ಮುಖದ ನೆರಿಗೆ ಹೋಗಲಾಡಿಸಿ, ಅಂದ ಹೆಚ್ಚಿಸುವ ನೈಸರ್ಗಿಕ ಎಣ್ಣೆಗಳು

By: Arshad
Subscribe to Boldsky

ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ವಯಸ್ಸಾಗಲೇ ಬೇಕು. ಈ ಭೂಮಿ ಮೇಲೆ ಯಾರೂ ಅಮರರಲ್ಲ. ಸೌಂದರ್ಯ ಕೂಡ ಅದೇ ರೀತಿ. ಯೌವನ ಮುಗಿದ ಬಳಿಕ ಸೌಂದರ್ಯವು ಕುಂದಲು ಆರಂಭವಾಗುವುದು. ಇಂತಹ ಸಮಯದಲ್ಲಿ ಮುಖದ ಮೇಲೆ ನೆರಿಗೆ, ಚರ್ಮ ಜೋತು ಬೀಳುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರು ತನಗೆ ವಯಸ್ಸಾಗುತ್ತಿದೆ ಎಂದು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ.

ವಯಸ್ಸಾಗುವ ಲಕ್ಷಣ ತಡೆಯಲು ಹಲವಾರು ಪ್ರಯತ್ನಗಳನ್ನು ಇವರು ಮಾಡುತ್ತಾರೆ. ವಯಸ್ಸಾಗುತ್ತಿರುವ ಚರ್ಮದ ಆರೈಕೆಯಲ್ಲಿ ಕೆಲವು ಎಣ್ಣೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವಯಸ್ಸಾಗುತ್ತಿರುವ ಚರ್ಮಕ್ಕೆ ಪೋಷಣೆ ನೀಡುವ ಎಣ್ಣೆಗಳು ನೆರಿಗೆ ಮುಕ್ತಗೊಳಿಸುವುದು. ವಯಸ್ಸಾಗುವ ಲಕ್ಷಣಗಳು ಕಾಣಿಸಿದಂತೆ ಮಾಡುವ ಕೆಲವು ಎಣ್ಣೆಗಳು ತುಂಬಾ ಸುಲಭದಲ್ಲಿ ನಿಮ್ಮ ಕೈಗೆ ಸಿಗಲಿದೆ.

ಬ್ಯೂಟಿ ಟಿಪ್ಸ್: ಮೈಕಾಂತಿ ಹೆಚ್ಚಿಸುವ ಹಳ್ಳಿಗಾಡಿನ 'ತೆಂಗಿನೆಣ್ಣೆ'

ಇದನ್ನು ಬಳಸಿಕೊಂಡು ವಯಸ್ಸಾಗುತ್ತಿರುವ ಲಕ್ಷಣಗಳು ಮುಖದ ಮೇಲೆ ಮೂಡದಂತೆ ಮಾಡಬಹುದು. ಸಾಸಿವೆ, ಜೊಜೊಬಾ ಅಥವಾ ಆಲಿವ್ ತೈಲವು ಪರಿಣಾಮಕಾರಿಯಾಗಿ ಚರ್ಮಕ್ಕೆ ಪೋಷಣೆ ನೀಡಲಿದೆ. ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಅದು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡಿ ನೆರಿಗೆ ನಿವಾರಿಸುವುದು... 

ದ್ರಾಕ್ಷಿ ಬೀಜದ ಎಣ್ಣೆ

ದ್ರಾಕ್ಷಿ ಬೀಜದ ಎಣ್ಣೆ

ದ್ರಾಕ್ಷಿ ಬೀಜದಿಂದ ಮಾಡಿರುವಂತಹ ಈ ಎಣ್ಣೆಯು ತುಂಬಾ ಹಗುರವಾಗಿದೆ ಮತ್ತು ಚರ್ಮವು ಇದನ್ನು ಬೇಗನೆ ಹೀರಿಕೊಳ್ಳುವುದು. ನೀವು ಪ್ರತೀ ಸಲ ದ್ರಾಕ್ಷಿ ಬೀಜದ ಎಣ್ಣೆ ಬಳಸುವಾಗ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಬಳಸಿ. ದ್ರಾಕ್ಷಿಬೀಜದ ಎಣ್ಣೆಯನ್ನು ತಲೆಯಿಂದ ಕಾಲಿನ ತನಕ ಮತ್ತು ಕೂದಲಿಗೂ ಹಚ್ಚಿಕೊಳ್ಳಬಹುದು. ವಯಸ್ಸಾಗುವ ಹಂತದಲ್ಲಿ ಚರ್ಮವು ತುಂಬಾ ಒಣಗಿರುವುದು. ಈ ವೇಳೆ ಎಣ್ಣೆಯು ತುಂಬಾ ಸಹಕಾರಿ. ಪ್ರತಿನಿತ್ಯ ಈ ಎಣ್ಣೆ ಬಳಸುವುದರಿಂದ ಪರಿಣಾಮಕಾರಿ ಫಲಿತಾಂಶ ಪಡೆಯಬಹುದು.

