For Quick Alerts
ALLOW NOTIFICATIONS  
For Daily Alerts

ತ್ವಚೆ ಕಳಾಹೀನವಾಗಿರಲು 5 ಕಾರಣಗಳು, ಮತ್ತೆ ಪ್ರಜ್ವಲಿಸಲು ನೆರವಾಗುವ ವಿಧಾನಗಳು

|

ನಿಮ್ಮದೇ ಕೆಲವು ಹಳೆಯ ಚಿತ್ರಗಳನ್ನು ನೋಡಿದಾಗ ಅಂದಿನ ದಿನಕ್ಕೂ ಇಂದಿಗೂ ನಿಮ್ಮ ತ್ವಚೆ ಕಳಾಹೀನವಾಗಿರುವಂತೆ ಅನ್ನಿಸುತ್ತಿದೆಯೇ? ಹೌದು ಎಂದಾದರೆ ನಿಮಗೆ ಯಾವ ಬಗೆಯ ಅನುಭವವಾಗುತ್ತಿದೆ ಎಂಬುದನ್ನು ನಾವು ಊಹಿಸಬಲ್ಲೆವು. ಇದು ಕೇವಲ ನಿಮ್ಮದಲ್ಲ, ಬಹುತೇಕ ಎಲ್ಲಾ ಮಹಿಳೆಯರ ಅನುಭವವೂ ಆಗಿದೆ. ನಮ್ಮ ಶರೀರದಲ್ಲಿ ಮುಖ ಅತಿ ಪ್ರಮುಖವಾದ ಭಾಗವಾಗಿದ್ದು ನಮ್ಮ ದೇಹದಲ್ಲಿ ಏನಾಗುತ್ತಿದೆ ಎಂಬುದನ್ನು ಪ್ರಚುರಪಡಿಸುತ್ತದೆ.

ಸತ್ತ ಜೀವಕೋಶಗಳು

ತ್ವಚೆ ಕಳಾಹೀನವಾಗಲು ಪ್ರಮುಖ ಕಾರಣಗಳಲ್ಲೊಂದು ಸತ್ತ ಜೀವಕೋಶಗಳು. ನಮ್ಮ ದೇಹದ ಇತರ ಭಾಗಕ್ಕಿಂತಲೂ ಮುಖದ ತ್ವಚೆ ಹೆಚ್ಚು ಸಂವೇದಿಯಾಗಿದ್ದು ಹೊರಪದರದಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳು ತ್ವಚೆಯ ಬಣ್ಣ ಕೊಂಚ ಬೂದುಬಣ್ಣಕ್ಕೆ ತಿರುಗುವಂತೆ ಹಾಗೂ ಕಳಾಹೀನವಾಗಿಸುತ್ತದೆ. ದಿನಕಳೆಯುತ್ತಿದ್ದಂತೆ ಈ ಕಳೆ ಇನ್ನಷ್ಟು ಕುಂದುತ್ತಾ ಹೋಗುತ್ತದೆ.

ಪರಿಹಾರ

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಈ ಸತ್ತ ಜೀವಕೋಶಗಳನ್ನು ನಿವಾರಿಸುವುದೇ (exfoliation) ಇದಕ್ಕೆ ಸೂಕ್ತ ಪರಿಹಾರವಾಗಿದೆ. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರೆ ನೈಸರ್ಗಿಕ ಮತ್ತು ಮನೆಯಲ್ಲಿಯೇ ತಯಾರಿಸಿದ ಸ್ಕ್ರಬ್ ಅಥವಾ ನಿವಾರಕ ಲೇಪಗಳನ್ನು ಬಳಸಿ. ಆದರೆ ಈ ವಿಧಾನವನ್ನು ರಾತ್ರಿ ಮಲಗುವ ಮುನ್ನವೇ ಅನುಸರಿಸಿ, ಬೆಳಿಗ್ಗೆ ಬೇಡ. ಏಕೆಂದರೆ ಈ ಕಾರ್ಯ ನಿರ್ವಹಿಸಿದ ಬಳಿಕ ತ್ವಚೆ ಬಿಸಿಲಿಗೆ ಒಡ್ಡಿದರೆ ಸೂರ್ಯನ ಕಿರಣಗಳಿಂದ ಹೆಚ್ಚಿನ ಹಾನಿ ಮತ್ತು ಉರಿ ಎದುರಾಗಬಹುದು.

