ಸುಂದರವಾಗಿ ಕಾಣಬೇಕೆಂದರೆ, ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

By: Arshad
Subscribe to Boldsky

ಪ್ರತಿದಿನ ಬೆಳಿಗ್ಗೆದ್ದ ಬಳಿಕ ಕನ್ನಡ ನೋಡಿಕೊಂಡಾಗ ನಿಮ್ಮ ಮುಖ ಕಳೆಗುಂದಿದಂತೆ ಅನ್ನಿಸುತ್ತಿದೆಯೇ? ಹಾಗಾದರೆ ಕೊಂಚವೇ ಹೆಚ್ಚಿನ ಆರೈಕೆಯನ್ನು ಪ್ರತಿ ರಾತ್ರಿ ಮಲಗುವ ಮುನ್ನ ಪಡೆದಾಗ ಮರುದಿನ ಬೆಳಿಗ್ಗೆ ಮುಖದ ಕಾಂತಿ ಹೆಚ್ಚುವುದನ್ನು ಗಮನಿಸಬಹುದು. ಈ ಆರೈಕೆಯನ್ನು ನೀಡುವ ಅತ್ಯುತ್ತಮವಾದ ಮುಖಲೇಪಗಳನ್ನುಇಂದು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.

ಈ ಮುಖಲೇಪಗಳನ್ನು ರಾತ್ರಿಯಿಡೀ ಹಚ್ಚಿಕೊಂಡಿರುವ ಮೂಲಕ ಬೆಳಿಗೆದ್ದ ಬಳಿಕ ಕಾಂತಿಯುಕ್ತ, ತಾಜಾತನದಿಂದ ಕೂಡಿದ, ಒಟ್ಟಾರೆ ನೀವೊಂದು ರಾಜಕುಮಾರಿಯಂತೆ ಅನ್ನಿಸುವಂತೆ ಆಗುತ್ತದೆ. ಇಂದಿನ ದಿನಗಳಲ್ಲಿ ಚರ್ಮಕ್ಕೆ ಅತಿ ಹೆಚ್ಚಿನ ಘಾಸಿಯಾಗಲು ಹಲವಾರು ಬಾಹ್ಯ ಕಾರಣಗಳಿವೆ. ಆದ್ದರಿಂದ ಮುಖದ ಚರ್ಮದ ಆರೈಕೆ ತುಂಬಾ ಮುಖ್ಯವಾಗಿದೆ. 

ತ್ವಚೆಯ ಸೌಂದರ್ಯವನ್ನು ಇಮ್ಮಡಿಸುವ ಮನೆಮದ್ದು

ಆದ್ದರಿಂದ ಪ್ರತಿದಿನ ಬೆಳಿಗ್ಗೆ ಆರೋಗ್ಯಕರ ತ್ವಚೆಯನ್ನು ನಿಮ್ಮ ಕನ್ನಡಿ ಪ್ರದರ್ಶಿಸಬೇಕೆಂದರೆ ಹಿಂದಿನ ರಾತ್ರಿಯೇ ಈ ಆರೈಕೆಯನ್ನು ಪ್ರಾರಂಭಿಸಬೇಕು. ಬನ್ನಿ, ಈ ಮುಖಲೇಪಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ..... 

ಅರಿಶಿನ ಮತ್ತು ಕಡ್ಲೆಹಿಟ್ಟಿನ ಮುಖಲೇಪ

ಅರಿಶಿನ ಮತ್ತು ಕಡ್ಲೆಹಿಟ್ಟಿನ ಮುಖಲೇಪ

ನಾಲ್ಕು ಚಮಚ ಕಡ್ಲೆಹಿಟ್ಟಿಗೆ ಎರಡು ಚಮಚ ಹಸಿ ಹಾಲು ಹಾಕಿ ಮಿಶ್ರಣ ಮಾಡಿ. ಈ ಹಾಲಿನಲ್ಲಿ ಕೊಂಚ ಕೆನೆ ಇದ್ದರೆ ಇನ್ನೂ ಉತ್ತಮ. ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಚಿಟಿಕೆಯಷ್ಟು ಅರಿಶಿನ ಪುಡಿಯನ್ನು ಸೇರಿಸಿ. ಈ ಮುಖಲೇಪವನ್ನು ರಾತ್ರಿ ಮಲಗುವ ಮುನ್ನ ತಣ್ಣೀರಿನಿಂದ ತೊಳೆದು ಒತ್ತಿಕೊಂಡು ಒರೆಸಿದ ಮುಖದ ಎಲ್ಲಾ ಭಾಗಗಳಿಗೆ ತೆಳುವಾಗಿ ಹಚ್ಚಿ ರಾತ್ರಿಯಿಡೀ ಹಾಗೇ ಇರಲು ಬಿಡಿ. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ತ್ವಚೆಯ ಆರೋಗ್ಯಕ್ಕೆ ಅರಿಶಿನದ ಮೊರೆ ಹೋಗಬೇಕು

