For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೈಕೆಯಲ್ಲಿ ಸೂಕ್ತ ಕ್ರಮ ಅನುಸರಿಸುವುದು ಮುಖ್ಯ

By Divya Pandith
|

ಚರ್ಮದ ಆರೈಕೆ ಮಾಡುವಾಗ ಉತ್ಪನ್ನಗಳನ್ನು ಸೂಕ್ತ ರೀತಿಯಲ್ಲಿ ಬಳಸಬೇಕು. ಏಕೆಂದರೆ ನಮ್ಮ ತ್ವಚೆಯ ಆರೋಗ್ಯ ಮತ್ತು ಗೋಚರತೆ ಬಹಳ ಮುಖ್ಯವಾಗಿರುತ್ತದೆ. ನಾವು ಬಳಸುವ ಉತ್ಪನ್ನಗಳನ್ನು ಹೇಗೆ ಬಳಸಬೇಕು? ಎಷ್ಟು ಪ್ರಮಾಣದಲ್ಲಿ ಅನ್ವಯಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇಲ್ಲವಾದರೆ ಅದರ ಅಡ್ಡ ಪರಿಣಾಮಗಳು ಚರ್ಮದ ಮೇಲೆ ಪ್ರತಿಬಿಂಬಿಸುತ್ತದೆ ಎನ್ನುವುದನ್ನು ತಿಳಿದಿರಬೇಕು.

ಕ್ಲೀನ್ಸರ್, ಟೋನರ್, ಸೆರಮ್ ಮತ್ತು ಮಾಯಿಶ್ಚರೈಸರ್ ಕ್ರೀಮ್‍ಗಳನ್ನು ಸಾಮಾನ್ಯವಾಗಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನಾಗಿ ಬಳಸುತ್ತೇವೆ. ನಿತ್ಯ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಇವು ಅವಶ್ಯಕ ವಸ್ತುಗಳು ಎನ್ನಬಹುದು. ಆದರೆ ಇವುಗಳನ್ನು ಸರಿಯಾದ ಕ್ರಮದಲ್ಲಿ ಬಳಸದಿದ್ದರೆ ಅನೇಕ ತೊಂದರೆಗಳು ಉಂಟಾಗಬಹುದು.

ಆಕರ್ಷಕವಾಗಿ ಕಾಣಬೇಕೆ? ಇಲ್ಲಿದೆ 10 ಬ್ಯೂಟಿ ಟಿಪ್ಸ್

ಸೌಂದರ್ಯ ತಜ್ಞರು ಹೇಳುವ ಪ್ರಕಾರ ನಾವು ಮಲಗುವ ಸಮಯದಲ್ಲಿ ಬಳಸುವ ಆರೈಕೆ ಬೇರೆರೀತಿಯದ್ದು ಹಾಗೂ ಮುಂಜಾನೆಯಿಂದ ನಮ್ಮ ಕೆಲಸ ಪ್ರಾರಂಭವಾಗುವಾಗ ಚರ್ಮದ ಆರೈಕೆ ಬೇರೆ ರೀತಿಯದ್ದು. ಯಾವ ಸಮಯದಲ್ಲಿ ನಾವು ತ್ವಚೆಯ ಆರೈಕೆ ಮಾಡಬೇಕು? ಅದರ ಬಗ್ಗೆ ನಮ್ಮ ಕಾಳಜಿ ಹೇಗಿರಬೇಕು? ಯಾವ ಬಗೆಯ ಉತ್ಪನ್ನಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಸೂಕ್ತ ವಿವರಣೆಯನ್ನು ಈ ಲೇಖನದ ಮುಂದಿನ ಭಾಗದಲ್ಲಿ ನೀಡಿದ್ದೇವೆ.

