ನೆರಿಗೆ ನಿವಾರಣೆ ಮಾಡಲು ಈ ಸಾರಭೂತ ತೈಲ ಬಳಸಿ

By: Hemanth
Subscribe to Boldsky

ವಯಸ್ಸಾಗುತ್ತಾ ಹೋದಂತೆ ದೇಹದ ಪ್ರತಿಯೊಂದು ಭಾಗವು ಕೂಡ ವಯಸ್ಸಾಗುತ್ತಿರುವ ಲಕ್ಷಣ ತೋರಿಸುವುದು. ಅದರಲ್ಲೂ ಕಣ್ಣಿನ ಸುತ್ತಲಿನ ಭಾಗವು ನಿಮ್ಮ ವಯಸ್ಸನ್ನು ಎತ್ತಿ ತೋರಿಸುವುದು. ಕಣ್ಣಿನ ಸುತ್ತಲಿನ ಭಾಗವು ತುಂಬಾ ಸೂಕ್ಷ್ಮವಾಗಿರುವುದು. ಆದರೆ ಇದೇ ಭಾಗದಲ್ಲಿ ನಿಮ್ಮ ವಯಸ್ಸಾಗುವ ವೇಳೆ ಕಂಡುಬರುವಂತಹ ಕಪ್ಪು ಕಲೆ ಮತ್ತು ನೆರಿಗೆ ಕಣ್ಣಿನ ಕೆಳ ಹಾಗೂ ಸುತ್ತಲಿನ ಭಾಗದಲ್ಲಿ ಗೋಚರಿಸುವುದು. ಇದು ನಿಮ್ಮ ವಯಸ್ಸನ್ನು ತಿಳಿಸುವುದು ಮಾತ್ರವಲ್ಲದೆ ಮುಖದ ಸೌಂದರ್ಯವನ್ನು ಕೆಡಿಸುವುದು. ಇದನ್ನು ಹೋಗಲಾಡಿಸಲು ಕೆಲವರು ತುಂಬಾ ದುಬಾರಿ ಕ್ರೀಮ್ ಬಳಕೆ ಮಾಡುವರು.

ಆದರೆ ಇದರ ಬದಲಿಗೆ ಕೆಲವು ಸಾರಭೂತ ತೈಲ ಬಳಸಿಕೊಂಡರೆ ಅದರಿಂದ ಪರಿಣಾಮಕಾರಿಯಾಗಿ ಕಲೆ ಹಾಗೂ ನೆರಿಗೆ ನಿವಾರಣೆ ಮಾಡಬಹುದು. ಇದೇ ತೈಲಗಳನ್ನು ಕ್ರೀಮ್ ಗಳಿಗೂ ಹಾಕಿರುವರು. ತುಂಬಾ ಪರಿಣಾಮಕಾರಿಯಾಗಿರುವ ಸಾರಭೂತ ತೈಲ ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನ ಮೂಲಕ ಹೇಳಿಕೊಡಲಿದೆ. ಈ ತೈಲಗಳಲ್ಲಿ ವಯಸ್ಸಾಗುವ ಲಕ್ಷಣ ತಡೆಯುವಂತಹ ಆ್ಯಂಟಿ ಆಕ್ಸಿಡೆಂಟ್ ಗಳು ಇವೆ.

ಹಣೆಯ ಮೇಲಿನ ನೆರಿಗೆಯನ್ನು ನಿವಾರಿಸಲು ನೈಸರ್ಗಿಕ ಟಿಪ್ಸ್

ಇದು ನೆರಿಗೆ ನಿವಾರಣೆ ಮಾಡಿ ಕಣ್ಣಿನ ಸುತ್ತಲಿನ ಚರ್ಮವು ಯೌವನಯುತವಾಗಿ ಕಾಣುವಂತೆ ಮಾಡುವುದು. ಶ್ರೀಗಂಧದ ಸಾರಭೂತ ತೈಲ, ಜೆರೇನಿಯಂ ಸಾರಭೂತ ತೈಲ ಇತ್ಯಾದಿಗಳು ಪ್ರಮುಖವಾಗಿದೆ. ಇತರ ಕೆಲವು ತೈಲ ಅಥವಾ ನೈಸರ್ಗಿಕ ಸಾಮಗ್ರಿಗಳೊಂದಿಗೆ ಇದನ್ನು ಬಳಸಿದಾಗ ಒಳ್ಳೆಯ ಫಲಿತಾಂಶ ಸಿಗುವುದು. ಇದರ ಬಗ್ಗೆ ತಿಳಿಯಲು ಮುಂದಕ್ಕೆ ಓದಿ....