ಸ್ಟ್ರಾಬೆರಿ ಮುಖಲೇಪ

ಸ್ಟ್ರಾಬೆರಿ ಮುಖಲೇಪ

ನಾಲ್ಕಾರು ಸ್ಟ್ರಾಬೆರಿ ಹಣ್ಣುಗಳ ತಿರುಳನ್ನು ಕೊಂಚ ಹಸಿ ಹಾಲಿನೊಂದಿಗೆ ಚೆನ್ನಾಗಿ ಮಿಕ್ಸಿಯಲ್ಲಿ ಕಡೆಯಿರಿ. ಇದಕ್ಕೆ ಒಂದು ಚಿಕ್ಕ ಚಮಚ ಕಡ್ಲೆಹಿಟ್ಟು ಹಾಕಿ ಮಿಶ್ರಣ ಮಾಡಿ. ಈ ಮುಖಲೇಪವನ್ನು ರಾತ್ರಿ ಮಲಗುವ ಮುನ್ನ ತಣ್ಣೀರಿನಿಂದ ತೊಳೆದು ಒತ್ತಿಕೊಂಡು ಒರೆಸಿದ ಮುಖದ ಎಲ್ಲಾ ಭಾಗಗಳಿಗೆ ತೆಳುವಾಗಿ ಹಚ್ಚಿ ರಾತ್ರಿಯಿಡೀ ಹಾಗೇ ಇರಲು ಬಿಡಿ. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ನವ ತಾರುಣ್ಯದ ತ್ವಚೆಗಾಗಿ ಸ್ಟ್ರಾಬೆರಿ ಹಣ್ಣಿನ ಫೇಸ್ ಪ್ಯಾಕ್

ಓಟ್ಸ್ ಮತ್ತು ಮೊಸರಿನ ಮುಖಲೇಪ

ಓಟ್ಸ್ ಮತ್ತು ಮೊಸರಿನ ಮುಖಲೇಪ

ಕೊಂಚ ಓಟ್ಸ್ ರವೆಯನ್ನು ಒಣದಾಗಿಯೇ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಪುಡಿ ಮಾಡಿ. ಇದಕ್ಕೆ ಒಂದು ಚಮಚ ಮೊಸರು ಹಾಕಿ ಚೆನ್ನಾಗಿ ಬೆರೆಸಿ. ಬಳಿಕ ಒಂದು ಚಿಕ್ಕ ಚಮಚ ಜೇನು ಮತ್ತು ಅರ್ಧ ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚುವಂತೆ ತೆಳುವಾಗುವಷ್ಟು ನೀರು ಸೇರಿಸಿ. ಈ ಮುಖಲೇಪವನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಮುಖದ ಅಂದ-ಚೆಂದ ಹೆಚ್ಚಿಸುವ ಮೊಸರಿನ ಫೇಸ್ ಪ್ಯಾಕ್!

ಚಂದನದ ಮುಖಲೇಪ

ಚಂದನದ ಮುಖಲೇಪ

ಗಂಧದ ಕೊರಡನ್ನು ನೀರಿನೊಂದಿಗೆ ತೇದಿದ ಲೇಪವನ್ನು ಸಂಗ್ರಹಿಸಿ. ಮುಖದಲ್ಲಿ ಮೊಡವೆಗಳಿದ್ದರೆ ನೀರಿನ ಬದಲು ಹಸಿ ಹಾಲು ಉಪಯೋಗಿಸಿ. ಈ ಲೇಪವನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆದ್ದ ಬಳಿಕ ತಣ್ಣೀನಿಂದ ತೊಳೆದುಕೊಳ್ಳಿ. ಒಂದು ವೇಳೆ ಗಂಧದ ಕೊರಡು ಇಲ್ಲದೇ ಇದ್ದರೆ ಉತ್ತಮ ಗುಣಮಟ್ಟದ ಚಂದನದ ಪುಡಿಯನ್ನೂ ಉಪಯೋಗಿಸಬಹುದು. ಈ ಪುಡಿಯನ್ನು ಕೊಂಚ ಹಾಲು, ಲ್ಯಾವೆಂಡರ್ ಎಣ್ಣೆ ಮತ್ತು ಎರಡು ಚಿಕ್ಕಚಮಚ ಕಡ್ಲೆಹಿಟ್ಟಿನೊಂದಿಗೆ ಬೆರೆಸಿ ಮಿಶ್ರಣ ಮಾಡಿ ಉಪಯೋಗಿಸಿ.

