For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಗೆ ಮನೆಮದ್ದುಗಳು- ಒಂದೇ ದಿನದಲ್ಲಿ ಮಂಗಮಾಯ!

By Arshad
|

ಹದಿಹರೆಯದಲ್ಲಿ ಪ್ರತಿಯೊಬ್ಬರೂ ಮೊಡವೆಗಳ ತೊಂದರೆಗೆ ಒಳಗಾದವರೇ ಆಗಿದ್ದಾರೆ. ಕೆಲವು ಯುವತಿಯರಿಗೆ ಹದಿಹರೆಯ ದಾಟಿದ ಬಳಿಕವೂ ಮೊಡವೆಗಳ ಕಾಟ ಮುಂದುವರೆಯಬಹುದು. ಕೆಲವು ಪುರುಷರೂ ಈ ತೊಂದರೆಗೆ ಒಳಗಾಗುತ್ತಾರೆ. ಮೊಡವೆಗಳು ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಕೆಲವೊಮ್ಮೆ ಕೆಂಪಗಾಗಿ ಕೊಂಚ ಭಯವನ್ನೂ ಹುಟ್ಟಿಸುತ್ತವೆ.

ಮೊಡವೆಗಳನ್ನು ಮುಖದಿಂದ ಇಲ್ಲವಾಗಿಸುವುದು ಎಲ್ಲರ ಆದ್ಯತೆಯ ವಿಷಯವಾಗಿರುವುದು ಮಾತ್ರವಲ್ಲ, ಆತ್ಮವಿಶ್ವಾಸವನ್ನು ಹೆಚ್ಚಿಸಲು ಅಗತ್ಯವೂ ಆಗಿದೆ. ಮೊಡವೆಗಳು ಎಲ್ಲಾ ಬಗೆಯ ತ್ವಚೆಗಳಿಗೂ ಆವರಿಸಬಹುದಾದರೂ ಎಣ್ಣೆ ಚರ್ಮಕ್ಕೆ ಹೆಚ್ಚಾಗಿ ಕಾಡುತ್ತದೆ. ತ್ವಚೆಯಲ್ಲಿರುವ ಎಣ್ಣೆಯಂಶ ಹೆಚ್ಚಾಗಿದ್ದರೆ ಸೋಂಕು ಸಹಾ ಹೆಚ್ಚಾಗುತ್ತದೆ ಹಾಗೂ ಮೊಡವೆಗಳು ಮೂಡುವ ಸಾಧ್ಯತೆಗಳೂ ಹೆಚ್ಚುತ್ತದೆ. ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಿದ್ದರೆ ಎಣ್ಣೆ ಹಾಗೂ ಬೆವರು ಹೊರಹರಿಯದೇ ಒಳಗೇ ಉಳಿದುಕೊಳ್ಳುತ್ತದೆ ಹಾಗೂ ಸೋಂಕು ಉಂಟು ಮಾಡುವ ಮೂಲಕ ಮೊಡವೆಗೆ ಕಾರಣವಾಗುತ್ತದೆ.

ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಯುವತಿಯರಿಗೆ ಕಾಡುವ ಮೊಡವೆಗಳಿಂದ ಹೆಚ್ಚು ವ್ಯಾಕುಲರಾಗುತ್ತಾರೆ. ಯಾವುದಾದರೊಂದು ವಿಶೇಷ ಸಂದರ್ಭದಲ್ಲಿ ಭಾಗಿಯಾಗುವ ಸಂದರ್ಭ ಎದುರಾದರೆ ಮೊಡವೆಗಳಿರುವ ಮುಖವನ್ನು ಹೊತ್ತು ಹೋಗುವುದು ಹೇಗೆ ಎಂಬುದೇ ಇವರಿಗೆ ದೊಡ್ಡ ಚಿಂತೆಯಾಗುತ್ತದೆ. ಔಷಧೀಯ ಗುಣವಿರುವ ಕ್ರೀಮುಗಳನ್ನು ಮೊಡವೆಗಳ ನಿವಾರಣೆಗಾಗಿ ಬಳಸುವುದು ಅಪಾಯಕಾರಿ! ಈ ಕ್ರೀಮುಗಳನ್ನು ಕೇವಲ ಒಂದು ವಾರದ ಕಾಲದವರೆಗೆ ಮಾತ್ರವೇ ಬಳಸಬಹುದು.

