For Quick Alerts
ALLOW NOTIFICATIONS  
For Daily Alerts

ಮೊಡವೆ ಮೂಡುವ ಬಹುಮುಖ್ಯ ಕಾರಣ ಆಹಾರಕ್ರಮವಂತೆ!

|

ಮುಖದ ಮೇಲೆ ಮೊಡವೆಗಳು ಕಾಣಿಸಿಕೊಂಡರೆ ಅದಕ್ಕಿಂತ ದೊಡ್ಡ ಕಿರಿಕಿರಿ ಮತ್ತೊಂದಿಲ್ಲ. ಇದು ಸೌಂದರ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ನೋವು, ಉರಿ ಮತ್ತು ಕಿರಿಕಿರಿ ಉಂಟು ಮಾಡುವುದು. ಮೊಡವೆ ನಿವಾರಣೆ ಮಾಡಲು ಹಲವಾರು ಔಷಧಿಗಳು ಇವೆ ಮತ್ತು ಮಾರುಕಟ್ಟೆಯಲ್ಲಿ ಕೂಡ ಇದಕ್ಕೆ ಕ್ರೀಮ್ ಗಳು ಲಭ್ಯವಿದೆ. ಆದರೆ ಮೊಡವೆ ಬರಲು ಮುಖ್ಯ ಕಾರಣವೇನು ಎಂದು ತಿಳಿಯುವುದು ಅತೀ ಅಗತ್ಯವಾಗಿರುವುದು. ಕಲುಷಿತ ವಾತಾವರಣ, ಆಹಾರ ಕ್ರಮ ಹಾಗೂ ಜೀವನಶೈಲಿಯಿಂದಾಗಿ ಮೊಡವೆಗಳು ಕಾಣಿಸಿಕೊಳ್ಳುವುದು. ಮೊಡವೆ ಬಗ್ಗೆ ಎಚ್ಚರಿಕೆ ವಹಿಸಿದರೂ ಅದು ಮರಳಿ ಬರುವುದು ಹೇಗೆ ಎಂದು ನಿಮಗೆ ಕೆಲವೊಂದು ಸಲ ಪ್ರಶ್ನೆ ಮೂಡಬಹುದು. ಯಾಕೆಂದರೆ ಆಹಾರ ಕ್ರಮದಿಂದಾಗಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು. ಚರ್ಮದ ಆರೋಗ್ಯ ಕಾಪಾಡುವಲ್ಲಿ ಆಹಾರ ಕ್ರಮವು ಪ್ರಮುಖ ಪಾತ್ರ ವಹಿಸುವುದು.

