Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸುಂದರವಾಗಿ ಕಾಣಬೇಕೇ? ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು!
ಸುಂದರ ಹಾಗೂ ಹೊಳೆಯುವ ಮೈಕಾಂತಿ ಸೌಂದರ್ಯದ ಪ್ರತೀಕ. ಉತ್ತಮ ಸೌಂದರ್ಯ ಪಡೆದುಕೊಳ್ಳಲು ಪ್ರತಿಯೊಬ್ಬರು ಕೂಡ ಇದೇ ರೀತಿಯ ಚರ್ಮ ಬೇಕೆಂದು ಬಯಸುವರು. ನಿಮ್ಮ ಜೀವನಶೈಲಿ ಮತ್ತು ಚರ್ಮದ ಆರೈಕೆ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು. ಒತ್ತಡ, ನಿದ್ರಾಹೀನತೆ, ಪೋಷಕಾಂಶಗಳ ಕೊರತೆ, ಮಾಲಿನ್ಯ, ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿ ಹೀಗೆ ಹಲವಾರು ಕಾರಣಗಳಿಂದ ಚರ್ಮದ ಮೇಲೆ ಪರಿಣಾಮ ಬೀರಬಹುದು.
ಈ ಲೇಖನದಲ್ಲಿ ಕೊಟ್ಟಿರುವ ಮನೆಮದ್ದುಗಳು ಹೆಚ್ಚಿನ ಎಲ್ಲಾ ವಿಧದ ಚರ್ಮಗಳಿಗೆ ಹೊಂದಿಕೊಳ್ಳುವುದು. ಇದು ಸುರಕ್ಷಿತ ಮತ್ತು ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯವರ್ಧಕಗಳಿಗಿಂತ ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದು ಚರ್ಮದ ಸಂಪೂರ್ಣ ಆರೋಗ್ಯ ಸುಧಾರಿಸಿ, ಚರ್ಮ ಹೊಳೆಯಲು ನೆರವಾಗುವುದು. ನೈಸರ್ಗಿಕವಾಗಿ ಚರ್ಮವು ಕಾಂತಿಯುವಾಗಿಸಲು ಏನು ಮಾಡಬೇಕು ಎಂದು ಬೋಲ್ಡ್ ಸ್ಕೈ ನಿಮಗಿಂದು ಹೇಳಿಕೊಡಲಿದೆ...
ಲಿಂಬೆ ಮತ್ತು ಸೌತೆಕಾಯಿ
ಇದು ಅತ್ಯುತ್ತಮವಾದ ಮನೆಮದ್ದಾಗಿದೆ. ಲಿಂಬೆಯು ಚರ್ಮದಲ್ಲಿ ಯಾವುದೇ ರೀತಿಯ ಕಲೆಗಳು ಇಲ್ಲದಂತೆ ಮಾಡುವುದು. ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆದುಹಾಕಿ ಸುಂದರ ಚರ್ಮ ನೀಡುವುದು ಮತ್ತು ವಿಟಮಿನ್ ಸಿ ಕೋಶಗಳನ್ನು ಪುನಶ್ಚೇತನಗೊಳಿಸಿ ಕಪ್ಪು ಕಲೆಗಳನ್ನು ಸಂಪೂರ್ಣವಾಗಿ ನಿವಾರಿಸುವುದು. ಲಿಂಬೆಯಲ್ಲಿರುವ ಬ್ಲೀಚಿಂಗ್ ಗುಣಗಳು ಚರ್ಮದ ಬಣ್ಣ ಸುಧಾರಿಸುವುದು. ಮುಖಕ್ಕೆ ಲಿಂಬೆರಸ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರ ಬಳಿಕ ಸೌತೆಕಾಯಿ ತುಂಡುಗಳನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದರಿಂದ ಚರ್ಮ ನಯ ಹಾಗೂ ಮಾಯಿಶ್ಚರೈಸರ್ ಪಡೆಯುವುದು. ಇದನ್ನು ಪ್ರತಿನಿತ್ಯ ಬಳಸಿಕೊಳ್ಳಿ.
ಲಿಂಬೆರಸ ಮತ್ತು ಸಕ್ಕರೆ
ಚರ್ಮಕ್ಕೆ ಕಾಂತಿ ಹಾಗೂ ಸತ್ತ ಚರ್ಮದ ನಿವಾರಣೆ ಮಾಡಲು ಎರಡು ಚಮಚ ಲಿಂಬೆರಸ ಮತ್ತು ಸಕ್ಕರೆ ಮಿಶ್ರಣ ಮಾಡಿ. ಇದನ್ನು ಮುಖ, ಕುತ್ತಿಗೆಗೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಇದನ್ನು ಸ್ಕ್ರಬ್ ಮಾಡಿ. ಉಗುರುಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ. ಕಾಂತಿಯುತ ತ್ವಚೆ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.
