ಮುಖದ ಸೌಂದರ್ಯ ಹೆಚ್ಚಿಸಲು ತರಕಾರಿ ಫೇಸ್ ಪ್ಯಾಕ್‌ಗಳು

By: Hemanth
Subscribe to Boldsky

ತರಕಾರಿಗಳಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾದರೂ ನಾಲಗೆಗೆ ರುಚಿಸದಿರುವ ಇದನ್ನು ತಿನ್ನಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ವಿವಿಧ ರೀತಿಯ ತರಕಾರಿಗಳಲ್ಲಿ ಹಲವಾರು ಪೋಷಕಾಂಶಗಳು ಇದೆ. ಇದು ದೇಹ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ತರಕಾರಿ ಸಿಪ್ಪೆಯನ್ನು ತಿಪ್ಪೆಗೆ ಎಸೆಯೋ ಮುನ್ನ ಈ ಸ್ಟೋರಿ ಓದಿ..

ತರಕಾರಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಪರಿಣಾಮಕಾರಿ. ತರಕಾರಿಯ ಫೇಸ್ ಪ್ಯಾಕ್ ಮಾಡಿಕೊಂಡು ಬಳಸಿಕೊಳ್ಳಬೇಕು. ಇದು ಚರ್ಮದ ಗುಣಮಟ್ಟ ಸುಧಾರಣೆ ಮಾಡುವುದು. ತರಕಾರಿ ಫೇಸ್ ಪ್ಯಾಕ್ ಬಳಸಿಕೊಳ್ಳುವಾಗ ಸರಿಯಾದ ಪ್ರಮಾಣದಲ್ಲಿ ಅದನ್ನು ಬಳಸುವುದು ಅಗತ್ಯ. ತರಕಾರಿ ಹಚ್ಚಿಕೊಂಡು ರುಬ್ಬಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಸರಳವಾಗಿರುವ ತರಕಾರಿ ಫೇಸ್ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಿಕೊಂಡು ಬಳಸಿದರೆ ಒಳ್ಳೆಯದು. ತರಕಾರಿ ಫೇಸ್ ಪ್ಯಾಕ್ ಅನ್ನು ದೀರ್ಘ ಕಾಲದ ತನಕ ಬಳಸಿದರೆ ಅದರಿಂದ ಲಾಭ ಸಿಗುವುದು.....

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆ ತಿನ್ನುವುದು ಮಾತ್ರವಲ್ಲ, ಅದನ್ನು ಫೇಸ್ ಪ್ಯಾಕ್ ಆಗಿ ಬಳಸುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಆಲೂಗಡ್ಡೆ ಜತೆಗೆ ಸ್ಟ್ರಾಬೆರಿ ಹಣ್ಣನ್ನು ಹಾಕಿಕೊಂಡು ಫೇಸ್ ಪ್ಯಾಕ್ ಮಾಡಿದರೆ ಅದು ಅದ್ಭುತವಾಗಿ ಕೆಲಸ ಮಾಡಲಿದೆ.

ವಿಧಾನ

*ಅರ್ಧ ಆಲೂಗಡ್ಡೆ ಮತ್ತು 12 ಸ್ಟ್ರಾಬೆರಿ

*ಆಲೂಗಡ್ಡೆ ಮತ್ತು ಸ್ಟ್ರಾಬೆರಿಯನ್ನು ತುಂಡರಿಸಿಕೊಳ್ಳಿ. ಎರಡನ್ನು ಜತೆಯಾಗಿ ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ಮೆತ್ತಗಿನ ಪೇಸ್ಟ್ ಅನ್ನು ಸೋಸಿಕೊಳ್ಳಿ ಮತ್ತು ಇದರ ಜ್ಯೂಸ್ ಅನ್ನು ಮುಖ ಹಾಗೂ ಚರ್ಮಕ್ಕೆ ಹಚ್ಚಿಕೊಳ್ಳಿ.

*ಆಲೂಗಡ್ಡೆ ಮತ್ತು ಸ್ಟ್ರಾಬೆರಿಯ ಫೇಸ್ ಪ್ಯಾಕ್ ಅನ್ನು 20 ನಿಮಿಷ ಕಾಲ ಹಾಗೆ ಬಿಡಿ.