ಗೊಂಡೆ ಹೂವಿನ ಮುಖಲೇಪ

ಗೊಂಡೆ ಹೂವಿನ ಮುಖಲೇಪ

ಈ ಹೂವಿನಲ್ಲಿ ಪ್ರತಿಜೀವಕ ಹಾಗೂ ಬ್ಯಾಕ್ಟೀರಿಯಾನಿವಾರಕ ಗುಣಗಳಿರುತ್ತವೆ. ಇವು ನಿಮ್ಮ ಚರ್ಮವನ್ನು ಕೋಮಲವಾಗಿಸಲು ನೆರವಾಗುತ್ತವೆ. ಈ ಹೂವಿನ ಎಸಳುಗಳನ್ನು ಅರೆದು ತಯಾರಿಸಿದ ಮುಖಲೇಪವನ್ನು ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಿಗ್ಗೆದ್ದು ತಣ್ಣೀನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಮಾತ್ರ ಅನುಸರಿಸಿದರೆ ಗರಿಷ್ಟ ಫಲಿತಾಂಶವನ್ನು ಪಡೆಯಬಹುದು.

ಹೆಸರುಕಾಳು

ಹೆಸರುಕಾಳು

ಕಾಲು ಕಪ್ ನಷ್ಟು ಹೆಸರುಕಾಳನ್ನು ರಾತ್ರಿಯೆ ನೆನೆಹಾಕಿ ಬೆಳಿಗ್ಗೆ ಪೇಸ್ಟ್ ತಯಾರಿಸಿಕೊಳ್ಳಿ.. ಅದಕ್ಕೆ ಮನೆಯಲ್ಲೇ ತಯಾರಿಸಿದ ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಮಿಕ್ಸ್ ಮಾಡಿ. ಈ ಪೇಸ್ಟನ್ನು ಚರ್ಮದ ಮೇಲ್ಮುಖವಾಗಿ ಮಸಾಜ್ ಮಾಡಿ. ವಾರಕ್ಕೆ ಮೂರು ಬಾರಿ ಈ ಪೇಸ್ಟ್ ತಯಾರಿಸಿಕೊಂಡು ಹಚ್ಚಿಕೊಳ್ಳಿ. ಮುಖದ ಮೊಡವೆಗಳು ಹೇಳಹೆಸರಿಲ್ಲದಂತೆ ಮಾಯವಾಗದೇ ಇದ್ರೆ ಆಮೇಲೆ ಹೇಳಿ..

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಿ, ಅದೇ ಕ್ರಮೇಣ ನೆರಿಗೆಗಳಂತೆ ಕಾಣಿಸಿಕೊಳ್ಳೋದಿದೆ. ನಿಮ್ಮ ಸೌಂದರ್ಯ ಹಾಳು ಮಾಡುವ ಇಂತಹ ನೆರಿಗೆಗಳ ನಿವಾರಣೆಗೆ ನೀವು ಹಲಸಿನ ಹಣ್ಣನ್ನು ಬಳಸಿಕೊಳ್ಳಬಹುದು. ಕೆಲವು ಹಲಸಿನ ಹಣ್ಣಿನ ತುಂಡು, ತಣ್ಣನೆಯ ಹಾಲು ಮಿಕ್ಸ್ ಮಾಡಿ ಅಪ್ಲೈ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಅಪ್ಲೈ ಮಾಡಿ. ಇದರಿಂದ ಕಣ್ಣಿಗೆ ತಂಪು ಫೀಲಿಂಗ್ ಆಗೋದು ಮಾತ್ರವಲ್ಲ, ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತಲಿನ ನೆರಿಗೆಗಳು ಕಡಿಮೆಯಾಗುತ್ತದೆ.

ಕಡಲೆಹಿಟ್ಟು ಮತ್ತು ಅರಿಶಿನ ಕಡಲೆ

ಕಡಲೆಹಿಟ್ಟು ಮತ್ತು ಅರಿಶಿನ ಕಡಲೆ

ಹಿಟ್ಟು ಮತ್ತು ಅರಿಶಿನವು ನಮ್ಮ ಅಡುಗೆ ಮನೆಗಳಲ್ಲಿ ತುಂಬಾ ಸುಲಭವಾಗಿ ಸಿಗುವಂತದ್ದಾಗಿದೆ. ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಅರಿಶಿನವನ್ನು ಹಾಲು ಅಥವಾ ನೀರಿನೊಂದಿಗೆ ಸರಿಯಾಗಿ ಬೆರೆಸಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳಿ. ಮುಂಜಾನೆ ಬೆಳ್ಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ.

English summary

Overnight Face Masks To Wake Up With Gorgeous Skin

if you want to wake up with a gorgeous, soft and glowing skin, you must make sure to treat your skin to these overnight face masks. Check out on how to prepare and use the best face masks for glowing skin.
Subscribe Newsletter