Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬೆಕ್ಕಸ ಬೆರಗಾಗಿಸುವ ಅರಿಶಿನ ಪುಡಿ+ಸಾಸಿವೆ ಎಣ್ಣೆಯ ಕರಾಮತ್ತು!
ರೋಗ ಬಂದ ಮೇಲೆ ಔಷಧಿ ತೆಗೆದುಕೊಳ್ಳುವುದಕ್ಕಿಂತ ರೋಗ ಬರದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮ ಎಂಬ ವಿಷಯವನ್ನು ವೈದ್ಯರೂ ಒಪ್ಪುತ್ತಾರೆ. ರೋಗ ಬರದಂತೆ ನೋಡಿಕೊಳ್ಳುವುದು ಎಂದರೆ ಹೆಚ್ಚು ವಿಧದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಗೆ ನಮ್ಮ ದೇಹ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು. ಈ ಶಕ್ತಿಯನ್ನು ಹೆಚ್ಚಿಸಲು ಪ್ರತಿ ಬಾರಿಯೂ ರೋಗಾಣುಗಳ ದಾಳಿಯೇ ತುತ್ತಾಗಬೇಕಿಲ್ಲ. ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು
ಬದಲಿಗೆ ಕೆಲವು ನೈಸರ್ಗಿಕ ಆಹಾರವಸ್ತುಗಳನ್ನು ಕೊಂಚ ಸೇವಿಸಿದರೆ ಸಾಕಾಗುತ್ತದೆ. ಈ ವಸ್ತುಗಳನ್ನು ಹುಡುಕಿಕೊಂಡು ಹೋಗಬೇಕಾಗಿಯೂ ಇಲ್ಲ, ನಿಮ್ಮ ಅಡುಗೆಮನೆಯಲ್ಲಿಯೇ ಸಿಗುತ್ತವೆ. ಈ ಗುಣವಿರುವ ಎರಡು ವಸ್ತುಗಳೆಂದರೆ ಅರಿಶಿನ ಮತ್ತು ಸಾಸಿವೆ ಎಣ್ಣೆಯೇ ಸಾಕು! ಸಾಸಿವೆ ಎಣ್ಣೆ : ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!
ಒಂದು ಕಾವಲಿಯಲ್ಲಿ ಎರಡು ಚಿಕ್ಕಚಮಚ ಸಾಸಿವೆ ಎಣ್ಣೆ ಮತ್ತು ಒಂದು ಚಿಕ್ಕಚಮಚ ಅರಿಶಿನ ಪುಡಿ ಹಾಕಿ ಚಿಕ್ಕ ಉರಿಯಲ್ಲಿ ಸತತವಾಗಿ ತಿರುವುತ್ತಾ ಸುಮಾರು ಮೂರು ನಿಮಿಷ ಬಿಸಿಮಾಡಿ. ಬಳಿಕ ಈ ಮಿಶ್ರಣವನ್ನು ಸೇವಿಸಲು ಸಾಧ್ಯವಾದಷ್ಟು ತಣಿದ ಮೇಲೆ ಒಂದು ಚಮಚದ ಮೂಲಕ ರಾತ್ರಿಯ ಊಟದ ಬಳಿಕ ನೇರವಾಗಿ ಸೇವಿಸಿ. ನಿತ್ಯವೂ ಒಂದು ಚಮಚದಂತೆ ಸುಮಾರು ಮೂರು ವಾರಗಳಾದರೂ ಸೇವಿಸಿದರೆ ಮಾತ್ರ ಇದರ ಪರಿಣಾಮವನ್ನು ಪಡೆಯಬಹುದು. ಈ ಅದ್ಭುತ ಸಂಯೋಜನೆಯ ಪ್ರಯೋಜನಗಳೇನು ಎಂಬುದನ್ನು ಮುಂದೆ ಓದಿ....

ಹಸಿವು ಹೆಚ್ಚಿಸುತ್ತದೆ
ಈ ನೈಸರ್ಗಿಕ ಮಿಶ್ರಣದ ಮೂಲಕ ಜಠರದಲ್ಲಿ ಜಠರರಸಗಳು ಹೆಚ್ಚು ಉತ್ಪತ್ತಿಯಾಗಿ ಹೆಚ್ಚಿನ ಪ್ರಮಾಣದ ಆಹಾರವನ್ನು ಕರಗಿಸಲು ಶಕ್ತವಾಗುತ್ತದೆ. ಇದು ಮೆದುಳಿಗೆ ಹೆಚ್ಚಿನ ಆಹಾರ ಕಳಿಸಿ, ಅರಗಿಸಲು ನಾವು ಸಿದ್ಧವಾಗಿದ್ದೇವೆ ಎಂಬ ಸೂಚನೆಯನ್ನು ಕಳಿಸುತ್ತದೆ. ಈ ಸೂಚನೆಯ ಪರಿಣಾಮವಾಗಿ ಹಸಿವು ಹೆಚ್ಚುತ್ತದೆ.