*ಇದು ಸರಿಯಾಗಿ ಒಣಗಿದೆ ಎಂದು ನಿಮಗನಿಸಿದ ಬಳಿಕ ನೀರಿನಿಂದ ತೊಳೆಯಿರಿ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ನಲ್ಲಿ ತ್ವಚೆಯನ್ನು ಬಿಳಿಗೊಳಿಸುವ ಹಾಗೂ ಸ್ವಚ್ಛಗೊಳಿಸುವ ಗುಣಗಳು ಅಧಿಕವಾಗಿದೆ. ಕ್ಯಾರೆಟ್ ನಲ್ಲಿ ಇರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ವಯಸ್ಸಾಗುವುದು ಮತ್ತು ನಿರ್ಜೀವ ತ್ವಚೆಯನ್ನು ನಿವಾರಿಸುವುದು.

ವಿಧಾನ

ವಿಧಾನ

*10 ಕ್ಯಾರೆಟ್, ಸಣ್ಣ ಕಪ್ ನಲ್ಲಿ ½ ರೋಸ್ ವಾಟರ್.

*ಕ್ಯಾರೆಟ್ ನ ಸಿಪ್ಪೆ ತೆಗೆದು ಅದನ್ನು ಸರಿಯಾಗಿ ತುಂಡು ಮಾಡಿಕೊಳ್ಳಿ ಮತ್ತು ಒಂದು ಮಿಕ್ಸಿಗೆ ಹಾಕಿ.

*ಕ್ಯಾರೆಟ್ ಅನ್ನು ರುಬ್ಬಿಕೊಂಡ ಬಳಿಕ ಸರಿಯಾಗಿ ಸೋಸಿಕೊಂಡು ಅದರ ತಾಜಾ ರಸ ತೆಗೆಯಿರಿ.

*ಕ್ಯಾರೆಟ್ ರಸಕ್ಕೆ ರೋಸ್ ವಾಟರ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಒಂದು ಸ್ಪ್ರೇ ಬಾಟಲಿಯಲ್ಲಿ ಕ್ಯಾರೆಟ್ ಮತ್ತು ರೋಸ್ ವಾಟರ್ ಮಿಶ್ರಣ ಹಾಕಿಡಿ. ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಂಡರೆ ತ್ವಚೆಯು ಕಾಂತಿ ಪಡೆಯುವುದು.

*ಕ್ಯಾರೆಟ್ ಮತ್ತು ರೋಸ್ ವಾಟರ್ ನ ಮಿಶ್ರಣವನ್ನು ಮೇಕಪ್ ಮೊದಲು ಅಥವಾ ಬಳಿಕ ಬಳಸಿಕೊಳ್ಳಿ.

ಟೊಮೆಟೊ

ಟೊಮೆಟೊ

ಯಾವುದೇ ವಿಧದ ತ್ವಚೆಯಾಗಿದ್ದರೂ ಟೊಮೆಟೊ ಒಳ್ಳೆಯ ಫಲಿತಾಂಶ ನೀಡುವುದು. ಟೊಮೆಟೊ ಚರ್ಮದಲ್ಲಿ ಕಾಲಜನ್ ಮತ್ತು ಇಲಸ್ಟಿನ್ ಉತ್ಪಾದನೆಯನ್ನು ಹೆಚ್ಚಿಸುವುದು. ಇದರಿಂದ ಚರ್ಮವು ಮೃಧು ಹಾಗೂ ಶುದ್ಧವಾಗುವುದು. ಚರ್ಮದ ರಂಧ್ರವನ್ನು ಇದು ಬಿಗಿಗೊಳಿಸುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*1 ಟೊಮೆಟೊ

*1 ಚಮಚ ತಾಜಾ ಅಲೋವೆರಾ ಜೆಲ್

ಟೊಮೆಟೊವನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿ ಅದರ ಪ್ಯೂರಿ ತೆಗೆಯಿರಿ. ಇದಕ್ಕೆ ಅಲೋವೆರಾ ಜೆಲ್ ಸೇರಿಸಿಕೊಳ್ಳಿ.

