For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಅತ್ಯಗತ್ಯವಾದ ಆರು ಸಲಹೆಗಳು

|

ಬೇಸಿಗೆಯಲ್ಲಿ ಸೌಂದರ್ಯಕ್ಕಾಗಿ ಉಪಯುಕ್ತ ಸಲಹೆಗಳು ಯಾವುದಾದರು ಇವೆಯಾ? ಹೌದು, ಈ ಋತುವಿನಲ್ಲಿ ಬಹುತೇಕ ಮಂದಿ ಬೀಚಿನಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಅಥವಾ ಈಜುಕೊಳದಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಒಂದು ವೇಳೆ ನೀವು ಚಾರಣ ಪ್ರಿಯರಾಗಿದ್ದಲ್ಲಿ. ಬೇಸಿಗೆಯು ನಿಮಗೆ ಹೇಳಿ ಮಾಡಿಸಿದ ಕಾಲವಾಗಿರುತ್ತದೆ. ಆದರೆ ಬಿಸಿಯಾದ ಹವಾಮಾನವು ನಿಮ್ಮ ತ್ವಚೆ ಮತ್ತು ಕೂದಲಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರ ಜೊತೆಗೆ ನಿಮಗೆ ಬೆವರು ಸಹ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಯಾವಾಗ ನೀವು ಬೆವರು ಮತ್ತು ಬಿಸಿಲಿಗೆ ಮೈ ಒಡ್ಡುತ್ತೀರೋ, ಆಗ ಭಾರೀ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಇವೆರಡು ನಿಮ್ಮ ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ನಿಮ್ಮನ್ನು ನೀವು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯ. ಅದರಲ್ಲೂ ಈಗ ಆರ್ದ್ರತೆ ಹೆಚ್ಚಾಗಿರುತ್ತದೆ. ಬೆವರು ತೀರಾ ಬರುತ್ತ ಇರುತ್ತದೆ. ಆದರೆ ಇಂತಹ ಸಮಸ್ಯೆಗಳಿಂದ ಪಾರಾಗಲು ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಬನ್ನಿ ಬೇಸಿಗೆಯನ್ನು ಎದುರಿಸಲು ಸಜ್ಜಾಗಿ. ಬೇಸಿಗೆಗಾಗಿ ಕೆಲವೊಂದು ಸೌಂದರ್ಯದ ಸಲಹೆಗಳು ಇಲ್ಲಿದೆ ನೋಡಿ.. ಮುಂದೆ ಓದಿ

ಆಗಾಗ ಸತ್ತ ಜೀವಕೋಶಗಳನ್ನು ನಿವಾರಿಸುತ್ತಿರಿ

ಆಗಾಗ ಸತ್ತ ಜೀವಕೋಶಗಳನ್ನು ನಿವಾರಿಸುತ್ತಿರಿ

ನಮ್ಮ ತ್ವಚೆಯ ಹೊರಪದರದ ಜೀವಕೋಶಗಳು ಸತತವಾಗಿ ಸಾಯುತ್ತಿರುತ್ತವೆ ಹಾಗೂ ಬಳಿಕ ಒಣಗಿ ಪುಡಿಯಂತೆ ಹೊರದರದಕ್ಕೆ ಅಂಟಿಕೊಂಡಿರುತ್ತವೆ. ಇದನ್ನು ನಿವಾರಿಸುವ ಕ್ರಿಯೆಗೆ ಎಕ್ಸ್ ಫೋಲಿಯೇಶನ್ ಎಂದು ಕರೆಯುತ್ತಾರೆ. ಈ ಪದರವನ್ನು ಕೆರೆದು ತೆಗೆಯುವುದು ತುಂಬ ಅಗತ್ಯ. ಏಕೆಂದರೆ ಇವು ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಕಲ್ಮಶಗಳ ನಿವಾರಣೆಯಾಗದಂತೆ ತಡೆಯುತ್ತವೆ. ಹಾಗಾಗಿ ಆಗಾಗ ಈ ಕ್ರಿಯೆಯನ್ನು ನಡೆಸುತ್ತಿದ್ದರೆ ತ್ವಚೆಗೆ ನೀವು ನೀಡುವ ಇತರ ಆರೈಕೆಗಳಾದ ತೇವಕಾರಕ ಮತ್ತು ಟೋನರ್ ಗಳ ಲೇಪನದ ಪ್ರಯೋಜನವನ್ನು ತ್ವಚೆಯ ಅಡಿಯ ಭಾಗದಲ್ಲಿಯೂ ಪಡೆಯಬಹುದಾಗಿದೆ.

