For Quick Alerts
ALLOW NOTIFICATIONS  
For Daily Alerts

ಆಯಾಸವಾದಾಗ ತ್ವಚೆಯ ಸೌಂದರ್ಯ ಹಾಳಾಗುತ್ತಿದೆಯೇ? ಈ ಟಿಪ್ಸ್ ಅನುಸರಿಸಿ ಸಾಕು!

|

ನಿತ್ಯದ ಕಾರ್ಯದಿಂದ ಬಳಲಿ ಆಯಾಸವಾಗಿರುವ ಸಮಯದಲ್ಲಿ ಅಥವಾ ನಿದ್ದೆಯಿಲ್ಲದೇ ಸುಸ್ತಾಗಿದ್ದಾಗ ಇದರ ಪರಿಣಾಮ ನೇರವಾಗಿ ತ್ವಚೆಯ ಮೇಲೆ ಕಾಣಿಸಿಕೊಳ್ಳುತ್ತದೆ ಹಾಗೂ ನೋಡಿದವರು ತಕ್ಷನವೇ ನೀವು ಆಯಾಸಗೊಂಡಿದ್ದೀರಿ ಎಂದು ಗುರುತಿಸಲು ಸಾಧ್ಯವಾಗುತ್ತದೆ.

ಕೆಲಸದ ಆಯಾಸ ಅಥವಾ ನಿದ್ದೆಯ ಕೊರತೆಯಿಂದ ರಕ್ತದ ಮೂಲಕ ಆಗಮಿಸಬೇಕಾಗಿದ್ದ ಪೋಷಕಾಂಶಗಳು ಕಡಿಮೆಯಾಗುತ್ತದೆ ಹಾಗೂ ತ್ವಚೆ ನಿಸ್ತೇಜಗೊಳ್ಳುತ್ತದೆ. ಪರಿಣಾಮವಾಗಿ ತ್ವಚೆ ಕಳಾಹೀನ, ಒಣ ಹಾಗೂ ಜೋಲುಬೀಳತೊಡಗುತ್ತದೆ. ಈ ಸಮಯದಲ್ಲಿಯೂ ತ್ವಚೆ ತನ್ನ ಸಹಜ ಸೌಂದರ್ಯವನ್ನು ಕಾಪಾಡಿ ಕೊಳ್ಳಬೇಕಾದರೆ ಇಂದಿನ ಲೇಖನದಲ್ಲಿ ವಿವರಿಸಲಾದ ಸರಳ ವಿಧಾನವನ್ನು ಅನುಸರಿಸಬಹುದು ಹಾಗೂ ತ್ವಚೆ ಆದಷ್ಟೂ ಕಡಿಮೆ ನಿಸ್ತೇಜ ಹಾಗೂ ಆರೋಗ್ಯಕರವಾಗಿ ಕಾಣುವಂತೆ ಮಾಡಬಹುದು.

tired face

* ಮೊದಲು ತ್ವಚೆಗೆ ಅಗತ್ಯವಾಗಿ ಬೇಕಾದ ಆರ್ದ್ರತೆಯನ್ನು ಒದಗಿಸಬೇಕು. ತ್ವಚೆಗೆ ಆರ್ದ್ರತೆ ಸತತವಾಗಿ ಬೇಕಾಗಿದ್ದು ಆರ್ದ್ರತೆ ಸಾಕಷ್ಟಿದ್ದಾಗ ಹೆಚ್ಚು ಕಾಂತಿಯುಕ್ತವಾಗುತ್ತದೆ ಮತ್ತು ತುಂಬಿಕೊಳ್ಳುತ್ತದೆ. ಇಂದು ಈ ಕಾರ್ಯವನ್ನು ನಿರ್ವಹಿಸಲು ಮುಖಕ್ಕೆ ಹಚ್ಚಿಕೊಳ್ಳಬಹುದಾದ ತೈಲಗಳು (face oil)ಲಭ್ಯವಿವೆ, ಈ ಪ್ರಸಾದನಗಳನ್ನೂ ಬಳಸಬಹುದು.