ಸೂಚನೆ: ಬಾಧಿತ ಪ್ರದೇಶಕ್ಕೆ ಸಾರಭೂತ ತೈಲ ಬಳಸುವ ಬದಲು ಇದನ್ನು ದೇಹದ ಬೇರೆ ಭಾಗದ ಚರ್ಮಕ್ಕೆ ಬಳಸಿ ನೋಡಿ...

ಫ್ರಾಂಕ್ಸೆನ್ಸ್ ಸಾರಭೂತ ತೈಲ ಬಳಸುವುದು ಹೇಗೆ

ಫ್ರಾಂಕ್ಸೆನ್ಸ್ ಸಾರಭೂತ ತೈಲ ಬಳಸುವುದು ಹೇಗೆ

ಒಂದು ಚಮಚ ಫ್ರಾಂಕ್ಸೆನ್ಸ್ ಸಾರಭೂತ ತೈಲದೊಂದಿಗೆ 4-5 ಚಮಚ ತೆಂಗಿನೆಣ್ಣೆ ಜತೆ ಮಿಶ್ರಣ ಮಾಡಿಕೊಳ್ಳಿ.

ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

5-10 ನಿಮಿಷ ಕಾಲ ಇದು ಹಾಗೆ ಇರಲಿ.

ಬಳಿಕ ಒಣ ಟವೆಲ್ ನಿಂದ ಇದನ್ನು ಒರೆಸಿಕೊಳ್ಳಿ.

ವಾರಕ್ಕೊಮ್ಮೆ ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಮುಖದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ, ಪವರ್‌‌ಫುಲ್ ಮನೆಮದ್ದುಗಳು

ಶ್ರೀಗಂಧದ ಸಾರಭೂತ ತೈಲ ಬಳಸುವುದು ಹೇಗೆ

ಶ್ರೀಗಂಧದ ಸಾರಭೂತ ತೈಲ ಬಳಸುವುದು ಹೇಗೆ

ಎರಡು ಹನಿ ಶ್ರೀಗಂಧದ ಸಾರಭೂತ ತೈಲದೊಂದಿಗೆ ½ ಚಮಚ ಆಲಿವ್ ತೈಲ ಬೆರೆಸಿಕೊಳ್ಳಿ.

ಈ ಮಿಶ್ರಣವನ್ನು ಬೆರಳಿನಿಂದ ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

5-10 ನಿಮಿಷ ಕಾಲ ಇದು ಹಾಗೆ ಇರಲಿ.

ಬಳಿಕ ಇದನ್ನು ನೀರಿನಿಂದ ತೊಳೆಯಿರಿ.

ಒಂದು ವಾರಕ್ಕೊಮ್ಮೆ ಬಳಸಿದರೆ ಫಲಿತಾಂಶ ನಿಮಗೆ ಕಾಣಿಸುವುದು.

ಜರೇನಿಯಂ ಸಾರಭೂತ ತೈಲ ಬಳಸುವುದು ಹೇಗೆ?

ಜರೇನಿಯಂ ಸಾರಭೂತ ತೈಲ ಬಳಸುವುದು ಹೇಗೆ?

ಎರಡು ಹನಿ ಎಣ್ಣೆಯನ್ನು ಚರ್ಮದ ಮೊಶ್ಚಿರೈಸರ್ ಜತೆಗೆ ಸೇರಿಸಿಕೊಳ್ಳಿ.

ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

10-15 ನಿಮಿಷ ಮುಖದಲ್ಲಿ ಹಾಗೆ ಇಟ್ಟ ಬಳಿಕ ಒಣ ಟವೆಲ್ ನಿಂದ ಒರೆಸಿಕೊಳ್ಳಿ.

