ಬ್ಯೂಟಿ ಟಿಪ್ಸ್: ಕಣ್ಣಿನ ಸೌಂದರ್ಯ ಹೆಚ್ಚಿಸುವ ನೈಸರ್ಗಿಕ ಚಿಕಿತ್ಸೆ...

By: Hemanth
Subscribe to Boldsky

ಸೌಂದರ್ಯಕ್ಕೆ ಸಮಸ್ಯೆಯನ್ನು ಒಡ್ಡುವಂತಹ ಕಣ್ಣ ಕೆಳಗಿನ ಚೀಲಗಳನ್ನು ನಿವಾರಿಸಲು ಹಲವಾರು ರೀತಿಯ ಮೇಕಪ್ ಸಾಧನಗಳು ಲಭ್ಯವಿದೆ. ಇಂತಹ ಸಾಧನಗಳು ಕೆಲವೇ ಸಮಯಕ್ಕೆ ಮಾತ್ರ ಇದರಿಂದ ಮುಕ್ತಿ ನೀಡಬಹುದು. ಆದರೆ ಇದು ಶಾಶ್ವತವಾದ ಪರಿಹಾರವಲ್ಲ. ಬೋಲ್ಡ್ ಸ್ಕೈ ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ನಿಮ್ಮ ಮುಂದಿಡಲಿದೆ. ಇದರಿಂದ ಕಣ್ಣ ಕೆಳಗಿನ ಚೀಲಗಳನ್ನು ನಿವಾರಣೆಯಾಗಿ ನಿಮ್ಮ ಮುಖದ ಸೌಂದರ್ಯ ಹೆಚ್ಚುವುದು. ಕಣ್ಣ ಕೆಳಗಿನ ಚೀಲಗಳೆಂದರೆ ಹೆಚ್ಚಿನ ನೀರಿನಾಂಶವು ಜಮೆಯಾಗುವುದು.

ಕಣ್ಣ ಕೆಳಗಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವಂತದ್ದಾಗಿದೆ ಮತ್ತು ಇದರ ಬಗ್ಗೆ ಸರಿಯಾದ ಆರೈಕೆ ಮಾಡದೆ ಇದ್ದರೆ ಆ ಪ್ರದೇಶದಲ್ಲಿ ಕಾಲಜನ್ ಹಾನಿಗೀಡಾಗುವ ಸಂಭವವಿದೆ. ಇದು ಸಣ್ಣ ಸಮಸ್ಯೆಯೆಂದು ಬಿಟ್ಟರೆ ಅದು ಜೀವಮಾನವಿಡಿ ದೊಡ್ಡ ಸಮಸ್ಯೆಯಾಗಿ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಶೇಕಡಾ ನೂರರಷ್ಟು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸುವಂತಹ ಈ ಮನೆಮದ್ದಿನಿಂದ ಕಣ್ಣಿನ ಕೆಳಗಿನ ಚರ್ಮಕ್ಕೆ ತೇವಾಂಶವನ್ನು ನೀಡುವುದು. ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಆ ಪ್ರದೇಶದಲ್ಲಿ ಕಾಲಜನ್ ಬೆಳವಣಿಗೆಯನ್ನು ಹೆಚ್ಚಿಸುವುದು.

ಸೂಚನೆ

ಕಣ್ಣಿನ ಕೆಳಗಡೆ ಇರುವ ಚರ್ಮದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆ ಈ ಮನೆಮದ್ದನ್ನು ಬಳಸುವ ಮೊದಲು ಚರ್ಮದ ಯಾವುದಾದರೊಂದು ಭಾಗಕ್ಕೆ ಇದನ್ನು ಹಚ್ಚಿಕೊಂಡು ನಿಮ್ಮ ಚರ್ಮಕ್ಕೆ ಸೂಕ್ತವಾಗಿದೆಯಾ ಎಂದು ತಿಳಿಯಿರಿ....

ಟೊಮೆಟೋ ತಿರುಳು ಹಚ್ಚಿ

ಟೊಮೆಟೋ ತಿರುಳು ಹಚ್ಚಿ

ಕಣ್ಣಿನ ಕೆಳಗಿನ ಚೀಲಗಳಿಗೆ ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿದೆ ಎಂದು ಇದನ್ನು ಬಳಸಿದ ಹಲವಾರು ಮಂದಿ ಮಹಿಳೆಯರು ತಿಳಿಸಿದ್ದಾರೆ. ಟೊಮೆಟೋ ತಿರುಳಿನಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಕಣ್ಣಿನ ಕೆಳಗಿನ ಚೀಲಗಳನ್ನು ಗುಣಪಡಿಸುವುದು. ತಾಜಾ ಟೊಮೆಟೋ ಚೀಲಗಳನ್ನು ತೆಗೆದು ಅದರಲ್ಲಿ ಎರಡು ಹತ್ತಿ ಉಂಡೆಗಳನ್ನು ಅದ್ದಿಕೊಳ್ಳಿ ಮತ್ತು ಅವುಗಳನ್ನು ಕಣ್ಣಿನ ಅಡಿಯ ಚರ್ಮದ ಮೇಲಿರಿಸಿ. ಬೆಳಿಗ್ಗೆ ಚರ್ಮವನ್ನು ತೊಳೆಯುವ ಮೊದಲು ಇದು ಅದ್ಭುತವಾಗಿ ಕೆಲಸ ಮಾಡಿರುತ್ತದೆ.

