ಕಾಂತಿಯುತ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಬಹುದಾದ ತರಕಾರಿಗಳ ಫೇಸ್ ಪ್ಯಾಕ್.

Posted By: Divya Pandit
Subscribe to Boldsky

ಅತಿಯಾದ ಸೂರ್ಯನ ಕಿರಣ, ಧೂಳು, ಅನಾರೋಗ್ಯಕರವಾದ ಜೀವನ ಶೈಲಿ ಸೇರಿದಂತೆ ಅನೇಕ ತೊಂದರೆಗಳಿಂದ ಚರ್ಮವು ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಇನ್ನೂ ಕೆಲವರು ನಿತ್ಯ ಬಳಸುವ ಸೌಂದರ್ಯ ವರ್ಧಕ ಉತ್ಪನ್ನಗಳಿಂದಲೂ ಬಹು ಬೇಗ ಚರ್ಮದ ಕಾಂತಿಯನ್ನು ಕಳೆದುಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಚರ್ಮಕ್ಕೆ ಸೂಕ್ತ ರೀತಿಯ ಆರೈಕೆಯನ್ನು ಮಾಡಬೇಕು. ಇಲ್ಲವಾದರೆ ಸುಕ್ಕುಗಟ್ಟುವುದು, ತೇವಾಂಶ ಕಳೆದುಕೊಳ್ಳುವುದು, ಗುಳ್ಳೆಗಳು, ಮೊಡವೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಕೆಲವು ಅನಿರೀಕ್ಷಿತ ಕಾರಣಗಳು ಮತ್ತು ನಮ್ಮ ಬೇಜವಾಬ್ದಾರಿ ಕಾರಣಗಳಿಂದಲೂ ಚರ್ಮ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ. ಅಂತಹ ಸಮಸ್ಯೆಗಳಿಗಾಗಿಯೇ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಕ್ರೀಮ್‍ಗಳು, ಆರೈಕೆಯ ಔಷಧಗಳು ದೊರೆಯುತ್ತವೆ. ಆದರೆ ಅವುಗಳ ಬಳಕೆಯ ಸೂಕ್ತ ವಿಧಾನ ಅರಿಯದಿದ್ದರೆ ಅಥವಾ ಅತಿಯಾಗಿ ಬಳಕೆ ಮಾಡುವುದರಿಂದಲೂ ಅಡ್ಡ ಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ.

ನಿಮ್ಮ ತ್ವಚೆಯನ್ನು ಸದಾ ಕಾಂತಿಯಿಂದ ಕಂಗೊಳಿಸುವಂತೆ ಮಾಡಬೇಕು ಅಥವಾ ಆರೋಗ್ಯದಿಂದ ಕೂಡಿರುವಂತೆ ಆಗಬೇಕು ಎಂದಾದರೆ ಮನೆಯಲ್ಲಿಯೇ ಇರುವ ಕೆಲವು ತರಕಾರಿಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದರಿಂದ ಗಣನೀಯ ಪರಿಣಾಮವನ್ನು ನೀವು ಪಡೆದುಕೊಳ್ಳಬಹುದು. ನೀವು ಈ ಬಗೆಯ ಒಂದು ಪರಿಹಾರಕ್ಕೆ ಹುಡುಕಾಟ ನಡೆಸುತ್ತಿದ್ದೀರಿ ಎಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಗಣಿಸಿ...

1. ಆಲೂಗಡ್ಡೆಯ ಫೇಸ್ ಪ್ಯಾಕ್

1. ಆಲೂಗಡ್ಡೆಯ ಫೇಸ್ ಪ್ಯಾಕ್

- ಒಂದಿಷ್ಟು ಆಲೂಗಡ್ಡೆಯ ಚೂರುಗಳನ್ನು ತೆಗೆದುಕೊಂಡು, ಚಮಚದ ಸಹಾಯದಿಂದ ಜಜ್ಜಿಕೊಳ್ಳಿ.

- ಆಲೂಗಡ್ಡೆಯ ಪೇಸ್ಟ್‍ಗೆ 2 ಟೀಚಮಚ ಮೊಸರನ್ನು ಸೇರಿಸಿ, ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿಕೊಳ್ಳಿ.

- 10-15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸುವುದರಿಂದ ಚರ್ಮವು ಕಾಂತಿಯಿಂದ ಕೂಡಿರುತ್ತದೆ.

2. ಗಜರಿ ಫೇಸ್ ಪ್ಯಾಕ್:

2. ಗಜರಿ ಫೇಸ್ ಪ್ಯಾಕ್:

- ಎರಡು ಟೀ ಚಮಚ ಗಜರಿ ರಸಕ್ಕೆ ಒಂದು ಟೇಬಲ್ ಚಮಚ ಜೇನುತುಪ್ಪ ಬೆರೆಸಿ.