ಮುಂಜಾನೆಗಾಗಿ:

ಮುಂಜಾನೆಗಾಗಿ:

1.ಕ್ಲೀನ್ಸರ್

ಬೆಳಗ್ಗೆ ಮೊದಲು ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೈಗೊಳ್ಳಬೇಕು. ಚರ್ಮದ ಶುದ್ಧಿಗಾಗಿ ಕ್ಲೀನ್ಸರ್ ಆಯ್ಕೆ ಮಾಡಬಹುದು. ಇದರಲ್ಲಿ ಹೆಚ್ಚು

ನೈಸರ್ಗಿಕ ಉತ್ಪನ್ನಗಳನ್ನು ಬಳಸಿರುವುದರಿಂದ ತ್ವಚೆಯ ಆರೋಗ್ಯವು ಉತ್ತಮವಾಗಿರುತ್ತದೆ. ಮೃದುವಾದ ಬಟ್ಟೆಯ ಬಳಕೆಯಿಂದ ಇದನ್ನು ಅನ್ವಯಿಸಿ ತ್ವಚೆಯನ್ನು ಸ್ವಚ್ಛಗೊಳಿಸಿ.

ಮುಂಜಾನೆಗಾಗಿ:

ಮುಂಜಾನೆಗಾಗಿ:

2. ಫೇಶಿಯಲ್ ಟೋನರ್

ನಂತರ ತ್ವಚೆಯ ಆರೈಕೆಗೆ ಬಳಸಬಹುದಾದ ಉತ್ಪನ್ನ ಫೇಶಿಯಲ್ ಟೋನರ್. ಇದು ಬಹುಬೇಗ ತ್ವಚೆಯ ಮೇಲೆ ಸೌಂದರ್ಯ ಉತ್ಪನ್ನಗಳು ಹೀರಿಕೊಳ್ಳುವಂತೆ ಮಾಡುತ್ತದೆ. ತ್ವಚೆಯನ್ನು ಮೃದು ಮತ್ತು ಪೂರಕವಾಗಿರುವಂತೆ ಮಾಡುತ್ತದೆ.

ಮುಂಜಾನೆಗಾಗಿ

ಮುಂಜಾನೆಗಾಗಿ

3. ಫೇಶಿಯಲ್ ಸೆರಮ್:

ವೇಗವಾಗಿ ಕಾರ್ಯ ನಿರ್ವಹಿಸುವ ಮತ್ತು ಹೆಚ್ಚು ಪ್ರಯೋಜನಕಾರಿ ಟೋನರ್ ಬಳಸಿದ ನಂತರ ಫೇಶಿಯಲ್ ಸೆರಮ್‍ಅನ್ನು ಬಳಸಬೇಕು. ಇದರ ಬಳಕೆ ಮಾಡುವುದರಿಂದ ಚರ್ಮವು ಉತ್ತಮ ಹೈಡ್ರೇಟ್ ಆಗಿರುತ್ತದೆ.

ಮುಂಜಾನೆಗಾಗಿ

ಮುಂಜಾನೆಗಾಗಿ

4. ಮಾಯಿಶ್ಚರೈಸರ್ ಮತ್ತು ಸನ್‌ಕ್ರೀಮ್

ಒಳಾಂಗಣದಲ್ಲಿ ಕೆಲಸ ಮಾಡುವುದಾದರೆ ಮಾಯಿಶ್ಚರೈಸ್ ಕ್ರೀಮ್‍ನ್ನು ಬಳಸಿ. ಇದರಿಂದ ಯಾವುದೇ ತೊಂದರೆ ಇರುವುದಿಲ್ಲ. ಹಾಗೊಮ್ಮೆ ನೀವು ಬಿಸಿಲಿಗೆ ಹೋಗಬೇಕು. ಇಲ್ಲ ಬಿಸಿಲಲ್ಲಿಯೇ ಕೆಲಸ ಮಾಡಬೇಕು ಎಂದಾದರೆ ಸ್ವಲ್ಪ ಸನ್‌ಕ್ರೀಮ್ ಅನ್ವಯಿಸಿಕೊಳ್ಳಬೇಕು. ಇದರಿಂದ ತ್ವಚೆಯು ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಜೊತೆಗೆ ಸೂರ್ಯನ ಕಿರಣದಿಂದ ಚರ್ಮದ ಮೇಲೆ ಉಂಟಾಗುವ ಪರಿಣಾಮವನ್ನು ತಪ್ಪಿಸಬಹುದು.