* ತ್ವಚೆ ಜೋಲುಬೀಳತೊಡಗಿದಾಗ ಮೊದಲಿಗೆ ಭಾರೀ ಫೌಂಡೇಶನ್ ಬದಲು ತೆಳುವಾದ ಬೇಸ್ ಅಥವಾ ಮೂಲಪದರವನ್ನು ಹಚ್ಚಿಕೊಳ್ಳಬೇಕು. ಇದಕ್ಕೆ ಸೌಮ್ಯ ತೇವಕಾರಕ (tinted moisturiser or CC cream) ಲೇಪವನ್ನು ಹಚ್ಚಿಕೊಳ್ಳಬಹುದು ಹಾಗೂ ತ್ವಚೆಯ ವರ್ಣವನ್ನು ಏಕಸಮಾನವಾಗಿಸಬಹುದು.

* ಮುಖದ ಬ್ರಶ್ ಬಳಸಿ ತ್ವಚೆ ಆರೋಗ್ಯಕರವಾಗಿ ಕಾಣಿಸುವಂತೆ ನಯವಾಗಿ ಉಜ್ಜಿಕೊಳ್ಳಿ. ಬಳಿಕ ನೈಸರ್ಗಿಕ ಹಾಗೂ ನಿಮ್ಮ ತ್ವಚೆಗೆ ಒಗ್ಗಿಕೊಳ್ಳುವಂತಹ ಹಾಗೂ ಕೆನ್ನೆಯ ಮೂಳೆಭಾಗದ ಮೇಲೆ ವೃತ್ತಾಕಾರದಲ್ಲಿ ಕೊಂಚವೇ ಗಾಢವರ್ಣದ ಬಣ್ಣವನ್ನು ಹಚ್ಚಿಕೊಳ್ಳಿ.

* ಒಂದು ವೇಳೆ ಆಯಾಸದಿಂದ ನಿಮ್ಮ ಕಣ್ಣುಗಳು ಕೆಂಪಗಾಗಿದ್ದರೆ, ಇದಕ್ಕಾಗಿ ಕಣ್ಣುಗಳಿಗೆ ನವಚೈತನ್ಯ ನೀಡುವ ರಿಫ್ರೆಶಿಂಗ್ ಐ ಡ್ರಾಪ್ಸ್ ಔಷಧಿಯ ಕೆಲವು ತೊಟ್ಟುಗಳನ್ನು ಬಿಟ್ಟುಕೊಳ್ಳಿ. ಈ ದ್ರವ ಕಣ್ಣುಗಳನ್ನು ಬಿಳಿಯಾಗಿಸಿ ಪ್ರಖರಗೊಳಿಸುತ್ತದೆ. ಕಣ್ಣುಗಳ ಅಂಚುಗಳಿಗೆ ಸೂಕ್ತವರ್ಣದ ಐ ಲೈನರ್ ಗೆರೆಯನ್ನು ಸವರಿಕೊಳ್ಳುವ ಮೂಲಕ ಆಯಾಸದಿಂದ ನಿದ್ದೆಯ ಬಳಲಿಕೆ ಎದುರಾಗುವುದು ಗೊತ್ತಾಗದಂತೆ ಇರುತ್ತದೆ.

* ನಿಮ್ಮ ಕಣ್ಣುಗಳಂತೆಯೇ ತುಟಿಗಳೂ ನೀವು ಆಯಾಸಗೊಂಡಿರುವುದನ್ನು ಪ್ರಚುರಪಡಿಸುತ್ತವೆ. ಒಂದು ವೇಳೆ ತುಟಿಗಳು ಒಣಗಿ ಪಕಳೆ ಏಳುವಂತಿದ್ದರೆ, ತುಟಿಗಳ ಹೊರಭಾಗಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸೂಕ್ತ ಪ್ರಸಾದನ ಬಳಸಿ ಉಜ್ಜಿ ನಿವಾರಿಸಿ. ಬಳಿಕ ಸೂಕ್ತ ವರ್ಣದ ಲಿಪ್ ಬಾಮ್ ಹಚ್ಚಿಕೊಂಡು ಅಗತ್ಯವಿರುವ ಆರ್ದ್ರತೆ ಒದಗಿಸಿ.

English summary

Tips to make your face glow when you're tired

When you're tired or sleep-deprived, it starts to show on the skin. Being over-worked and not getting enough sleep can affect the body's blood flow and result in skin fatigue. This means your face will look dull, dry and even sallow. For such days, follow our guide on how you can make your skin look less tired and healthy.
X
Desktop Bottom Promotion