For Quick Alerts
ALLOW NOTIFICATIONS  
For Daily Alerts

ನಿಮ್ಮ ಚರ್ಮ ರಾತ್ರಿ ಹೊಳೆಯುವಂತೆ ಮಾಡಲು ಎಂಟು ಉಪಾಯಗಳು

ನಿಮ್ಮ ಚರ್ಮ ರಾತ್ರಿಯಲ್ಲಿ ಹೊಳೆಯುವಂತೆ ಮಾಡಲು ಸಲಹೆಗಳಿಗಾಗಿ ನೋಡಿ? ಈ ಲೇಖನ ನಿಮ್ಮ ಮಂಕಾದ ಚರ್ಮವನ್ನು ಪುನಶ್ಚೇತನಗೊಳಿಸಲು ನೆರವಾಗುವ ಮತ್ತು ಅದರ ಹೊಳಪಿನ ಅಂಶ ಉತ್ತೇಜಿಸಲು ನಿರ್ದಿಷ್ಟ ಪ್ರಯತ್ನ ಹಾಗೂ ಪರೀಕ್ಷಿಸಲಾದ ಉಪಾಯಗಳನ್ನು ನೀಡುತ್ತದೆ

By Vanishri Sp
|

ನೀವು ನಿಮ್ಮ ಮಂಕಾದ ಚರ್ಮವನ್ನು ಪ್ರಕಾಶಿಸುವಂತೆ ಮಾಡಲು ಪ್ರೈಮರ್ ಮತ್ತು ಫೌಂಡೇಶನ್ ನಂತಹ ಮೇಕಪ್ ವಸ್ತುಗಳ ಮೇಲೆ ಅವಲಂಬಿತರಾಗಿದ್ದೀರಾ? ಹಾಗಿದ್ದಲ್ಲಿ, ಇದನ್ನು ಓದಿ, ಇಂದು ನಾವು ನಿಮಗೆ ನಿಮ್ಮ ಚರ್ಮ ಶೀಘ್ರ ಹೊಳೆಯುವಂತೆ ಮಾಡಲು ಸರಳವಾದ ಆದರೆ ಪರಿಣಾಮಕಾರಿಯಾದ ಉಪಾಯಗಳನ್ನು ನೀಡುತ್ತಿದ್ದೇವೆ.

ಆದರೆ, ಪರಿಹಾರವನ್ನು ಆರಂಭಿಸುವ ಮೊದಲು, ನಿಮ್ಮ ಚರ್ಮ ತನ್ನ ಪ್ರಾಕೃತಿಕ ಹೊಳಪನ್ನು ಕಳೆದುಕೊಳ್ಳುವ ಅಂಶಗಳ ಬಗ್ಗೆ ಚರ್ಚಿಸೋಣ. ಮಂಕಾದ ಚರ್ಮಕ್ಕೆ ಅತ್ಯಂತ ಸಾಮಾನ್ಯವಾಗಿ ಕಾರಣವಾಗುವ ಅಂಶವೆಂದರೆ ಅಧಿಕ ಮದ್ಯಪಾನ ಸೇವನೆ ಮತ್ತು ಧೂಮಪಾನ, ಚರ್ಮದ ಆರೈಕೆ ಸರಿಯಾಗಿ ಮಾಡದಿರುವುದು ಮತ್ತು ಅಸಮತೋಲನವಾದ ಆಹಾರ ಸೇವನೆ ಇತ್ಯಾದಿ ಅನಾರೋಗ್ಯಕರ ಜೀವನಶೈಲಿ ಕಾರಣವಾಗುತ್ತದೆ.

ಈ ಎಲ್ಲಾ ಅಂಶಗಳೂ ನಿಮ್ಮ ಚರ್ಮದ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಅದು ಮಂಕಾಗಿ ನಿರ್ಜೀವವಾಗಿ ಕಾಣುತ್ತದೆ. ಆದರೆ ಕೆಲವು ನಿರ್ದಿಷ್ಟ ಹಾಗೂ ಪರೀಕ್ಷಿಸಲ್ಪಟ್ಟ ಉಪಾಯಗಳನ್ನು ಅನುಸರಿಸಿ, ಮಂಕಾದ ಚರ್ಮವನ್ನು ಪುನಶ್ಚೇತನಗೊಳಿಸುವ ಹಾಗೂ ಅದರ ಪ್ರಕಾಶಮಾನ ಅಂಶವನ್ನು ಉತ್ತೇಜಿಸುವಂತೆ ಮಾಡಬಹುದು.

ಇಲ್ಲಿ, ನಾವು ಹೊಳಪಾದ ಚರ್ಮವನ್ನು ಪಡೆಯಲು ನೆರವಾಗುವ ಕೆಲವು ಶೀಘ್ರ ಉಪಾಯಗಳನ್ನು ಪಟ್ಟಿ ಮಾಡಿದ್ದೇವೆ.

