For Quick Alerts
ALLOW NOTIFICATIONS  
For Daily Alerts

ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸುವ ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್

|

ನಮ್ಮ ಹಿರಿಯರು ಸೌಂದರ್ಯ ವೃದ್ಧಿಸಲು ಮತ್ತು ತ್ವಚೆಯ ಕಾಂತಿ ಕಾಪಾಡಲು ಬಳಸುತ್ತಿದ್ದ ಕೆಲವೊಂದು ನೈಸರ್ಗಿಕ ಸಾಮಗ್ರಿಗಳು ನಮಗೆ ಇಂದಿಗೂ ತುಂಬಾ ಲಾಭಕಾರಿ ಆಗಿ ಪರಿಣಮಿಸಿದೆ. ಅವುಗಳಿಂದಾಗಿ ನಾವು ಇಂದು ಕೂಡ ತ್ವಚೆಯ ಆರೈಕೆ ಮಾಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಕ್ರೀಮ್ ಗಳನ್ನು ಬಳಸುವುದಕ್ಕಿಂತ ತ್ವಚೆಯ ಸಮಸ್ಯೆಗಳಿಗೆ ನೈಸರ್ಗಿಕ ಸಾಮಗ್ರಿಗಳು ತುಂಬಾ ಒಳ್ಳೆಯದು. ಅದರಲ್ಲೂ ತ್ವಚೆಯಲ್ಲಿ ಮೂಡುವಂತಹ ಮೊಡವೆಗಳು, ಕಲೆಗಳೂ ಇತ್ಯಾದಿ ಸಮಸ್ಯೆಗೆ ಮನೆಮದ್ದು ಬಳಸಬೇಕು.

Honey & Milk

ಈ ಲೇಖನದಲ್ಲಿ ನಾವು ನಿಮಗೆ ನಮ್ಮ ಹಿರಿಯರು ಬಳಸಿಕೊಂಡು ಬರುತ್ತಿದ್ದ ನೈಸರ್ಗಿಕ ಮನೆಮದ್ದಿನ ಬಗ್ಗೆ ತಿಳಿಸಲಿದ್ದೇವೆ. ಈ ಫೇಸ್ ಪ್ಯಾಕ್ ನ್ನು ಬಳಸಿಕೊಂಡು ನಿಮ್ಮ ಸೌಂದರ್ಯ ವೃದ್ಧಿಸಿ ಮತ್ತು ತ್ವಚೆಯ ಕಾಂತಿ ಹೆಚ್ಚು ಮಾಡಿ. ಇಲ್ಲಿ ಹಾಲು ಮತ್ತು ಜೇನುತುಪ್ಪ ಬಳಸಿಕೊಂಡು ತ್ವಚೆಯ ಆರೈಕೆ ಮಾಡುವುದು ಹೇಗೆ ಎಂದು ತಿಳಿಯಿರಿ.

ಚರ್ಮಕ್ಕೆ ಒಳ್ಳೆಯ ಮಾಯಿಶ್ಚರೈಸ್ ನೀಡುವುದು

ಚರ್ಮಕ್ಕೆ ಒಳ್ಳೆಯ ಮಾಯಿಶ್ಚರೈಸ್ ನೀಡುವುದು

ಜೇನುತುಪ್ಪ ನಮಗೆಲ್ಲರಿಗೂ ತಿಳಿದಿರುವ ಹಾಗೆ ಚರ್ಮಕ್ಕೆ ಒಳ್ಳೆಯ ಮಾಯಿಶ್ಚರೈಸ್ ನೀಡುವುದು. ಇದು ಚರ್ಮವನ್ನು ತುಂಬಾ ನಯ ಹಾಗೂ ಸುಂದರವಾಗಿಸುವುದು ಮತ್ತು ಹಲವಾರು ರೀತಿಯ ಚರ್ಮದ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಹೆಚ್ಚಾಗಿ ಸೌಂದರ್ಯವರ್ಧಕವಾಗಿ ಬಳಸುವ ಹೆಚ್ಚಿನ ಮನೆಮದ್ದುಗಳಲ್ಲಿ ಈ ಎರಡನ್ನು ಬಳಸಲಾಗುತ್ತದೆ. ಹಾಲು ಚರ್ಮವನ್ನು ಶುದ್ಧೀಕರಿಸುವುದು ಮತ್ತು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಜೇನುತುಪ್ಪ ಮತ್ತು ಹಾಲನ್ನು ಜತೆಯಾಗಿ ಮಿಶ್ರಣ ಮಾಡಿದರೆ ಚರ್ಮದ ಪೋಷಣೆ ಹೇಗೆ ಮಾಡಬಹುದು ಎಂದು ತಿಳಿಯುವ.

ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

ಜೇನುತುಪ್ಪ ಮತ್ತು ಹಾಲಿನ ಮಿಶ್ರಣವು ನಿಮ್ಮ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡಲಿದೆ ಮತ್ತು ಕಲೆರಹಿತವಾದ ಚರ್ಮವನ್ನು ನಿಮಗೆ ನೀಡುವುದು. ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯುವ.

ಬೇಕಾಗುವ ಸಾಮಗ್ರಿಗಳು

  • ½ ಕಪ್ ಹಾಲು
  • 3-4 ಚಮಚ ಹಸಿ ಮತ್ತು ಸಾವಯವ ಜೇನುತುಪ್ಪ
  • ಏನು ಮಾಡಬೇಕು?

    •ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ಒಣಗಲು ಬಿಡಿ.

    •ಒಂದು ಪಿಂಗಾಣಿಗೆ ಹೇಳಿದಷ್ಟು ಪ್ರಮಾಣದ ಹಾಲನ್ನು ಹಾಕಿ.

    •ಇದಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

    •ಸರಿಯಾಗಿ ಇದನ್ನು ಮಿಶ್ರಣ ಮಾಡಿ ಮತ್ತು ಹಾಲಿನಲ್ಲಿ ಜೇನುತುಪ್ಪವು ಸರಿಯಾಗಿ ಕರಗಲಿ.

    •ಈ ಮಿಶ್ರಣವು ತುಂಬಾ ತೆಳುವಾಗಿರುವ ಕಾರಣದಿಂದಾಗಿ ಹತ್ತಿ ಉಂಡೆ ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಹತ್ತಿ ಉಂಡೆಯನ್ನು ಮಿಶ್ರಣದಲ್ಲಿ ಅದ್ದಿಕೊಂಡು ಮುಖ ಹಾಗೂ ಕುತ್ತಿಗೆಗೆ ಹಚ್ಚಿ.

    •2-3 ಸಲ ಈ ಮಿಶ್ರಣವನ್ನು ಸರಿಯಾಗಿ ಚರ್ಮಕ್ಕೆ ಹಚ್ಚಿಕೊಳ್ಳಿ.

    •10-15 ನಿಮಿಷ ಕಾಲ ಹಾಗೆ ಬಿಡಿ.

    •ಇದು ಒಣಗಿದೆ ಎಂದು ನಿಮಗೆ ಅನಿಸಿದಾಗ ತಣ್ಣೀರು ಬಳಸಿಕೊಂಡು ತೊಳೆಯಿರಿ.

    •ಟವೆಲ್ ಬಳಸಿಕೊಂಡು ಮುಖ ಒರೆಸಿಕೊಳ್ಳಿ.

    •ಕೊನೆಗೆ ನೀವು ರೋಸ್ ವಾಟರ್‌ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ಬಿಡಿ. ಇದು ನಿಮ್ಮ ಆಯ್ಕೆಗೆ ಬಿಟ್ಟಿರುವುದು.

    ಸರಳ ಮತ್ತು ಪರಿಣಾಮಕಾರಿ ಮುಖದ ಪ್ಯಾಕ್ ಚರ್ಮಕ್ಕೆ ಪೋಷಣೆ ನೀಡುವುದು. ಈ ಫೇಸ್ ಪ್ಯಾಕ್ ನ್ನು ನಿಯಮಿತವಾಗಿ ಬಳಸಿಕೊಂಡರೆ ಆಗ ಚರ್ಮಕ್ಕೆ ಅದು ಭಿನ್ನ ಪರಿಣಾಮ ಬೀರುವುದು. ಈ ಫೇಸ್ ಪ್ಯಾಕ್ ನಿಂದ ಸಿಗುವ ವಿವಿಧ ಲಾಭಗಳ ಬಗ್ಗೆ ನಾವು ಇಲ್ಲಿ ತಿಳಿಯುವ... ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್ ನ ಲಾಭಗಳು.