ರಾತ್ರಿ ವೇಳೆ

ರಾತ್ರಿ ವೇಳೆ

1. ಮೇಕಪ್ ರಿಮೂವರ್

ಚರ್ಮದ ಕಾಳಜಿಗೆ ಇದು ಅತ್ಯಂತ ಉಪಯುಕ್ತವಾದದ್ದು. ದಿನವಿಡೀ ಮೇಕಪ್ ಇರುವ ತ್ವಚೆಗೆ ರಾತ್ರಿಯ ಸಮಯದಲ್ಲಿ ಸ್ವಲ್ಪ ವಿರಾಮ ನೀಡಬೇಕು. ಅದಕ್ಕಾಗಿ ಮೇಕಪ್ ರಿಮೂವರ್ ಬಳಸಿ ತ್ವಚೆಯನ್ನು ಸ್ವಚ್ಛಗೊಳಿಸಿ. ಇದರಿಂದ ತ್ವಚೆಯು ಪುನಃರುಜ್ಜೀವನ ಪಡೆದುಕೊಳ್ಳುತ್ತದೆ. ಅಲ್ಲದೆ ತ್ವಚೆಯ ಮೇಲೆ ಯಾವುದೇ ಸೌಂದರ್ಯವರ್ಧಕ ಉತ್ಪನ್ನ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ.

2. ಕ್ಲೀನ್ಸರ್

2. ಕ್ಲೀನ್ಸರ್

ಮುಖದ ಮೇಕಪ್ ತೆಗೆದ ನಂತರ ಫೇಶಿಯಲ್ ಕ್ಲೀನ್ಸರ್ ಬಳಸಬೇಕು. ಚರ್ಮದ ಆರೈಕೆಗೆ ಇದೊಂದು ಸೂಕ್ತವಾದ ಉತ್ಪನ್ನವೆಂದು ಹೇಳಬಹುದು. ಇದರ ಬಳಕೆಯಿಂದ ತ್ವಚೆಯು ಶುಚಿಯಾಗುವುದು. ಆದಷ್ಟು ರಾಸಾಯನಿಕ ಮುಕ್ತವಾದ ಕ್ಲೀನ್ಸರ್‍ಅನ್ನು ಬಳಸಿ.

3. ಫೇಶಿಯಲ್ ಟೋನರ್

3. ಫೇಶಿಯಲ್ ಟೋನರ್

ಶುದ್ಧೀಕರಣದ ನಂತರ ಮುಖದ ತ್ವಚೆಗೆ ಫೇಶಿಯಲ್ ಟೋನರ್ ಬಳಸಬೇಕು. ಈ ಸೌಂದರ್ಯದ ಉತ್ಪನ್ನವು ತ್ವಚೆಯನ್ನು ರಾತ್ರಿವೇಳೆ ಮೃದುವಾಗಿ ಹಾಗೂ ಪೂರಕವಾಗಿರುವಂತೆ ಮಾಡುತ್ತದೆ. ನಿಮ್ಮ ಚರ್ಮದ ಆರೋಗ್ಯ ಕಾಪಾಡಲು ಟೋನರ್ ಬಳಕೆ ಅತ್ಯುತ್ತಮವಾದದ್ದು.