ಇದಕ್ಕೂ ಹೆಚ್ಚಾದರೆ ಮೊಡವೆಗಳು ಕಡಿಮೆಯಾದಂತೆ ಅನ್ನಿಸಿದರೂ ಇನ್ನೊಂದು ಭಾಗದಲ್ಲಿ ಹೊಸ ಮೊಡವೆ ಏಳಬಹುದು. ಆದ್ದರಿಂದ ಮೊಡವೆಗಳ ಚಿಕಿತ್ಸೆಗೆ ನೈಸರ್ಗಿಕ ಸಾಮಾಗ್ರಿಗಳೇ ಒಳ್ಳೆಯ ಆಯ್ಕೆ. ಈ ಸಾಮಾಗ್ರಿಗಳು ಸುರಕ್ಷಿತವಾಗಿದ್ದು ಕೆಲವೇ ದಿನಗಳಲ್ಲಿ ಕಲೆ ಉಳಿಯದಂತೆ ಮೊಡವೆಗಳು ಇಲ್ಲವಾಗುತ್ತವೆ. ಬನ್ನಿ, ಈ ಸುರಕ್ಷಿತವಾದ, ಮೊಡವೆ ನಿವಾರಕ ವಿಧಾನ ಯಾವುದು ಎಂಬುದನ್ನು ನೋಡೋಣ...

ಸಾಸಿವೆ ಮತ್ತು ಜೇನು

ಸಾಸಿವೆ ಮತ್ತು ಜೇನು

ಮೊಡವೆಗಳ ಮೇಲೆ ಸಾಸಿವೆ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ. ಇದರಲ್ಲಿರುವ ಸ್ಯಾಲಿಸಿಲಿಕ್ ಆಮ್ಲ ಎಂಬ ಪೋಷಕಾಂಶ ಒಂದು ನೈಸರ್ಗಿಕ ಸೋಂಕು ನಿವಾರಕವಾಗಿದ್ದು ಮೊಡವೆಗಳನ್ನು ಬುಡದಿಂದ ನಿವಾರಿಸಲು ನೆರವಾಗುತ್ತದೆ. ಕಾಲು ಚಿಕ್ಕ ಚಮಚ ಸಾಸಿವೆ ಪುಡಿ ಹಾಗು ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತೊಳೆದುಕೊಳ್ಳಿ.

ಹಸಿರು ಟೀ-ಮಂಜುಗಡ್ಡೆಯ ತುಂಡು

ಹಸಿರು ಟೀ-ಮಂಜುಗಡ್ಡೆಯ ತುಂಡು

ಒಂದು ಲೋಟ ನೀರಿನಲ್ಲಿ ಕೆಲವಾರು ಹಸಿರು ಟೀ ಬ್ಯಾಗ್ ಗಳನ್ನು ಹಾಕಿ ಗಾಢವಾದ ದ್ರವವಾಗುವಂತೆ ಮಾಡಿ. ಈ ದ್ರವವನ್ನು ಮಂಜುಗಡ್ಡೆ ಮಾಡುವ ಟ್ರೇಯಲ್ಲಿ ಸುರಿಯಿರಿ ಹಾಗೂ ಫ್ರಿಜ್ಜಿನ ಫ್ರೀಜರಿನಲ್ಲಿರಿಸಿ. ಕೊಂಚ ಹೊತ್ತಿನ ಬಳಿಕ ಇದು ಮಂಜುಗಡ್ಡೆಯಾಗುತ್ತದೆ. ಈ ಮಂಜುಗಡ್ಡೆಗಳನ್ನು ಮೊಡವೆಗಳ ಮೇಲೆ ಉಜ್ಜಿಕೊಳ್ಳಿ. ಇದರಿಂದ ಮೊಡವೆಗಳು ಕಡಿಮೆಯಾಗುವುದು ಮಾತ್ರವಲ್ಲ, ಉರಿಯೂತ ಹಾಗೂ ಕಣ್ಣುಗಳ ಕೆಳಗೆ ಚೀಲದಂತೆ ಉಬ್ಬಿಕೊಂಡಿರುವುದನ್ನೂ ನಿವಾರಿಸುತ್ತದೆ.