ಯಾವಾಗ ನಿರ್ವಹಿಸಬೇಕು?

ಯಾವಾಗ ನಿರ್ವಹಿಸಬೇಕು?

ನೀವು ಮೇಕಪ್ ಮಾಡುವ ಮುನ್ನ ಪ್ರಥಮವಾಗಿ ನಡೆಸಬೇಕು. ಬಳಿಕ ಟೋನರ್, ತೇವಕಾರಕ (ಮಾಯಿಶ್ಚರೈಸರ್), ಎಸ್ ಪಿ ಎಫ್ ಮತ್ತು ಅಂತಿಮ ಮೇಕಪ್ ಈ ಕ್ರಮವನ್ನೇ ಅನುಸರಿಸಬೇಕು

ಟಿಪ್ಪಣಿ: ಸತ್ತ ಜೀವಕೋಶಗಳನ್ನು ನಿವಾರಿಸಿ ಸ್ವಚ್ಛಗೊಳಿಸಿದ ತ್ವಚೆಯ ಮೇಲೆ ಧರಿಸಿದ ಮೇಕಪ್ ಹೆಚ್ಚು ಹೊತ್ತು ಇರುತ್ತದೆ.

ಮರೆಯದಿರಿ: ಸತ್ತ ಜೀವಕೋಶಗಳನ್ನು ನಿವಾರಿಸಿ ಸ್ವಚ್ಛಗೊಳಿಸಿದ ಬಳಿಕ hydrating body cream ಹಚ್ಚಿಕೊಳ್ಳಿ. ಈ ಮೂಲಕ ತ್ವಚೆಯ ಅಡಿಗೂ ಆರ್ದ್ರತೆ ದೊರಕುತ್ತದೆ ಹಾಗೂ ಮೇಕಪ್ ನಿವಾರಿಸುವವರೆಗೂ ಗಾಳಿಯಿಂದ ಲಭಿಸದ ಆರ್ದ್ರತೆಯ ಕೊರತೆಯನ್ನು ತುಂಬುತ್ತದೆ. ಬಳಿಕವೇ ಎಸ್ ಪಿ ಎಫ್ ಹಚ್ಚಿಕೊಳ್ಳಿ. (ಈ ವಿಧಾನವನ್ನು FDA ಸಲಹೆ ಮಾಡಿದೆ)

ತ್ವಚೆಗೆ ಹೆಚ್ಚಿನ ಆದ್ರತೆ ಒದಗಿಸಿ

ತ್ವಚೆಗೆ ಹೆಚ್ಚಿನ ಆದ್ರತೆ ಒದಗಿಸಿ

ಹೇಗೆ: ಈ ಕಾರ್ಯಕ್ಕೆಂದೇ ಕೆಲವು ಪ್ರಸಾಧನಗಳು ಲಭ್ಯವಿವೆ. intensive masqueಇದರಲ್ಲಿ ಒಂದಾಗಿದ್ದು ವಾರದಲ್ಲಿ ಒಂದು ಅಥವಾ ಎರಡು ಬಾರಿ ಉಪಯೋಗಿಸಲು ಯೋಗ್ಯವಾಗಿವೆ. Boostersಎಂಬ ಇನ್ನೊಂದು ಪ್ರಸಾಧನವೂ ಉತ್ತಮ ಉಡುಗೊರೆಯಾಗಿದೆ ಹಾಗೂ ವಿಶೇಷವಾಗಿ ತೇವಕಾರಕವನ್ನು ಹಚ್ಚಿಕೊಳ್ಳುವ ಮುನ್ನ ಹಚ್ಚಿಕೊಳ್ಳಬಹುದಾಗಿದೆ. ಟೋನರ್ ಗಳೂ ಸಾಕಷ್ಟು ಪ್ರಮಾಣದಲ್ಲಿ ಆದ್ರತೆಯನ್ನು ಒದಗಿಸುತ್ತವೆ ಹಾಗೂ ಸೂಕ್ಷ್ಮರಂಧ್ರಗಳು ಸ್ವಚ್ಛಗೊಳ್ಳಲೂ ನೆರವಾಗುತ್ತವೆ.