1. ಹಾಲನ್ನು ಹಚ್ಚುವುದು

1. ಹಾಲನ್ನು ಹಚ್ಚುವುದು

ಹಾಲನ್ನು ಹಚ್ಚುವುದು ವಿಶ್ವಾದ್ಯಂತ ಅಸಂಖ್ಯಾತ ಮಹಿಳೆಯರು ಚರ್ಮದ ಹೊಳಪನ್ನು ಉತ್ತೇಜಿಸಲು ಬಳಸುವ ಒಂದು ವಿಧಾನವಾಗಿದೆ. ಈ ಉಪಾಯ ನಿಮಗೆ ಕಪ್ಪುಕಲೆ ನಿವಾರಿಸಲು ಹಾಗೂ ಎಲ್ಲಾ ಸಮಯದಲ್ಲೂ ನಿಮ್ಮ ಚರ್ಮವನ್ನು ಹೊಳಪಾಗಿರಿಸಲು ನೆರವಾಗುತ್ತದೆ.

ಹೇಗೆ ಬಳಸುವುದು:

- ಹಸಿಯಾದ ತಣ್ಣಗಿರುವ ಹಾಲನ್ನು ಬೌಲ್ ನಲ್ಲಿ ಹಾಕಿ ಅದರಲ್ಲಿ ಹತ್ತಿಯುಂಡೆ ಅದ್ದಿ

- ನಿಮ್ಮ ಚರ್ಮದ ಮೇಲೆಲ್ಲಾ ಹತ್ತಿಯುಂಡೆಯಿಂದ ಮೆಲ್ಲಗೆ ಸವರಿ

- ಅದನ್ನು ರಾತ್ರಿಯಿಡೀ ಹಾಗೆಯೇ ಬಿಡಿ

- ಬೆಳಿಗ್ಗೆ, ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ.

2. ರಾತ್ರಿಯಿಡೀ ಮಲಗಿರುವಾಗ ಮುಖದ ಮಾಸ್ಕ್ ಹಾಕಿ

2. ರಾತ್ರಿಯಿಡೀ ಮಲಗಿರುವಾಗ ಮುಖದ ಮಾಸ್ಕ್ ಹಾಕಿ

ಬ್ಯೂಟಿ ಸ್ಟೋರ್ ಗಳಲ್ಲಿ ಅನೇಕ ಸ್ಲೀಪಿಂಗ್ ಫೇಸ್ ಮಾಸ್ಕ್ ಗಳು ಲಭ್ಯವಿದೆ. ನಿಮ್ಮ ಚರ್ಮದ ವಿಧಕ್ಕೆ ಹೊಂದುವುದನ್ನು ಆಯ್ಕೆಮಾಡಿ ನಿಮ್ಮ ಮಂಕಾದ ಚರ್ಮ ಪುನಶ್ಚೇತನಗೊಳಿಸಲು ಸೂಚನೆಗೆ ಅನುಗುಣವಾಗಿ ಬಳಸಿ.

ಹೇಗೆ ಬಳಸುವುದು:

- ನಿಮ್ಮ ಮುಖವನ್ನು ತೆಳುವಾದ ಕ್ಲೆನ್ಸರ್ ನಿಂದ ಸ್ವಚ್ಛಗೊಳಿಸಿ ಒಣಗಿಸಿ

- ಸ್ಲೀಪಿಂಗ್ ಫೇಸ್ ಮಾಸ್ಕ್ ಹಾಕಿ

- ಅದನ್ನು ರಾತ್ರಿಯಿಡೀ ಹಾಗೆಯೇ ಬಿಡಿ

- ಬೆಳಿಗ್ಗೆ, ಮಾಸ್ಕ್ ತೊಳೆದು ಹಗುರವಾಗಿ ಮಾಯಿಶ್ಚರೈಸರ್ ಹಚ್ಚಿ.

3. ಫೇಸ್ ಆಯಿಲ್ ನಿಂದ ಮಸಾಜ್ ಮಾಡಿ

3. ಫೇಸ್ ಆಯಿಲ್ ನಿಂದ ಮಸಾಜ್ ಮಾಡಿ

ಫೇಸ್ ಆಯಿಲ್ ಗಳು ವಯಸ್ಸಾಗುವುದನ್ನು ತಡೆಯುತ್ತದೆ ಮತ್ತು ಅದು ಮಂಕಾಗಿ ಕಾಣುವ ಚರ್ಮಕ್ಕೆ ಅತ್ಯುತ್ತಮವಾಗಿದೆ. ಅವು ನಿಮ್ಮ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಮಂಕುತನದ ವಿರುದ್ಧ ಹೋರಾಡಿ ಪೋಷಿಸುತ್ತವೆ.

