ಮೆಣಸಿನ ಬೋಂಡಾ ಮಾಡಲು ಬಳಸುವ 'ಕಡಲೆ ಹಿಟ್ಟಿನ' ಫೇಸ್ ಪ್ಯಾಕ್‌!

Posted By: Jaya subramanya
Subscribe to Boldsky

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಸಮಸ್ಯೆ ಎಂಬುದು ಮುಗಿಯದ ಸಂಕಷ್ಟವಾಗಿ ಪರಿಣಮಿಸಿದೆ. ಸುತ್ತಲಿನ ಧೂಳು ಕೊಳಕು ನಿಮ್ಮ ಮುಖದ ರಂಧ್ರಗಳಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡು ಮುಗಿಯದ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಮಾರುಕಟ್ಟೆಯಲ್ಲಿ ದೊರೆಯುವ ಎಷ್ಟೋ ಸೌಂದರ್ಯ ಪರಿಕರಗಳೂ ಕೂಡ ಈ ಸಮಸ್ಯೆಯನ್ನು ನಿವಾರಿಸದಷ್ಟು ಕಷ್ಟಕರವಾಗಿ ನಿಮ್ಮ ಮುಖದ, ತ್ವಚೆಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಮೊಡವೆ, ಗುಳ್ಳೆಗಳು, ಕಪ್ಪು ಕಲೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಮುಗಿಯುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ಇದು ತಲೆನೋವನ್ನು ತಂದಿಡುತ್ತಿದೆ. ಹಾಗಿದ್ದರೆ ಪ್ರಿಯ ಸ್ತ್ರೀಯರೇ, ಇದೀಗ ನಿಮ್ಮ ಸೌಂದರ್ಯದ ಈ ಸಮಸ್ಯೆಯನ್ನು ನಿವಾರಿಸುವ ಅದ್ಭುತ ಮನೆಮದ್ದಿನೊಂದಿಗೆ ನಾವು ಬಂದಿದ್ದು ಅದನ್ನು ಸುಲಭವಾಗಿ ಬಳಸಿಕೊಂಡು ನಿಮ್ಮ ಸೌಂದರ್ಯಕ್ಕೆ ಮಾರಕವಾಗಿರುವ ಈ ಸಮಸ್ಯೆಗಳನ್ನು ಹೊಡೆದೋಡಿಸಬಹುದಾಗಿದೆ. ಕಡಲೆ ಹಿಟ್ಟಿನ ಮ್ಯಾಜಿಕ್‌ನಿಂದ

ನಿಮ್ಮ ತ್ವಚೆ ಎಷ್ಟು ಅಂದವಾಗುತ್ತದೆ ಎಂಬುದನ್ನು ನೀವು ಕಂಡುಕೊಂಡಲ್ಲಿ ಖಂಡಿತ ನೀವು ಶಾಕ್ ಆಗುತ್ತೀರಿ. ಇದಕ್ಕಾಗಿ ನೀವು ಖರ್ಚುಮಾಡಬೇಕಾದ್ದು ನಿಮ್ಮ ಅತ್ಯಮೂಲ್ಯ ಸಮಯವನ್ನಾಗಿದೆ. ಕಡಲೆಹಿಟ್ಟು ನಿಮ್ಮ ಮುಖದ ಕಾಂತಿಯನ್ನು ವರ್ಧಿಸುತ್ತದೆ. ಇದನ್ನು ಫೇಸ್ ಪ್ಯಾಕ್ ಅಥವಾ ಮಾಸ್ಕ್ ರೂಪದಲ್ಲಿ ಕೂಡ ಬಳಸಬಹುದಾಗಿದೆ. ಅದರಲ್ಲೂ ಮುಖ ತೊಳೆಯಲು ಕಡಲೆ ಹಿಟ್ಟು ಬಳಸುವುದರ ಮೂಲಕ ಮುಖದ ಚರ್ಮಕ್ಕೆ ಯಾವುದೇ ರೀತಿಯ ಹಾನಿಯನ್ನುಂಟುಮಾಡದೇ ಚರ್ಮದ ಕಾಂತಿಯನ್ನು ಸ್ವಾಭಾವಿಕ ರೂಪದಲ್ಲಿ ಉಳಿಸಿಕೊಳ್ಳಬಹುದು.ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಕಡಲೆಹಿಟ್ಟಿನ ಫೇಸ್ ಪ್ಯಾಕ್‌ಗಳನ್ನು ಅರಿತುಕೊಳ್ಳಿ...... 

