For Quick Alerts
ALLOW NOTIFICATIONS  
For Daily Alerts

ಇಂತಹ 5 ಸಮಸ್ಯೆಗಳಿಂದಾಗಿಯೂ, ಕೂಡ ನಿಮಗೆ ತುರಿಕೆಯ ಸಮಸ್ಯೆ ಕಾಡಬಹುದು!

|

ತುರಿಕೆಯಿಂದ ನೋವು ಇಲ್ಲದಿದ್ದರೂ ಕೂಡ ಅದಕ್ಕೊಂದು ಪರಿಹಾರ ಬೇಕೇಬೇಕು ಎಂಬುದಂತು ನಿಜ.ಆದರೆ ಇದಕ್ಕೆ ಕಾರಣ ಮಾತ್ರ ಇಂದಿಗೂ ನಿಗೂಢವೇ ಆಗಿದೆ.ತುರಿಕೆ ಅಥವಾ ಪ್ರರೈಟಸ್ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾದ ಈ ರೋಗಕ್ಕೆ ತಜ್ಞರು ಕೂಡ ಕಾರಣ ಹುಡುಕುತ್ತಿದ್ದಾರೆ.

ನರದ ಸಮಸ್ಯೆ

ನರವು ಹಾನಿಗೆ ಒಳಗಾದಾಗ ಅಥವಾ ಗಾಯಗಳಾಗಿ ಸಂಕುಚಿತಗೊಂಡಾಗ ನವೆ ಅಥವಾ ತುರಿಕೆಯನ್ನು ಪ್ರಚೋದಿಸುತ್ತದೆ ಎಂದು ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಹಾಯಕ ಉಪಾಧ್ಯಾಯರಾದ ಅರಿಯಾನ ಕೌರೋಶ್ ಹೇಳುತ್ತಾರೆ.ನವೆ ದೇಹದ ಯಾವುದೇ ಭಾಗದಲ್ಲಿ ಕೂಡ ಕಂಡು ಬರಬಹುದು ಆದರೆ ಮುಖ್ಯವಾಗಿ ಕೈ,ಬೆನ್ನು ಮತ್ತು ತಲೆಯಲ್ಲಿ ಕಂಡು ಬರುತ್ತದೆ ಎಂದಿದ್ದಾರೆ.

Itchy

ಶಮನಕ್ಕೆ ಪರಿಹಾರ:ತುರುಕೆಯನ್ನು ಕಡಿಮೆ ಮಾಡಲು ಬೊಟಾಕ್ಸ್ ಅಂಶಗಳನ್ನು ಹೊಂದಿರುವ ಆಂಟಿಪೆಪಿಪ್ಟಿಕ್ ಔಷಧಗಳು ಮತ್ತು ಖಿನ್ನತೆ-ಶಮನಕಾರಿಗಳು ಸಾಕಷ್ಟು ಇವೆ.ದೈಹಿಕ ಚಿಕಿತ್ಸೆ,ಯೋಗ,ಟೈ ಚಿ, ಆಕ್ಯುಪಂಕ್ಚರ್ ಮುಂತಾಯಾದವುಗಳು ಕೂಡ ಸೈದ್ಧಾಂತಿಕವಾಗಿ ನವೆಯನ್ನು ತಡೆಯುವಲ್ಲಿ ಸಹಕರಿಸುತ್ತವೆ ಎಂದು ಮ್ಯಾಸಚುಸೆಟ್ಸ್ ಜೆನರಲ್ ಆಸ್ಪತ್ರೆಯಲ್ಲಿ ಪ್ರರೈಟಸ್ ನ ಬಗ್ಗೆ ಪಿ ಹೆಚ್ ಡಿ ಅಭ್ಯಸಿಸುತ್ತಿರುವ ಸರಿನಾ ಎಲ್ಮಾರಿಯ ಹೇಳುತ್ತಾರೆ.

Most Read: ಕಿರಿಕಿರಿಯನ್ನು೦ಟು ಮಾಡುವ ತುರಿಕೆ ಸಮಸ್ಯೆಗೆ ಪರಿಹಾರವೇನು?

ಉರಿಯೂತ

ಕಲವೊಮ್ಮೆ ಅಲರ್ಜಿ,ಆಟೊಇಮ್ಯೂನ್,ಔಷಧಿಗಳ ಅಡ್ಡ ಪರಿಣಾಮದಿಂದ ಕೂಡ ದೇಹವು ವಿವಿಧ ರೀತಿಯ ಅಣುವನ್ನು ಬಿಡುಗಡೆ ಮಾಡಿ ತುರಿಕೆ,ಉರಿಯೂತವನ್ನು ಕೂಡ ತರಿಸುತ್ತದೆ.

ಪರಿಹಾರ:ಕೊರ್ಟಿಸೊನ್ ಕ್ರೀಮ್ ಅಥವಾ ಮೌಖಿಕ ಆಂಟಿಹಿಸ್ಟಮೈನ್ ಅನ್ನು ತುರಿಕೆಯ ಉರಿಯನ್ನು ಕಡಿಮೆ ಮಾಡಲು ಬಳಸಬಹುದು.ನೀವು ತೆಗೆದುಕೊಳ್ಳುತ್ತಿರುವ ಔಷಧದಿಂದಲೇ ತೊಂದರೆ ಕಂಡು ಬಂದಲ್ಲಿ ಅದನ್ನು ಬದಲಾಯಿಸಿ.