ಟೊಮೆಟೊ ಫೇಸ್ ಪ್ಯಾಕ್ ಗೆ ಮಾರುಕಟ್ಟೆಯಲ್ಲಿ ಸಿಗುವಂತಹ ಅಲೋವೆರಾ ಜೆಲ್ ಬಳಸಬೇಡಿ. ಟೊಮೆಟೋ ಪ್ಯೂರಿ ಮತ್ತು ಅಲೋವೆರಾ ಜೆಲ್ ಸರಿಯಾಗಿ ಮಿಶ್ರಣ ಮಾಡಿ.

ಈ ಫೇಸ್ ಪ್ಯಾಕ್ ನೀರಿನಂತಿರುವುದರಿಂದ ಇದನ್ನು ಚರ್ಮದ ಮೇಲೆ ನಿಧಾನವಾಗಿ ಮೇಲ್ಮುಖವಾಗಿ ಹಚ್ಚಿಕೊಳ್ಳಿ.

ಈ ಫೇಸ್ ಪ್ಯಾಕ್ ಹಚ್ಚಿಕೊಂಡು ಸುಮಾರು 30 ನಿಮಿಷ ಕಾಲ ಹಾಗೆ ಬಿಡಿ. ಇದು ತ್ವಚೆಯಲ್ಲಿ ಸರಿಯಾಗಿ ಒಣಗಲಿ ಬಳಿಕ ಶುದ್ಧ ನೀರಿನಿಂದ ಮುಖ ತೊಳೆಯಿರಿ.

ಸೌತೆಕಾಯಿ

ಸೌತೆಕಾಯಿ

ಯಾವುದೇ ರೀತಿಯ ಸಮಸ್ಯೆಯಿದ್ದರೂ ಸೌತೆಕಾಯಿ ಫೇಸ್ ಪ್ಯಾಕ್ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡಲಿದೆ. ಸೌತೆಕಾಯಿ ರಸವು ನಿಸ್ತೇಜ ಮತ್ತು ಬಳಲಿರುವ ಚರ್ಮಕ್ಕೆ ಪುನರ್ಚೇತನ ನೀಡುವುದು. ಸೌತೆಕಾಯಿ ತಾಜಾವಾಗಿರಲಿ ಮತ್ತು ಈ ಫೇಸ್ ಪ್ಯಾಕ್ ನ್ನು ಸಂಗ್ರಹಿಸಿಡುವುದು ಬೇಡ.

ವಿಧಾನ

*½ ಸೌತೆಕಾಯಿ ಮತ್ತು 2 ಚಮಚ ಬಾದಾಮಿ ಬೆಣ್ಣೆ.

ಸೌತೆಕಾಯಿಯ ಸಿಪ್ಪೆ ತೆಗೆದು ಅದನ್ನು ತುಂಡು ಮಾಡಿ ರುಬ್ಬಿಕೊಂಡು ಪೇಸ್ಟ್ ಮಾಡಿ.

*ಪಾತ್ರೆಯಲ್ಲಿ ಹಾಕಿಟ್ಟಿರುವ ಬಾದಾಮಿ ಬೆಣ್ಣೆಗೆ ಸೌತೆಕಾಯಿ ಪೇಸ್ಟ್ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ನಯವಾದ ಪೇಸ್ಟ್ ಮಾಡಿ.

*ಕೈ ಅಥವಾ ಬ್ರಷ್ ಬಳಸಿಕೊಂಡು ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. *30 ನಿಮಿಷ ಹಾಗೆ ಬಿಟ್ಟು ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ.

English summary

Vegetable Face Packs To Prepare At Home For A Glowing & Gorgeous Skin

However, when using vegetables on the skin in the form of a pack, just ensure you take it in the right form. If you just cut the vegetables and rub them on the skin - the result might not be visible. So, here are five simple vegetable-based face packs that you can always make at home and try. In case the first attempt of any of these vegetable face packs goes good, you can always continue its use for the long run.
Subscribe Newsletter