ಮೊಡವೆ ಬರಲು ಕಾರಣಗಳು ಏನು

ಮೊಡವೆ ಬರಲು ಕಾರಣಗಳು ಏನು

ಅತಿಯಾಗಿ ಮೇದೋಗ್ರಂಥಿಗಳ ಸ್ರಾವದಿಂದಾಗಿ ಚರ್ಮದಲ್ಲಿನ ರಂಧ್ರಗಳು ತುಂಬಿಕೊಳ್ಳಬಹುದು ಮತ್ತು ಇದರಿಂದ ಮೊಡವೆ ಕಾಣಿಸಿಕೊಳ್ಳುವುದು. ಮುಖದಲ್ಲಿ ಎಣ್ಣೆಯಂಶವು ಹೆಚ್ಚಾಗಿದ್ದರೆ ಆಗ ಅದು ಬ್ಯಾಕ್ಟೀರಿಯಾವನ್ನು ಆಕರ್ಷಿಸುವುದು. ಇದರಿಂದ ಉರಿಯೂತ ಉಂಟಾಗುವುದು ಮತ್ತು ಚರ್ಮವು ಛಿದ್ರವಾಗುವುದು. ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಅಥವಾ ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ವೇಳೆ ಮೇದೋಜೀರಕ ಗ್ರಂಥಿ ಅತಿಯಾಗಿ ಕಾರ್ಯನಿರ್ವಿಸುವುದು. ಇದು ಜೀರ್ಣಕ್ರಿಯೆ ಸಮಸ್ಯೆಯಾಗಿದೆ. ದೇಹದಲ್ಲಿ ಇರುವಂತಹ ಅತೀ ದೊಡ್ಡ ಅಂಗವಾಗಿರುವಂತಹ ಚರ್ಮವು ರಕ್ತ ಮತ್ತು ರಕ್ತನಾಳಗಳ ನೇರವ ಸಂಪರ್ಕ ಹೊಂದಿದೆ. ಚರ್ಮಕ್ಕೆ ನೀವು ಚಿಕಿತ್ಸೆ ನೀಡಲು ನೈಸರ್ಗಿಕ ವಿಧಾನ ಬಳಸಿಕೊಂಡರೂ ರಕ್ತದಲ್ಲಿನ ವಿಷಕಾರಿ ಅಂಶವು ಇದಕ್ಕೆ ತಡೆಯಾಗುವುದು. ನೀವು ಸೇವಿಸುವ ಆಹಾರ ಕ್ರಮವು ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು. ಸೇವಿಸುವಂತಹ ಪೋಷಕಾಂಶಗಳು ಚರ್ಮದ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುವುದು. ಸ್ವಲ್ಪ ಪ್ರಮಾಣದ ಎಣ್ಣೆಯು ಆಹಾರಕ್ಕೆ ರುಚಿ ನೀಡಬಹುದು. ಆದರೆ ಇದರಿಂದ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾ ಆಗುವುದು. ನೀವು ದಿನನಿತ್ಯ ಬಳಕೆ ಮಾಡುವ ಎಣ್ಣೆಯ ಬದಲಿಗೆ ಆಲಿವ್ ತೈಲ ಬಳಕೆ ಮಾಡಿ ಮತ್ತು ಇದನ್ನು ಮಿತವಾಗಿ ಬಳಸಿ. ಆಹಾರವು ಹೆಚ್ಚು ಖಾರವಾಗಿ ಮಾಡಬೇಡಿ ಮತ್ತು ಖಾರದಿಂದಾಗಿ ಮುಖದಲ್ಲಿ ಎಣ್ಣೆ ಉತ್ಪತ್ತಿ ಮಾಡುವ ಗ್ರಂಥಿಗಳು ಹೆಚ್ಚು ಕಾರ್ಯನಿರ್ವಹಿಸುವಂತೆ ಮಾಡುವುದು. ಹೈಡ್ರೋಜಿನಿಕರಿಸಿದ ಆಹಾರವು ಚರ್ಮಕ್ಕೆ ಒಳ್ಳೆಯದಲ್ಲ ಮತ್ತು ಇದರಿಂದ ಖರಿದ ಆಹಾರವು ದೀರ್ಘಕಾಲಕ್ಕೆ ಯಕೃತ್ ಮೇಲೆ ಪರಿಣಾಮ ಬೀರುವುದು. ಆಹಾರವು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡುವುದು. ಆದರೆ ಮಸಾಲೆಯು ದೇಹದಲ್ಲಿನ ಉಷ್ಣತೆಯನ್ನು ಗಣನೀಯವಾಗಿ ಹೆಚ್ಚು ಮಾಡುವುದು. ಇದರಿಂದ ಆಹಾರದಲ್ಲಿ ಮಸಾಲೆ ಮತ್ತು ಖಾರ ಕಡಿಮೆ ಮಾಡಿ.

Most Read: ಬರೀ 15 ದಿನಗಳಲ್ಲಿ ಕುತ್ತಿಗೆಯ ಕಪ್ಪು ಕಲೆ ನಿವಾರಿಸಲು ಶಿಯಾ ಬಟರ್ ಬಳಸಿ

ನೀವು ಕಡೆಗಣಿಸಬೇಕಾಗಿರುವ ಆಹಾರಗಳು

ನೀವು ಕಡೆಗಣಿಸಬೇಕಾಗಿರುವ ಆಹಾರಗಳು

ಸಂಸ್ಕರಿತ ಆಹಾರ: ಪ್ಯಾಕ್ ಮಾಡಲ್ಪಟ್ಟಿರುವ ಮತ್ತು ಸಂಸ್ಕರಿತ ಆಹಾರವಾಗಿರುವಂತಹ ಜ್ಯೂಸ್, ಚಿಪ್ಸ್, ಕಾರ್ಬೊನೇಟೆಡ್ ಪಾನೀಯ, ಫ್ರೆಂಚ್ ಫ್ರೈ ಮತ್ತು ಬರ್ಗರ್ ಕಡೆಗಣಿಸಿ. ಇದರೊಂದಿಗೆ ಒಮೆಗಾ-6 ಕೊಬ್ಬಿನಾಮ್ಲದಿಂದಲೂ ದೂರವಿರಿ. ಕಾರ್ನ್ ತೈಲ, ಸೋಯಾಬೀನ್ ತೈಲ ಮತ್ತು ಹತ್ತಿಬೀಜದ ತೈಲದಲ್ಲಿ ಈ ಅಂಶವು ಇರುವುದು. ಈ ಎಣ್ಣೆಗಳು ಚರ್ಮದಲ್ಲಿ ಉರಿಯೂತ ಹೆಚ್ಚು ಮಾಡುವುದು ಮತ್ತು ಮೊಡವೆ ಬರಲು ಕಾರಣವಾಗುವುದು.

ಬೆಣ್ಣೆ ಮತ್ತು ಮಾರ್ಗರಿನ್

ಬೆಣ್ಣೆ ಮತ್ತು ಮಾರ್ಗರಿನ್

ಬೆಣ್ಣೆ ಮತ್ತು ಮಾರ್ಗರಿನ್ ನಿಂದ ದೂರವಿರುವುದು ತುಂಬಾ ಒಳ್ಳೆಯದು. ಮರ್ಮಲೇಡ್ಸ್ ಮತ್ತು ಚೀಸ್ ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಉಪಾಹಾರಕ್ಕೆ ಪ್ಯಾನ್ ಕೇಕ್ ಜತೆಗೆ ಜೇನುತುಪ್ಪ ಸೇವಿಸಿ. ಋತುಮಾನಕ್ಕೆ ಅನುಗುಣವಾಗಿ ಸಿಗುವಂತಹ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಪ್ಯಾಕ್ ಮಾಡಲ್ಪಟ್ಟಿರುವ ಹಣ್ಣುಗಳಲ್ಲಿ ಕಾರ್ಬೊಹೈಡ್ರೇಟ್ಸ್ ಮತ್ತು ಸಕ್ಕರೆ ಅಧಿಕವಾಗಿರುವುದು. ಇದು ಮೊಡವೆಗೆ ಕಾರಣವಾಗುವುದು.