ಹೇಗೆ ಬಳಸುವುದು:

- ತೊಳೆದು ಸ್ವಚ್ಛವಾಗಿರುವ ಮುಖಕ್ಕೆ ಸ್ವಲ್ಪ ಫೇಸ್ ಆಯಿಲ್ ಹಾಕಿ.

- ಕೆಲವು ನಿಮಿಷಗಳವರೆಗೆ ಮೆಲುವಾಗಿ ಮಸಾಜ್ ಮಾಡಿ

- ಅದನ್ನು ರಾತ್ರಿಯಿಡೀ ಹಾಗೆಯೇ ಬಿಡಿ

- ಬೆಳಿಗ್ಗೆ, ನಿಮ್ಮ ಮುಖವನ್ನು ಹರಿಯುವ ನೀರಿನಲ್ಲಿ ತೊಳೆದು ಸ್ವಲ್ಪ ಕ್ಲೆನ್ಸರ್ ಹಚ್ಚಿ.

4. ರೋಸ್ ವಾಟರ್ ಹಾಕುವುದು

4. ರೋಸ್ ವಾಟರ್ ಹಾಕುವುದು

ರೋಸ್ ವಾಟರ್ ನಲ್ಲಿರುವ ಹೊಳಪನ್ನು -ಪ್ರಚೋದಿಸುವ ಗುಣದಿಂದ ಹೆಚ್ಚು ಬಯಸುವ ಚರ್ಮದ ಪದಾರ್ಥವಾಗಿದೆ. ನಿಮ್ಮ ಚರ್ಮ ತಾಜಾ ಆಗಿರುವಂತೆ ಮಾಡಲು ನೆರವಾಗುವುದರೊಂದಿಗೆ, ಇದು ಚರ್ಮವನ್ನು ಮೃದು ಮತ್ತು ಕೋಮಲವಾಗಿಸುತ್ತದೆ.

ಹೇಗೆ ಬಳಸುವುದು:

- ಹತ್ತಿಯುಂಡೆಯನ್ನು ರೋಸ್ ವಾಟರ್ ನಲ್ಲಿ ಅದ್ದಿ.

- ಅದನ್ನು ನಿಮ್ಮ ಮುಖದ ಮೇಲೆ ಮೆಲುವಾಗಿ ಉಜ್ಜಿ

- ಅದು ನಿಮ್ಮ ಚರ್ಮದ ಮೇಲೆ ರಾತ್ರಿಯಿಡೀ ಇರುವಂತೆ ಬಿಡಿ.

- ಬೆಳಿಗ್ಗೆ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

5. ಅಕ್ಕಿ ಮತ್ತು ಎಳ್ಳಿನಿಂದ ಸ್ಕ್ರಬ್ ಮಾಡಿ.

5. ಅಕ್ಕಿ ಮತ್ತು ಎಳ್ಳಿನಿಂದ ಸ್ಕ್ರಬ್ ಮಾಡಿ.

ಅಕ್ಕಿ ಮತ್ತು ಎಳ್ಳಿನ ಸಂಯೋಜನೆ ಮೃತ ಚರ್ಮದ ಕೋಶಗಳನ್ನು ತೆಗೆದು ನಿಮ್ಮ ಚರ್ಮದ ರಂಧ್ರಗಳಿಂದ ಕೊಳೆಯನ್ನು ನಿವಾರಿಸುತ್ತದೆ. ಜೊತೆಗೆ, ಇದು ನಿಮ್ಮ ಚರ್ಮವನ್ನು ಪೋಷಿಸಿ, ಪ್ರಾಕೃತಿಕವಾಗಿ ಹೊಳಪನ್ನು ಪಡೆಯಲು ನೆರವಾಗುತ್ತದೆ.

ಹೇಗೆ ಬಳಸುವುದು:

- 2-3 ಟೀಸ್ಪೂನ್ ಅಕ್ಕಿ ಮತ್ತು ಎಳ್ಳನ್ನು ಒಂದು ಬೌಲ್ ನಲ್ಲಿ ಹಾಕಿ ನೀರು ತುಂಬಿ.

- ರಾತ್ರಿಯಿಡೀ ಆ ಪದಾರ್ಥಗಳನ್ನು ನೆನೆಯಲು ಬಿಡಿ.

- ಬೆಳಿಗ್ಗೆ, ಪದಾರ್ಥವನ್ನು ಬ್ಲೆಂಡರ್ ನಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.

- ನಿಮ್ಮ ಮುಖದ ಮೇಲೆ ಪೇಸ್ಟ್ ಹಚ್ಚಿ 10-15 ನಿಮಿಷಗಳವರೆಗೆ ಮೆಲುವಾಗಿ ಸ್ಕ್ರಬ್ ಮಾಡಿ.

- ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿ

6. ಅಲೋ ವೆರಾ ಜೆಲ್ ಹಚ್ಚುವುದು

6. ಅಲೋ ವೆರಾ ಜೆಲ್ ಹಚ್ಚುವುದು

ಅಲೋವೆರಾ ಜೆಲ್ ನ ಚರ್ಮವನ್ನು ಕೋಮಲವಾಗಿಸುವ ಗುಣಲಕ್ಷಣಗಳು ನಿಮ್ಮ ಚರ್ಮಕ್ಕೆ ಪುನಶ್ಚೇತನ ನೀಡಿ ಅದು ಹೊಳೆಯುವಂತೆ ಪ್ರಭಾವ ಬೀರುತ್ತದೆ.

ಹೇಗೆ ಬಳಸುವುದು:

-. ತಾಜಾ ಅಲೋ ವೆರಾ ಜೆಲ್ ತೆಗೆದುಕೊಳ್ಳಿ.

-ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ

- ರಾತ್ರಿಯಿಡೀ ಹಾಗೆಯೇ ಬಿಡಿ

- ಬೆಳಿಗ್ಗೆ, ನಿಮ್ಮ ಚರ್ಮವನ್ನು ತಣ್ಣೀರಿನಿಂದ ತೊಳೆಯಿರಿ.

7. ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು

7. ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು

ನಿಮ್ಮ ಚರ್ಮವನ್ನು ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ರಕ್ತ ಪರಿಚಲನೆಯನ್ನು ಪ್ರಚೋದಿಸಿ ನಿಮ್ಮ ಮುಖ ಹೊಳಪಾಗಿ ಹಾಗೂ ತಾಜಾ ಆಗಿ ಕಾಣಲು ನೆರವಾಗುತ್ತದೆ.

ಹೇಗೆ ಬಳಸುವುದು:

- ನಿಮ್ಮ ಮುಖವನ್ನು ತೊಳೆದು ಬಾದಾಮಿ ಎಣ್ಣೆ ಹಚ್ಚಿ.

- ನಿಮ್ಮ ಬೆರಳ ತುದಿಯಿಂದ ಮೆಲುವಾಗಿ ಹಚ್ಚಿ.

- ಎಣ್ಣೆ ನಿಮ್ಮ ಮುಖದ ಮೇಲಿರುವಂತೆ ರಾತ್ರಿಯಿಡೀ ಹಾಗೆಯೇ ಬಿಡಿ.

- ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿ

8. ನಿಮ್ಮ ಕಣ್ಣಿನ ಸುತ್ತಲಿನ ಚರ್ಮವನ್ನು ತಾಜಾ ಆಗಿಡುವುದು

8. ನಿಮ್ಮ ಕಣ್ಣಿನ ಸುತ್ತಲಿನ ಚರ್ಮವನ್ನು ತಾಜಾ ಆಗಿಡುವುದು

ಕಣ್ಣಿನ ಸುತ್ತ ಕಪ್ಪುಕಲೆ ಹಾಗೂ ಊದಿದಂತಹ ಕಣ್ಣುಗಳು ನಿಮ್ಮ ಚರ್ಮ ಆಯಾಸದಿಂದ ಮತ್ತು ಮಂಕಾಗಿರುವಂತೆ ಕಾಣುವಂತೆ ಮಾಡುತ್ತದೆ. ಆದರೆ, ರಾತ್ರಿಯಿಡೀ ಕಣ್ಣಿನ ಜೆಲ್ ಹಚ್ಚುವುದರಿಂದ ಕಣ್ಣಿನ ಸುತ್ತ ತಾಜಾ ಕಾಣುವಂತಹ ಚರ್ಮ ಪಡೆಯಬಹುದು.

ಹೇಗೆ ಬಳಸುವುದು:

- ನಿಮ್ಮ ಮುಖದಿಂದ ಮೇಕಪ್ ತೆಗೆದು ಸ್ವಲ್ಪ ಕ್ಲೆನ್ಸರ್ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

- ಲೇಬಲ್ ನಲ್ಲಿ ಸೂಚಿಸಿರುವಂತೆ ಕಣ್ಣಿನ ಜೆಲ್ ಹಚ್ಚಿ.

- ಅದನ್ನು ರಾತ್ರಿಯಿಡೀ ಹಾಗೆಯೇ ಬಿಡಿ.

- ಉತ್ತಮ ಫಲಿತಾಂಶಕ್ಕೆ ಬೆಳಿಗ್ಗೆ, ಜೆಲ್ ತೆಗೆದು ತಣ್ಣೀರಿನಿಂದ ತೊಳೆಯಿರಿ.

English summary

Eight Tricks To Make Your Skin Glow Overnight

Eight Tricks To Make Your Skin Glow Overnight
X
Desktop Bottom Promotion