Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಕಪ್ಪಾಗಿರುವ ತೊಡೆಗೆ ಉತ್ತಮ ಮನೆಮದ್ದುಗಳು
ಸೌಂದರ್ಯವೆಂದರೆ ಅದು ಸಂಪೂರ್ಣ ದೇಹವನ್ನು ಅವಲಂಬಿಸಿರುವುದು. ಇದರಲ್ಲಿ ಯಾವುದೇ ಒಂದು ಭಾಗವು ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಆಗ ಅದನ್ನು ಪರಿಪೂರ್ಣ ಸೌಂದರ್ಯ ಎಂದು ಹೇಳಲು ಆಗದು. ಮುಖ, ಕುತ್ತಿಗೆ ಹಾಗೂ ಕೈಕಾಲುಗಳಂತೆ ಕೆಲವೊಂದು ಅಂಗಗಳು ತುಂಬಾ ಮಹತ್ವದ್ದಾಗಿರುವುದು. ಆದರೆ ಇವು ಯಾವಾಗಲೂ ಮುಚ್ಚಲ್ಪಟ್ಟಿರುವ ಕಾರಣದಿಂದಾಗಿ ಹೆಚ್ಚಿನವರು ಇದರ ಕಡೆಗೆ ಕಾಳಜಿ ವಹಿಸಲ್ಲ.

ಮುಖ್ಯವಾಗಿ ತೊಡೆಸಂಧುಗಳು ಕಪ್ಪಾಗುವುದು ಕೇವಲ ಮಹಿಳೆಯರು ಮಾತ್ರವಲ್ಲದೆ, ಪುರುಷರಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ತೊಡೆ ಒಳಭಾಗವು ಕಪ್ಪಾಗಲು ಹಲವಾರು ಕಾಣಗಳು ಇರಬಹುದು. ಇದರಲ್ಲಿ ಮುಖ್ಯವಾಗಿ ಚರ್ಮದ ಉಜ್ಜುವಿಕೆ, ಹಾರ್ಮೋನ್ ಅಸಮತೋಲನ ಹಾಗೂ ಬೊಜ್ಜು ಉಲ್ಲೇಖಿಸಬಹುದಾದ ಕೆಲವು ಕಾರಣಗಳು.
ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಯಾವುದೇ ಪರಿಹಾರ ಬಯಸಿದ್ದರೆ ಆಗ ನೀವು ಕಪ್ಪು ಕಲೆಗಳನ್ನು ಬಿಳಿಯಾಗಿಸುವಂತಹ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳಬೇಕು. ಅಂತಹ ಮನೆಮದ್ದುಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.

ತೆಂಗಿನೆಣ್ಣೆ ಮತ್ತು ಲಿಂಬೆರಸ
ವರ್ಣ ಕುಂದಿರುವುದನ್ನು ನಿವಾರಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. ದರಲ್ಲಿ ಇರುವಂತಹ ವಿಟಮಿನ್ ಸಿ ಅದ್ಭುತವಾಗಿ ಕೆಲಸ ಮಾಡುವುದು. ಹಾನಿಗೀಡಾಗಿರುವ ಚರ್ಮದ ಅಂಗಾಂಶಗಳನ್ನು ಇದು ಸರಿಪಡಿಸುವುದು. ತೆಂಗಿನೆಣ್ಣೆ ಜತೆಗೆ ಲಿಂಬೆರಸ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಸ್ನಾನ ಮಾಡಿ.

ಅಡುಗೆ ಸೋಡಾ
ಉಜ್ಜುವಿಕೆಯಿಂದಾಗಿ ಚರ್ಮವು ತುಂಬಾ ಗಡುಸಾಗುವುದು. ಇದಕ್ಕಾಗಿ ಅಡುಗೆ ಸೋಡಾ ಮತ್ತು ನೀರನ್ನು ಬಳಸಿಕೊಳ್ಳಬಹುದು. ಇದು ಚರ್ಮದ ಮೇಲ್ಪದರವನ್ನು ಕಿತ್ತುಹಾಕುವುದು. 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ. ಕೆಲವೊಂದು ಚರ್ಮಕ್ಕೆ ಅಡುಗೆ ಸೋಡಾವು ವ್ಯತಿರಿಕ್ತ ಪರಿಣಾಮ ಬೀರಬಹುದು.

ಅಲೋವೆರಾ
ಅಲೋವೆರಾವು ಚರ್ಮಕ್ಕೆ ಅದ್ಭುತವನ್ನು ಉಂಟು ಮಾಡಲಿದೆ. ಇದು ಕಿರಿಕಿರಿ ಉಂಟು ಮಾಡುವ ಸಮಸ್ಯೆ ನಿವಾರಿಸುವುದು. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ನೆನೆಯಲಿ. ಲೋಳೆಯಲ್ಲಿ ಅಲೊಯಿನ್ ಎನ್ನುವ ಅಂಶವಿದೆ ಮತ್ತು ಇದು ಚರ್ಮದ ಬಣ್ಣವನ್ನು ಕಾಂತಿಯುತವಾಗಿಸುವುದು. ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡಿ.

ಆಲೂಗಡ್ಡೆ ತುಂಡು
ಆಲೂಗಡ್ಡೆಯನ್ನು ಕತ್ತರಿಸಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಾಲ ಹಾಗೆ ಉಜ್ಜಿಕೊಳ್ಳಿ. ಆಲೂಗಡ್ಡೆಯಲ್ಲಿ ಕ್ಯಾಟೆಕೊಲೇಸ್ ಎನ್ನುವ ಅಂಶಿದೆ ಮತ್ತು ಇದು ಚರ್ಮದ ವಿನ್ಯಾಸವನ್ನು ಉತ್ತಮಪಡಿಸಲು ನೆರವಾಗುವುದು.

ಮಸೂರ (ಬೇಳೆ ಕಾಳು)
ಮಸೂರವನ್ನು ನೀವು ರಾತ್ರಿಯಿಡಿ ಹಾಗೆ ನೆನಸಲು ಹಾಕಿ. ಇದರ ಬಳಿಕ ಹಾಲು ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಹಚ್ಚಿಕೊಂಡು 15-20 ನಿಮಿಷ ಹಾಗೆ ಬಿಡಿ. ಇದರ ಬಳಿಕ ತೊಳೆಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಕಾಂತಿ ನೀಡುವುದು.



Click it and Unblock the Notifications
