ಸಾಸಿವೆ ಎಣ್ಣೆಯು ಸ್ವಲ್ಪ ಘಾಟು ಬಿಟ್ಟರೆ, ಸಾಕಷ್ಟು ಪ್ರಯೋಜನಗಳಿವೆ!

By: manu
Subscribe to Boldsky

ತ್ವಚೆಯ ಆರೈಕೆ ಮಾಡುವ ಕಾರಣವವನ್ನು ಹೇಳಿಕೊಂಡು ದಿನಕ್ಕೊಂದು ಕ್ರೀಮ್‌ಗಳು ಮಾರುಕಟ್ಟೆಗೆ ಬರುತ್ತಲೆ ಇರುತ್ತವೆ. ಇದರಿಂದ ತ್ವಚೆಯ ಅಂದವನ್ನು ಹೆಚ್ಚಿಸಬಹುದು ಎಂದು ಜಾಹೀರಾತಿನ ಮೂಲಕ ನಮ್ಮ ತಲೆಯೊಳಗೆ ಹುಳ ಬಿಡುತ್ತಾರೆ. ಅದೇ ಕಂಪನಿಯ ಕ್ರೀಮ್ ಅನ್ನು ಖರೀದಿಸಿಕೊಂಡು ಬಂದು ಮುಖಕ್ಕೆ ಹಚ್ಚುತ್ತೇವೆ. ಇದರಿಂದ ಸ್ವಲ್ಪ ದಿನ ಕಾಲ ತ್ವಚೆ ಕೂಡ ಕಾಂತಿಯುತವಾಗಿ ಕಾಣಿಸಿಕೊಳ್ಳಬಹುದು. ಆದರೆ ಅಡ್ಡಪರಿಣಾಮಗಳು ಮಾತ್ರ ತೀವ್ರವಾಗಿರುತ್ತದೆ. ಆರೋಗ್ಯ ಟಿಪ್ಸ್: ಸಾಸಿವೆ ಎಣ್ಣೆಯ ತಾಕತ್ತಿಗೆ, ತಲೆಬಾಗಲೇಬೇಕು!  

ಅಡ್ಡಪರಿಣಾಮಗಳು ಬೇಡವೆಂದಾದರೆ ತಕ್ಷಣ ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬೇಕು. ಆಗ ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು. ಬೋಲ್ಡ್ ಸ್ಕೈ ನಿಮ್ಮ ತ್ವಚೆಯ ಆರೈಕೆಗೆ ಹೇಳಲು ಹೊರಟಿರುವುದು ಸಾಸಿವೆ ಎಣ್ಣೆಯ ಬಗ್ಗೆ ಸಾಸಿವೆ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಗಳು ಇವೆ. ಬೆಕ್ಕಸ ಬೆರಗಾಗಿಸುವ ಅರಿಶಿನ ಪುಡಿ+ಸಾಸಿವೆ ಎಣ್ಣೆಯ ಕರಾಮತ್ತು!

ಇದು ತ್ವಚೆಯ ಉರಿಯೂತವನ್ನು ಕಡಿಮೆ ಮಾಡುವುದು. ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಯಾವ ರೀತಿ ಬಳಸಿಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ಹೇಳಿಕೊಡಲಿದೆ. ಮುಂದೆ ಓದುತ್ತಾ ಸಾಸಿವೆ ಎಣ್ಣೆಯ ಲಾಭವನ್ನು ಪಡೆಯಿರಿ....  

ನೈಸರ್ಗಿಕವಾಗಿ ಶುದ್ಧೀಕರಣ

ನೈಸರ್ಗಿಕವಾಗಿ ಶುದ್ಧೀಕರಣ

ಸಾಸಿವೆ ಎಣ್ಣೆಯನ್ನು ನಿಯಮಿತವಾಗಿ ಬಳಸಿಕೊಂಡರೆ ಅದರಿಂದ ಅಗಾಧ ಲಾಭವಿದೆ. ಸಾಸಿವೆ ಎಣ್ಣೆಯನ್ನು ಚರ್ಮಕ್ಕೆ ಬಳಸಿಕೊಂಡರೆ ಅದು ನೈಸರ್ಗಿಕವಾಗಿ ಚರ್ಮವನ್ನು ಶುದ್ದೀಕರಿಸುವುದು. ಮುಖಕ್ಕೆ ನೀವು ಹೆಚ್ಚಿನ ಮೇಕಪ್ ಹಚ್ಚಿಕೊಳ್ಳುತ್ತಾ ಇದ್ದರೆ ಅದನ್ನು ತೆಗೆಯಲು ಕಷ್ಟಪಡುತ್ತಾ ಇದ್ದರೆ ಸಾಸಿವೆ ಎಣ್ಣೆಯನ್ನು ನಿಯಮಿತವಾಗಿ ಬಳಸಿಕೊಳ್ಳಿ.

