ಸರಳ ಬ್ಯೂಟಿ ಟಿಪ್ಸ್: ಮಿತ ಖರ್ಚು-ಅಧಿಕ ಲಾಭ

By: Jaya subramanya
Subscribe to Boldsky

ಉದ್ಯೋಗವನ್ನು ತೊರೆದು ಮಹಿಳೆಯರು ಮನೆಯಲ್ಲಿ ಇರುತ್ತಾರೆ ಎಂದಾದಲ್ಲಿ ಅವರು ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದೇ ಅರ್ಥವಾಗಿದೆ. ಮನೆಯಲ್ಲಿರುವ ಮಹಿಳೆ ಕೂಡ ಆರಾಮವಾಗಿ ಇರುತ್ತಾರೆ ಎಂಬುದಾಗಿ ನೀವು ನೆನೆಸಿಕೊಳ್ಳುವುದು ತಪ್ಪು. ಮನೆಯನ್ನು ಒಪ್ಪ ಓರಣವಾಗಿಸುವ ಕೆಲಸ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಹೀಗೆ ಮನೆಯಲ್ಲಿರುವ ಮಹಿಳೆ ಕೂಡ ಮಾಡುತ್ತಾರೆ. ಉದ್ಯೋಗದಲ್ಲಿರುವ ಮಹಿಳೆಯರು ವಾರಕ್ಕೊಮ್ಮೆ ಬಿಡುವಿನ ದಿನದಲ್ಲಿ ಮಾಡುವ ಕೆಲಸವನ್ನು ಇವರು ಒಬ್ಬರೇ ಪ್ರತಿನಿತ್ಯ ಮಾಡಿ ಮುಗಿಸುತ್ತಾರೆ.

ಕೆಲಸದವರನ್ನು ಇಟ್ಟುಕೊಳ್ಲದೆಯೇ ಮಹಿಳೆ ಮನೆಯಲ್ಲಿ ದುಡಿಯುತ್ತಾರೆ. ಒಮ್ಮೊಮ್ಮೆ ಉದ್ಯೋಗದಲ್ಲಿರುವ ಮಹಿಳೆ ಕೂಡ ನಾನಾ ಕಾರಣಗಳಿಂದ ತಮ್ಮ ಕೆಲಸವನ್ನು ತೊರೆದು ಮನೆಯಲ್ಲಿರುವುದನ್ನು ಆಯ್ಕೆಮಾಡಿಕೊಂಡಿರುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯಾಗಿರಬಹುದು, ಇಲ್ಲವೇ ಉದ್ಯೋಗ ಸ್ಥಳಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲದಿರುವ ಅನಾನುಕೂಲತೆಗಳು ಹೀಗೆ ಬೇರೆ ಬೇರೆ ಸಮಸ್ಯೆಗಳಿಂದ ಅವರು ಉದ್ಯೋಗಕ್ಕೆ ತಿಲಾಂಜಲಿ ಇಟ್ಟಿರುತ್ತಾರೆ.

glowing skin

ಮನೆಯಲ್ಲಿರುವ ಮಹಿಳೆಯು ಅತ್ಯಮೂಲ್ಯ ಕ್ಷಣಗಳನ್ನು ತಮ್ಮ ಮಕ್ಕಳೊಂದಿಗೆ ಕಳೆಯುತ್ತಾರೆ. ಮಗುವನ್ನು ಸ್ವತಃ ತಾವೇ ನೋಡಿಕೊಂಡು ಡೇ ಕೇರ್‌ಗೆ ಅಟ್ಟುವ ಪ್ರಮೇಯವನ್ನು ತಪ್ಪಿಸಿಕೊಂಡಿರುತ್ತಾರೆ. ಇನ್ನು ಕೆಲವು ಮಹಿಳೆಯರು ಮನೆಯಲ್ಲಿದ್ದುಕೊಂಡೇ ಹಣಗಳಿಸುವ ವಿಧಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಂತೆಯೇ ಸೌಂದರ್ಯವನ್ನು ಉತ್ತಮಗೊಳಿಸುವ ವಿಧಾನಗಳಲ್ಲಿ ಅವರು ಸಿದ್ಧಹಹಸ್ತರೆನಿಸಿರುತ್ತಾರೆ. ಮನೆಯಲ್ಲೇ ದೊರೆಯುವ ಉತ್ಪನ್ನಗಳಿಂದ ಅವರು ಸೌಂದರ್ಯ ಚಿಕಿತ್ಸೆಯನ್ನು ಮಾಡಿಕೊಂಡು ನೈಸರ್ಗಿಕ ಕಳೆಯಿಂದ ಹೊಳೆಯುತ್ತಾರೆ. ಹೀಗಾಗಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ವಿದ್ಯೆಗಳನ್ನು ಇವರಿಂದಲೇ ಕಲಿತುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ವಿಧಾನಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಡಾರ್ಕ್ ಸ್ಪಾಟ್‌ಗಳಿಗೆ ಚಿಕಿತ್ಸೆ