    ಚರ್ಮಕ್ಕೆ ಮಾಯಿಶ್ಚಿರೈಸ್ ಮಾಡುವುದು

    ಚರ್ಮಕ್ಕೆ ಮಾಯಿಶ್ಚಿರೈಸ್ ಮಾಡುವುದು

    ಜೇನುತುಪ್ಪವು ನೈಸರ್ಗಿಕವಾಗಿ ಚರ್ಮಕ್ಕೆ ಮಾಯಿಶ್ಚಿರೈಸ್ ಮಾಡುವುದು. ಇದು ಚರ್ಮಕ್ಕೆ ಮಾಯಿಶ್ಚಿರೈಸ್ ಮಾಡಿದ ಬಳಿಕ ಅದು ಚರ್ಮವನ್ನು ನಯ ಮತ್ತು ಸುಂದರವಾಗಿಸುವುದು. ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ನಯಗೊಳಿಸುವುದು ಮತ್ತು ಚರ್ಮವನ್ನು ಆರೋಗ್ಯ ಮತ್ತು ಶುದ್ಧೀಕರಿಸುವುದು.

    ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು

    ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು

    ಜೇನುತುಪ್ಪ ಮತ್ತು ಹಾಲು ಮೊದಲ ಸಲ ಹಚ್ಚಿಕೊಂಡ ವೇಳೆ ಅದು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಜೇನುತುಪ್ಪವು ಚರ್ಮವನ್ನು ಸುಂದರವಾಗಿಸುವುದು ಮಾತ್ರವಲ್ಲದೆ ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣವು ಚರ್ಮವನ್ನು ರಕ್ಷಿಸುವುದು ಮತ್ತು ತಾಜಾವಾಗಿಡುವುದು, ಕಾಂತಿಯುತ ಮತ್ತು ಆರೋಗ್ಯವಾಗಿಡುವುದು. ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಶುದ್ಧೀಕರಿಸುವುದು ಮತ್ತು ನೈಸರ್ಗಿಕ ಕಾಂತಿ ನೀಡುವುದು. ಈ ಫೇಸ್ ಪ್ಯಾಕ್ ಬಿಸಿಲಿನ ಕಲೆ ನಿವಾರಣೆ ಮಾಡುವುದು.

    ಚರ್ಮವನ್ನು ಶುದ್ಧೀಕರಿಸುವುದು

    ಚರ್ಮವನ್ನು ಶುದ್ಧೀಕರಿಸುವುದು

    ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಹಾನಿಕಾರಕ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುವುದು ಮತ್ತು ಇದರಿಂದ ಚರ್ಮವು ಆರೋಗ್ಯವಾಗಿಡಲು ನೆರವಾಗುವುದು. ಹಾಲು ಚರ್ಮವನ್ನು ನೈಸರ್ಗಿಕವಾಗಿ ಶುದ್ಧೀಕರಿಸುವುದು. ಇದರಲ್ಲಿ ಇರುವಂತಹ ಅಲ್ಪಾ ಹೈಡ್ರಾಕ್ಸ್ ಆಮ್ಲವು ಸತ್ತ ಚರ್ಮವನ್ನು ತೆಗೆದುಹಾಕುವುದು ಮಾತ್ರವಲ್ಲದೆ, ಧೂಳು ಮತ್ತು ಕಲ್ಮಶವನ್ನು ಕೂಡ ಚರ್ಮದಿಂದ ತೆಗೆದು ಚರ್ಮ ಶುದ್ಧೀಕರಿಸುವುದು.

    ಮೊಡವೆ ನಿವಾರಿಸುವುದು

    ಮೊಡವೆ ನಿವಾರಿಸುವುದು

    ಈ ಫೇಸ್ ಪ್ಯಾಕ್ ನ್ನು ನಿಯಮಿತವಾಗಿ ಬಳಸಿಕೊಂಡರೆ ಆಗ ಮೊಡವೆ ನಿವಾರಣೆ ಮಾಡಲು ನೆರವಾಗುವುದು. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆ ಆಗದಂತೆ ನೋಡಿಕೊಳ್ಳುವುದು ಮತ್ತು ಮೊಡವೆ ಮೂಡುವುದನ್ನು ತಡೆಯುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮಕ್ಕೆ ಶಮನ ನೀಡುವುದು ಮತ್ತು ಮೊಡವೆಯಿಂದ ಆಗುವಂತಹ ಕಿರಿಕಿರಿ ತಪ್ಪಿಸುವುದು. ವಿಟಮಿನ್ ಸಿ ಮೊಡವೆ ನಿವಾರಣೆ ಮಾಡುವುದು ಮತ್ತು ಉರಿಯೂತ ತಡೆಯುವುದು.