ನೆರಿಗೆ ನಿವಾರಣೆ

ನೆರಿಗೆ ನಿವಾರಣೆ

ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಇಯಂತಹ ಪ್ರಮುಖ ಅಂಶವಿದೆ. ಕೆಲವು ಹನಿ ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡರೆ ಅದರಿಂದ ನೆರಿಗೆ ಹಾಗೂ ವಯಸ್ಸಾಗುವ ಲಕ್ಷಣಗಳಲ್ಲಿ ಮೂಡುವ ಗೆರೆಗಳು ಮಾಯವಾಗುವುದು. ಉತ್ತರ ಭಾರತೀಯರು ಹೆಚ್ಚಾಗಿ ಸಣ್ಣ ಮಗುವಿಗೆ ಮಸಾಜ್ ಮಾಡಿಕೊಳ್ಳಲು ಈ ಎಣ್ಣೆಯನ್ನು ಬಳಸಿಕೊಳ್ಳುತ್ತಾರೆ.

ಕಪ್ಪು ಕಲೆಗಳ ನಿವಾರಣೆ

ಕಪ್ಪು ಕಲೆಗಳ ನಿವಾರಣೆ

ಸಾಸಿವೆ ಎಣ್ಣೆಯಿಂದ ತ್ವಚೆಗೆ ನಿಯಮಿತವಾಗಿ ಮಸಾಜ್ ಮಾಡುತ್ತಾ ಇದ್ದರೆ ಅದು ತ್ವಚೆಯನ್ನು ಆರೋಗ್ಯ ಹಾಗೂ ಕಾಂತಿಯುತವಾಗಿ ಇಡುವುದು. ಇದು ಮುಖದಲ್ಲಿರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದು. ಬಿಸಿಲಿನಿಂದ ಆಗಿರುವ ಕಪ್ಪು ಕಲೆಗಳನ್ನು ತೆಗೆದುಹಾಕುವುದು. ಕಪ್ಪು ವೃತ್ತಗಳನ್ನು ಇದು ತೆಗೆಯುವುದು.

ಕಂದು ಕಲೆ ತೆಗೆಯುವುದು

ಕಂದು ಕಲೆ ತೆಗೆಯುವುದು

ಮುಖದಲ್ಲಿ ಕಂದು ಕಲೆಗಳು ಮೂಡಿದ್ದರೆ ಅದನ್ನು ತೆಗೆದುಹಾಕಲು ಕಡಲೆಹಿಟ್ಟು ಒಂದು ಚಮಚ ಮೊಸರು ಮತ್ತು ಕೆಲವು ಹನಿ ಸಾಸಿವೆ ಎಣ್ಣೆ ಹಾಗೂ ಲಿಂಬೆ ರಸವನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

ಕೂದಲು ಉದುರುವುದನ್ನು ನಿಲ್ಲಿಸುತ್ತದೆ

ಕೂದಲು ಉದುರುವುದನ್ನು ನಿಲ್ಲಿಸುತ್ತದೆ

ಸಾಸಿವೆ ಎಣ್ಣೆಯನ್ನು ತಲೆಗೆ ಹಾಕಿ ಮಸಾಜ್ ಮಾಡುವುದರಿಂದ ತಲೆಗೂದಲು ಉದುರುವುದನ್ನೂ ಬಹಳಷ್ಟು ಮಟ್ಟಿಗೆ ನಿಲ್ಲಿಸಬಹುದು.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ಪ್ರತಿದಿನ ಸಾಯಾಂಕಾಲ ಮುಖ ತೊಳೆದ ಬಳಿಕ 2-3 ಹನಿ ಸಾಸಿವೆ ಎಣ್ಣೆಯನ್ನು ಕೈಗೆ ಹಾಕಿ ಮುಖಕ್ಕೆ ಮಾಯಿಶ್ಚರೈಸರ್ ಮಾಡಿ 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ನಯವಾದ ತ್ವಚೆಯನ್ನು ಪಡೆಯಬಹುದು.

ಫೇಸ್ ಮಾಸ್ಕ್

ಫೇಸ್ ಮಾಸ್ಕ್

ವಾರಕ್ಕೆ ಒಮ್ಮೆ ಫೇಸ್ ಮಾಸ್ಕ್ ಮಾಡುವುದು ಒಳ್ಳೆಯದು. ಈ ರೀತಿ ಫೇಸ್ ಮಾಸ್ಕ್ ಅನ್ನು ಸಾಸಿವೆ ಎಣ್ಣೆಯಿಂದ ಕೂಡ ಮಾಡಬಹುದು. ಇದರಿಂದ ಫೇಸ್ ಮಾಸ್ಕ್ ಮಾಡುವುದಾದರೆ 2 ಚಮಚ ಸಾಸಿವೆ ಎಣ್ಣೆ, ಸ್ವಲ್ಪ ಕಡಲೆ ಹಿಟ್ಟು, 2 ಚಮಚ ಮೊಸರು ಮತ್ತು 1 ಚಮಚ ನಿಂಬೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮುಖದಲ್ಲಿ ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ಕಲೆಗಳು ಮಾಯವಾಗುವುದು

English summary

Natural Oil Can Make You More Beautiful! Find Out Here

One such ingredient that is considered to have manifold uses is our unpretentious "Mustard Oil". Try not to look further than your kitchen shelves to find again something better than the traditional mustard oil. Mustard oil which is loaded with antibacterial and antifungal properties can treat your rashes or any kind of a skin inflammation that you have. So, here are some of the best beauty benefits of using Mustard oil. Take a look.
Subscribe Newsletter