ಮಲಬದ್ಧತೆ ನಿವಾರಿಸುತ್ತದೆ
ಒಂದು ವೇಳೆ ನಿಮಗೆ ಅನಿಯಮಿತವಾದ ಮಲಬದ್ಧತೆ ಕಾಡುತ್ತಿದ್ದರೆ ಈ ಅದ್ಭುತ ಮಿಶ್ರಣ ಇದನ್ನು ಸರಿಪಡಿಸಲು ನೆರವಾಗುತ್ತದೆ. ಈ ಮಿಶ್ರಣದ ಕಾರಣ ಕರುಳುಗಳಲ್ಲಿ ಲೋಳೆ ಹೆಚ್ಚು ಉತ್ಪತ್ತಿಯಾಗಿ ತ್ಯಾಜ್ಯಗಳು ಸುಲಭವಾಗಿ ಜಾರಿ ಹೊರಬರಲು ಸಾಧ್ಯವಾಗುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ
ಇವೆರಡೂ ಪರಿಕರಗಳು ಪ್ರತ್ಯೇಕವಾಗಿ ರಕ್ತಪರಿಚಲನೆ ಸುಲಭಗೊಳಿಸುತ್ತವೆ ಹಾಗೂ ಪರೋಕ್ಷವಾಗಿ ಹೃದಯಕ್ಕೆ ಹೆಚ್ಚಿನ ಒತ್ತಡವಾಗುವುದನ್ನು ತಪ್ಪಿಸುತ್ತದೆ. ಇವೆರಡರ ಮಿಶ್ರಣದಿಂದ ಈ ಶಕ್ತಿಗಳು ಇನ್ನೂ ಹೆಚ್ಚಾಗಿ ರಕ್ತದಲ್ಲಿರುವ ಮತ್ತು ನರಗಳ ಒಳಗೆ ಅಂಟಿಕೊಂಡಿದ್ದ ಕೊಲೆಸ್ಟ್ರಾಲ್ ಕಣಗಳನ್ನು ಕರಗಿಸಿಕೊಂಡು ತಡೆಗಳನ್ನು ನಿವಾರಿಸುತ್ತದೆ. ಪರಿಣಾಮವಾಗಿ ಹೃದಯದ ಒತ್ತಡ ಕಡಿಮೆಯಾಗಿ ಕ್ಷಮತೆ ಹೆಚ್ಚುತ್ತದೆ.

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ
ಈ ಮಿಶ್ರಣದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಫೈಟೋ ನ್ಯೂಟ್ರಿಯೆಂಟ್ ಮತ್ತು ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್ ಬರುವುದರಿಂದ ರಕ್ಷಣೆ ನೀಡುತ್ತದೆ.

ಅಸ್ತಮಾ ರೋಗವನ್ನು ಗುಣಪಡಿಸುತ್ತದೆ
ಇವೆರಡೂ ಪರಿಕರಗಳು ಶ್ವಾಸಕೋಶಕ್ಕೆ ಉತ್ತಮವಾಗಿದ್ದು ಇದರ ಮಿಶ್ರಣದ ನಿಯಮಿತ ಸೇವನೆಯಿಂದ ಶ್ವಾಸಕೋಶ ಮತ್ತು ಶ್ವಾಸನಾಳಗಳಲ್ಲಿ ಉಂಟಾಗಿದ್ದ ತಡೆ ನಿವಾರಣೆಯಾಗಿ ಉಸಿರಾಟ ಸರಾಗವಾಗುತ್ತದೆ. ಪರಿಣಾಮವಾಗಿ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಶ್ವಾಸಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಈ ನೈಸರ್ಗಿಕ ಮಿಶ್ರಣದಲ್ಲಿ ಹಲವು ಪೋಷಕಾಂಶಗಳಿದ್ದು ದೇಹದ ವಿವಿಧ ಅಂಗಾಂಶ ಮತ್ತು ಜೀವಕೋಶಗಳಿಗೆ ಪೋಷಣೆ ನೀಡುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ಸೋಂಕುಕಾರಕ ರೋಗಗಳಿಂದ ರಕ್ಷಣೆ ನೀಡುತ್ತದೆ.

ಮೈ ಕೈ ನೋವನ್ನು ನಿವಾರಿಸುತ್ತದೆ
ಈ ಮಿಶ್ರಣದ ಉರಿಯೂತ ನಿವಾರಕ ಗುಣ ದೇಹದ ಬಳಲಿಕೆಯಿಂದ ಎದುರಾಗಿದ್ದ ಊತ ಮತ್ತು ವಿವಿಧ ಭಾಗಗಳಲ್ಲಿ ಆಗಿದ್ದ ನೋವನ್ನು ನಿವಾರಿಸಲು ಸಮರ್ಥವಾಗಿದೆ. ನಿಯಮಿತ ಸೇವನೆಯಿಂದ ಬಳಲಿಕೆ ಶೀಘ್ರ ಕಡಿಮೆಯಾಗಲು ಮತ್ತು ಮರುದಿನ ಹೆಚ್ಚಿನ ಚೈತನ್ಯದಿಂದ ಕೆಲಸಕ್ಕೆ ತೆರಳಲು ನೆರವಾಗುತ್ತದೆ.



Click it and Unblock the Notifications