ಬಿಸಿಲಿಗೆ ಹೆಚ್ಚು ತೋರಿಸಿಕೊಳ್ಳುವುದು, ವಯಸ್ಸಾಗುವಿಕೆಯ ಲಕ್ಷಣ ಹೀಗೆ ನಾನಾ ಕಾರಣಗಳಿಂದ ಡಾರ್ಕ್ ಸ್ಪಾಟ್ ಉಂಟಾಗುತ್ತದೆ. ಈ ಕೆಳಗೆ ಇದಕ್ಕಾಗಿ ನಾವು ವಿಧಾನಗಳನ್ನು ನೀಡುತ್ತಿದ್ದು ಅವುಗಳೇನು ಎಂಬುದನ್ನು ಅರಿತುಕೊಳ್ಳಿ

ಸಾಮಾಗ್ರಿಗಳು

1 ಚಮಚ ಲಿಂಬೆ ರಸ

1 ಚಮಚ ಜೇನು

1 ಚಮಚ ಬಾದಾಮಿ ಎಣ್ಣೆ 

Almonds Oil

ವಿಧಾನ

ಒಂದು ಪಾತ್ರೆಯಲ್ಲಿ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಿ

ನಿಮ್ಮ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು 15 ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದನ್ನು ಮೂರು ವಾರಗಳ ಕಾಲ ಪುನರಾವರ್ತಿಸಿ

ಬ್ಲಾಕ್‌ಹೆಡ್‌ಗಳಿಗೆ ಚಿಕಿತ್ಸೆ

ನಿಮ್ಮದು ಜಿಡ್ಡಿನ ತ್ವಚೆ ಎಂದಾದಲ್ಲಿ ಬ್ಲಾಕ್‌ಹೆಡ್ಸ್ ನಿಮಗೆ ತಲೆನೋವನ್ನು ಉಂಟುಮಾಡುವುದು ಖಂಡಿತ. ಈ ಕೆಳಗೆ ಇದನ್ನು ನಿವಾರಿಸಲು ವಿಧಾನಗಳನ್ನು ನೀಡಿದ್ದೇವೆ.

1 ಮೊಟ್ಟೆಯ ಬಿಳಿ ಭಾಗ

1 ಚಮಚ ಓಟ್ಸ್

egg

ವಿಧಾನ

1. ಮೊಟ್ಟೆಯನ್ನು ಬೀಟ್ ಮಾಡಿಕೊಳ್ಳಿ

2. ಇದಕ್ಕೆ ಓಟ್ಸ್ ಸೇರಿಸಿ

3. ನಿಮ್ಮ ಮುಖ ಮತ್ತು ಬ್ಲಾಕ್‌ಹೆಡ್ಸ್ ಇರುವ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ

4. 15 ನಿಮಿಷ ಹಾಗೆಯೇ ಬಿಡಿ

5. ಒಣಗಿದ ಬಟ್ಟೆಯಲ್ಲಿ ಮಾಸ್ಕ್ ನಿವಾರಿಸಿ. ನಿಯಮಿತವಾಗಿ ಇದನ್ನು ಬಳಸಿ.

ಸುಕ್ಕುಗಟ್ಟಿದ ಮುಖ

ವಯಸ್ಸಾದಂತೆ ನಮ್ಮ ತ್ವಚೆಯು ನಾನಾ ಸಮಸ್ಯೆಗಳ ಆಗರವಾಗುತ್ತದೆ. ಅದರಲ್ಲಿ ಸುಕ್ಕುಗಟ್ಟುವಿಕೆ, ನಿಸ್ತೇಜವಾಗಿರುವುದು ಸಾಮಾನ್ಯವಾಗಿರುತ್ತದೆ. ಆದರೆ ಪಪ್ಪಾಯ ಬಳಸಿಕೊಂಡು ಈ ಸುಕ್ಕಿನ ಸಮಸ್ಯೆಯಿಂದ ಹೊರಬರಬಹುದಾಗಿದೆ. ಅಕ್ಕಿ ಹುಡಿ ಮತ್ತು ಮೊಸರನ್ನು ಪಪ್ಪಾಯ ಮಿಶ್ರಣಕ್ಕೆ ಸೇರಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಆಯಿತು.

