ಪೌಡರ್, ಕ್ರೀಮ್ ಪಕ್ಕಕ್ಕಿಡಿ- ಈ ಟಿಪ್ಸ್‌ನ್ನು ಒಮ್ಮೆ ಅನುಸರಿಸಿ ನೋಡಿ

By: Divya
Subscribe to Boldsky

ತ್ವಚೆಯ ಆರೋಗ್ಯವನ್ನು ಕಾಪಾಡಲು ಅನೇಕ ವಿಧಿ-ವಿಧಾನಗಳಿವೆ. ಔಷಧ -ಚಿಕಿತ್ಸೆಗಳಿವೆ. ಆದರೂ ಅದೆಷ್ಟೋ ಸೌಂದರ್ಯ ರಹಸ್ಯ ನಮಗೆ ತಿಳಿದಿರುವುದಿಲ್ಲ. ಹಾಗಾಗಿ ನಾವು ಅವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಸಾಮಾನ್ಯವಾಗಿ ಮುಖದ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯದ ಬಗ್ಗೆ ಹೆಚ್ಚು ಯೋಚಿಸುತ್ತೇವೆ. ಅದೇ ದೇಹದ ಉಳಿದ ಭಾಗಗಳ ತ್ವಚೆಯ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ.

ಮುಖದ ಸೌಂದರ್ಯಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಇತರ ಭಾಗಗಳ ಬಗ್ಗೆಯೂ ಕಾಳಜಿ ಇರಬೇಕು. ಕೆಲವರು ಈ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಹೊಟ್ಟೆಯೂ ವ್ಯಕ್ತಿತ್ವ ಹಾಗೂ ದೇಹದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಈ ಭಾಗದಲ್ಲೂ ತ್ವಚೆಯಲ್ಲಿ ಅನೇಕ ವ್ಯತ್ಯಯ ಉಂಟಾಗುತ್ತವೆ. ಇದಕ್ಕೆ ಕೇವಲ ಎರಡು ದಿನಗಳ ಆರೈಕೆ ಮಾಡಿದರೂ ಸಾಕು. ಕಾಂತಿ ಹೆಚ್ಚುತ್ತದೆ. ಸೌಂದರ್ಯವೂ ದುಪ್ಪಟ್ಟಾಗುವುದು...

 ಆರೈಕೆ-1

ಆರೈಕೆ-1

ಗುಲಾಬಿ ನೀರನ್ನು ಮುಖದ ಮೇಲೆ ಅನ್ವಯಿಸುವಂತೆ ಹೊಟ್ಟೆಯ ಭಾಗದಲ್ಲೂ ಅನ್ವಯಿಸಬೇಕು. ಆಗ ಹೊಟ್ಟೆಯ ತ್ವಚೆಯ ತೇವಾಂಶ ಭರಿತವಾಗಿ ಆರೋಗ್ಯಕರವಾಗಿರುತ್ತದೆ.

ಗುಲಾಬಿಯಂತಹ ಸೌಂದರ್ಯದ ತ್ವಚೆಗೆ ಪ್ರಯತ್ನಿಸಿ-'ರೋಸ್ ವಾಟರ್'

ಆರೈಕೆ-2

ಆರೈಕೆ-2

ಬಾದಾಮಿ ಎಣ್ಣೆಯಿಂದ ಹೊಟ್ಟೆ ಭಾಗವನ್ನು ದಿನದಲ್ಲಿ 2-3 ಬಾರಿ ಮಸಾಜ್ ಮಾಡಿದರೆ ಕಪ್ಪು ಕಲೆಗಳು ಮಾಯವಾಗುತ್ತವೆ.

ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಆರೈಕೆ-3

ಆರೈಕೆ-3

ತುಪ್ಪದಿಂದ ಹೊಟ್ಟೆಯ ಮಸಾಜ್ ಮಾಡಿದರೆ ತ್ವಚೆಯು ಹೆಚ್ಚು ಹೊಳಪನ್ನು ಪಡೆದುಕೊಳ್ಳುತ್ತದೆ. ದುಬಾರಿ ಬೆಲೆಯ ಸೌಂದರ್ಯ ವರ್ಧಕ ಕ್ರೀಮ್‍ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ನೀವೂ ನಂಬಲೇಬೇಕು, ತುಪ್ಪ ತ್ವಚೆಗೆ ಬಹಳ ಒಳ್ಳೆಯದು!