4. ಸ್ಪಾಟ್ ಟ್ರೀಟ್ಮೆಂಟ್ ಉತ್ಪನ್ನ

4. ಸ್ಪಾಟ್ ಟ್ರೀಟ್ಮೆಂಟ್ ಉತ್ಪನ್ನ

ಸ್ಟಾಟ್ ಟ್ರೀಟ್ಮೆಂಟ್ ಉತ್ಪನ್ನವು ಮೊಡವೆ, ಕಪ್ಪು ಕಲೆಗಳು, ಸುಕ್ಕುಗಟ್ಟುವುದು ಹಾಗೂ ವಯಸ್ಸಾದ ಛಾಯೆ ಹೊಂದುವುದನ್ನು ನಿವಾರಿಸುತ್ತದೆ. ಟೋನರ್ ಬಳಕೆಯ ನಂತರ ಈ ಉತ್ಪನ್ನವನ್ನು ಬಳಸಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವ ಬೀರುವುದು.

5. ಫೇಶಿಯಲ್ ಸೆರಮ್

5. ಫೇಶಿಯಲ್ ಸೆರಮ್

ಚರ್ಮದ ಆರೈಕೆ ಮಾಡುವುದರಲ್ಲಿ ಫೇಶಿಯಲ್ ಸೆರಮ್ ಸಹ ಅತ್ಯುತ್ತಮ ಪಾತ್ರವಹಿಸುತ್ತದೆ. ಅಂಗಡಿಯಲ್ಲಿ ಖರೀದಿಸಿರುವು ಅಥವಾ ಮನೆಯಲ್ಲಿ ನೀವೇ ತಯಾರಿಸಿಕೊಂಡಿರುವ ಸೆರಮ್‍ಅನ್ನು ತ್ವಚೆಗೆ ಅನ್ವಯಿಸಿ ಹಾಗೆಯೇ ಬಿಡಿ.

6. ಐ ಕ್ರೀಮ್

6. ಐ ಕ್ರೀಮ್

ಕಣ್ಣಿನ ಸುತ್ತ ಕಪ್ಪುಕಲೆ ಇರುವುದು ಅಥವಾ ಬೆಳಗ್ಗೆ ಕಣ್ಣಿನ ಸುತ್ತ ಉಬ್ಬುವ ಸಮಸ್ಯೆ ಇರುವ ಮಹಿಳೆಯರು ಐ ಕ್ರೀಮ್ ಬಳಸುವುದು ಸೂಕ್ತ. ಹಾಸಿಗೆಗೆ ಹೋಗುವ ಮುನ್ನ ಕ್ರೀಮ್ ಅನ್ನು ಅನ್ವಯಿಸುವುದರಿಂದ ಆ ಪ್ರದೇಶದ ಚರ್ಮವು ರಾತ್ರಿ ಅವಧಿಯಲ್ಲಿ ಪುನಃಶ್ಚೇತನಗೊಳ್ಳುವುದು.

7. ಮಾಯಿಶ್ಚರೈಸರ್

7. ಮಾಯಿಶ್ಚರೈಸರ್

ಅಂತಿಮವಾಗಿ ನೀವು ರಾತ್ರಿ ಮಲಗುವಾಗ ಸ್ವಲ್ಪ ಮಾಯಿಶ್ಚರೈಸರ್ ಕ್ರೀಮ್‍ನ್ನು ಅನ್ವಯಿಸಿಕೊಂಡು ಮಲಗಬೇಕು. ಇದರಿಂದ ತ್ವಚೆಯು ರಾತ್ರಿಯಿಡಿ ಆರೋಗ್ಯದಿಂದ ಕೂಡಿರುತ್ತದೆ. ಜೊತೆಗೆ ಬೆಳಗ್ಗೆ ಎದ್ದ ತಕ್ಷಣ ಮೃದು ಹಾಗೂ ತಾಜಾತನದ ಅನುಭವ ಉಂಟಾಗುವುದು.

English summary

The Correct Order To Apply Your Skin Care Products

Today at Boldsky, we're letting you know about the right order in which you should apply your skin care items. As per the beauty experts, the sequence you follow in the morning is different from the one that you should follow before bed.
X
Desktop Bottom Promotion