ಟಿಪಣಿ: ನೀವು ಕೆಲಸದಲ್ಲಿದ್ದಾಗ, ಕಾರು, ಜಿಮ್ ಅಥವಾ ವಿಮಾನದಲ್ಲಿದ್ದಾಗಲೂ ಟೋನರ್ ಬಳಸಬಹುದು. ಇದಕ್ಕಾಗಿ revitalizing toner spritz ಎಂಬ ಉಪಕರಣವನ್ನು ಬಳಸಿ.

ಸ್ವಚ್ಛ ನೀರನ್ನು ಕುಡಿಯಿರಿ

ಸ್ವಚ್ಛ ನೀರನ್ನು ಕುಡಿಯಿರಿ

ಏಕೆ? ಹೆಚ್ಚು ಹೊತ್ತು ಹೊರಗೇ ಇರಬೇಕಾದ ಸಂದರ್ಭ ಎದುರಾದರೆ ಮತ್ತು ಈ ಸಮಯದಲ್ಲಿ ನೀವು ಹೆಚ್ಚಿನ ತಾಪಮಾನದಲ್ಲಿಯೇ ಕಳೆಯಬೇಕಾದರೆ ನೀವು ಹೆಚ್ಚಿನ ಆದ್ರತೆಯನ್ನು ಕಳೆದುಕೊಳ್ಳುತ್ತೀರಿ. ಪರಿಣಾಮವಾಗಿ ನಿಮಗೆ ತಲೆನೋವು, ತಲೆತಿರುಗುವಿಕೆ, ಗೊಂದಲ ಮೊದಲಾದವು ಎದುರಾಗುತ್ತವೆ.

ಇದಕ್ಕಾಗಿ ಏನು ಮಾಡಬಹುದು: ನಿತ್ಯವೂ ಎಂಟು ಲೋಟಗಳಷ್ಟು ಸ್ವಚ್ಛ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಆರ್ದ್ರತೆಯ ಸಮತೋಲನವನ್ನು ಕಾಯ್ದುಕೊಳ್ಳಬಹುದು ಹಾಗೂ ಪರಿಣಾಮವಾಗಿ ಚರ್ಮದ ಅಡಿಯಿಂದ ಕಲ್ಮಶಗಳು ಹೊರಹಾಕಲು ಮತ್ತು ಆರೋಗ್ಯಕರ ತ್ವಚೆ ಹೊಂದಲು ಸಾಧ್ಯವಾಗುತ್ತದೆ. ಟಿಪ್ಪಣಿ: ಒಂದು ವೇಳೆ ನೀವು ಕೆಫೀನ್ ಇರುವ ಪೇಯಗಳನ್ನು ಸೇವಿಸಿದರೆ ನಿಮ್ಮ ದಿನದ ಕುಡಿಯುವ ನಿರಿನ ಅಗತ್ಯತೆ ಮೂರು ಪಟ್ಟು ಹೆಚ್ಚಾಗುತ್ತದೆ.

ಅನುಮಾನವಿದ್ದರೆ ಇನ್ನೊಮ್ಮೆ ಹಚ್ಚಿ, ಮತ್ತೊಮ್ಮೆಯೂ ಹಚ್ಚಿ.

ಅನುಮಾನವಿದ್ದರೆ ಇನ್ನೊಮ್ಮೆ ಹಚ್ಚಿ, ಮತ್ತೊಮ್ಮೆಯೂ ಹಚ್ಚಿ.