ಸಾಮಾಗ್ರಿಗಳು

1/4 ಕಪ್ ಹಸಿ ಪಪ್ಪಾಯ

1-2 ಚಮಚ ಅಕ್ಕಿ ಹುಡಿ

1 ಚಮಚ ಮೊಸರು

ವಿಧಾನ

ಬೌಲ್‌ನಲ್ಲಿ ಪಪ್ಪಾಯವನ್ನು ಮ್ಯಾಶ್ ಮಾಡಿಕೊಳ್ಳಿ

ಇದಕ್ಕೆ ಅಕ್ಕಿ ಹುಡಿ ಮತ್ತು ಮೊಸರು ಸೇರಿಸಿಕೊಳ್ಳಿ

ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಇದನ್ನು ಹಚ್ಚಿಕೊಳ್ಳಿ.

ಮಲ್ಟಿ ಪರ್ಪಸ್ ಸ್ಕ್ರಬ್

ನಿಮ್ಮ ಮುಖದ ಸೌಂದರ್ಯಕ್ಕಾಗಿ ಸ್ಕಿನ್ ಎಕ್ಸ್‌ಫೋಲಿಯೇಟ್ ಮಾಡುವುದು ಮುಖ್ಯವಾಗಿದೆ. ಇದು ಹೊಸ ಕೋಶಗಳ ಅಭಿವೃದ್ಧಿಗೆ ಕಾರಣವಾಗಿದೆ. ಇದು ಮಲ್ಟಿಪರ್ಪಸ್ ಆಗಿದ್ದು ಇದು ಮುಖದ ಸಣ್ಣ ಕೂದಲನ್ನು ಕೂಡ ತೆಗೆಯುತ್ತದೆ.

ಸಾಮಾಗ್ರಿಗಳು

1 ಕಪ್ ಮಸ್ಸೂರ್ ದಾಲ್

1/2 ಕಪ್ ತೆಂಗಿನ ನೀರು

1/2 ಕಿತ್ತಳೆ ಸಿಪ್ಪೆ

ವಿಧಾನ

ರಾತ್ರಿ ಪೂರ್ತಿ ಮಸ್ಸೂರ್ ದಾಲ್ ಅನ್ನು ನೆನೆಸಿ

ಬಿಸಿಲಿನಲ್ಲಿ ಇದನ್ನು ಕಿತ್ತಳೆ ಸಿಪ್ಪೆಯೊಂದಿಗೆ ಒಣಗಿಸಿ

ಇದು ಚೆನ್ನಾಗಿ ಒಣಗಿದನ ನಂತರ ಮಿಕ್ಸಿಯಲ್ಲಿ ಹುಡಿ ಮಾಡಿಕೊಳ್ಳಿ

ನಿಮ್ಮ ಮುಖ ಮತ್ತು ದೇಹಕ್ಕೆ ಇದನ್ನು ಹಚ್ಚಿಕೊಳ್ಳಿ

face mask

ಹೊಳೆಯುವ ತ್ವಚೆಗಾಗಿ

ನಿಮ್ಮ ಮುಖ ತುಂಬಾ ಬಳಲಿದಂತೆಯೇ? ಮತ್ತು ಕಾರ್ಯಕ್ರಮಕ್ಕಾಗಿ ಹೊಳೆಯುವ ತ್ವಚೆಯನ್ನು ನೀವು ಪಡೆದುಕೊಳ್ಳಬೇಕೆ? ಹಾಗಿದ್ದರೆ ಇಲ್ಲಿ ನಾವು ನೀಡಿರುವ ಸಾಮಾಗ್ರಿಗಳನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಪಡೆದುಕೊಳ್ಳಿ.

ಸಾಮಾಗ್ರಿಗಳು

3 ಚಮಚ ಕಾಫಿ ಹುಡಿ

1 ಚಮಚ ತೆಂಗಿನೆಣ್ಣೆ/ತೆಂಗಿನ ಹಾಲು

ವಿಧಾನ

1. ಒಂದು ಪಾತ್ರೆಯಲ್ಲಿ ಸಾಮಾಗ್ರಿಗಳನ್ನು ಜೊತೆಯಾಗಿ ಹಾಕಿ

2. ನಿಮ್ಮ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಮತ್ತು ಅದನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ

3. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

Skin Care Tips Mums At Home Should Follow

Have you even noticed these Mums have the best and flawless skin? They never suffer from skin problems and they hardly show any signs of ageing. Do you think it is because they are not exposed to the elements outside? No, they have many tasks such as dropping the kids to school and picking them up, shopping for groceries etc. Then, is it because theirlives are less stressful? Do you think managing house hold chores, feeding the kids, bathing the kids, sending them to school, getting them to finish their home work and finally preparing the family's favourite meals everyday isn't stressful enough? Then, what might be their secret to beautiful skin?
Subscribe Newsletter