ಮುಖದ ಅಂದ-ಚಂದ ಹೆಚ್ಚಿಸಲು 'ಅಡುಗೆಮನೆಯ' ಬ್ಯೂಟಿ ಟಿಪ್ಸ್!

By: Hemanth
Subscribe to Boldsky

ಯಾವುದೇ ವ್ಯಕ್ತಿಯ ಸೌಂದರ್ಯದಲ್ಲಿ ಮುಖದ ಕಾಂತಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಇತರ ಭಾಗಕ್ಕಿಂತ ಮುಖಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಮಹಿಳೆಯರೂ ಪುರುಷರೂ ಸಮಾನವಾಗಿ ನೀಡುತ್ತಾರೆ. ಇಂದು ಸೌಂದರ್ಯದ ಬಗ್ಗೆ ಕಾಳಜಿ ಕೇವಲ ಉಳ್ಳವರ ಸೊತ್ತಾಗಿ ಉಳಿದಿಲ್ಲ. ಹಳ್ಳಿ ಹಳ್ಳಿಗಳಲ್ಲಿ ತಲೆಯೆತ್ತಿರುವ ಸೌಂದರ್ಯ ಮಳಿಗೆಗಳೇ ಇದಕ್ಕೆ ಸಾಕ್ಷಿ.

ಇವುಗಳ ಸೇವೆ ಪಡೆಯುವ ಮೂಲಕ ನೈಸರ್ಗಿಕ ಮತ್ತು ಕಾಂತಿಯುತ ಮುಖವನ್ನು ಪಡೆಯುವುದು ಖಂಡಿತಾ ಸಾಧ್ಯ. ಆದರೆ ಹೆಚ್ಚಿನ ಮಳಿಗೆಗಳು ಉತ್ತಮ ಸೇವೆ ಒದಗಿಸಿದರೂ ಅದಕ್ಕೆ ತಕ್ಕನಾದ ಬೆಲೆಯನ್ನೂ ವಿಧಿಸುವುದು ಹೆಚ್ಚಿನವರಿಗೆ ಭರಿಸಲಾಗುವುದಿಲ್ಲ ಸೌಂದರ್ಯದ ಕಾಳಜಿಯನ್ನು ಮನಗಂಡ ಹಲವು ಚರ್ಮತಜ್ಞರೂ ಈ ಕ್ಷೇತ್ರದಲ್ಲಿ ಕಾಲಿಡುತ್ತಿರುವುದು ಸ್ವಾಗತಾರ್ಹವಾಗಿದೆ. 

ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಈ ಮೂಲಕ ಮುಖದ ಸೌಂದರ್ಯಕ್ಕಾಗಿ ಹಲವು ಚಿಕಿತ್ಸೆ ಮತ್ತು ಮುಖಲೇಪನಗಳನ್ನು ಪ್ರಸ್ತುತಪಡಿಸಲಾಗಿದ್ದು ಸಾಕಷ್ಟು ಜನಪ್ರಿಯವಾಗಿವೆ. ಅದರಲ್ಲೂ ಆಯುರ್ವೇದೀಯ ಅಥವಾ ಹರ್ಬಲ್ ಬ್ಯೂಟಿ ಪಾರ್ಲರ್‌ಗಳಲ್ಲಿ ನೈಸರ್ಗಿಕ ಸಾಮಾಗ್ರಿಗಳನ್ನೇ ಉಪಯೋಗಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತಿದೆ. ಈ ಫಲಿತಾಂಶವನ್ನು ಪಡೆಯಲು ದುಬಾರಿ ಬೆಲೆಯ ಪಾರ್ಲರುಗಳಿಗೇ ಹೋಗಬೇಕೆಂದೇನಿಲ್ಲ, ಕಲವೊಂದು ಮುಖಲೇಪನವನ್ನು (ಫೇಸ್ ಪ್ಯಾಕ್) ನೀವೇ ಮನೆಯಲ್ಲಿಯೇ ನೀವು ತಯಾರಿಸಿಕೊಳ್ಳಬಹುದು... ಮುಂದೆ ಓದಿ... 

ಒಣಚರ್ಮದ ಸಮಸ್ಯೆ ಇರುವವರು...

ಒಣಚರ್ಮದ ಸಮಸ್ಯೆ ಇರುವವರು...

ಒಣಚರ್ಮ ಮತ್ತು ಪಕಳೆ ಏಳುವ ತೊಂದರೆ ಇರುವ ಚರ್ಮದವರಿಗೆ ಹಸಿಹಾಲು ಅಮೃತಸಮಾನವಾಗಿದೆ. ಹತ್ತಿಯುಂಡೆಯೊಂದನ್ನು ಹಸಿ ಹಾಲಿನಲ್ಲಿ ಮುಳುಗಿಸಿ ಈ ಉಂಡೆಯನ್ನು ವೃತ್ತಾಕಾರಗಳಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಒರೆಸುತ್ತಿರಿ. ಸುಮಾರು ಐದು ನಿಮಿಷಗಳವರೆಗೆ ಹಸಿ ಹಾಲನ್ನು ಆಗಾಗ ಹಿಂಡಿಕೊಳ್ಳುತ್ತಾ ಮುಖ, ಕುತ್ತಿಗೆ ಕುತ್ತಿಗೆಯ ಭಾಗಗಳನ್ನು ಒರೆಸಿಕೊಳ್ಳಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕಾಂತಿ ಹೆಚ್ಚಿಸಲು ಹುಣಸೆ ಹಣ್ಣು....