ಕಣ್ಣಿನ ಸುತ್ತ ಇರುವ ನೆರಿಗೆ ನಿವಾರಣೆ ಮಾಡಲು ವಾರಕ್ಕೆ ಒಂದು ಸಲ ಇದನ್ನು ಬಳಸಿ

 ಮೈರ್ಹ್(ರಾಳ) ಸಾರಭೂತ ತೈಲ

ಮೈರ್ಹ್(ರಾಳ) ಸಾರಭೂತ ತೈಲ

ಬಳಸುವುದು ಹೇಗೆ

ಎರಡು ಹನಿ ಹೇಳಿರುವಂತಹ ಸಾರಭೂತ ತೈಲ ಮತ್ತು ½ ಚಮಚ ಜೇನುತುಪ್ಪ ಬೆರೆಸಿಕೊಳ್ಳಿ.

ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

ಕೆಲವು ನಿಮಿಷ ಕಾಲ ಒಣಗಲು ಬಿಡಿ.

ಶುದ್ಧ ನೀರಿನಿಂದ ತೊಳೆಯಿರಿ.

ವಾರಕ್ಕೆ ಒಂದು ಸಲ ಇದನ್ನು ಬಳಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಕ್ಲಾರಿ ಸೇಜ್ ಸಾರಭೂತ ತೈಲ

ಕ್ಲಾರಿ ಸೇಜ್ ಸಾರಭೂತ ತೈಲ

ಬಳಸುವುದು ಹೇಗೆ

ಎರಡ ಹನಿ ಹೇಳಿರುವಂತಹ ಸಾರಭೂತ ತೈಲವನ್ನು 3-4 ಹನಿ ಫ್ಲೆಕ್ಸ್ ಸೀಡ್ ತೈಲದೊಂದಿಗೆ ಬೆರೆಸಿ.

ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

5 ನಿಮಿಷ ಕಾಲ ಇದನ್ನು ಹಾಗೆ ಬಿಟ್ಟುಬಿಡಿ.

ಶುದ್ಧ ನೀರಿನಿಂದ ತುಂಬಾ ಎಚ್ಚರಿಕೆಯಿಂದ ಇದನ್ನು ತೊಳೆಯಿರಿ.

ಇದೇ ವಿಧಾನವನ್ನು ಒಂದು ವಾರ ಬಳಿಕ ಮತ್ತೆ ಬಳಸಿ.

ಟ್ರೀ ಟ್ರೀ ಮರದ ಸಾರಭೂತ ತೈಲ

ಟ್ರೀ ಟ್ರೀ ಮರದ ಸಾರಭೂತ ತೈಲ

ಬಳಸುವುದು ಹೇಗೆ

ಎರಡು ಟ್ರೀ ಟ್ರೀ ಮರದ ಸಾರಭೂತ ತೈಲವನ್ನು ½ ಚಮಚ ಕಣ್ಣಿನ ಕ್ರೀಮ್ ನೊಂದಿಗೆ ಬೆರೆಸಿಕೊಳ್ಳಿ.

ಈ ಮಿಶ್ರಣವನ್ನು ಕಣ್ಣಿನ ಸುತ್ತಲಿನ ಬಾಧಿತ ಪ್ರದೇಶಕ್ಕೆ ಹಚ್ಚಿ.

ಹತ್ತು ನಿಮಿಷ ಕಾಲ ಹಾಗೆ ಬಿಡಿ.

ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಎರಡು ವಾರ ಬಳಿಕ ಮತ್ತೆ ಇದೇ ರೀತಿ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ರೋಸ್ಮೆರಿ ಸಾರಭೂತ ತೈಲ ಬಳಕೆ ಹೇಗೆ?

ರೋಸ್ಮೆರಿ ಸಾರಭೂತ ತೈಲ ಬಳಕೆ ಹೇಗೆ?

ಎರಡು ಹನಿ ಹೇಳಿರುವ ಸಾರಭೂತ ತೈಲ ಮತ್ತು 4-5 ಹನಿ ಬಾದಾಮಿ ಎಣ್ಣೆ ಹಾಕಿಕೊಳ್ಳಿ.

ಈ ಮಿಶ್ರಣವನ್ನು ತುಂಬಾ ಎಚ್ಚರಿಕೆಯಿಂದ ಬಾಧಿತ ಪ್ರದೇಶಕ್ಕೆ ಹಚ್ಚಿ.

5-10 ನಿಮಿಷ ಕಾಲ ಇದು ತನ್ನ ಕೆಲಸ ಮಾಡಲು ಬಿಡಿ.