Most Read: ಮೊಡವೆಯ ಸಮಸ್ಯೆ ನಿವಾರಣೆಗೆ ಕೂಲ್ ಕೂಲ್ ಐಸ್ ಚಿಕಿತ್ಸೆ!

ಮೊಟ್ಟೆ

ಮೊಟ್ಟೆ

ಮೊಟ್ಟೆಯಿಂದಾಗಿ ಚರ್ಮದಲ್ಲಿ ಅಲರ್ಜಿ ಉಂಟಾಗಬಹುದು. ಮೊಡವೆ ಬರಲು ಕಾರಣವೇನು ಎಂದು ತಿಳಿಯಲು ನೀವು ತಿನ್ನುವ ಆಹಾರದ ಕಡೆ ಗಮನಹರಿಸಿ. ವಾರದಲ್ಲಿ ಕೆಲವು ದಿನ ನೀವು ಮೊಟ್ಟೆ ಸೇವಿಸಿ. ಇದಕ್ಕೆ ಚರ್ಮವು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ನೋಡಿ. ಇದರ ಬಳಿಕ ನೀವು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಅಥವಾ ಮೊಟ್ಟೆ ಸೇವನೆ ಕಡಿಮೆ ಮಾಡಿ. ಅತಿಯಾಗಿ ಮೊಟ್ಟೆ ಸೇವಿಸಿದರೆ ಅದರಿಂದ ಮೊಡವೆ ಬರುವುದು. ಮೊಟ್ಟೆಯ ಬಿಳಿ ಭಾಗ ಮಾತ್ರ ಸೇವಿಸಿ, ಅದಕ್ಕೆ ಚರ್ಮ ಯಾವ ರೀತಿ ಪ್ರತಿಕ್ರಿಯಿಸುವುದು ಎಂದು ತಿಳಿಯಿರಿ. ಮೊಟ್ಟೆಯ ಬಿಳಿ ಭಾಗದಲ್ಲಿ ಪರಾಗ ಅಲರ್ಜಿ ಉಂಟು ಮಾಡುವ ಅಂಶಗಳು ಹೆಚ್ಚಾಗಿದೆ. ಚರ್ಮಕ್ಕೆ ಮೊಟ್ಟೆ ಅಲರ್ಜಿ ಉಂಟು ಮಾಡುವುದೇ ಎಂದು ತಿಳಿಯಲು ಮತ್ತೊಂದು ಸರಳ ವಿಧಾನವೆಂದರೆ ಚರ್ಮಕ್ಕೆ ಅಲರ್ಜಿ ಉಂಟು ಮಾಡುವ ಆಹಾರವನ್ನು ಪಟ್ಟಿ ಮಾಡಿಕೊಳ್ಳಿ. ಇದನ್ನು ಎರಡು ವಾರಗಳ ಕಾಲ ಸೇವಿಸಿ. ನಿಮಗೆ ಸುರಕ್ಷಿತವಲ್ಲವೆಂದು ಕಂಡು ಬರುವ ಆಹಾರವನ್ನು ಕಡೆಗಣಿಸಿ.

ಕೇಕ್

ಕೇಕ್

ಕೇಕ್, ಪ್ಯಾನ್ ಕೇಕ್ ಮತ್ತು ಮೊಟ್ಟೆ ಒಳಗೊಂಡಿರುವ ಇಂತಹ ಖಾದ್ಯಗಳನ್ನು ನೀವು ಕಡೆಗಣಿಸಿ. ಮೊಟ್ಟೆ ಇಲ್ಲದೆ ಇರುವಂತಹ ಮತ್ತು ತುಂಬಾ ರುಚಿಕರವಾಗಿರುವಂತಹ ಇಂತಹ ತಿಂಡಿಗಳು ನಿಮಗೆ ಲಭ್ಯವಾಗುವುದು. ಅದನ್ನು ಸೇವಿಸಿ.

English summary

Dietary Mistakes that can Cause Acne

Acne has been a nightmare for people of all age groups and every effort seem to be futile. Ever wondered why it keeps recurring despite the precautions we take? It is because of the dietary patterns we follow. Diet plays a crucial role in maintaining a healthy skin.Excess of sebum can clog the pores of your skin and lead to acne. Extra oil attracts bacteria which cause inflammation and skin ruptures. Sebum is increasingly produced when there are hormonal changes in your body or the level of toxins in the blood rise. This is purely a digestive problem.
X
Desktop Bottom Promotion