ಆರೈಕೆ-4

ಆರೈಕೆ-4

ತ್ವಚೆಯ ಮೇಲೆ ಜೇನು ತುಪ್ಪವನ್ನು ಲೇಪಿಸಿ, 20 ನಿಮಿಷಗಳ ಬಳಿಕ ತೊಳೆದರೆ ಗುಳ್ಳೆಗಳು ಹಾಗೂ ಶುಷ್ಕತೆ ಕಡಿಮೆಯಾಗುತ್ತವೆ.

ಆರೈಕೆ-5

ಆರೈಕೆ-5

ಸಾಸಿವೆ ಎಣ್ಣೆಯ ಮಸಾಜ್ ಮಾಡಿದರೆ ತ್ವಚೆಯು ಸುಕ್ಕು ರಹಿತವಾದ ಮೃದು ಚರ್ಮವಾಗುತ್ತದೆ.

ಬ್ಯೂಟಿ ಟಿಪ್ಸ್: ಸೌಂದರ್ಯದ ವಿಷಯದಲ್ಲಿ 'ಸಾಸಿವೆ ಎಣ್ಣೆ' ಎತ್ತಿದ ಕೈ!

ಆರೈಕೆ-6

ಆರೈಕೆ-6

ಆಲಿವ್ ಎಣ್ಣೆಯ ಉತ್ತಮವಾದ ಗುಣಗಳಲ್ಲಿ ಇದರ ತೇವಕಾರಕ ಗುಣ ಪ್ರಮುಖವಾಗಿದೆ. ಈ ಗುಣ ಒಣಚರ್ಮಕ್ಕೆ ಹೇಳಿ ಮಾಡಿಸಿದಂತಿದೆ. ಸ್ನಾನವಾದ ಬಳಿಕ ಕೆಲವು ಹನಿ ಆಲಿವ್ ಎಣ್ಣೆಯಿಂದ ಚರ್ಮವನ್ನು ಕೆಲವು ನಿಮಿಷಗಳ ಮಸಾಜ್ ಮೂಲಕ ಹಚ್ಚಿಕೊಳ್ಳುವ ಮೂಲಕ ಚರ್ಮ ಒಣಗುವುದನ್ನು ತಪ್ಪಿಸಬಹುದು. ಅಷ್ಟೇ ಅಲ್ಲದೆ ಹಸ್ತಗಳು ಒರಟಾಗಿದ್ದರೆ ಕೆಲವು ಹನಿ ಆಲಿವ್ ಎಣ್ಣೆಯನ್ನು ಹಚ್ಚಿಕೊಂಡು ನಯವಾಗಿ ಉಜ್ಜಿಕೊಳ್ಳುವ ಮೂಲಕ ಮೃದುವಾಗುತ್ತದೆ. ಅಲ್ಲದೇ ಕೈ ತೊಳೆದುಕೊಳ್ಳುವ ಮುನ್ನ ಆಲಿವ್ ಎಣ್ಣೆಯನ್ನು ಹಚ್ಚಿಕೊಂಡು ಆ ಬಳಿಕ ಸೋಪು ಹಚ್ಚಿ ತೊಳೆದುಕೊಂಡರೆ ಕೈಗಳು ಮೃದುವಾಗಿಯೇ ಉಳಿಯುತ್ತವೆ.

ಚಕಿತಗೊಳಿಸುವ ಆಲೀವ್ ಎಣ್ಣೆ ಮಾಡುವ ಅದ್ಭುತ ಕರಾಮತ್ತು!

English summary

The Secret Of Glowing Skin Is Hidden In Your Belly Button

The navel is directly connected with your face and applying certain oils and commonly available ingredients on it will help cure many face related problems. This is also a quick and easy way to get a flawless skin. All you have to do is to apply a few drops of these below mentioned substances on your navel.
Story first published: Saturday, July 1, 2017, 7:01 [IST]
Subscribe Newsletter