ಅರಿಶಿನ ಮತ್ತು ಅನಾನಸು ಜ್ಯೂಸ್
ಅರಿಶಿನವು ನಂಜುನಿರೋಧಕ ಮತ್ತು ಚರ್ಮದ ವರ್ಣ ಸುಧಾರಿಸುವ ಗುಣಗಳು ಇವೆ. ಚರ್ಮದಲ್ಲಿನ ಕಲೆಗಳು ಹಾಗೂ ಇತರ ಗುರುತುಗಳನ್ನು ಇದು ತೆಗೆಯುವುದು. ಚರ್ಮವು ತುಂಬಾ ನಿಸ್ತೇಜವಾಗಿ ಕಾಣುವ ಸೋಂಕು ಮತ್ತು ಅಲರ್ಜಿಗಳ ವಿರುದ್ಧವು ಅರಶಿನ ಹೋರಾಡುವುದು. ಒಂದು ಚಮಚ ಅರಶಿನ ಹುಡಿಗೆ ಅನಾನಸು ಜ್ಯೂಸ್ ಹಾಕಿ ಪೇಸ್ಟ್ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಪೇಸ್ಟ್ ಸಂಪೂರ್ಣವಾಗಿ ಒಣಗುವ ತನಕ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದೆರಡು ಸಲ ಇದನ್ನು ಬಳಸಿ.
ಕಡಲೆಹಿಟ್ಟು ಮತ್ತು ಅರಿಶಿನ ಹುಡಿ
ಕಡಲೆಹಿಟ್ಟು ಮತ್ತು ಅರಶಿನ ಹುಡಿಯ ಮಿಶ್ರಣವು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಸಮಾನ ಪ್ರಮಾಣದಲ್ಲಿ ಎರಡನ್ನು ಹಾಕಿಕೊಂಡು ಹಾಲು ಅಥವಾ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಚರ್ಮಕ್ಕೆ ಹಚ್ಚಿಕೊಂಡು ಅದು ಒಣಗುವ ತನಕ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯುವಾಗ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.
ಜೇನುತುಪ್ಪ ಮತ್ತು ರೋಸ್ ವಾಟರ್
ಸುಂದರ ತ್ವಚೆ ಪಡೆಯಬೇಕಾದರೆ ಚರ್ಮವು ಹೆಚ್ಚು ಮೊಶ್ಚಿರೈಸ್ ಆಗಿರಬೇಕು. ಜೇನುತುಪ್ಪವು ಒಳ್ಳೆಯ ಮೊಶ್ಚಿರೈಸರ್ ಮತ್ತು ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಸೋಂಕನ್ನು ನಿವಾರಿಸುವುದು. ನೀರಿನೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಅದನ್ನು ಪ್ರತೀದಿನ ಬೆಳಗ್ಗೆ ಮುಖಕ್ಕೆ ಹಚ್ಚಿಕೊಳ್ಳಿ.
ಅಲೋವೆರಾ ಜೆಲ್
ಬಿಳಿ ಹಾಗೂ ಸುಂದರ ತ್ವಚೆಗೆ ಇದು ಒಳ್ಳೆಯ ಮಾಸ್ಕ್. ಅಲೋವೆರಾವು ಹಲವಾರು ರೀತಿಯಿಂದ ಚರ್ಮಕ್ಕೆ ನೆರವಾಗುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬ್ಯಾಕ್ಟೀರಿಯಾವನ್ನು ಕೊಂದು ಮೊಡವೆ ಬಾರದಂತೆ ತಡೆಯುವುದು. ಉರಿಯೂತ ಶಮನಕಾರಿ ಗುಣವು ಕಿರಿಕಿರಿಯುಂಟು ಮಾಡುವ ಚರ್ಮಕ್ಕೆ ಶಮನ ನೀಡುವುದು. ಸಂಕೋಚನ ಗುಣವು ಗಾಯವನ್ನು ಗುಣಪಡಿಸುವುದು. ಅಲೋವೆರಾವು ಚರ್ಮಕ್ಕೆ ಮೊಶ್ಚಿರೈಸರ್ ನೀಡಿ ಹೊಸ ಚರ್ಮದ ಕೋಶಗಳು ಬೆಳೆಯಲು ನೆರವಾಗುವುದು.
ಮೊಸರು ಮತ್ತು ಮೊಟ್ಟೆ
ಚರ್ಮಕ್ಕೆ ಕಾಂತಿ ಪಡೆಯಲು ಇದು ತುಂಬಾ ಸುಲಭ ವಿಧಾನ. ಸ್ವಲ್ಪ ಮೊಸರನ್ನು ಮೊಟ್ಟೆಯ ಬಿಳಿ ಲೋಳೆ ಜತೆ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಟ್ಟೆಯು ಚರ್ಮವನ್ನು ಬಿಗಿಗೊಳಿಸುವುದು ಮತ್ತು ನೆರಿಗೆ ನಿವಾರಿಸುವುದು. ಆರೋಗ್ಯಕಾರಿ ಚರ್ಮಕ್ಕೆ ಬೇಕಾಗುವಂತಹ ಪ್ರೋಟೀನ್ ನ್ನು ಮೊಟ್ಟೆಯು ಒದಗಿಸುವುದು.
ಓಟ್ಸ್ ಮತ್ತು ಮೊಸರು
ಮುಖದ ಕಾಂತಿ ಹೆಚ್ಚಿಸಲು ಇದು ತುಂಬಾ ರಹಸ್ಯಕಾರಿ ಮನೆಮದ್ದು. ಸ್ವಲ್ಪ ಓಟ್ಸ್ ನೊಂದಿಗೆ ಮೊಸರನ್ನು ಮಿಶ್ರಣ ಮಾಡಿ ಮತ್ತು ಇದನ್ನು ಚರ್ಮಕ್ಕೆ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು. ಓಟ್ಸ್ ನೈಸರ್ಗಿಕ ಸ್ಕ್ರಬ್ ಆಗಿ ಕೆಲಸ ಮಾಡುವುದು.