ಮುಖದ ಕೂದಲಿನ ನಿವಾರಣೆಗೆ

ಮುಖದ ಕೂದಲಿನ ನಿವಾರಣೆಗೆ

ಒಂದು ಚಮಚ ಕಡಲೆಹಿಟ್ಟಿಗೆ ಕೋರ್ನ್ ಸ್ಟ್ರಾಚ್ ಮತ್ತು ಬೌಲ್‌ ಅನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿಕೊಳ್ಳಿ. ಇದಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಬೆರೆಸಿ ಪೇಸ್ಟ್ ತಯಾರಿಸಿ. ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಇದು ಸಂಪೂರ್ಣ ಒಣಗಿದ ನಂತರ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಬಳಸಿ ಮುಖದ ಕೂದಲಿನ ಸಮಸ್ಯೆಯಿಂದ ಬಿಡುಗಡೆ ಹೊಂದಿ.

ಬೇಸನ್ ಮಸಾಜಿಂಗ್ ಕ್ರೀಮ್

ಬೇಸನ್ ಮಸಾಜಿಂಗ್ ಕ್ರೀಮ್

ಒಂದು ಚಮಚ ಕಡಲೆಹಿಟ್ಟಿಗೆ ಎರಡು ಚಮಚ ತೆಂಗಿನಕಾಯಿ ಕ್ರೀಮ್ ಅನ್ನು ಸೇರಿಸಿ ಮತ್ತು ಎರಡು ಚಮಚ ಗ್ಲಿಸರಿನ್ ಬೆರೆಸಿ. ಇದನ್ನು ಪೇಸ್ಟ್‌ನಂತೆ ತಯಾರಿಸಿ. ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ವೃತ್ತಾಕಾರವಾಗಿ 10 ನಿಮಿಷ ಮಸಾಜ್ ಮಾಡಿ. ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ನೆರಿಗೆ ಮುಕ್ತ ತ್ವಚೆಗಾಗಿ ಕಡಲೆಹಿಟ್ಟಿನ ಫೇಸ್ ಪ್ಯಾಕ್

ನೆರಿಗೆ ಮುಕ್ತ ತ್ವಚೆಗಾಗಿ ಕಡಲೆಹಿಟ್ಟಿನ ಫೇಸ್ ಪ್ಯಾಕ್

ಒಂದು ಬೌಲ್‌ನಲ್ಲಿ ಎರಡು ಚಮಚ ಕಡಲೆಹಿಟ್ಟನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಮೊಟ್ಟೆಯ ಬಿಳಿ ಭಾಗ ಹಾಗೂ ಒಂದು ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ. ದಪ್ಪನೆಯ ಪೇಸ್ಟ್ ಸಿದ್ಧಪಡಿಸಿ. ನಿಮ್ಮ ಮುಖ ಮತ್ತು ಕತ್ತಿಗೆ ಪೇಸ್ಟ್ ರೂಪದಲ್ಲಿ ಹಚ್ಚಿಕೊಳ್ಳಿ. ಅಂತೆಯೇ ಕಣ್ಣುಗಳ ಕೆಳಗೆ ನೆರಿಗೆ ಇರುವ ಭಾಗದಲ್ಲಿ ಚೆನ್ನಾಗಿ ಹಚ್ಚಿ. ಇದನ್ನು 30 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮುಖದ ಕಾಂತಿ ವರ್ಧನೆಗೆ ಕಡಲೆಹಿಟ್ಟು

ಮುಖದ ಕಾಂತಿ ವರ್ಧನೆಗೆ ಕಡಲೆಹಿಟ್ಟು

ಪಪ್ಪಾಯವನ್ನು ಮಿಕ್ಸಿಯಲ್ಲಿ ಅರೆದುಕೊಳ್ಳಿ. ಇದಕ್ಕೆ 1 ಚಮಚ ಕಿತ್ತಳೆ ರಸ ಮತ್ತು ಒಂದು ಚಮಚ ಕಡಲೆಹಿಟ್ಟನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿ ಪೇಸ್ಟ್ ತಯಾರಿಸಿ. ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿಕೊಂಡು 20 ನಿಮಿಷ ಬಿಡಿ. ನಂತರ ಹತ್ತಿಯಿಂದ ಇದನ್ನು ತೆಗೆಯಿರಿ. ಮೇಲ್ಮುಖವಾಗಿ ಹತ್ತಿಯಿಂದ ಮಸಾಜ್ ಮಾಡಿ, ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಹೊಳೆಯುವ ತ್ವಚೆಗಾಗಿ ಕಡಲೆಹಿಟ್ಟು