ಆತಂಕ

ತೀವ್ರ ಒತ್ತಡ ಕೂಡ ನರವನ್ನು ಪ್ರಚೋದಿಸಿ ತುರಿಕೆ ಕಂಡುಬರಬಹುದು ಎಂದು ಎಲ್ಮಾರಿಯ ಹೇಳುತ್ತಾರೆ.ಒತ್ತಡದಿಂದ ಮಾಡಿಕೊಳ್ಳುವ ತುರಿಕೆ ದೇಹದಲ್ಲಿ ಸ್ಕ್ರಾಚ್ ಕೂಡ ಉಂಟು ಮಾಡುತ್ತದೆ.

ಪರಿಹಾರ:ಈ ರೀತಿಯ ತುರಿಕೆ ದೇಹ ಮತ್ತು ಮನಸ್ಸು ಎರಡರಿಂದ ಕೂಡ ಉಂಟಾಗುವುದರಿಂದ ಇದಕ್ಕೆ ಜೈವಿಕ ಪ್ರತಿಕ್ರಿಯೆ,ಧ್ಯಾನ,ಅಕ್ಯುಪಂಕ್ಚರ್,ಅರಿವಿನ ಚಿಕಿತ್ಸೆ ಮತ್ತು ಔಷಧಿಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ರೋಗಗಳು

ಕೆಲವೊಮ್ಮೆ ಕಿಡ್ನಿ,ಲಿವರ್ ಮತ್ತು ಥೈರಾಯಿಡ್ ತೊಂದರೆ ಕೂಡ ನವೆ ಅಥವಾ ತುರಿಕೆಗೆ ಕಾರಣವಾಗಿರಬಹುದು.ಹಾಗೆಯೇ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯಿಂದ ಪರಿಹಾರವಾಗದ ಚರ್ಮ ರೋಗಗಳು ಕೂಡ ತುರಿಕೆಗೆ ಮುಖ್ಯ ಕಾರಣ.

ಪರಿಹಾರ:ಈ ರೀತಿಯ ತೊಂದರೆ ನಿಮಗೆ ಕಂಡು ಬಂದಲ್ಲಿ ಚರ್ಮ ರೋಗ ತಜ್ಞರನ್ನು ಭೇಟಿ ನೀಡಿ ಮೌಖಿಕ ಚಿಕಿತ್ಸೆ ಕಂಡುಕೊಳ್ಳಿ.ಎಲ್ಮಾರಿಯ ಹೇಳುವ ಪ್ರಕಾರ ಯೋಗ,ಧ್ಯಾನ,ಟೈ ಚೈ ಚಿಕಿತ್ಸೆಯಿಂದ ಕೂಡ ಪರಿಹಾರ ಕಾಣಬಹುದು.

Most Read: ಮೈಯೆಲ್ಲಾ ತುರಿಕೆ ಕಾಣಿಸಿದರೆ ಇದು ಖತರ್ನಾಕ್ ರೋಗದ ಲಕ್ಷಣಗಳಾಗಿರಬಹುದು!

ಕೀಟ ಕಡಿತ

ಸೊಳ್ಳೆ ಕಡಿದಾಗ ನಿಮ್ಮ ನಿರೋಧಕ ಶಕ್ತಿ ಕಡಿಮೆಯಾಗಿ ರಾಸಾಯನಿಕ ಅಂಶವನ್ನು ಬಿಡುಗಡೆ ಮಾಡುತ್ತದೆ.ಇದರಿಂದಾಗಿ ಕೆಂಪಾಗುವುದು,ಊದಿಕೊಳ್ಳುವುದು ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ.

ಪರಿಹಾರ: ಈ ರೀತಿ ಸೊಳ್ಳೆ ಕಡಿತದಿಂದಾಗಿ ಉರಿಯೂತ ಅಥವಾ ಬೊಬ್ಬೆ ತುಂಬಾ ಸಮಯವಿದ್ದಲ್ಲಿ ನಿಮಗೆ ಅಲರ್ಜಿಯ ಸಮಸ್ಯೆ ಇರಬಹುದು.ಕೋರ್ಟಿಸೋನ್ ಕ್ರೀಂ ಇದಕ್ಕೆ ಸಹಾಯಕವಾಗಬಹುದು ಎಂದು ಕೌರೋಶ್ ಹೇಳುತ್ತಾರೆ.ಹೆಚ್ಚು ತುರಿಸುವುದರಿಂದ ಉರಿಯೂತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಐಸ್ ಕ್ಯೂಬ್ ಇಡುವುದು ಕೂಡ ಇದಕ್ಕೆ ಪರಿಹಾರ.ಐಸ್ ನ ತಂಪಿನಿಂದಾಗಿ (ಶಾಖದ ವಿರುದ್ಧ ಹೋರಾಡುವುದರಿಂದ)ತುರಿಕೆ ಅಥವಾ ನವೆ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

English summary

5 Reasons You Might Be Itchy

It demands relief, yet it doesn’t hurt. Making it feel better may actually make it worse. And its reason for being is often a total mystery. No wonder itching—or as science calls it, pruritus—still has medical experts scratching their heads. Around one in ten people suffers from chronic itchiness. For them, and the rest of us, the best defense against the torture depends on its cause.
Story first published: Monday, May 6, 2019, 16:50 [IST]
X
Desktop Bottom Promotion