ಮುಖದ ಕಾಂತಿ ಹೆಚ್ಚಿಸಲು ಸೌತೆಕಾಯಿ ಫೇಸ್ ಪ್ಯಾಕ್ ಪ್ರಯತ್ನಿಸಿ

Posted By: Divya pandit Pandit
Subscribe to Boldsky

ಬೇಸಿಗೆಯ ದಿನದಲ್ಲಿ ವ್ಯಾಪಕವಾಗಿ ಬಳಸುವ ತರಕಾರಿ ಎಂದರೆ ಸೌತೆಕಾಯಿ. ಹೇರಳವಾದ ನೀರಿನಿಂದ ಕೂಡಿರುವ ಸೌತೆಕಾಯಿ ದೇಹದ ತಾಪವನ್ನು ಕಡಿಮೆಮಾಡುವುದು. ಜೊತೆಗೆ ದೇಹ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವುದು. ಅಗ್ಗದ ಹಾಗೂ ವಿನಮ್ರವಾದ ಈ ತರಕಾರಿಯು ವಿಟಮಿನ್ ಸಿ, ವಿಟಮಿನ್ ಎ ಹಾಗೂ ಕ್ಯಾರೋಟಿನ್‍ಗಳನ್ನು ಒಳಗೊಂಡಿದೆ. ಹಾಗಾಗಿಯೇ ಸೌತೆಕಾಯಿಯನ್ನು ದೇಹದಲ್ಲಿ ನಿರ್ಜಲೀಕರಣವುಂಟಾದಾಗ ಹಾಗೂ ಚರ್ಮದ ಸಮಸ್ಯೆ ಕಾಣಿಸಿಕೊಂಡಾಗ ಹೆಚ್ಚು ಸೇವನೆಯನ್ನು ಮಾಡುತ್ತಾರೆ.ಸೌತೆಕಾಯಿ:

ಆರೋಗ್ಯಕ್ಕೂ ಸೈ, ಸೌಂದರ್ಯದ ವಿಷಯದಲ್ಲೂ ಜೈ!

ಅತ್ಯುತ್ತಮ ಪೋಷಕಾಂಶಗಳಿಂದ ಕೂಡಿರುವ ಸೌತೆಕಾಯಿಂದ ಮಂಕಾದ ಚರ್ಮದ ಆರೈಕೆಯನ್ನು ಮಾಡಬಹುದು. ಬಹು ಸುಲಭವಾಗಿ ಹಾಗೂ ಸರಳ ವಿಧಾನದಿಂದ ಮುಖಕ್ಕೆ ಸೌತೆಕಾಯಿ ಫೇಸ್ ಪ್ಯಾಕ್ ಅನ್ನು ಅನ್ವಯಿಸಬಹುದು. ಇದು ಪೀಡಿತ ಪ್ರದೇಶಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಜೊತೆಗೆ ಚರ್ಮವು ತೇವಾಂಶದಿಂದ ಕೂಡಿರುವಂತೆ ಕಂಗೊಳಿಸುವುದು. ನಿಮಗೂ ಈ ಬೇಸಿಗೆ ಉರಿಯಲ್ಲಿ ತಂಪಾದ ಆರೈಕೆಗೆ ಒಳಗಾಗಬೇಕು ಎನಿಸುತ್ತಿದೆ ಎಂದಾದರೆ ಈ ಮುಂದೆ ನೀಡಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ....

 ಸೌತೆಕಾಯಿ ಮತ್ತು ಮೊಸರು

ಸೌತೆಕಾಯಿ ಮತ್ತು ಮೊಸರು

ಸೌತೆಕಾಯಿ ಮತ್ತು ಮೊಸರು ಫೇಸ್ ಪ್ಯಾಕ್ ಒಣ ಚರ್ಮಕ್ಕಾಗಿ ಅತ್ಯುತ್ತಮವಾದ ಪೋಷಣೆಯನ್ನು ನೀಡುವುದು.

- ಅರ್ಧ ಸೌತೆಕಾಯಿಯನ್ನು ತೆಗೆದುಕೊಂಡು ಪೇಸ್ಟ್ ಮಾಡಿ.

- ಸೌತೆಕಾಯಿ ಪೇಸ್ಟ್‌ಗೆ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಅನ್ವಯಿಸಿ. ಮೃದುವಾಗಿ ಮಸಾಜ್ ಮಾಡಿ.