ತ್ವಚೆಯಲ್ಲಿ ಆರ್ದ್ರತೆಯ ಕೊರತೆ

ಆರ್ದ್ರತೆಯ ಕೊರತೆಯಿಂದಲೂ ತ್ವಚೆ ಕಳಾಹೀನವಾಗುತ್ತದೆ. ಯಾವಾಗ ಚರ್ಮದ ಒಳಪದರದಲ್ಲಿ ನೀರಿನ ಪಸೆ ಇಲ್ಲವಾಗುತ್ತದೆಯೋ ಆಗ ಹೊರ ಮತ್ತು ಒಳಪದರಗಳು ಪರಸ್ಪರ ಅಂಟುವಷ್ಟು ಹತ್ತಿರಾಗುತ್ತವೆ ಹಾಗೂ ಇದು ಚರ್ಮ ಅತಿಯಾಗಿ ಸೆಳೆದು ಕಳಾಹೀನವಾಗುತ್ತದೆ.

ಪರಿಹಾರ:

ಸಾಕಷ್ಟು ಪ್ರಮಾಣದಲ್ಲಿ ಹಾಗೂ ಸತತವಾಗಿ ನೀರನ್ನು ಕುಡಿಯುತ್ತಿರುವುದು ದೇಹದ ಇತರ ಅಂಗಗಳ ಜೊತೆಗೇ ತ್ವಚೆಗೂ ಅಗತ್ಯವಾಗಿದೆ. ಅಲ್ಲದೇ ಪ್ರತಿ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ ನಿಮ್ಮ ತ್ವಚೆಗೆ ಆರ್ದ್ರತೆ ಒದಗಿಸಲು ಸೂಕ್ತ ತೇವಕಾರಕ (ಮಾಯಿಶ್ಚರೈಸರ್) ಬಳಸಿ. ಒಂದು ವೇಳೆ ಈ ವಿಧಾನ ಅನುಸರಿಸಿದ ಬಳಿಕವೂ ತ್ವಚೆ ಒಣಗಿಯೇ ಇದ್ದರೆ ಮುಖಕ್ಕೆ ಹಚ್ಚಿಕೊಳ್ಳುವ ತೈಲ, ಸೀರಂ ಹಚ್ಚಿ ಆ ಬಳಿಕವೇ ತೇವಕಾರಕವನ್ನು ಹಚ್ಚಿಕೊಳ್ಳಿ.

Most Read: ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸುವ ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್

ಸೂರ್ಯ ಕಿರಣಗಳಿಂದಾದ ಹಾನಿ

ಸೂರ್ಯನ ಕಿರಣಗಳಿಗೆ ನೇರವಾಗಿ ಒಡ್ಡಿದ ತ್ವಚೆಯ ಭಾಗ ಅತಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಬಿಸಿಲಿಗೆ ಒಡ್ಡಿದ ಭಾಗ ಕಪ್ಪಗಾಗುವುದು ಮಾತ್ರವಲ್ಲ ಕಲೆಗಳನ್ನೂ ಮೂಡಿಸಬಹುದು. ವರ್ಷಗಳವರೆಗೆ ಹೀಗೇ ಮುಂದುವರೆಯುತ್ತಿದ್ದರೆ ಇದು ಕ್ರಮೇಣ ತ್ವಚೆಯನ್ನು ಅತಿಯಾಗಿ ಕಳಾಹೀನವಾಗಿಸಬಹುದು.