ಏಕೆ: ಸೂರ್ಯನ ಬೆಳಕಿಗೆ ಒಡ್ಡಬೇಕಾದ ಸಂದರ್ಭ ಎದುರಾದರೆ ಸನ್ ಸ್ಕ್ರೀನ್ ಹಚ್ಚಿಕೊಳ್ಳದೇ ಹೊರಹೋಗಲೇಬಾರದು. ಇದಕ್ಕೂ ಮುನ್ನ ಸಾಕಷ್ಟು ಪ್ರಮಾಣದಲ್ಲಿ ಬಿಸಿಲಿಗೆ ಒಡ್ಡುವ ತ್ವಚೆಯ ಭಾಗಗಳಿಗೆ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೋಗಬೇಕು. ಅಲ್ಲದೇ ನಿಮ್ಮ ಪರ್ಸಿನಲ್ಲಿಯೂ ಈ ಪ್ರಸಾದನವನ್ನಿರಿಸಿಕೊಂಡು ಆಗಾಗ ಹಚ್ಚಿಕೊಳ್ಳುತ್ತಲೇ ಇರಬೇಕು. ಅಧ್ಯಯನಗಳ ಪ್ರಕಾರ ಗಾಢ ಚರ್ಮ ಹೊಂದಿರುವ ಮಹಿಳೆಯರಿಗೆ ಈ ಅಭ್ಯಾಸದ ಕೊರತೆಯೇ ಪ್ರಮುಖ ಕಾರಣವಾಗಿದೆ. ಎಷ್ಟು ಬೇಕು? ಮುಖದ ತ್ವಚೆಗೆ ಹಚ್ಚಿಕೊಳ್ಳಲಿಕ್ಕೆ ಒಂದು ಚಿಕ್ಕ ಚಮಚ ಸಾಕು. ಉಳಿದಂತೆ ಬಿಸಿಲಿಗೆ ಒಡ್ಡುವ ತ್ವಚೆಯ ಭಾಗವನ್ನು ಅನುಸರಿಸಿ ಚಿಕ್ಕ ಲೋಟದಷ್ಟು ಪ್ರಮಾಣವನ್ನು ಬಳಸಬೇಕಾಗಿ ಬರಬಹುದು. ಮತ್ತೊಮ್ಮೆ ಎಂದರೆ ಹೇಗೆ: ಬಿಸಿಲಿನಲ್ಲಿಯೇ ಕಾಲ ಕಳೆಯಬೇಕಾದ ಸಂದರ್ಭದಲ್ಲಿ ಪ್ರತಿ ಎರಡು ಘಂಟೆಗಳಿಗೊಮ್ಮೆಯಾದರೂ ಮತ್ತೊಮ್ಮೆ ಹಚ್ಚಿಕೊಳ್ಳಬೇಕು.

ಟಿಪ್ಪಣಿ: ಬೆಳಗ್ಗಿನ ಮತ್ತು ಸಂಜೆಯ ಸೂರ್ಯನ ಕಿರಣಗಳು ಹೆಚ್ಚು ಹಾನಿಕರವಲ್ಲ ಆದರೆ ನಡುಮದ್ಯಾಹ್ನದ ಬಿಸಿಲು ಅತಿ ಮಾರಕ. ಹಾಗಾಗಿ ಈ ಸಮಯದಲ್ಲಿ ಬಿಸಿಲಿಗೆ ಹೋಗುವುದನ್ನು ಆದಷ್ಟೂ ತಪ್ಪಿಸಿ ಬೆಳಗ್ಗಿನ ಮತ್ತು ಸಂಜೆಯ ವೇಳೆಗೇ ಹೊರಗಿರಲು ಪ್ರಯತ್ನಿಸಿ.

ಬೋನಸ್: ಇಂದು ತ್ವಚೆಯ ಆರೈಕೆಗೆ ಅತ್ಯುತ್ತಮ ಗುಣಮಟ್ಟದ ಪ್ರಸಾದನಗಳು ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳಲ್ಲಿ ಲಭ್ಯವಿವೆ. ಅಂದರೆ ನಿಮಗೆ ತೈಲರಹಿತ, ಲೇಪದಂತೆ ಹಚ್ಚಿಕೊಳ್ಳಬಹುದಾದ, ಹೆಚ್ಚಿನ ಮೃದುಕಾರಕ ಗುಣವಿರುವ (ಒಣತ್ವಚೆಯವರಿಗೆ) ಅಥವಾ ಸೂಕ್ಷ್ಮಸಂವೇದಿ ತ್ವಚೆಯ ವ್ಯಕ್ತಿಗಳಿಗೆ ರಾಸಾಯನಿಕ ಮುಕ್ತ ಪ್ರಸಾದನಗಳು ಲಭ್ಯವಿವೆ.

ತಜ್ಞರು ಸಲಹೆ ಮಾಡುವ ಪ್ರಸಾದನಗಳು: Oil Free Matte SPF30, Super Sensitive Shield SPF30.

