For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ನಿಮ್ಮ ಮುಖವನ್ನು ಹೇಗೆ ಸ್ವಚ್ಛಗೊಳಿಸಿದರೆ ಒಳ್ಳೆಯದು?

|

ಬ್ಯುಸಿಯಾದ ಈ ಜೀವನದಲ್ಲಿ ನಾವೆಲ್ಲರೂ ನಮ್ಮ ಚರ್ಮದ ಆರೈಕೆಯ ಬಗ್ಗೆ ಬಹಳ ಕಡಿಮೆ ಗಮನವನ್ನು ಕೊಡುತ್ತಿದ್ದೇವೆ .ಸೌಂದರ್ಯವರ್ಧಕಗಳನ್ನು ಉಪಯೋಗಿಸಿ ನಿಮ್ಮ ಮುಖವನ್ನು ಕಾಂತಿಯುತವಾಗಿ ಮತ್ತು ಆಕರ್ಷಣೀಯವಾಗಿ ಕಾಣುವಂತೆ ಮಾಡಿದರೆ ಅದರಿಂದ ಪ್ರಯೋಜನವೇನೂ ಇರುವುದಿಲ್ಲ.ಮುಖ್ಯವಾಗಿ ನಿಮ್ಮ ಮುಖವನ್ನು ಸರಿಯಾದ ರೀತಿಯಲ್ಲಿ ಶುದ್ಧವಾಗಿಟ್ಟುಕೊಳ್ಳುವುದರಿಂದ ಅದು ಆರೋಗ್ಯವಾಗಿ ಮತ್ತು ಕಾಂತಿಯುತವಾಗಿಯೂ ಕಾಣುವಂತೆ ಮಾಡುತ್ತದೆ.

ನೀವು ಅಲಂಕಾರವನ್ನು ಮಾಡಿಕೊಂಡಂತಹ ದಿನದಂದು ಸುಸ್ತಾಗಿ ಮನೆ ಸೇರಿದರೆ ಮಲಗುವ ಮುನ್ನ ಕೇವಲ ಹದಿನೈದು ನಿಮಿಷಗಳ ಕಾಲ ಚರ್ಮದ ಕಡೆ ಗಮನ ಹರಿಸಬೇಕು.ಅದು ನಿಮ್ಮ ಚರ್ಮದ ಮೇಲೆ ಅದ್ಭುತಗಳನ್ನು ಮಾಡುತ್ತದೆ.ಮನೆಗೆ ಬಂದದ್ದು ತಡವಾಯಿತೆಂದು ಅಥವಾ ಬೇರೆ ಯಾವುದೇ ಕಾರಣದಿಂದ ನಿಮ್ಮ ಮೇಕಪ್ ತೆಗೆಯದೆ ಹಾಗೆ ಮಲಗಿದರೆ ಮುಂದಿನ ದಿನಗಳಲ್ಲಿ ತೀವ್ರವಾದ ಚರ್ಮ ಸಂಬಂಧಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

Before Bedtime

Most Read: ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

ಈ ಲೇಖನದಲ್ಲಿ ನಾವು ನಿಮಗೆ ಮಲಗುವ ಮುನ್ನ ಹೇಗೆ ಮುಖವನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡುತ್ತೇವೆ.ಇದಕ್ಕೂ ಮೊದಲು ಪ್ರತಿದಿನವೂ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವದರಿಂದ ಏನು ಉಪಯೋಗ ಎಂದು ತಿಳಿದುಕೊಳ್ಳಬೇಕು.

ಮಲಗುವ ಮುನ್ನ ಮುಖವನ್ನು ಏಕೆ ಸ್ವಚ್ಛಗೊಳಿಸಬೇಕು?

ಮಲಗುವ ಮುನ್ನ ಮುಖವನ್ನು ಏಕೆ ಸ್ವಚ್ಛಗೊಳಿಸಬೇಕು?

*ದಿನವೂ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವುದರಿಂದ ಚರ್ಮದ ಕಲ್ಮಶಗಳನ್ನು ತೆಗೆಯಬಹುದು. ಇದರಿಂದ ನಿಮ್ಮ ಚರ್ಮಕ್ಕೆ ಉಸಿರಾಡಲು ಸಹಾಯವಾಗುತ್ತದೆ.

