ಸೌಂದರ್ಯ ಟಿಪ್ಸ್: ಮುಖದ ಅಂದಕ್ಕೆ ಟು ಇನ್ ಒನ್ ಫೇಸ್ ಪ್ಯಾಕ್

By: Suhani B
Subscribe to Boldsky

ನೀವು ಓದಿದ ತಕ್ಷಣ ಆರ್ಶ್ಚರ್ಯ ಚಕಿತರಾಗುವಿರಿ? ಸ್ವಲ್ಪ ತಾಳಿ, ಸೌಂದರ್ಯ ಪ್ರಜ್ಞೆ ಎಲ್ಲರಲ್ಲಿಯೂ ಸಹಜವಾಗಿಯೇ ಇರುವಂತದು ಅದರಲ್ಲಿ ಮುಖದ ಕಾಂತಿ, ಅಂದ-ಚೆಂದ ಇನ್ನೂ ವಿಶೇಷವಾದದ್ದು. ಕಾಂತಿಯುಕ್ತ ಮುಖ ಕಾಣಲು ಈ ವಿಧಾನವನ್ನು ಅನುಸರಿಸಬಹುದು. ಮುಖದ ಪ್ಯಾಕ್ ಅನ್ನು ಮೊದಲು ತಯಾರು ಮಾಡುವ ಒಂದು ಅನನ್ಯ ವಿಧಾನ ಇಲ್ಲಿದೆ ಮತ್ತು ನಂತರ ಆರೋಗ್ಯಕರವಾಗಿ ನಯವಾಗಿ ಮುಖದ ಕಾಂತಿಯನ್ನು ಪರಿವರ್ತಿಸಲು ಕೆಲವು ಅಂಶಗಳನ್ನು ಮಾಡಿ.

ಈ ಎರಡು- ಅಂಶಗಳಾದ ಸೌಂದರ್ಯ ಮತ್ತು ಆರೋಗ್ಯ ರಕ್ಷಣೆ ಮಾಡಲು ಈ ಮಿಶ್ರಣವನ್ನು ಸಿದ್ಧಪಡಿಸಲು ಕೆಲವು ಪದಾರ್ಥಗಳ ಪಟ್ಟಿಗಳಲ್ಲಿ ಮುಖ್ಯವಾಗಿ ಮಿಕ್ಸರ್ ಗ್ರೈಂಡರ್‌ನ ಅಗತ್ಯವಿದೆ. ಈ ಎರಡಾದ ಸೌಂದರ್ಯ ಮತ್ತು ಆರೋಗ್ಯ ಉತ್ಪನ್ನವನ್ನು ಮನೆಯಲ್ಲಿ ತಯಾರಿಸಲು ಪ್ರಾಥಮಿಕ ಅಂಶವೆಂದರೆ ಮೊಸರು. ಮೊಸರಿನೊಂದಿಗೆ ಕೆಲವು ಅಂಶಗಳನ್ನು ಸೇರಿಸಿದಾಗ ನಿಮ್ಮ ಮುಖ ಪ್ಯಾಕ್ ಬಳಸಲು ಸಿದ್ಧವಾಗಲಿದೆ.

ಒಮ್ಮೆ ಪ್ಯಾಕ್ ನಿಮ್ಮ ಮುಖದ ಮೇಲೆ ಬಳಸಲು ಸಿದ್ಧವಾದಾಗ, ಮುಖಕ್ಕೆ ಬಳಸಿ ನಂತರ ನೀವು ಇದನ್ನು ಸ್ವಲ್ಪ ಹೀರಿ ಕುಡಿಯಬಹುದು ಇದರಿಂದ ತ್ವಚೆಯ ಮೇಲೆ ಒಳ‍್ಳೆಯ ಪರಿಣಾಮ ಬೀರುತ್ತದೆ. ಇದು ಹೇಗೆಂದು ನಿಮಗೆ ಆಶ್ಚರ್ಯವಾಗಬಹುದಲ್ಲವೇ? ಇನ್ನು ವಿಳಂಬವಿಲ್ಲದೆ, ಟು ಇನ್ ಒನ್ ಮುಖದ ಪ್ಯಾಕ್ ನನ್ನು ಮಾಡಲು ಕೆಳಗೆ ತಿಳಿಸಿದ ಪಾಕವಿಧಾನವನ್ನು ಪರಿಶೀಲಿಸಿರಿ. 