ಮುಳ್ಳುಸೌತೆ ಹಚ್ಚಿ

ಮುಳ್ಳುಸೌತೆ ಹಚ್ಚಿ

ಎರಡು ಚಮಚ ತುರಿದಿರುವ ಮುಳ್ಳುಸೌತೆಯನ್ನು ಫ್ರಿಡ್ಜ್ ನಲ್ಲಿಡಿ. ಮಲಗುವ ಮೊದಲು ಕಣ್ಣಿನ ಕೆಳಗಡೆ ಇದನ್ನು ಹಚ್ಚಿಕೊಂಡು ಮಲಗಿ. ರಾತ್ರಿಯಿಡಿ ಹಾಗೆ ಬಿಟ್ಟರೆ ಬೆಳಿಗ್ಗೆ ಇದರ ಫಲಿತಾಂಶ ಸಿಗುವುದು. ಉಗುರು ಬೆಚ್ಚಗಿನ ನೀರಿನಿಂದ ಬೆಳಿಗ್ಗೆ ಕಣ್ಣನ್ನು ತೊಳೆಯಿರಿ ಮತ್ತು ತಾಜಾ ಕಣ್ಣುಗಳು ನಿಮ್ಮದಾಗುವುದು.

ತಂಪಾದ ಹಾಲು

ತಂಪಾದ ಹಾಲು

ಹಸಿ ಹಾಲನ್ನು ಫ್ರಿಡ್ಜ್ ನಲ್ಲಿಡಿ. ಮಲಗುವ ಮೊದಲು ಇದನ್ನು ಹೊರತೆಗೆದು ಅದರಲ್ಲಿ ಎರಡು ಹತ್ತಿ ಉಂಡೆಗಳನ್ನು ಮುಳುಗಿಸಿಡಿ. ಇದರ ಬಳಿಕ ಕಣ್ಣಿನ ಕೆಳಗಡೆ ಈ ಎರಡು ಹತ್ತಿ ಉಂಡೆಗಳನ್ನು ಇಟ್ಟುಬಿಡಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ಎದ್ದು ನೋಡುವಾಗ ಕಣ್ಣಿನ ಕೆಳಗಡೆ ಅದ್ಭುತವಾದ ಬದಲಾವಣೆಯನ್ನು ಕಾಣಲಿದ್ದೀರಿ. 3-4 ವಾರಗಳ ಕಾಲ ಈ ನೈಸರ್ಗಿಕ ಮನೆಮದ್ದನ್ನು ಬಳಸಿಕೊಳ್ಳಿ.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾ ಲೋಳೆಯು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ಇದು ಕಣ್ಣ ಕೆಳಗಿನ ಚೀಲಗಳನ್ನು ಒಂದು ರಾತ್ರಿಯಲ್ಲೇ ಗುಣಪಡಿಸುವುದು. ತಾಜಾ ಲೋಳೆಯನ್ನು ತೆಗೆದು ಅದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದಾಗ ನಿಮ್ಮ ಕಣ್ಣ ಕೆಳಗಡೆ ಯಾವುದೇ ರೀತಿಯ ನೀರ ಚೀಲಗಳು ಇರುವುದಿಲ್ಲ.

ಆಲೂಗಡ್ಡೆ ಜ್ಯೂಸ್

ಆಲೂಗಡ್ಡೆ ಜ್ಯೂಸ್

ಆಲೂಗಡ್ಡೆ ಜ್ಯೂಸ್‌ನಲ್ಲಿ ಒಳ್ಳೆಯ ಗುಣಮಟ್ಟದ ಆ್ಯಂಟಿಆಕ್ಸಿಡೆಂಟ್ ಇದೆ ಮತ್ತು ಇದರಲ್ಲಿ ಚರ್ಮವನ್ನು ಬಿಳಿಗೊಳಿಸುವ ಗುಣಗಳಿವೆ. ಇದು ಕಣ್ಣ ಕೆಳಗಿನ ಚೀಲಗಳನ್ನು ಮಾತ್ರ ತೆಗೆದುಹಾಕುವುದಲ್ಲದೆ ಕಣ್ಣ ಕೆಳಗಡೆ ಇರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದು.

ಜೇನುತುಪ್ಪ

ಜೇನುತುಪ್ಪ

ಕಣ್ಣ ಕೆಳಗಿನ ಚೀಲಗಳನ್ನು ನೈಸರ್ಗಿಕವಾಗಿ ತೆಗೆದುಹಾಕಬೇಕಾದರೆ ಜೇನುತುಪ್ಪವನ್ನು ಬಳಸಿಕೊಳ್ಳಿ. ಎರಡು ಕಣ್ಣುಗಳಡಿಗೆ ಜೇನುತುಪ್ಪವನ್ನು ಹಚ್ಚಿಕೊಂಡು ಅದನ್ನು ರಾತ್ರಿಯಿಡಿ ಹಾಗೆ ಬಿಟ್ಟು ಬೆಳಗ್ಗೆ ತೊಳೆಯಿರಿ. ಕಣ್ಣ ಕೆಳಗಿನ ಚೀಲಗಳನ್ನು ತೆಗೆದುಹಾಕಲು ಹಲವಾರು ವರ್ಷಗಳಿಂದ ಮಹಿಳೆಯರು ಬಳಸಿಕೊಂಡು ಬರುತ್ತಿರುವಂತಹ ವಿಧಾನ ಇದಾಗಿದೆ.

English summary

Natural Overnight Treatments To Get Rid Of Under-eye Bags

Concealing your under-eye bags with makeup can only offer a short-term solution to this unsightly skin problem. However, if you're looking for natural ways to treat this problem for long term, then this article is ideal for you. As today at Boldsky, we have compiled a list of some of the best natural treatments that can be done overnight to get rid of under-eye bags.
Story first published: Monday, July 3, 2017, 23:45 [IST]
Subscribe Newsletter