    ಗಾಯ ಮತ್ತು ಕಲೆ ತಗ್ಗಿಸುವುದು

    ಗಾಯ ಮತ್ತು ಕಲೆ ತಗ್ಗಿಸುವುದು

    ಜೇನುತುಪ್ಪವನ್ನು ತ್ವಚೆಗೆ ಹಚ್ಚಿಕೊಳ್ಳುವ ಮೂಲಕ ಚರ್ಮದ ಕಾಂತಿಯನ್ನು ಸುಧಾರಣೆ ಮಾಡುವುದು. ಇದರಿಂದ ಅದು ಚರ್ಮದ ಮೇಲಿನ ಕಲೆ ಮತ್ತು ಗಾಯದ ಗುರುತನ್ನು ಮಾಸುವಂತೆ ಮಾಡುವುದು ಮತ್ತು ಇದರಿಂದ ಚರ್ಮಕ್ಕೆ ಕಾಂತಿ ಸಿಗುವುದು. ವಿಟಮಿನ್ ಸಿಯು ಚಿಕಿತ್ಸಕ ಗುಣ ಹೊಂದಿದೆ. ಗಾಯದ ಗುರುತು ಮತ್ತು ಕಲೆ ದೂರ ಮಾಡಿ ಶುದ್ಧ ಚರ್ಮ ನೀಡುವುದು.

    ವಯಸ್ಸಾಗುವ ಲಕ್ಷಣ ತಡೆಯುವುದು

    ವಯಸ್ಸಾಗುವ ಲಕ್ಷಣ ತಡೆಯುವುದು

    ಜೇನುತುಪ್ಪ ಹಾಗೂ ಹಾಲಿನ ಮಿಶ್ರಣವು ಬಿಗಿ ಹಾಗೂ ಯೌವನಯುತ ಚರ್ಮ ನೀಡುವುದು. ಜೇನುತುಪ್ಪವು ಚರ್ಮದಲ್ಲಿನ ಪಿಎಚ್ ಮಟ್ಟ ಕಾಪಾಡಲು ನೆರವಾಗುವುದು ಮತ್ತು ನೆರಿಗೆ ಹಾಗೂ ಗೆರೆಗಳನ್ನು ದೂರ ಮಾಡಿ ವಯಸ್ಸಾಗುವ ಲಕ್ಷಣ ತಡೆಯುವುದು. ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಬಿಗಿಯಾಗಿಸುವುದು ಮತ್ತು ನೆರಿಗೆ ಮೂಡುವುದನ್ನು ತಡೆಯುವುದು.

    ಒಡೆದ ತುಟಿಗಳಿಗೆ ಪರಿಹಾರ

    ಒಡೆದ ತುಟಿಗಳಿಗೆ ಪರಿಹಾರ

    ಕೊನೆಯದಾಗಿ ಇದು ಒಡೆದ ತುಟಿಗಳಿಗೆ ಪರಿಹಾರ ನೀಡುವುದು. ಜೇನುತುಪ್ಪ ಚರ್ಮದಲ್ಲಿ ಮಾಯಿಶ್ಚಿರೈಸ್ ನ್ನು ಉಳಿದುಕೊಳ್ಳುವಂತೆ ಮಾಡುವುದು ಮತ್ತು ತುಟಿಯು ತುಂಬಾ ನಯ ಮತ್ತು ಸುಂದರವಾಗುವಂತೆ ಮಾಡುವುದು. ಹಾಲು ಒಣ ಹಾಗೂ ಒಡೆದ ತುಟಿಗಳಿಗೆ ಪರಿಹಾರ ಒದಗಿಸುವುದು. ಹಾಲು ಮತ್ತು ಜೇನುತುಪ್ಪದ ಮಿಶ್ರಣವನ್ನು ನಿಯಮಿತವಾಗಿ ಬಳಸಿಕೊಂಡು ಒಡೆದ ತುಟಿಗಳಿಗೆ ಪರಿಹಾರ ಕಂಡುಕೊಳ್ಳಿ ಮತ್ತು ತುಟಿಯನ್ನು ನಯ ಹಾಗೂ ಸುಂದರವಾಗಿಸಿ.

English summary

Honey & Milk Face Pack for Glowing Skin within week

Honey, as we all know, is a great moisturiser for the skin. It makes your skin soft and supple and helps to deal with various skin issues. It is also a major ingredient in many of the home remedies we use. Milk is gentle on the skin, yet it effectively cleanses your skin and adds a natural glow to your skin.
X
Desktop Bottom Promotion