ಪರಿಹಾರ

ಬಿಸಿಲಿಗೆ ಒಡ್ಡಿಕೊಳ್ಳದಿರುವುದೇ ಪರಿಹಾರವಾದರೂ ಇದು ಬಹುತೇಕ ಅಸಾಧ್ಯವಾದ ಮಾತು. ಹಾಗಾಗಿ ಬಿಸಿಲಿಗೆ ಒಡ್ಡಿಕೊಳ್ಳುವ ಸಂದರ್ಭ ಎದುರಾಗುವ ಮುನ್ನವೇ ಬಿಸಿಲಿಗೆ ಒಡ್ಡುವ ಭಾಗದಲ್ಲಿ ಸನ್ ಸ್ಕ್ರೀನ್ ಲೇಪನವನ್ನು ಹಚ್ಚಿಕೊಂಡು ಹೊರಡಬೇಕು. ಈ ರಕ್ಷಣೆ ಇಲ್ಲದ ತ್ವಚೆಯ ಮೇಲೆ ಸೂರ್ಯನ ಬೆಳಕು ಬಿದ್ದರೆ ತ್ವಚೆಯ ಕೊಲ್ಯಾಜೆನ್ ಶಿಥಿಲಗೊಳ್ಳುತ್ತದೆ. ತ್ವಚೆಯ ಕೊಲ್ಯಾಜೆನ್ ಪ್ರಮಾಣವನ್ನು ಉತ್ತಮಗೊಳಿಸಲು ಚರ್ಮವೈದ್ಯರಲ್ಲಿ ಭೇಟಿ ನೀಡಿ ಇವರ ಸಲಹೆಯ ಮೇರೆಗೆ ರೆಟಿನಾಲ್ ತುಂಬಿರುವ ಉತ್ಪನ್ನ (retinol-infused product) ಗಳನ್ನು ಬಳಸಲು ಪ್ರಾರಂಭಿಸಿ.

ಪ್ರದೂಷಣೆ

ನಗರ ಪ್ರದೇಶದಲ್ಲಿರುವವರಿಗೆ ಪ್ರದೂಷಣೆ ಅನಿವಾರ್ಯವಾಗಿ ಎದುರಿಸಬೇಕಾದ ತೊಂದರೆಯಾಗಿದೆ. ಪ್ರದೂಷಣೆಯಿಂದಾಗಿ ತ್ವಚೆಯಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಉತ್ಪತ್ತಿಯಾಗುತ್ತವೆ ಹಾಗೂ ಇವು ತ್ವಚೆಯ ಕೊಲ್ಯಾಜೆನ್ ಅನ್ನು ಒಡೆಯುತ್ತವೆ. ಪರಿಣಾಮವಾಗಿ ಚರ್ಮದ ಬಣ್ಣ ಅಸಮವಾಗಿ ಹರಡಿರುವಂತೆ ಕಾಣತೊಡಗುತ್ತದೆ.

