಆಗ ನೀವು ಹೈಡ್ರೇಟಂಗ್ ಸೆರಮ್ ಬಳಸಿ.

ಹೈಯಲುರೋನಿಕ್ ಆಮ್ಲ, ಲೋಳೆಸರ, ಜೇನು ಹಚ್ಚಿ.

ನಿಮ್ಮದು ಎಣ್ಣೆ ತ್ವಚೆಯಾಗಿದ್ದರೆ?

ನಿಮ್ಮದು ಎಣ್ಣೆ ತ್ವಚೆಯಾಗಿದ್ದರೆ?

ಎಣ್ಣೆ ತ್ವಚೆಯವರಿಗೆ ತ್ವಚೆಯನ್ನು ಮಾಯಿಶ್ಚರೈಸರ್‌ ಆಗಿ ಇಟ್ಟುಕೊಳ್ಳುವುದೇ ಸವಾಲು. ತ್ವಚೆಯಲ್ಲಿ ಮಾಯೀಶ್ಚರೈಸರ್‌ ಕಡಿಮೆಯಾದರೆ ತ್ವಚೆಯಲ್ಲಿ ಜಿಡ್ಡಿನಂಶ ಹೆಚ್ಚುವುದು. ಆದ್ದರಿಂದ ಇದನ್ನು ತಡೆಗಟ್ಟಲು ನೀವು ವಾಟರ್‌ ಬೇಸ್ಡ್‌ ಪ್ರಾಡೆಕ್ಟ್ ಬಳಸಿ.

ನೀವು ಸ್ಕಿನ್‌ ಕೇರ್‌ ಪ್ರಾಡೆಕ್ಟ್‌ ತೆಗೆದುಕೊಳ್ಳುವುದಾದರೆ ಈ ಅಂಶ ಗಮನಿಸಿ

ಹೈಯಲುರೋನಿಕ್ ಆಮ್ಲ: ಹೈಡ್ರೇಟರ್

ಗ್ಲಿಸರಿನ್‌: ಹೈಡ್ರೇಟರ್

ಲೋಳೆಸರ: ಹೈಡ್ರೇಟರ್

ಜೇನು: ಹೈಡ್ರೇಟರ್

ನಟ್, ಬಾದಾಮಿ ಎಣ್ಣೆ, ತೆಂಗಿನೆಣ್ಣೆ: ಮಾಯಿಶ್ಚರೈಸರ್

ಶಿಯಾ ಬಟರ್: ಮಾಯಿಶ್ಚರೈಸರ್

ಪ್ಲ್ಯಾಂಟ್ ಆಯಿಲ್, ಜೊಜೊಬಾ ಆಯಿಲ್, ಟೀ ಟ್ರೀ ಆಯಿಲ್: ಮಾಯಿಶ್ಚರೈಸರ್

ಮಿನರಲ್ ಆಯಿಲ್ ಆಯಿಲ್: ಮಾಯಿಶ್ಚರೈರ್

ಲನೊಲಿನ್: ಮಾಯಿಶ್ಚರೈಸರ್

ಲ್ಯಾಕ್ಟಿಕ್ ಆಮ್ಲ: ಹೈಡ್ರೇಟರ್

English summary

Do You Know Hydrating and Moisturizing Aren’t the Same for Your Skin

Skin Care: Do you Hydrating and Moisturizing Aren’t the Same in skin care, know the difference, read on....
Story first published: Monday, November 21, 2022, 19:03 [IST]
X
Desktop Bottom Promotion