ಹೊಳೆಯುವ ತ್ವಚೆಗಾಗಿ ಕಡಲೆಹಿಟ್ಟು

ಎರಡು ಚಮಚ ಕಡಲೆಹಿಟ್ಟಿಗೆ ಒಂದು ಚಮಚ ಮಿಲ್ಕ್ ಕ್ರೀಮ್ ಅನ್ನು ಸೇರಿಸಿ ಮತ್ತು ಒಂದು ಚಮಚ ಜೇನು ಸೇರಿಸಿ. ನಿಮ್ಮ ಮುಖವನ್ನು ರೋಸ್ ವಾಟರ್‌ನಿಂದ ತೊಳೆದುಕೊಳ್ಳಿ ನಂತರ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಹಾಗೆಯೇ ಇರಿಸಿ. ಇದರಿಂದ ನಿಮ್ಮ ಮುಖ ಕಾಂತಿಯಿಂದ ಹೊಳೆಯುತ್ತದೆ.

ಡಾರ್ಕ್ ಸ್ಪಾಟ್‌ಗಳು ಮತ್ತು ಮೊಡವೆ ಗುರುತು ಹೋಗಿಸಲು

ಡಾರ್ಕ್ ಸ್ಪಾಟ್‌ಗಳು ಮತ್ತು ಮೊಡವೆ ಗುರುತು ಹೋಗಿಸಲು

ಟೊಮೇಟೊ ಹಣ್ಣನ್ನು ತೆಗೆದುಕೊಂಡು ಅದನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿಕೊಳ್ಳಿ. ಇದಕ್ಕೆ ಎರಡು ಚಮಚ ಅಲೊವೇರಾ ಜೆಲ್ ಸೇರಿಸಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿ 20 ನಿಮಿಷ ಹಾಗೆಯೇ ಬಿಡಿ. ಇದು ಮೊಡವೆಗಳನ್ನು ತೆಗೆದುಹಾಕಲು ಉತ್ತಮವಾಗಿದೆ.

ತ್ವಚೆಯ ಪಿಗ್‌ಮೆಂಟೇಶನ್‌ಗೆ

ತ್ವಚೆಯ ಪಿಗ್‌ಮೆಂಟೇಶನ್‌ಗೆ

ಒಂದು ಪಾತ್ರೆಯಲ್ಲಿನ ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಬೆರೆಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಅರಶಿನ ತೆಗೆದುಕೊಳ್ಳಿ. ಬೇಕಿಂಗ್ ಸೋಡಾ ಮಿಶ್ರಣವನ್ನು ಕಡಲೆ ಹಿಟ್ಟಿನ ಅರಿಶಿನ ಮಿಶ್ರಣಕ್ಕೆ ಬೆರೆಸಿಕೊಳ್ಳಿ. ಇದನ್ನು ದಪ್ಪನೆಯ ಪೇಸ್ಟ್‌ನಂತೆ ತಯಾರಿಸಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. 30 ನಿಮಿಷ ಹಾಗೆಯೇ ಬಿಡಿ ನಂತರ ಮುಖ ತೊಳೆದುಕೊಳ್ಳಿ.

ಒಣ ತ್ವಚೆಗಾಗಿ ಕಡಲೆ ಹಿಟ್ಟಿನ ಪ್ಯಾಕ್

ಒಣ ತ್ವಚೆಗಾಗಿ ಕಡಲೆ ಹಿಟ್ಟಿನ ಪ್ಯಾಕ್

ಅರ್ಧ ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಳ್ಳಿ ಇದಕ್ಕೆ ಒಂದು ಚಮಚ ಜೇನು ಮತ್ತು ಎರಡು ಚಮಚ ಕಡಲೆ ಹಿಟ್ಟನ್ನು ಬೆರೆಸಿ. ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ. 20 ನಿಮಿಷ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಇದು ನಿಮ್ಮ ಮುಖವನ್ನು ಮಾಯಿಶ್ಚರೈಸ್ ಮಾಡುತ್ತದೆ.