ಹೆಚ್ಚಿನ ಸಮಯ ಬಿಸಿಲಿಗೆ ಒಡ್ಡಿದ್ದ ತ್ವಚೆಗೆ ಆರೈಕೆ ನೀಡಿ

ಹೆಚ್ಚಿನ ಸಮಯ ಬಿಸಿಲಿಗೆ ಒಡ್ಡಿದ್ದ ತ್ವಚೆಗೆ ಆರೈಕೆ ನೀಡಿ

ಸಂದರ್ಭ: ಒಂದು ವೇಳೆ ಸನ್ ಸ್ಕ್ರೀನ್ ಹಚ್ಚಿಕೊಳ್ಳಲು ಮರೆತೇ ಹೋಗಿದ್ದರೆ ಅಥವಾ ಸಾಕಷ್ಟು ಹಚ್ಚಿಕೊಳ್ಳದೇ ಇದ್ದರೆ ಅಥವಾ ಬಿಸಿಲಿಗೆ ಒಡ್ಡಿಕೊಳ್ಳಬೇಕಾದ ಸಂದರ್ಭ ಅನಿರೀಕ್ಷಿತವಾಗಿದ್ದರೆ:

ಏನು ಮಾಡಬೇಕು?: ಕಾರಣವೇನೇ ಇದ್ದರೂ ಸರಿ, ಬಿಸಿಲು ನಿಮ್ಮ ಯಾವುದೇ ನೆಪಕ್ಕೆ ಕಾಯದೇ ತನ್ನ ಪ್ರಭಾವವನ್ನು ಬೀರಿ ತ್ವಚೆಗೆ ಸಾಕಷ್ಟು ಘಾಸಿಯಾಗಿರುತ್ತದೆ. ಆದರೆ ಈಗ ಇದಕ್ಕೆ ಚಿಂತೆ ಬೇಡ. ಇದಕ್ಕೂ ಕೆಲವು ಪ್ರಸಾದನಗಳು ಲಭ್ಯವಿವೆ. Super-soothing botanicals ಹಾಗೂ cooling gels ಎಂಬ ಪ್ರಸಾಧನಗಳು ಕೆಂಪಗಾಗಿರುವ ಮತ್ತು ಉರಿಯೂತಕ್ಕೆ ಒಳಗಾಗಿರುವ ತ್ವಚೆಗೆ ಉತ್ತಮ ಆರೈಕೆ ನೀಡಿ ಹೊರಚರ್ಮ ಪದರದಂತೆ ಏಳುವುದನ್ನು ತಡೆಯುತ್ತವೆ.

ಹೇಗೆ?: ಬಿಸಿಲಿಗೆ ಒಡ್ಡಿದ್ದ ಅಷ್ಟೂ ಭಾಗದ ತ್ವಚೆಗೆ ಈ ಪ್ರಸಾದನವನ್ನು ಸಾಕಷ್ಟು ಪ್ರಮಾಣದಲ್ಲಿ ಹಚ್ಚಿ. ಅದರಲ್ಲೂ ಯಾವಾಗ ಚರ್ಮದಲ್ಲಿ ನಸುಗುಲಾಬಿ ಬಣ್ಣ ಕಂಡುಬಂದಿತೋ ಆಗಲೇ ಹಚ್ಚಿಕೊಳ್ಳುವುದು ವಿಹಿತ.

ಸುರಕ್ಷತಾ ಕ್ರಮ: ಒಂದು ವೇಳೆ ಬಿಸಿಲಿನ ಪ್ರಭಾವದಿಂದ ಸೆಖೆಗುಳ್ಳೆ ಏನಾದರೂ ಎದ್ದಿತೋ, ಆಗ ನಿಮ್ಮ ತೊಂದರೆಗಳು ದುಪ್ಪಟ್ಟಲ್ಲ, ಹಲವಾರು ಪಟ್ಟು ಹೆಚ್ಚುತ್ತದೆ. ತಕ್ಷಣವೇ ವೈದ್ಯರ ನೆರವು ಪಡೆದು ಈ ಸ್ಥಿತಿ ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ವರ್ಷಕ್ಕೊಮ್ಮೆಯಾದರೂ ಚರ್ಮವೈದ್ಯರಿಂದ ತಪಾಸಣೆಗೊಳಪಟ್ಟು carcinomas ಹಾಗೂ malignant melanoma ಮೊದಲಾದ ಸ್ಥಿತಿಗಳು ಎದುರಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಆಗಾಗ ನಿಮ್ಮ ತ್ವಚೆಯನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳುತ್ತಾ ಯಾವುದೇ ಅಸಹಜ ಬೆಳವಣಿಗೆ ಅಥವಾ ಬದಲಾವಣೆಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾ ಇರಬೇಕು.