ಶುದ್ಧ ನೀರಿನಿಂದ ಮುಖ ತೊಳೆಯಿರಿ.

ಒಂದು ವಾರ ಬಳಿಕ ಮತ್ತೆ ಇದೇ ರೀತಿ ಮಾಡಿದರೆ ಅತ್ಯುತ್ತಮ ಫಲಿತಾಂಶ ನಿಮ್ಮದಾಗುವುದು.

ಲ್ಯಾವೆಂಡರ್ ಸಾರಭೂತ ತೈಲ

ಲ್ಯಾವೆಂಡರ್ ಸಾರಭೂತ ತೈಲ

ಬಳಸುವುದು ಹೇಗೆ

2-3 ಹನಿ ಲ್ಯಾವೆಂಡರ್ ಸಾರಭೂತ ತೈಲವನ್ನು ½ ಚಮಚ ಮೊಸರು ಮತ್ತು 3 ಹನಿ ತೆಂಗಿನೆಣ್ಣೆ ಜತೆ ಮಿಶ್ರಣ ಮಾಡಿಕೊಳ್ಳಿ.

ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ.

ಹತ್ತು ನಿಮಿಷ ಕಾಲ ಒಣಗಲು ಬಿಡಿ.

ತಣ್ಣೀರಿನಿಂದ ತೊಳೆಯಿರಿ.

ಅತ್ಯುತ್ತಮ ಫಲಿತಾಂಶಕ್ಕಾಗಿ ಪ್ರತಿವಾರ ಇದನ್ನು ಬಳಸಿ.

ಅವಕಾಡೋ ಸಾರಭೂತ ತೈಲ

ಅವಕಾಡೋ ಸಾರಭೂತ ತೈಲ

ಬಳಸುವ ವಿಧಾನ

2-3 ಹನಿ ಅವಕಾಡೋ ಸಾರಭೂತ ತೈಲವನ್ನು ½ ಚಮಚ ಅಲೋವೆರಾ ಜೆಲ್ ಜತೆಗೆ ಮಿಶ್ರಣ ಮಾಡಿಕೊಳ್ಳಿ.

ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಹಚ್ಚಿರಿ.

ಹತ್ತು ನಿಮಿಷ ಕಾಲ ಮುಖದ ಮೇಲಿರಲಿ.

ಒಣ ಬಟ್ಟೆಯಿಂದ ಮುಖ ಒರೆಸಿಕೊಳ್ಳಿ

ಒಂದು ವಾರ ಬಳಿಕ ಮತ್ತೆ ಇದೇ ವಿಧಾನ ಅನುಸರಿಸಿದರೆ ನೆರಿಗೆ ಮಾಯವಾಗುವುದು.

ನೆರೊಲಿ ಸಾರಭೂತ ತೈಲ

ನೆರೊಲಿ ಸಾರಭೂತ ತೈಲ

ಬಳಸುವ ವಿಧಾನ

2-3 ಹನಿ ನೆರೊಲಿ ಸಾರಭೂತ ತೈಲವನ್ನು ಎರಡು ಚಮಚ ಅವಕಾಡೊ ತಿರುಳಿನ ಜತೆ ಬೆರೆಸಿಕೊಳ್ಳಿ.

ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಹಚ್ಚಿರಿ.

ಹತ್ತು ನಿಮಿಷ ಕಾಲ ಇದು ಹಾಗೆ ಇರಲಿ.

ಒಣ ಬಟ್ಟೆಯಿಂದ ಮುಖ ಒರೆಸಿಕೊಳ್ಳಿ.

ಎರಡು ವಾರಕ್ಕೊಮ್ಮೆ ಇದನ್ನು ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಮುಖದ ಸುಕ್ಕುಗಳಿಂದ ವಿಮುಕ್ತಿ ಹೊಂದಲು ವ್ಯಾಯಾಮಗಳಿವೆಯೇ?

English summary

Prevent Wrinkles Around The Eyes With These Essential Oils

Area near your eyes are considered to be the first body part that tends to display signs of ageing such as wrinkles, creases, etc. These creases not only make your skin appear older but also makes your eyes look exhausted at all times. Scores of pricey cosmetics can't help reduce the prominence of these wrinkles. That is why, you should try to treat this problem instead of just concealing it.
Subscribe Newsletter