ಕಡಲೆ ಹಿಟ್ಟಿನ ಸ್ಕ್ರಬ್

ಕಡಲೆ ಹಿಟ್ಟಿನ ಸ್ಕ್ರಬ್

ಒಂದು ಚಮಚ ಔಟ್ಸ್ ಅನ್ನು ಹಾಲಿನಲ್ಲಿ ಐದು ನಿಮಿಷ ನೆನೆಸಿ. ಚಮಚದ ಸಹಾಯದಿಂದ ಇದನ್ನು ಮೆತ್ತಗಾಗಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಕಡಲೆ ಹಿಟ್ಟನ್ನು ಸೇರಿಸಿ. ನಿಮ್ಮ ಮುಖಕ್ಕೆ ಈ ಸ್ಕ್ರಬ್ ಹಚ್ಚಿರಿ. ನಂತರ ವೃತ್ತಾಕಾರವಾಗಿ ಐದು ನಿಮಿಷ ಮಸಾಜ್ ಮಾಡಿಕೊಳ್ಳಿ. ಇದು ಮೃತಕೋಶವನ್ನು ನಿವಾರಿಸುತ್ತದೆ ಮತ್ತು ತ್ವಚೆಯಲ್ಲಿನ ಕೊಳಕನ್ನು ಹೋಗಲಾಡಿಸುತ್ತದೆ.

ಮೊಡವೆಯನ್ನು ನಿವಾರಿಸಲು ಕಡಲೆಹಿಟ್ಟು

ಮೊಡವೆಯನ್ನು ನಿವಾರಿಸಲು ಕಡಲೆಹಿಟ್ಟು

ಒಂದು ಚಮಚ ಕಡಲೆಹಿಟ್ಟನ್ನು ಒಂದು ಚಮಚ ಶ್ರೀಗಂಧದೊಂದಿಗೆ ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಯೋಗರ್ಟ್ ಬೆರೆಸಿ ಪೇಸ್ಟ್ ತಯಾರಿಸಿ. ನಿಮ್ಮ ಮುಖವನ್ನು ಮೊದಲು ತೊಳೆದುಕೊಂಡು ನಂತರ ಈ ಪೇಸ್ಟ್ ಹಚ್ಚಿಕೊಳ್ಳಿ. ಈ ಪ್ಯಾಕ್ ನಿಮ್ಮ ಮುಖದಲ್ಲಿ 20 ನಿಮಿಷ ಹಾಗೆಯೇ ಇರಲಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಬೇರೆ ಬೇರೆ ವಿಧದಲ್ಲಿ ಕಡಲೆ ಹಿಟ್ಟನ್ನು ಮುಖಕ್ಕೆ ಬಳಸಿಕೊಳ್ಳಬಹುದಾಗಿದೆ.

ಅರಿಶಿಣ ಮತ್ತು ಕಡಲೆಹಿಟ್ಟು

ಅರಿಶಿಣ ಮತ್ತು ಕಡಲೆಹಿಟ್ಟು

ಅರಿಶಿಣದಿಂದ ಅಲರ್ಜಿ ಉಂಟಾಗುವವರು ಈ ಫೇಸ್ ಮಾಸ್ಕ್ ಟ್ರೈ ಮಾಡಬೇಡಿ. ಮುಖದಲ್ಲಿರುವ ರೋಮ ಹೋಗಲಾಡಿಸುವ ಬಯಸುವವರಿಗೆ ಬೆಸ್ಟ್ ಫೇಸ್ ಮಾಸ್ಕ್ ಆಗಿದೆ. ಈ ಫೇಸ್ ಮಾಸ್ಕ್ ಮಾಡಿದರೆ ಮೊಡವೆಯನ್ನು ಕೂಡ ಹೋಗಲಾಡಿಸಬಹುದು.