ಬಿಸಿಲಿನ ಪ್ರಭಾವದಿಂದಾದ ಘಾಸಿಯನ್ನು ಸರಿಪಡಿಸಿ ಆರೈಕೆ ನೀಡಿ

ಬಿಸಿಲಿನ ಪ್ರಭಾವದಿಂದಾದ ಘಾಸಿಯನ್ನು ಸರಿಪಡಿಸಿ ಆರೈಕೆ ನೀಡಿ

ಘಾಸಿಗೇನು ಕಾರಣ: ಸೂರ್ಯನ ಬೆಳಕಿನಲ್ಲಿರುವ ಅತಿನೇರಳೆ ಕಿರಣಗಳು ಚರ್ಮದ ವರ್ಣದ್ರವ್ಯಗಳನ್ನು ಪ್ರಚೋದಿಸಿ ಇವು ಗಾಢವಾಗಲು ಕಾರಣವಾಗುತ್ತವೆ. ಪರಿಣಾಮವಾಗಿ ಬಿಸಿಲಿಗೆ ಒಡ್ಡಿದ್ದ ಭಾಗದ ತ್ವಚೆ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗೂ ಹೊರಚರ್ಮ ವಿಸ್ತರಿಸಿ ಸೆರಿಗೆಗಳು ಬಿದ್ದು ಚರ್ಮ ಒರಟಾಗುತ್ತದೆ. ಸನ್ ಸ್ಕ್ರೀನ್ ರಕ್ಷಣೆಯಿಲ್ಲದ ತ್ವಚೆಯ ಮೇಲೆ ಸೂರ್ಯನ ಬೆಳಕು ನೇರವಾಗಿ ಬಿದ್ದಾಗ ತ್ವಚೆಯ ಮೇಲೆ ಕೆಲವಾರು ಪ್ರಭಾವಗಳು ಉಂಟಾಗುತ್ತವೆ .(ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಕಿಣ್ವಗಳ ನಷವನ್ನೂ ಸೇರಿಸಿ)ಪರಿಣಾಮವಾಗಿ ಉರಿಯೂತ, ಕ್ರಿಯಾಶೀಲ ಆಮ್ಲಜನಕ ಕಣಗಳ ಉತ್ಪಾದನೆ (ಇದು ಹೊಸ ಜೀವಕೋಶಗಳ ಬೆಳವಣಿಗೆಗೆ ಅಗತ್ಯ) ಹಾಗೂ ಕಿಣ್ವಗಳನ್ನು ನಾಶಪಡಿಸುವ ಕೊಲ್ಯಾಜೆನ್ ಉತ್ಪಾದನೆಗೆ ಪ್ರಚೋದನೆ ಇತ್ಯಾದಿ.

ಏನು ಮಾಡಬೇಕು? ಬಿಸಿಲಿಗೆ ಒಡ್ಡಿದ್ದ ಸಮಯ ಅಲ್ಪವೇ ಆಗಿರಬಹುದು, ಆದರೆ ಘಾಸಿಯಂತೂ ಆಗಿಯೇ ಇರುತ್ತದೆ. ಹೀಗಾಗಿರುವುದು ಖಚಿತವಾದರೆ ತಕ್ಷಣವೇ ತ್ವಚೆಗೆ ಆಂಟಿ-ಏಜಿಂಗ್ ಎಂಬ ವೈವಿಧ್ಯವುಳ್ಳ ಪ್ರಸಾದನಗಳನ್ನು ಬಳಸಿ ಬಿಸಿಲಿನ ಪ್ರಭಾವದಿಂದಾದ ಪರಿಣಾಮವನ್ನು ಹಿಂದಿರುಗಿಸಬಹುದು. ಆದರೆ ಹೀಗೆ ತ್ವಚೆಯನ್ನು ಹಿಂದಿನ ಸ್ಥಿತಿಗೆ ತಂದ ಬಳಿಕ ಮತ್ತೊಮ್ಮೆ ಬಿಸಿಲಿಗೆ ಒಡ್ಡಿಕೊಳ್ಳುವ ತಪ್ಪು ಮಾಡಬಾರದು ಹಾಗೂ ಈ ಪ್ರಸಾದನಗಳ ಬಳಕೆಯನ್ನು ಮುಂದುವರೆಸುತ್ತ್ತಾಸಂಪೂರ್ಣ ರಕ್ಷಣೆ ಪಡೆಯಬೇಕು.

English summary

Top 6 summer skin tips

As you prepare to show more skin, get ready to face the sun's rays with our top 6 summer skin tips!
X