- ಮಿಶ್ರಣವನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 10-15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ವಾರಕ್ಕೆ ಒಮ್ಮೆ ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ.

3. ಬದನೆಕಾಯಿ ಫೇಸ್ ಪ್ಯಾಕ್:

3. ಬದನೆಕಾಯಿ ಫೇಸ್ ಪ್ಯಾಕ್:

- ಒಂದಿಷ್ಟು ಬದನೆಕಾಯಿ ಚೂರನ್ನು ತೆಗೆದುಕೊಂಡು, ಚಮಚದ ಸಹಾದಿಂದ ಜಜ್ಜಿ ಪೇಸ್ಟ್ ಪಾಡಿ.

- ಬದನೆ ಪೇಸ್ಟ್‍ಗೆ 1 ಟೇಬಲ್ ಚಮಚ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಿಂಗಳಿಗೆ ಎರಡು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆದುಕೊಳ್ಳಬಹುದು.

4. ಬೀಟ್ರೂಟ್ ಫೇಸ್ ಪ್ಯಾಕ್:

4. ಬೀಟ್ರೂಟ್ ಫೇಸ್ ಪ್ಯಾಕ್:

- ಒಂದಿಷ್ಟು ಬೀಟ್ರೂಟ್ ಚೂರನ್ನು ತೆಗೆದುಕೊಂಡು, ಚಮಚದ ಸಹಾದಿಂದ ಜಜ್ಜಿ ಪೇಸ್ಟ್ ಪಾಡಿ.

- ಬೀಟ್ರೂಟ್ ಪೇಸ್ಟ್‍ಗೆ 2 ಟೀಚಮಚ ಆಲಿವ್ ಎಣ್ಣೆ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ.

- ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಿಂಗಳಿಗೆ ಮೂರು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಕಾಂತಿಯುತ ಚರ್ಮವನ್ನು ಪಡೆದುಕೊಳ್ಳಬಹುದು.

5. ಬಟಾಣಿ ಫೇಸ್ ಪ್ಯಾಕ್:

5. ಬಟಾಣಿ ಫೇಸ್ ಪ್ಯಾಕ್:

- 6-7 ಬಟಾಣಿಯ ಪೇಸ್ಟ್‍ಗೆ 1 ಟೀ ಚಮಚ ನಿಂಬೆ ರಸ, 1/2 ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಗೊಳಿಸಿ.

- ನಿಧಾನವಾಗಿ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 15 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ.

- ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಾಜಾ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ತಿಂಗಳಿಗೊಮ್ಮೆ ಈ ಮಿಶ್ರಣವನ್ನು ಅನ್ವಯಿಸಿ.

6. ಎಲೆಕೋಸು ಫೇಸ್ ಪ್ಯಾಕ್:

6. ಎಲೆಕೋಸು ಫೇಸ್ ಪ್ಯಾಕ್:

- 2-3 ಎಲೆಕೋಸಿನ ಎಲೆಯನ್ನು ರುಬ್ಬಿಕೊಳ್ಳಿ.

- ಎಲೆಕೋಸಿನ ಪೇಸ್ಟ್‍ಗೆ 1 ಟೇಬಲ್ ಚಮಚ ಸಕ್ಕರೆ ರಹಿತವಾದ ಗ್ರೀನ್ ಟೀಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 10-15 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ.

- ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಿಂಗಳಿಗೆ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಕಾಂತಿಯುತವಾದ ಆಕರ್ಷಕ ಚರ್ಮವನ್ನು ಪಡೆದುಕೊಳ್ಳಬಹುದು.

7. ಕೊತ್ತಂಬರಿ ದಂಟಿನ ಫೇಸ್ ಪ್ಯಾಕ್:

7. ಕೊತ್ತಂಬರಿ ದಂಟಿನ ಫೇಸ್ ಪ್ಯಾಕ್:

- ಒಂದು ಕೊತ್ತಂಬರಿ ಸಸ್ಯದ ದಂಟುಗಳನ್ನು ತುರಿದುಕೊಳ್ಳಿ. ಅದಕ್ಕೆ 1 ಟೀಚಮಚ ಬಾದಾಮಿ ಎಣ್ಣೆ ಮತ್ತು 2 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ.

- ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಿಂಗಳಿಗೆ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಕಾಂತಿಯುತವಾದ ಆಕರ್ಷಕ ಚರ್ಮವನ್ನು ಪಡೆದುಕೊಳ್ಳಬಹುದು.

English summary

Homemade Vegetable Face Packs For Glowing Skin

Homemade Vegetable Face Packs For Glowing Skin