ಟೊಮೆಟೊ ಬಿಲ್ಲೆ

ಟೊಮೆಟೊ ಬಿಲ್ಲೆ

ಟೊಮೆಟೊಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇದರ ಸಂಕೋಚಕ ಗುಣ ಚರ್ಮದ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ಇದು ಚರ್ಮದಲ್ಲಿರುವ ಸೋಂಕು ಸಂಬಂಧಿತ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಮೊಡವೆಗಳನ್ನು ಗುಣಪಡಿಸುವ ಕ್ಷಮತೆಯನ್ನೂ ಹೊಂದಿದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಟೊಮೆಟೊ ಹಣ್ಣನ್ನು ಅಡ್ಡಲಾಗಿ ಬಿಲ್ಲೆಗಳಂತೆ ಕತ್ತರಿಸಿ ದಿನಕ್ಕೆರಡು ಬಾರಿ ಮೊಡವೆಗಳ ಮೇಲೆ ನಯವಾಗಿ ಉಜ್ಜಿಕೊಳ್ಳಬೇಕು.

ಬೆಳ್ಳುಳ್ಳಿ ರಸ

ಬೆಳ್ಳುಳ್ಳಿ ರಸ

ಇದು ಮೊಡವೆಗಳನ್ನು ಉಂಟುಮಾಡುವ ಚರ್ಮದ ಸೋಂಕುಗಳನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಪ್ರಬಲವಾದ ಸೋಂಕುನಿವಾರಕ ಗುಣವಿದೆ. ನಿಮ್ಮ ಮೊಡವೆಗಳಿಗೆ ಕೊಂಚ ಬೆಳ್ಳುಳ್ಳಿ ರಸವನ್ನು ತೆಳುವಾಗಿ ಹಚ್ಚಿ ಮತ್ತು ನೀವು ಇಚ್ಛಿಸಿದಷ್ಟು ಹೊತ್ತು ಹಾಗೇ ಒಣಗಲು ಬಿಡಿ. ಮೊಡವೆಗಳಿಗೆ ಇದೊಂದು ಉತ್ತಮ ಮನೆಮದ್ದಾಗಿದೆ.

ಮೊಟ್ಟೆಯ ಬಿಳಿಭಾಗದ ಮುಖಲೇಪ

ಮೊಟ್ಟೆಯ ಬಿಳಿಭಾಗದ ಮುಖಲೇಪ

ಮೊಟ್ಟೆ ಒಡೆದು ದ್ರವವನ್ನು ಸಂಗ್ರಹಿಸಿದ ಬಳಿಕ ಮೊಟ್ಟೆಯ ಚಿಪ್ಪಿನ ಒಳಭಾವನ್ನು ಬೆರಳಿನಿಂದ ಒರೆಸಿ ತೆಗೆಯಿರಿ. ಈ ದ್ರವವನ್ನು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಮೊಟ್ಟೆಯ ಲೇಪನ ಹಚ್ಚುವುದಕ್ಕೂ ಮುನ್ನ ಮೊಡವೆಗಳ ಮೇಲೆ ಲಿಂಬೆರಸವನ್ನು ತೆಳುವಾಗಿ ಹಚ್ಚುವ ಮೂಲಕ ಮೊಡವೆಗಳನ್ನು ಗುಣಪಡಿಸುವುದನ್ನು ಇನ್ನಷ್ಟು ಶೀಘ್ರವಾಗಿಸಬಹುದು.

ಲಿಂಬೆ ರಸ

ಲಿಂಬೆ ರಸ

ರಾತ್ರಿ ಮಲಗುವ ಮುನ್ನ, ಕೊಂಚ ಲಿಂಬೆರಸವನ್ನು ಮೊಡವೆಗಳ ಮೇಲೆ ಹತ್ತಿಯುಂಡೆಯನ್ನು ಬಳಸಿ ತೆಳುವಾಗಿ ಹಚ್ಚಿಕೊಳ್ಳಿ. ಈ ಲೇಪನವನ್ನು ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಮೊಡವೆಗಳು ಕ್ರಮೇಣ ಒಣಗಿ ಪಕಳೆಯಂತೆ ಉದುರುತ್ತವೆ.