- ನಂತರ ಸ್ವಚ್ಛವಾದ ನೀರಿನಿಂದ ಶುದ್ಧಗೊಳಿಸಿ.

- ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅಲ್ಲದೆ ಮೊಡವೆಯಂತಹ ಸಮಸ್ಯೆಗಳು ದೂರವಾಗುವುದು.

ಸೌತೆಕಾಯಿ ಮತ್ತು ಅಲೋವೆರಾ

ಸೌತೆಕಾಯಿ ಮತ್ತು ಅಲೋವೆರಾ

ಸುಕ್ಕುಗಟ್ಟಿರುವ ಚಿಹ್ನೆಯ ನಿವಾರಣೆಗೊಳಿಸಿ ತ್ವಚೆಯನ್ನು ಮೃದು ಹಾಗೂ ತಾಜಾತನದಿಂದ ಕೂಡಿರುವಂತೆ ಮಾಡುವುದು.

- ಅರ್ಧ ಸೌತೆಕಾಯಿ ಪೇಸ್ಟ್ ಗೆ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಆರಲು ಬಿಡಿ.

- ಬಳಿಕ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

ಸೌತೆಕಾಯಿ ಮತ್ತು ಓಟ್ಸ್

ಸೌತೆಕಾಯಿ ಮತ್ತು ಓಟ್ಸ್

ತ್ವಚೆಯ ಮೇಲೆ ಕಾಣಿಸಿಕೊಳ್ಳುವ ನಿರ್ಜೀವ ಕೋಶಗಳ ನಿವಾರಣೆಗೆ ಹಾಗೂ ಚರ್ಮದ ಆರೈಕೆಗೆ ಉತ್ತಮ ಚಿಕಿತ್ಸೆ ನೀಡುವುದು.

- ಅರ್ಧ ಸೌತೆಕಾಯಿ ಪೇಸ್ಟ್‌ಗೆ ಚಿಟಕಿಯಷ್ಟು ಅರಿಶಿನ ಮತ್ತು ಓಟ್ಸನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಆರಲು ಬಿಡಿ.

- ಬಳಿಕ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

 ಸೌತೆಕಾಯಿ ಮತ್ತು ಕಿತ್ತಳೆ ರಸ

ಸೌತೆಕಾಯಿ ಮತ್ತು ಕಿತ್ತಳೆ ರಸ

ಈ ನೈಸರ್ಗಿಕ ಉತ್ಪನ್ನಗಳ ಮಿಶ್ರಣವನ್ನು ಮುಖಕ್ಕೆ ಅನ್ವಯಿಸುವುದರಿಂದ ಚರ್ಮವು ಸದಾ ತೇವಾಂಶದಿಂದ ಕೂಡಿರುತ್ತದೆ.

- ಅರ್ಧ ಸೌತೆಕಾಯಿ ಪೇಸ್ಟ್ ಜೊತೆ ಕಿತ್ತಳೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಆರಲು ಬಿಡಿ.

- ಬಳಿಕ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಗಣನೀಯವಾಗಿ ಅನ್ವಯಿಸುವುದರಿಂದ ಚರ್ಮದಲ್ಲಿ ಕಾಲಜನ್ ಹೆಚ್ಚುವುದು. ಚರ್ಮವು ಸದಾ ಕಾಂತಿಯಿಂದ ಕೂಡಿರುತ್ತದೆ.

ಸೌತೆಕಾಯಿ ಮತ್ತು ಕಡ್ಲೇ ಹಿಟ್ಟು

ಸೌತೆಕಾಯಿ ಮತ್ತು ಕಡ್ಲೇ ಹಿಟ್ಟು

- ಅರ್ಧ ಸೌತೆಕಾಯಿ ಪೇಸ್ಟ್‍ಗೆ ಎರಡು ಚಮಚ ಕಡ್ಲೇ ಹಿಟ್ಟು ಹಾಗೂ ಒಂದು ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಆರಲು ಬಿಡಿ.

- ಬಳಿಕ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಗಣನೀಯವಾಗಿ ಅನ್ವಯಿಸುವುದರಿಂದ ಚರ್ಮವು ಸದಾ ತೇವಾಂಶದಿಂದ ಕೂಡಿರುತ್ತದೆ.