turmeric face pack

ಫೇಸ್ ಪ್ಯಾಕ್ ರೆಸಿಪಿ

ಗ್ರೀಕ್ ಮೊಸರು / ಮೊಸರು

ತಾಜಾ ನಿಂಬೆ ರಸ

ತಾಜಾಜೇನುತುಪ್ಪದ 2 ಟೇಬಲ್ ಸ್ಪೂನ್

ಮಿಕ್ಸರ್ ಗ್ರೈಂಡರ್

ಮಿಕ್ಸರ್ ಗ್ರೈಂಡರ್ನಲ್ಲಿ, ಮೊದಲು ಎರಡು ಟೇಬಲ್ ಸ್ಪೂನ್ಗಳ ಗ್ರೀಕ್ ಮೊಸರು /ಮೊಸರು ಹಾಕಿ. ಇದಕ್ಕೆ ತಾಜಾ ನಿಂಬೆ ರಸ ಒಂದು ಟೀ ಚಮಚದಷ್ಟು ಹಿಸುಕಿಕೊಳ್ಳಿ. ಎರಡು ಟೇಬಲ್ ಸ್ಪೂನ್ ತಾಜಾ ಜೇನುತುಪ್ಪವನ್ನು ಸೇರಿಸಿ. ಇದನ್ನು ದಪ್ಪ ಮಿಶ್ರಣ ಮಾಡಿ.

ಮಿಶ್ರಣವು ತುಂಬಾ ದಪ್ಪವಾಗಿದೆಯೆಂದು ನೀವು ಭಾವಿಸಿದರೆ, ನಿಂಬೆ ರಸವನ್ನು ಸ್ವಲ್ಪ ಸೇರಿಸಿ ತೆಳ್ಳಗೆ ಮಾಡುವಂತೆ ಮಾಡಿ. ಬಟ್ಟಲಿನಲ್ಲಿ, ಒಂದು ಚಿಟಿಕಿ ತಾಜಾ ಅರಿಶಿನ ಪುಡಿ ತೆಗೆದುಕೊಂಡು ಮಿಶ್ರಣ ಮಾಡಿ. ಈಗ ನಿಮ್ಮ ಮುಖದ ಪ್ಯಾಕ್ ಸಿದ್ದವಾಗಿದೆ ನಂತರ ಬಳಸಿ.

ಇದಕ್ಕೆ ಇನ್ನೂ ಕೂಡ ಬಾದಾಮಿ ಹಾಲು ಒಂದು ಕಪ್ ಮತ್ತು ಬಾಳೆ ಹಣ‍್ಣು ಸೇರಿಸಬಹುದು. ನಿಮಗೆ ಸಿಹಿಯಾಗಬೇಕೆಂದು ಬಯಸಿದಲ್ಲಿ ಸಕ್ಕರೆ ಒಂದು ಚಮಚ ಹಾಕಿಕೊಳ‍್ಳಬಹುದು. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಲು ಮತ್ತು ಮುಖಕ್ಕೆ ಹಚ್ಚಲು ಸಿದ್ದವಾಗಿದೆ. ಇದು ಹೆಚ್ಚುವರಿ ಟೇಸ್ಟಿ ಮಾಡಲು, ನೀವು ಅದನ್ನು ಶೈತ್ಯೀಕರಣಗೊಳಿಸಬಹುದು.

ದಯವಿಟ್ಟು ಗಮನಿಸಿ, ಇದನ್ನು ಮಾಡಿದ ತಕ್ಷಣ ಬಳಸಬೇಕು ಅಥವಾ ಸೇವಿಸಬೇಕು ಮತ್ತು ಭವಿಷ್ಯದ ಬಳಕೆಗಾಗಿ ಸಂಗ್ರಹಿಸಬಾರದು.

English summary

Two In One: Face Pack Plus Smoothie Recipe

Here's a unique way in which you could prepare a face pack first and then add a few more ingredients to turn it into a healthy smoothie. Preparing this two-in-one combo of beauty and health care mix requires a little long list of ingredients and mandatorily a mixer grinder.
Story first published: Friday, August 18, 2017, 8:01 [IST]
Subscribe Newsletter