ನಿಂಬೆ ರಸ ಮತ್ತು ಬಾದಾಮಿ

ನಿಂಬೆ ರಸ ಮತ್ತು ಬಾದಾಮಿ

ಬಾದಾಮಿಯನ್ನು ಒಂದು ರಾತ್ರಿ ನೆನೆಹಾಕಿ ನಂತರ ಅದನ್ನು ಪೇಸ್ಟ್ ರೀತಿ ಮಾಡಿ ಕಡಲೆ ಹಿಟ್ಟಿಗೆ ಹಾಕಿ ಕಲೆಸಬೇಕು, ನಂತರ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಇದನ್ನು ಫೇಸ್ ಮಾಸ್ಕ್ ಆಗಿ ಬಳಸಿದರೆ ಕಪ್ಪುಕಲೆಗಳು ಕಡಿಮೆಯಾಗುವುದು ಹಾಗೂ ಮುಖದ ಬಿಳುಪು ಹೆಚ್ಚಾಗುವುದು.

ಕಡಲೆಹಿಟ್ಟು ಮತ್ತು ಮಜ್ಜಿಗೆ

ಕಡಲೆಹಿಟ್ಟು ಮತ್ತು ಮಜ್ಜಿಗೆ

ಚರ್ಮದ ಬಣ್ಣವನ್ನು ತಿಳಿಗೊಳಿಸಲು ಕಡಲೆಹಿಟ್ಟು ತುಂಬಾ ಒಳ್ಳೆಯದು. ಮಜ್ಜಿಗೆ ಜತೆ ಸೇರಿಸಿದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಬೇಕಾಗುವ ಸಾಮಗ್ರಿಗಳು

2 ಚಮಚ ಕಡಲೆಹಿಟ್ಟು 1 ಚಮಚ ಮಜ್ಜಿಗೆ 1 ಚಮಚ ಟೊಮೆಟೊ ಜ್ಯೂಸ್ ½ ಚಮಚ ಅರಿಶಿನ ಹುಡಿ ವಿಧಾನ

1. ಕಡಲೆಹಿಟ್ಟು ಮತ್ತು ಮಜ್ಜಿಗೆಯನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

2. ಟೊಮೆಟೊ ಜ್ಯೂಸ್ ಮತ್ತು ಅರಿಶಿನ ಹುಡಿಯನ್ನು ಇದಕ್ಕೆ ಹಾಕಿ. ಪೇಸ್ಟ್ ತುಂಬಾ ದಪ್ಪಗಿದ್ದರೆ ಸ್ವಲ್ಪ ಮಜ್ಜಿಗೆ ಹೆಚ್ಚು ಹಾಕಿ

3. ಇನ್ನು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ.

4. ನಂತರ ಈ ಮಿಶ್ರಣವನ್ನು ಪ್ರತೀ ದಿನ ಬಳಸಿಕೊಳ್ಳಿ. ನಿಯಮಿತವಾಗಿ ಬಳಸಿಕೊಂಡರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಕಡಲೆ ಹಿಟ್ಟು ಹಾಗೂ ಮೊಟ್ಟೆಯ ಬಿಳಿ

ಕಡಲೆ ಹಿಟ್ಟು ಹಾಗೂ ಮೊಟ್ಟೆಯ ಬಿಳಿ

ಕಡಲೆ ಹಿಟ್ಟಿಗೆ ಮೊಟ್ಟೆಯ ಬಿಳಿ ಹಾಕಿ ಚೆನ್ನಾಗಿ ಕಲೆಸಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ರೀತಿಯಲ್ಲಿ ಫೇಸ್ ಮಾಸ್ಕ್ ಮಾಡುವುದಾದರೆ ವಾರದಲ್ಲಿ 2 ಎರಡು ಬಾರಿ ಮಾಡಿ.

ಕಡಲೆ ಹಿಟ್ಟು ಮತ್ತು ಹಾಲು

ಕಡಲೆ ಹಿಟ್ಟು ಮತ್ತು ಹಾಲು

ಇದನ್ನು ಪ್ರತಿದಿನ ಕೂಡ ಮಾಡಬಹುದು. ಕಡಲೆ ಹಿಟ್ಟಿಗೆ ಹಾಲು ಹಾಕಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಉತ್ತಮವಾದ ಫಲಿತಾಂಶವನ್ನು ಕಾಣಬಹುದು.

English summary

Simple Beauty Remedies With Besan

Besan is a safe natural beauty ingredient that brings glow and fairness to your face in an inexpensive way. There is no need to go for expensive beauty treatments if you follow these simple beauty tips with besan.Have a look at some of the simple homemade besan face packs for skin care. These beauty tips with besan are used to brighten your skin, removing facial hair, softening skin, lessening wrinkles etc.