ಮರುಲಾ ತೈಲ

ಮರುಲಾ ತೈಲ

ಆಫ್ರಿಕಾದ ಜನರ ಸೌಂದರ್ಯದ ಗುಟ್ಟಾಗಿರುವ ಮರುಲಾ ತೈಲವು ಸಂಸ್ಕರಿಸದೆ ಇರುವ ಮತ್ತು ಸಾವಯವಾಗಿರುವುದು. ಇದು ವಯಸ್ಸಾಗುವ ಲಕ್ಷಣ ತೋರಿಸುವ ಚರ್ಮಕ್ಕೆ ತುಂಬಾ ಒಳ್ಳೆಯದು. ಈ ಎಣ್ಣೆಯಲ್ಲಿ ಒಮೆಗಾ ಅಂಶವು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಸೂಕ್ಷ್ಮ ಚರ್ಮ ಹೊಂದಿರುವವರಿಗೂ ಇದು ಪರಿಣಾಮಕಾರಿ ಮತ್ತು ಯಾವುದೇ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ. ಮರುಲಾ ತೈಲವು ತುಂಬಾ ಒಳ್ಳೆಯ ಸುವಾಸನೆ ನೀಡುವುದು. ನೆರಿಗೆ ಇರುವ ಪ್ರತಿಯೊಂದು ಭಾಗಕ್ಕೂ ಇದನ್ನು ಮಸಾಜ್ ಮಾಡಿಕೊಂಡರೆ ತುಂಬಾ ಒಳ್ಳೆಯದು.

ಅವಕಾಡೋ ತೈಲ

ಅವಕಾಡೋ ತೈಲ

ನೆರಿಗೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವ ಅವಕಾಡೋ ತೈಲವು ಕಲೆಗಳಿಗೂ ತುಂಬಾ ಒಳ್ಳೆಯದು. ಇದನ್ನು ದೇಹ, ಮುಖಕ್ಕೆ ಮೊಶ್ಚಿರೈಸರ್ ಆಗಿ ಮತ್ತು ಕೂದಲಿನ ಆರೈಕೆಗೆ ಬಳಸಿಕೊಳ್ಳಬಹುದು. ಸ್ವಚ್ಛ ಕೈಗಳಿಂದ ಅವಕಾಡೋ ತೈಲ ಹಚ್ಚಿಕೊಳ್ಳಿ ಅಥವಾ ಹತ್ತಿ ಉಂಡೆ ಬಳಸಿಕೊಳ್ಳಿ. ಅವಕಾಡೊ ತೈಲ ಹಚ್ಚಿದ ಬಳಿಕ ನೀವು ಸ್ನಾನ ಮಾಡಬೇಕೆಂದಿಲ್ಲ. ಇದು ಚರ್ಮದಲ್ಲಿ ಹಾಗೆ ಇರಲಿ. ಸ್ವಲ್ಪ ಸಮಯ ಬಳಿಕ ಟಿಶ್ಯೂ ಅಥವಾ ಬಟ್ಟೆಯಿಂದ ಇದನ್ನು ಒರೆಸಿಕೊಳ್ಳಿ.

ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ!

ಬಾದಾಮಿ ತೈಲ

ಬಾದಾಮಿ ತೈಲ

ವಿಟಮಿನ್ ಇ ಅಧಿಕವಾಗಿರುವಂತಹ ಬಾದಾಮಿ ಎಣ್ಣೆಯು ನೆರಿಗೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಬಾದಾಮಿ ಎಣ್ಣೆಯಲ್ಲಿ ಚರ್ಮದ ಕೋಶಗಳನ್ನು ಬೆಳೆಸುವ ಪ್ರೋಟೀನ್ ಇರುವುದರಿಂದ ಇದು ಹೆಚ್ಚು ಲಾಭಕಾರಿ. ಬಾದಾಮಿ ಎಣ್ಣೆಯನ್ನು ನೇರವಾಗಿ ನೆರಿಗೆ ಇರುವ ಚರ್ಮ ಅಥವಾ ಮೊಶ್ಚಿರೈಸರ್ ಜತೆಗೆ ಸೇರಿಕೊಂಡು ಹಚ್ಚಬಹುದು. ಬಾದಾಮಿ ಎಣ್ಣೆಯು ಚರ್ಮಕ್ಕೆ ಮೊಶ್ಚಿರೈಸರ್ ನೀಡುವುದರಿಂದ ಕಾಂತಿ ಹೆಚ್ಚಾಗುವುದು. ಬಾದಾಮಿ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಕ್ಯಾಮೋಮೈಲ್ ಚಹಾದೊಂದಿಗೆ ಅದನ್ನು ಮಿಶ್ರಣ ಮಾಡಿ ಫ್ರಿಡ್ಜ್‌ನಲ್ಲಿ ಇಡಬಹುದು. ಬಾದಾಮಿ ಎಣ್ಣೆ ಮತ್ತು ಕ್ಯಾಮೋಮೈಲ್ ಚಹಾದ ಮಿಶ್ರಣವು ಸರಿಯಾಗಿ ಕೆಲಸ ಮಾಡಲು ಇದನ್ನು ದಿನನಿತ್ಯ ಬಳಸಬೇಕು.

ಬಾದಾಮಿ: ಸ್ವಲ್ಪ ದುಬಾರಿಯಾದರೂ, ಮುಖಕ್ಕೆ-ಕೂದಲಿಗೆ ಒಳ್ಳೆಯದು

English summary

Oils That You Can Add To Your Everyday Skin Care Routine

One of the cons of ageing is the deteriorating of the skin due to which it can face several skin conditions. The skin becomes soft, feeble and wrinkles may even develop. Every man and woman wants to get rid of this ageing skin problem but does not know the right way. Here comes the role of oils that can solely treat ageing skin.
Subscribe Newsletter