ಪರಿಹಾರ

ಪ್ರದೂಶಿತ ಗಾಳಿಯಲ್ಲಿ ಅಡ್ಡಾಡಿದ ಬಳಿಕ ಮನೆ ಸೇರಿದ ತಕ್ಷಣವೇ ತಣ್ಣೀರಿನಿಂದ ಮುಖ, ಕೈ, ಕುತ್ತಿಗೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಮೂಲಕ ತ್ವಚೆಯ ಮೇಲೆ ಕುಳಿತಿದ್ದ ಸೂಕ್ಷ್ಮ ಕಣಗಳನ್ನು ಮೊದಲಾಗಿ ನಿವಾರಿಸಿಕೊಳ್ಳಬೇಕು. ತಜ್ಞರು ಈ ಸಮಯದಲ್ಲಿ ಸೂಕ್ತ ಬ್ರಶ್ ಮತ್ತು ಫೇಸ್ ವಾಶ್ ಉತ್ಪನ್ನಗಳನ್ನು ಬಳಸುವಂತೆ ಸಲಹೆ ಮಾಡುತ್ತದೆ. ಈ ಮೂಲಕ ಕೇವಲ ನೀರಿನಿಂದ ತೊಳೆದುಕೊಂಡರೆ ಹೋಗದ ಅತಿ ಸೂಕ್ಷ್ಮ ಮತ್ತು ಅಂಟಿಕೊಂಡಿದ್ದ ಕಣಗಳನ್ನು ನಿವಾರಿಸಲು ಸಾಧ್ಯ. ತ್ವಚೆಯ ಆರೈಕೆಗಾಗಿ ಉತ್ತಮ ಗುಣಮಟ್ಟದ, ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಯುಕ್ತ ಸೀರಮ್ ಹಾಗೂ ಲೋಷನ್ ಗಳನ್ನು ಬಳಸಲು ಪ್ರಾರಂಭಿಸಬೇಕು.

Most Read: ಮೆಹೆಂದಿಯ ಬಣ್ಣ ಗಾಢವಾಗಿ ಬರಬೇಕೇ? ಈ ಆರು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ

ಮಾನಸಿಕ ಒತ್ತಡದಿಂದ ಬಳಲಿಕೆ

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಮಾನಸಿಕ ಒತ್ತಡವೂ ನಿಮ್ಮ ತ್ವಚೆಯನ್ನು ಕಳಾಹೀನವಾಗಿಸುತ್ತದೆ. ಮಾನಸಿಕ ಒತ್ತಡದ ಸಮಯದಲ್ಲಿ ಮೆದುಳಿನಿಂದ ಬಿಡುಗಡೆಯಾಗುವ ರಸದೂತಗಳು ರಕ್ತಪರಿಚಲನೆಯನ್ನು ಕೆಲವು ಪ್ರಮುಖ ಅಂಗಗಳಿಗೆ ಹೆಚ್ಚಾಗಿ ಪರಿಚಲಿಸುವಂತೆ ಮಾಡುತ್ತವೆ ಹಾಗೂ ಈ ಮೂಲಕ ಮುಖದ ತ್ವಚೆಗೆ ಪೂರೈಕೆಯಾಗುತ್ತಿದ್ದ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಒಂದು ವೇಳೆ ಸೂಕ್ತ ಆರೈಕೆಯ ಹೊರತಾಗಿಯೂ ತ್ವಚೆ ಕಳಾಹೀನವಾಗಿದ್ದರೆ ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು.

ಪರಿಹಾರ

ತ್ವಚೆಯನ್ನು ಕ್ಲೀನ್ಸರ್ ದ್ರಾವಣದಿಂದ ಸ್ವಚ್ಛಗೊಳಿಸಿ ತೇವಕಾರಕ ಹಚ್ಚಿಕೊಂಡ ಬಳಿಕ ತ್ವಚೆಯನ್ನು ನಯವಾಗಿ ಮಸಾಜ್ ಮಾಡಿ. ಇದರಿಂದ ತ್ವಚೆಯ ಅಡಿಯಲ್ಲಿರುವ ಸೂಕ್ಷ್ಮ ರಕ್ತನಾಳಗಳಿಗೆ ಪ್ರಚೋದನೆ ದೊರೆತು ರಕ್ತಪರಿಚಲನೆ ಹೆಚ್ಚಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ತ್ವಚೆ ಕಾಂತಿಯುಕ್ತವಾಗಲು ಸಾಧ್ಯವಾಗುತ್ತದೆ.

English summary

Reasons your skin looks dull heres how you can get the glow back

Do you know look at your old photos and often feel that your skin looks duller than before now? We feel you! One of the most common beauty problems faced by many women is that of dull skin. Your face can reflect a lot on what's going on with your body. To give you an insight.
Story first published: Friday, May 10, 2019, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X