ಸೌತೆಕಾಯಿ ಮತ್ತು ಟೊಮೆಟೊ

ಸೌತೆಕಾಯಿ ಮತ್ತು ಟೊಮೆಟೊ

ನೈಸರ್ಗಿಕವಾದ ಹೊಳಪನ್ನು ಪಡೆಯಲು ಈ ಎರಡು ನೈಸರ್ಗಿಕ ಉತ್ಪನ್ನಗಳ ಮಿಶ್ರಣವನ್ನು ಅನ್ವಯಿಸಬಹುದು.

- ಅರ್ಧ ಸೌತೆಕಾಯಿ ಪೇಸ್ಟ್ ಗೆ ಟೊಮೆಟೊ ಪೇಸ್ಟ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಸ್ವಚ್ಛವಾದ ನೀರಿನಿಂದ ಶುದ್ಧಗೊಳಿಸಿ.

ಸೌತೆಕಾಯಿ ಮತ್ತು ಆಲಿವ್ ಎಣ್ಣೆ

ಸೌತೆಕಾಯಿ ಮತ್ತು ಆಲಿವ್ ಎಣ್ಣೆ

ಈ ಉತ್ಪನ್ನಗಳ ಮಿಶ್ರಣವು ಶುಷ್ಕ ಹಾಗೂ ಉರಿಯೂತಗಳಿಂದ ಕೂಡಿರುವ ಚರ್ಮಕ್ಕೆ ಉತ್ತಮ ಪರಿಹಾರವನ್ನು ನೀಡುತ್ತದೆ.

- ಅರ್ಧ ಸೌತೆಕಾಯಿ ಪೇಸ್ಟ್ ಗೆ ಕೆಲವು ಹನಿ ಆಲಿವ್ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಸ್ವಚ್ಛವಾದ ನೀರಿನಿಂದ ಶುದ್ಧಗೊಳಿಸಿ.

ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು

ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು

ಈ ಉತ್ಪನ್ನಗಳ ಮಿಶ್ರಣವು ಚರ್ಮದ ಕಾಲಜಾನ್‍ಅನ್ನು ಅಧಿಕಗೊಳಿಸುತ್ತದೆ. ಜೊತೆಗೆ ಸೂರ್ಯನ ಕಿರಣದಿಂದ ಮಂಕಾದ ತ್ವಚೆಯನ್ನು ಹೊಳಪಿನಿಂದ ಕೂಡಿರುವಂತೆ ಮಾಡುವುದು.

- ಅರ್ಧ ಸೌತೆಕಾಯಿ ಪೇಸ್ಟ್ ಗೆ ಕಲ್ಲಂಗಡಿ ಹಣ್ಣಿನ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- 15 ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ

ಸೌತೆಕಾಯಿ ಮತ್ತು ಶ್ರೀಗಂಧ

ಸೌತೆಕಾಯಿ ಮತ್ತು ಶ್ರೀಗಂಧ

ಈ ಉತ್ಪನ್ನಗಳ ಮಿಶ್ರಣವು ಸೂರ್ಯನ ಕಿರಣದಿಂದ ಮಂಕಾದ ತ್ವಚೆಯನ್ನು ಹೊಳಪಿನಿಂದ ಕೂಡಿರುವಂತೆ ಮಾಡುವುದು.

- ಅರ್ಧ ಸೌತೆಕಾಯಿ ಪೇಸ್ಟ್ ಗೆ ಸ್ವಲ್ಪ ಶ್ರೀಗಂಧದ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

ಸೌತೆಕಾಯಿ ಮತ್ತು ಗುಲಾಬಿ ನೀರು

ಸೌತೆಕಾಯಿ ಮತ್ತು ಗುಲಾಬಿ ನೀರು

- ಅರ್ಧ ಸೌತೆಕಾಯಿ ಪೇಸ್ಟ್ ಗೆ ಸ್ವಲ್ಪ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಶುಷ್ಕ ತ್ವಚೆಗೆ ಉತ್ತಮ ಪರಿಹಾರವನ್ನು ನೀಡುವುದು.

English summary

Refreshing Cucumber Face Mask To Use This Summer

Cucumber is one among the effective products which is widely used in summer days. Be it for body or skin, due to a large amount of water present in the cucumber it can help to nourish and keep your body as well as skin healthy. This cheap and humble product contains a lot of nutrients, Vitamin C, Vitamin A, carotenes etc which benefits a human in different ways. Well, if you are wondering about how to include cucumber in your summer skin care routine, here are some easy face masks to try at home.