ಕಾಂತಿ ಹೆಚ್ಚಿಸಲು ಹುಣಸೆ ಹಣ್ಣು....

ಹುಣಸೆಹಣ್ಣಿನ ತಿರುಳು ಚರ್ಮದ ಕಾಂತಿ ಹೆಚ್ಚಿಸಲು ಸಮರ್ಥವಾಗಿದೆ. ಇದಕ್ಕಾಗಿ ಕೊಂಚ ಬಿಸಿನೀರಿನಲ್ಲಿ ಮುಳುಗುವಷ್ಟು ಹುಣಸೆ ಹುಳಿಯನ್ನು ನೆನೆಸಿಡಿ. ಕೊಂಚ ಹೊತ್ತಿನ ಬಳಿಕ ನೀರು ತಣ್ಣಗಾಗುತ್ತದೆ. ಈ ಹುಳಿಯನ್ನು ಚೆನ್ನಾಗಿ ಕಿವುಚಿ ತಿರುಳು ಹೊರಬರುವಂತೆ ಮಾಡಿ.ಇದಕ್ಕೆ ಕೊಂಚ ಅರಿಶಿನದ ಪುಡಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗ ತಾನೇ ತೊಳೆದ ಮುಖ, ಕುತ್ತಿಗೆ ಕೈ ಮತ್ತು ಕಾಲುಗಳಿಗೆ ತೆಳುವಾಗಿ ಸವರಿ ಒಣಗಲು ಬಿಡಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವುದರಿಂದ ಶೀಘ್ರವೇ ಚರ್ಮದ ಕಾಂತಿ ಹೆಚ್ಚುತ್ತದೆ.

ಹುಣಸೆ ಹಣ್ಣಿನ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಲಿಂಬೆ ರಸದೊಂದಿಗೆ ಮೊಸರು ಹಾಗೂ ಓಟ್ ಮೀಲ್

ಲಿಂಬೆ ರಸದೊಂದಿಗೆ ಮೊಸರು ಹಾಗೂ ಓಟ್ ಮೀಲ್

ಒಂದು ಚಮಚ ತಯಾರಿಸಿದ ಓಟ್ ಮೀಲ್ ನೊಂದಿಗೆ ಎರಡು ಚಮಚ ಮೊಸರು ಹಾಗೂ ಎರಡು ಚಮಚ ನಿಂಬೆರಸವನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ನೀರಿನಿಂದ ತೊಳೆದ ಬಳಿಕ ಹಗುರವಾದ ಟೋನರ್ ಹಚ್ಚಿಕೊಳ್ಳಿ.

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಚೆನ್ನಾಗಿ ಬಲಿತಿರುವ ಪಪ್ಪಾಯಿಯನ್ನು ಹಿಚುಕಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ಅಕ್ಕಿಹಿಟ್ಟು ಹಾಕಿಕೊಳ್ಳಿ. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ದಿನ ಹಚ್ಚಿಕೊಂಡರೆ ಒಳ್ಳೆಯ ಚರ್ಮವನ್ನು ಪಡೆಯಬಹುದು.

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ಟೊಮೇಟೊ ಹಣ್ಣಿನ ರಸವನ್ನು ಜೇನುತುಪ್ಪದೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ದಟ್ಟನಾದ ದ್ರಾವಣದಂತಾಗುವ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಕಾಲಕ್ರಮೇಣ ನಯವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಮುಖದ ಸೌಂದರ್ಯಕ್ಕೆ 'ಟೊಮೆಟೊ ಹಣ್ಣಿನ' ಫೇಸ್ ಪ್ಯಾಕ್

ಟೊಮೇಟೊ-ಜೇನು-ಮೊಸರು

ಟೊಮೇಟೊ-ಜೇನು-ಮೊಸರು

ಟೊಮೇಟೊ ಚರ್ಮದ ಹೊಳಪುಕೊಡುವ ಗುಣಗಳನ್ನು ಹೊಂದಿರುವ ಟೊಮೆಟೊ, ಆರ್ಧ್ರಕ ಗುಣಗಳನ್ನು ಒಳಗೊಂಡಿರುವ ಮೊಸರು ಮತ್ತು ಜೇನಿನ ಮಿಶ್ರಣ ಒಂದು ಉತ್ತಮ ನೈಸರ್ಗಿಕ ಫೇಸ್ ಪ್ಯಾಕ್ ಆಗಿದೆ. ಒಂದು ಟೊಮೆಟೊ ಮತ್ತು ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಜೇನುತುಪ್ಪದ ಬದಲಿಗೆ ಬಾದಾಮಿ ಎಣ್ಣೆಯನ್ನೂ ಸೇರಿಸಬಹುದು. ಜೀವಸತ್ವಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ತ್ವಚೆಗೆ ಆರೋಗ್ಯಕರ ಕಾಂತಿಯನ್ನು ನೀಡುತ್ತದೆ.

English summary

Natural ingredients and their beauty benefits!

Looking for natural beauty solution that won’t be harsh on your skin? Here are 5 amazing ingredients that you may have in your kitchen and can work amazingly on your skin and hair. From using a garlic for inflamed pimples to trying turmeric face mask, here’s are five DIY tricks using all-natural ingredients!
Subscribe Newsletter