*ಮುಖವನ್ನು ತೊಳೆದುಕೊಳ್ಳುವಾಗ ನಾವು ನಿಧಾನವಾಗಿ ಮುಖದ ಮಸಾಜ್ ಮಾಡಿಕೊಳ್ಳುತ್ತೇವೆ.ಅದರಿಂದ ರಕ್ತ ಸಂಚಾರ ಹೆಚ್ಚಾಗಿ ಮುಖದ ಹೊಳಪು ಹೆಚ್ಚುತ್ತದೆ.

*ಮುಖವನ್ನು ಸ್ವಚ್ಛಗೊಳಿಸುವುದರಿಂದ ಮೊಡವೆ ಮತ್ತು ಕಪ್ಪು ಕಲೆಗಳಿಂದ ದೂರವಿರಬಹುದು.

*ಮುಖವನ್ನು ಸ್ವಚ್ಛಗೊಳಿಸುವುದರಿಂದ ನೀವು ದಣಿದ್ದಿದರೂ ಸಹ ಮುಖ ಹೆಚ್ಚು ಸುಸ್ತಾದಂತೆ ಕಾಣುವುದಿಲ್ಲ.

ನಿಮಗೆ ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳಿ

ನಿಮಗೆ ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳಿ

ನಿಮ್ಮ ಮುಖವನ್ನು ತೊಳೆದು ಸ್ವಚ್ಛಗೊಳಿಸಲು ನೀವು ಸಾಕಷ್ಟು ಸಮಯವನ್ನು ನೀಡಬೇಕು.ಪ್ರತಿ ದಿನ ರಾತ್ರಿ ಮಲಗುವ ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಕನಿಷ್ಠ ಹದಿನೈದು ನಿಮಿಷವಾದರೂ ಸಮಯವನ್ನು ತೆಗೆದುಕೊಳ್ಳಬೇಕು,ಇದು ನಿಮ್ಮ ಮುಖದಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ.ಮತ್ತು ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಮುಖದ ಚರ್ಮ ಚೆನ್ನಾಗಿ ಉಸಿರಾಡುವಂತೆ ಆಗುತ್ತದೆ ಹಾಗು ನಿಮ್ಮ ಮುಖದ ಕಾಂತಿ ಹೆಚ್ಚಿಸುತ್ತದೆ. ಆದ್ದರಿಂದ ಕನಿಷ್ಟ ಹದಿನೈದು ನಿಮಿಷಗಳ ಸಮಯವನ್ನು ಮುಖವನ್ನು ಸ್ವಚ್ಛಗೊಳಿಸಲು ಮುಡುಪಾಗಿಡಬೇಕು.

Most Read: ಬ್ಯೂಟಿ ಟಿಪ್ಸ್: ಪೂರ್ತಿ ವಾರಕ್ಕೆ ದಿನಕ್ಕೊಂದರಂತೆ ಫೇಸ್ ಮಾಸ್ಕ್

ಸಾಬೂನನ್ನು ಉಪಯೋಗಿಸಬಾರದು

ಸಾಬೂನನ್ನು ಉಪಯೋಗಿಸಬಾರದು

ನಮಗೆಲ್ಲಾ ಗೊತ್ತಿರುವ ಹಾಗೆ ಸಾಬೂನನ್ನು ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ, ಇದನ್ನು ಉಪಯೋಗಿಸುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ . ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಮಾಡಿ ಅದಕ್ಕೆ ಪೋಷಣೆಯನ್ನು ನೀಡುವ ಬದಲು ಸಾಬೂನಿನ ಬಳಕೆಯಿಂದ ನಿಮಗೆ ಒಣಚರ್ಮ ಉಂಟಾಗುತ್ತದೆ.ನೈಸರ್ಗಿಕ ಪದಾರ್ಥಗಳಾದ ಕಡಲೆಹಿಟ್ಟು ಮುಂತಾದವುಗಳನ್ನು ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಉಪಯೋಗಿಸಬಹುದು.ನಿಮ್ಮ ಮುಖಕ್ಕೆ ಸಾಬೂನನ್ನೇ ನೀವು ಉಪಯೋಗಿಸಬೇಕು ಎಂದಾದರೆ ನೀವು ಚರ್ಮ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು ಅವರು ನಿಮಗೆ ಕಡಿಮೆ ರಾಸಾಯನಿಕಗಳಿರುವ ಸಾಬೂನನ್ನು ನೀಡುತ್ತಾರೆ.

ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳಿಯಿರಿ

ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳಿಯಿರಿ

ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಹಲವಾರು ಪ್ರಯೋಜನಗಳಿವೆ.ಉಗುರು ಬೆಚ್ಚಗಿನ ನೀರು ನಿಮ್ಮ ಮುಖದಲ್ಲಿ ಬೆಳಗ್ಗಿನಿಂದ ಸಂಗ್ರಹವಾಗಿರುವ ಧೂಳು,ಕೊಳೆ ಹಾಗು ಇತರ ವಿಷಕಾರಿ ಅಂಶಗಳನ್ನು ಆಳವಾಗಿ ತೆಗೆಯುವುದರಲ್ಲಿ ಸಹಕಾರಿಯಾಗಿದೆ.ಆದರೆ ನೀರು ಅತಿ ಹೆಚ್ಚು ಬಿಸಿಯಾಗಿ ಇರಬಾರದು ಹಾಗು ಮುಖ ತೊಳೆಯುವಾಗ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿ.

ಸರಿಯಾಗಿ ನಿಮ್ಮ ಮುಖವನ್ನು ಒಣಗಿಸಿ

ಸರಿಯಾಗಿ ನಿಮ್ಮ ಮುಖವನ್ನು ಒಣಗಿಸಿ

ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆದ ನಂತರ ನಿಮ್ಮ ಮುಖವನ್ನು ನೀವು ಸರಿಯಾಗಿ ಒಣಗಿಸಬೇಕು.ಈ ಹಂತವೂ ಕೂಡ ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಇಲ್ಲಿ ನೀವು ತಪ್ಪು ಮಾಡಿದರೆ ನಿಮ್ಮ ಮುಖ ಹಾಳಾಗುವ ಸಾಧ್ಯತೆಗಳು ಹೆಚ್ಚು.ಮೆತ್ತಗಿನ ಒಂದು ಟವೆಲ್ ನ ಸಹಾಯದಿಂದ ನಿಮ್ಮ ಮುಖವನ್ನು ಒಣಗಿಸಿರಿ.ಹಾಗು ನಿಮ್ಮ ಮುಖವನ್ನು ಜೋರಾಗಿ ಉಜ್ಜಬೇಡಿರಿ.ಸಾಕಷ್ಟು ಸಮಯವನ್ನು ತೆಗೆದುಕೊಂಡು ನಿಧಾನವಾಗಿ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿರಿ.

Most Read: ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!

ಸರಿಯಾಗಿ ಮಾಯಿಶ್ಚರೈಸ್ ಮಾಡಿ

ಸರಿಯಾಗಿ ಮಾಯಿಶ್ಚರೈಸ್ ಮಾಡಿ

ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಕಾಂತಿಯುತವಾಗಿ ಕಾಣುವಂತೆ ಮಾಡಲು ಇದು ಕೊನೆಯ ಹಂತವಾಗಿದೆ. ನಿಮಗೆ ಇಷ್ಟವಾದ ಮಾಯಿಶ್ಚರೈಸರ್ ತೆಗೆದುಕೊಂಡು ಮುಖಕ್ಕೆ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಬೆರಳುಗಳ ಸಹಾಯದಿಂದ ಹಚ್ಚಿರಿ. ರಾತ್ರಿ ಇದನ್ನು ಹಾಗೆಯೆ ಬಿಡಿ. ನೀವು ಎಣ್ಣೆ ಚರ್ಮದವರಾಗಿದ್ದರೆ ನಿಮ್ಮ ಮಾಯಿಶ್ಚರೈಸ್ ನಲ್ಲಿ ಎಣ್ಣೆಯ ಅಂಶ ಇಲ್ಲದೆ ಇರುವಂತೆ ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಅದು ನಿಮ್ಮ ಚರ್ಮ ಇನ್ನಷ್ಟು ಎಣ್ಣೆಯಾಗಿ ಕಾಣುವಂತೆ ಮಾಡಬಹುದು.

English summary

How To Wash Your Face Before Going To Bed?

Due to our busy lives, we tend to pay less attention to our skin. Merely keeping your skin fresh and attractive by using make-up won't help. It also needs to be cleansed in the right way to keep it healthy and glowing. Washing your face with warm water, apply moisturiser, etc., are some tips you can keep in mind.
X
Desktop Bottom Promotion