ಅರಿಶಿನ

ಅರಿಶಿನ

ಅನಾದಿ ಕಾಲದಿಂದಲೂ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈ ಔಷಧವನ್ನು ಬಳಸಿಕೊಳ್ಳಲಾಗುತ್ತಿದೆ. ಹಾಲು ಮತ್ತು ಅರಿಶಿನವನ್ನು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮೊಡವೆ ಇರುವ ಭಾಗಕ್ಕೆ ಇದನ್ನು ಹಚ್ಚಿಕೊಂಡು ಒಣಗಲು ಬಿಡಿ. ನಂತರ ತೊಳೆದುಕೊಳ್ಳಿ. ಆಗಾಗ್ಗೆ ಈ ಮದ್ದನ್ನು ಮಾಡಿಕೊಂಡು ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ.

ಕಾಫಿ

ಕಾಫಿ

ಒಂದು ಪಾತ್ರೆಗೆ ಸ್ವಲ್ಪ ಕಾಫಿ ಹುಡಿಯನ್ನು ಹಾಕಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಮುಖದಲ್ಲಿ ಮೂಡಿರುವ ಮೊಡವೆ ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು, ಸುಮಾರು 15 ನಿಮಿಷ ಇದನ್ನು ಒಣಗಲು ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಅಡುಗೆ ಮನೆಯ ಸಾಮಾಗ್ರಿ ನಿಮ್ಮ ತ್ವಚೆಯ ಸಮಸ್ಯೆಗೆ ಉತ್ತಮ ಪರಿಹಾರಕವಾಗಿ ಬಂದೊದಗಿದ್ದನ್ನು ನೀವೇ ನೋಡಿ....

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಲಿಂಬೆ ಹಣ್ಣು

ಲಿಂಬೆ ಹಣ್ಣು

ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಕೊಂಚ ಉರಿಯಾಗುತ್ತದೆ, ಬರೆಯ ಹದಿನೈದು ನಿಮಿಷ ಸಹಿಸಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇನ್ನಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಡಿ. ಇದು ಮೊಡವೆಯನ್ನು ಶೀಘ್ರವೇ ಹಣ್ಣಾಗಿಸಿ ಕೀವು ಹೊರಬರುವಂತೆ ನೋಡಿಕೊಳ್ಳುತ್ತದೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶವು ಪಿಂಪಲ್ ಕಲೆಗಳನ್ನು ನಿವಾರಿಸುತ್ತದೆ.

ಬಳಸುವ ವಿಧಾನ

*1/2 ಚಮಚ ನೀರಿನೊಂದಿಗೆ ಬೇಕಿಂಗ್ ಸೋಡಾವನ್ನು ಮಿಶ್ರ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ಮೊಡವೆ ಬ್ರೇಕ್‌ಔಟ್ ಇರುವ ಭಾಗಕ್ಕೆ ಹಚ್ಚಿ, 5 ನಿಮಿಷ ಹಾಗೆಯೇ ಬಿಡಿ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ.

ಹಾಲು

ಹಾಲು

ಇದು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ತನ್ನಲ್ಲಿ ಒಳಗೊಂಡಿದ್ದು ಇದು ಮೊಡವೆಯನ್ನು ನಿವಾರಿಸುವಲ್ಲಿ ನಿಷ್ಣಾತವಾಗಿದೆ. ಅಂತೆಯೇ ಮೊಡವೆಯನ್ನು ನಿವಾರಿಸುತ್ತದೆ

ಬಳಸುವ ವಿಧಾನ

ತಣ್ಣನೆಯ ಹಾಲನ್ನು ಮೊಡವೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ನಿಮ್ಮ ಮುಖದಲ್ಲಿ ಸ್ವಲ್ಪ ಸಮಯ ಇದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಬಳಸಿ ಮತ್ತು 3-4 ಬಾರಿ ಹಚ್ಚಿ ಉತ್ತಮ ಪ್ರತಿಫಲ ಪಡೆದುಕೊಳ್ಳಿ.

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

English summary

How to get rid of pimples at home

Pimples and acne are a common concern for most girls and women too. Even some men may also suffer from this problem. They mask the beauty of your face, making it look red and somewhat scary to look at. It is the need of the hour to remove these embarrassing marks from your face and boost your self confidence. Oily face can be more prone to pimples and acne. The excess oil on the skin attracts more infections and thus causes acne. Since the skin pores are also blocked, the oil trapped inside the pores can also lead to infections and pimples.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more